Punjab Politics| ಪಂಜಾಬ್ ಬಿಕ್ಕಟ್ಟು; ನವಜೋತ್ ಸಿಂಗ್ ಸಿಧು ಮನವರಿಕೆಗೆ ಮುಂದಾಗದ ಸಿಎಂ ಚರಣಜೀತ್ ಸಿಂಗ್ ಚನ್ನಿ!

ನ್ಯೂಸ್​18ಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಸಿಧು ಮನವೋಲಿಕೆಗೆ ಕಾಂಗ್ರೆಸ್ ಹೊಸ ಸೂತ್ರವನ್ನು ಸಿದ್ದಪಡಿಸಿದೆ. ಅದು ಕಾರ್ಯರೂಪಕ್ಕೆ ಬರುವವರೆಗೆ ಸಿಎಂ ಚರಣಜೀತ್ ಸಿಂಗ್ ಮತ್ತು ಸಿಧು ಭೇಟಿಯಾಗುವುದಿಲ್ಲ ಎಂದು ತಿಳಿದುಬಂದಿದೆ.

ಕಾಂಗ್ರೆಸ್​ ನಾಯಕರು.

ಕಾಂಗ್ರೆಸ್​ ನಾಯಕರು.

 • Share this:
  ಪಟಿಯಾಲ (ಸೆಪ್ಟೆಂಬರ್​ 30); ಪಂಜಾಬ್​ ರಾಜ್ಯದ ವಿಧಾನಸಭೆ ಚುನಾವಣೆ (Punjab Assembly Election) ಸಮೀಪವಾಗುತ್ತಿರುವ ಹೊತ್ತಿನಲ್ಲೇ ಪಂಜಾಬ್ ಕಾಂಗ್ರೆಸ್​ನಲ್ಲಿ (Punjab Congress) ಆಂತರಿಕ ಸಮರ ತಾರಕಕ್ಕೇರಿದ್ದು, ಮಾಜಿ ಕ್ರಿಕೆಟಿಗ ಮತ್ತು ಪಂಜಾಬ್ ಕಾಂಗ್ರೆಸ್ ​ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು (Navjot Singh Sidhu) ರಾಜೀನಾಮೆ ಸದ್ಯಕ್ಕೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕಾಂಗ್ರೆಸ್​ ನಾಯಕರು ಸಿಧು ಮನವರಿಕೆ ಮಾಡಲು ಎಷ್ಟು ಪ್ರಯತ್ನಿಸಿದರೂ ಫಲ ನೀಡುತ್ತಿಲ್ಲ.ಇನ್ನೂ ಪಂಜಾಬ್ ಮುಖ್ಯಮಂತ್ರಿ ಚರಣಜೀತ್ ಸಿಂಗ್ ಚನ್ನಿ ಬುಧವಾರ ನವಜೋತ್ ಸಿಂಗ್ ಸಿಧು ಅವರನ್ನು ಭೇಟಿಯಾಗಿ ಮಾತುಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿದ್ದರು. ಪಟಿಯಾಲದ ಯಾದವಿಂದ್ರ ಎನ್ಕ್ಲೇವ್‌ನಲ್ಲಿರುವ ಸಿಧು ಅವರ ಪೋಷಕರ ಮನೆಗೆ ಪ್ರವಾಸ ಮಾಡಬೇಕಿತ್ತು. ಆದರೆ ಸಿಎಂ ಚನ್ನಿ ತಮ್ಮ ಪ್ರವಾಸವನ್ನು ಮತ್ತು ಸಿಧು ಮನವರಿಕೆ ಮಾಡುವ ಪ್ರಯತ್ನವನ್ನು ಕೈಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

  ಏತನ್ಮಧ್ಯೆ, ಸಚಿವರಾದ ಪರ್ಗತ್ ಸಿಂಗ್ ಮತ್ತು ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ನವಜೋತ್ ಸಿಂಗ್ ಸಿಧು ಅವರನ್ನು ಪಟಿಯಾಲಾದ ಅವರ ನಿವಾಸದಲ್ಲಿ ಭೇಟಿಯಾಗಿದ್ದರಿಂದ ಸಿಧು ಅವರನ್ನು ಸಮಾಧಾನಪಡಿಸಲು ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.

  ನ್ಯೂಸ್​18ಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಸಿಧು ಮನವೋಲಿಕೆಗೆ ಕಾಂಗ್ರೆಸ್ ಹೊಸ ಸೂತ್ರವನ್ನು ಸಿದ್ದಪಡಿಸಿದೆ. ಅದು ಕಾರ್ಯರೂಪಕ್ಕೆ ಬರುವವರೆಗೆ ಸಿಎಂ ಚರಣಜೀತ್ ಸಿಂಗ್ ಮತ್ತು ಸಿಧು ಭೇಟಿಯಾಗುವುದಿಲ್ಲ ಎಂದು ತಿಳಿದುಬಂದಿದೆ.

  ಕ್ಯಾಬಿನೆಟ್ ಸಭೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಚನ್ನಿ, "ನವಜೋತ್​ ಸಿಂಗ್ ಸಿಧು ಹಿರಿಯ ನಾಯಕರು, ಪಕ್ಷದ ರಾಜ್ಯಾಧ್ಯಕ್ಷರು. ಪಕ್ಷ ನಮಗೆ ಕುಟುಂಬವಿದ್ದಂತೆ, ಇಲ್ಲಿ ಯಾವ ಸಮಸ್ಯೆ ಇದ್ದರೂ ಕುಳಿತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು" ಎಂದು ತಿಳಿಸಿದ್ದರು. ಆದರೆ, ಸದ್ಯಕ್ಕೆ ಮಾತುಕತೆಗೆ ಸಿಧು ಮನಸ್ಸು ಮಾಡಿಲ್ಲ ಎನ್ನಲಾಗುತ್ತಿದೆ.

  ಈ ನಡುವೆ ತಮ್ಮ ಟ್ವಿಟ್ಟರ್(Twitter) ಖಾತೆಯಲ್ಲಿ ವಿಡಿಯೋವೊಂದನ್ನ ಹಂಚಿಕೊಂಡಿದ್ದ ಸಿಧು, ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳಿಗೆ ಉತ್ತರ ನೀಡಿದ್ದಾರೆ. "ನಾನು ಕಾಂಗ್ರೆಸ್ ಹೈಕಮಾಂಡ್ ಅನ್ನ ದಾರಿತಪ್ಪುವ ಕೆಲಸ ಎಂದಿಗೂ ಮಾಡಿಲ್ಲ. ಇದೆಲ್ಲ ಸುಳ್ಳು ಆರೋಪಗಳು. ಯಾವುದೇ ರೀತಿಯ ತ್ಯಾಗಕ್ಕೂ ನಾನು ಸಿದ್ಧನಾಗಿದ್ದೇನೆ. ಈ ಹಿಂದಿನಿಂದಲೂ ಪಂಜಾಬ್ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತಲೇ ಬಂದಿದ್ದೇನೆ.

  ನಿನ್ನೆ ಮೊನ್ನೆಯಿಂದ ಹುಟ್ಟಿದ್ದಲ್ಲ. ಕೆಲಸಕ್ಕೆ ಬಾರದ ನಾಯಕರು, ಅಧಿಕಾರಿಗಳ ಅವ್ಯವಸ್ಥೆಯ ವಿರುದ್ಧ ಹೋರಾಟ ಮಾಡುತ್ತಲೇ ಬಂದಿದ್ದೇನೆ. ನಾನು ನನ್ನ ತತ್ವ-ಸಿದ್ಧಾಂತಗಳಿಗೆ ಬದ್ಧನಾಗಿದ್ದೇನೆ. ನನ್ನ ಹೋರಾಟ, ನನ್ನ ನಿರ್ಧಾರಗಳು ಎಂದಿಗೂ ಬದಲಾಗುವುದಿಲ್ಲ" ಎಂದು ನವಜೋತ್ ಸಿಂಗ್ ಸಿಧು ಸ್ಪಷ್ಟನೆ ನೀಡಿದ್ದಾರೆ.

  ನಾನು ವೈಯಕ್ತಿಕ ಲಾಭಕ್ಕಾಗಿ ಯಾವುದೇ ಹೋರಾಟ ಮಾಡುತ್ತಿಲ್ಲ. 17 ವರ್ಷಗಳ ರಾಜಕೀಯ ಜೀವನದಲ್ಲಿ, ನಾನು ಯಾರೊಂದಿಗೂ ವೈಯಕ್ತಿಕ ವೈಷಮ್ಯವನ್ನು ಹೊಂದಿಲ್ಲ. ನೈತಿಕತೆ, ನೈತಿಕ ಅಧಿಕಾರದೊಂದಿಗೆ ರಾಜಿ ಮಾಡಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ. ಜನರ ಜೀವನವನ್ನು ಉತ್ತಮಗೊಳಿಸುವುದೊಂದೇ ತನ್ನ ಧರ್ಮ. ಅದು ಬಿಟ್ಟರೆ ನನ್ನ ಗಮನ ಬೇರೆ ಎಲ್ಲೂ ಇಲ್ಲ ಎಂದು ನವಜೋತ್ ಸಿಂಗ್ ಸಿಧು ವಿಡಿಯೋದಲ್ಲಿ ಹೇಳಿದ್ದಾರೆ.

  ಆಮ್ ಆದ್ಮಿ ಪಕ್ಷ ಸೇರುತ್ತಾರಾ ಸಿಧು?

  ಸಿಧು ರಾಜೀನಾಮೆ ಬೆನ್ನಲ್ಲೇ ಸಾಕಷ್ಟು ಊಹಾಪೋಹಗಳು ಹುಟ್ಟಿಕೊಂಡಿದೆ. ಅದರಲ್ಲೂ ಪಂಜಾಬ್ ನ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಿಧು ವಿರುದ್ಧ ಆರೋಪಗಳ ಸುರಿಮಳೆಗೈದಿದ್ದರು.

  ಇದನ್ನೂ ಓದಿ: Captain Amarinder Singh Meets Amit Shah; ದೆಹಲಿಯಲ್ಲಿ ಅಮಿತ್ ಶಾ ನಿವಾಸದಲ್ಲಿ ಕಾಂಗ್ರೆಸ್ ಕ್ಯಾಪ್ಟನ್; ಬಿಜೆಪಿ ಸೇರ್ಪಡೆ ಸಾಧ್ಯತೆ

  ನಾನು ಆತನನ್ನು ಬಾಲ್ಯದಿಂದ ನೋಡಿಕೊಂಡು ಬಂದಿದ್ದೇನೆ, ಆತ ಏನು ಎಂದು ನನಗೆ ಚೆನ್ನಾಗಿ ಗೊತ್ತಿದೆ. ಎಲ್ಲಾ ವಿಚಾರದಲ್ಲೂ ನವಜೋತ್ ಸಿಂಗ್ ಸಿಧು ಅಸಮರ್ಥ.ನಿಜವಾಗಿ ಆತ ಬೇರೆ ಪಕ್ಷ ಸೇರಲೆಂದೆ ರಾಜೀನಾಮೆ ನೀಡಿದ್ದಾನೆ. ಕಾದುನೋಡಿ ಕೆಲವೇ ದಿನಗಳಲ್ಲಿ ಆತ ಬೇರೆ ಪಕ್ಷ ಸೇರುತ್ತಾನೆ ಅಂತ ಹೇಳಿದ್ದರು.

  ಇನ್ನೂ ಸಿಧು ಕೂಡ ಆಮ್ ಆದ್ಮಿ ಪಕ್ಷ(AAP) ಸೇರುವುದು ಖಚಿತ ಅಂತ ಮೂಲಗಳು ಹೇಳುತ್ತಿವೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್(Arvind Kejriwal) ಜೊತೆ ಸಿಧು ಬಾಂಧವ್ಯ ಉತ್ತಮವಾಗಿದ್ದು ಅವರು ಆಮ್ ಆದ್ಮಿ ಪಕ್ಷ ಸೇರುತ್ತಾರೆ ಅಂತ ಎಲ್ಲೆಡೆ ಚರ್ಚೆಯಾಗುತ್ತಿದೆ.
  Published by:MAshok Kumar
  First published: