Lakhimpur Kheri Violence: ಯೋಗಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ ನವಜೋತ್ ಸಿಂಗ್ ಸಿಧು

ಸಿಧು ಪ್ರತಿಭಟನೆಯಲ್ಲಿ ಭಾಗಿಯಾಗಲು ಥರೇಡಿ ಜಟ್ರಾಟಾ ಟೋಲ್ ಪ್ಲಾಜಾಗೆ ಆಗಮಿಸುತ್ತಿದ್ದಂತೆ ಕೆಲ ರೈತರು ಕಪ್ಪು ಧ್ವಜ ಪ್ರದರ್ಶಿಸಿ ಆಕ್ರೋಶ ಹೊರಹಾಕಿದರು.

ನವಜೋತ್ ಸಿಂಗ್ ಸಿಧು

ನವಜೋತ್ ಸಿಂಗ್ ಸಿಧು

 • Share this:
  ಚಂಡೀಗಢ : ಲಖಿಂಪುರ ಹಿಂಸಾಚಾರದ ಕುರಿತು ಮಾತನಾಡಿರುವ ಕಾಂಗ್ರೆಸ್ ಪಂಜಾಬ್ ನಾಯಕ ನವಜೋತ್ ಸಿಂಗ್ ಸಿಧು (Navjot Singh Sidhu) ಉತ್ತರ ಪ್ರದೇಶದ ಸಿಎಂ ಯೋಗಿ (CM Yogi Adityanath) ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರಬಾನಿಸಿದ್ದಾರೆ. ನಾಳೆಯೊಳಗೆ ಆರೋಪಿಗಳನ್ನು ಬಂಧನ ಮಾಡದಿದ್ದರೆ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು. ನ್ಯಾಯಕ್ಕಾಗಿ ಪ್ರಾಣ ಹೋದ್ರು ಚಿಂತೆ ಇಲ್ಲ. ಕೊನೆಯ ಕ್ಷಣದವರೆಗೆ ಹೋರಾಟ ನಡೆಯಲಿದೆ. ನನ್ನ ತಂದೆ ಮತ್ತು ಅಜ್ಜ ರೈತರು(Farmers). ಅನ್ನದಾತರಿಗಾಗಿ ನಮ್ಮ ಪ್ರಾಣ ಕೊಡಲು ನಾನು ಸಿದ್ಧ. ಈ ನಿರ್ಧಾರದಿಂದ ಒಂದು ಅಡಿಯೂ ಹಿಂದೆ ಸರಿಯಲ್ಲ ಎಂದು ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

  ಅವರನೇನು ಸಂವಿಧಾನಕ್ಕಿಂತ ದೊಡ್ಡವರಾ?
  ರೈತರ ಮೇಲೆ ಹಿಂದಿನಿಂದ ದಾಳಿ ನಡೆಸಿ ಕೊಲ್ಲಲಾಗಿದೆ. ಎಫ್‍ಐಆರ್ ದಾಖಲಾದ್ರೂ ಕೇಂದ್ರ ಗೃಹ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ (Union Minister of State (MoS) for Home Ajay Mishra's son) ಪೊಲೀಸ್ ವಿಚಾರಣೆಗೆ ಹಾಜರಾಗಿಲ್ಲ ಏಕೆ? ಪೊಲೀಸರು ಆರೋಪಿಗಳನ್ನು ಬಂಧಿಸುತ್ತಿಲ್ಲ ಏಕೆ ಎಂದು ಸಿಧು ಪ್ರಶ್ನೆ ಮಾಡಿದ್ದಾರೆ. ಕೇಂದ್ರ ಸಚಿವ ಮತ್ತು ಅವರ ಪುತ್ರ ಸಂವಿಧಾನಕ್ಕಿಂತ ದೊಡ್ಡವರೇನು ಎಂದು ಕಿಡಿಕಾರಿದರು. ಸದ್ಯ ಸಿಧು ನೇತೃತ್ವದ ತಂಡ ಉತ್ತರ ಪ್ರದೇಶ ಗಡಿಯತ್ತ ಹೊರಟಿದೆ. ಸೋಮವಾರವೇ ಸಿಧು ಪಂಜಾಬ್ ನಿಂದ ಲಖಿಂಪುರ ಖೇರಿವರೆಗೆ ಪಾದಯಾತ್ರೆ ನಡೆಸುವ ಬಗ್ಗೆ ಮಾತುಗಳನ್ನಾಡಿದ್ದರು.  ಸಿಧು ವಿರುದ್ಧ ಕಪ್ಪು ಧ್ವಜ ಪ್ರದರ್ಶನ:
  ಸಿಧು ಪ್ರತಿಭಟನೆಯಲ್ಲಿ ಭಾಗಿಯಾಗಲು ಥರೇಡಿ ಜಟ್ರಾಟಾ ಟೋಲ್ ಪ್ಲಾಜಾಗೆ ಆಗಮಿಸುತ್ತಿದ್ದಂತೆ ಕೆಲ ರೈತರು ಕಪ್ಪು ಧ್ವಜ ಪ್ರದರ್ಶಿಸಿ ಆಕ್ರೋಶ ಹೊರಹಾಕಿದರು. ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರ ವಾಹನಗಳ ಮೇಲಿದ್ದ ರೈತರ ಸ್ಟಿಕ್ಕರ್ ಸಹ ಕಿತ್ತು ಹಾಕಿದ ಘಟನೆ ನಡೆಯಿತು. ಸಿಧು ಅವರಿಗೆ ಪಂಜಾನ್ ಟೋಲ್ ಪ್ಲಾಜಾದಲ್ಲಿ ಕುಳಿತಿರುವ ರೈತರು ಕಾಣಿಸುತ್ತಿಲ್ಲ. ರಾಜಕೀಯ ಮಾಡಲು ಲಖಿಂಪುರ ಖೇರಿಗೆ ಹೊರಟಿದ್ದಾರೆ ಎಂದು ರೈತರು ಆರೋಪಿಸಿದರು. ಭಾನುವಾರ ರಾತ್ರಿ ಲಖಿಂಪುರ ಖೇರಿಗೆ ತೆರಳುತ್ತಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Piyanka Gandhi Vadra) ಅವರನ್ನು ಪೊಲೀಸರು ಪಿಸಿ ಗೆಸ್ಟ್ ಹೌಸ್ ನೊಳಗೆ ಗೃಹ ಬಂಧನದಲ್ಲಿರಿಸಿದ್ದರು. ಇದನ್ನು ನವಜೋತ್ ಸಿಂಗ್ ತೀವ್ರವಾಗಿ ಖಂಡಿಸಿದ್ದರು.

  ಇದನ್ನು ಓದಿ: ಲಖೀಂಪುರ್​ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಎಷ್ಟು ಜನರನ್ನು ಬಂಧಿಸಿದ್ದೀರಿ? ವರದಿ ಕೇಳಿದ ಸುಪ್ರೀಂ

  ಬುಧವಾರ ಪಂಜಾಬ್ ಭವನದಲ್ಲಿ ಕಾಂಗ್ರೆಸ್ ನಾಯಕರ ಜೊತೆ ನವಜೋತ್ ಸಿಂಗ್ ಸಿಧು ಸಭೆ ನಡೆಸಿದ್ದರು. ಸಭೆಯಲ್ಲಿ ಲಖಿಂಪುರ ಖೇರಿಯ ಪಾದಯಾತ್ರೆಯ ರೂಪರೇಷಗಳ ಕುರಿತು ಚರ್ಚೆ ನಡೆಸಿದ್ದರು. ಸಭೆಯಲ್ಲಿ ಎಲ್ಲ ಮಂತ್ರಿಗಳು ತಮ್ಮ ಭಾಗದಲ್ಲಿ ಪಾದಯಾತ್ರೆಯಲ್ಲಿ ಭಾಗಿಯಾಬೇಕು ಎಂದು ಪಂಜಾಬ್ ಕಾಂಗ್ರೆಸ್ ಕಾರ್ಯದರ್ಶಿ ಸುಖ್ವಿಂದರ್ ಡೈನಿ ಹೇಳಿದ್ದರು. ಪಂಜಾಬ್ ದಿಂದ ಹೊರಟಿಸರುವ ತಂಡದ ನೇತೃತ್ವವನ್ನು ನಜಜೋತ್ ಸಿಂಗ್ ಸಿಧು ತೆಗೆದುಕೊಂಡಿದ್ದಾರೆ.

  ಪಂಜಾಬ್‍ಗೆ ಹಿಂದಿರುಗಿದ ಸಿಎಂ ಚನ್ನಿ:
  ಸಿಎಂ ಚರಣ್‍ಜಿತ್ ಸಿಂಗ್ ಚನ್ನಿ (CM Charanjit Singh Channi) ಲಖಿಂಪುರ ಖೇರಿಗೆ ತೆರಳಲು ಮುಂದಾಗಿದ್ದರು. ಆದ್ರೆ ಉತ್ತರ ಪ್ರದೇಶ ಸರ್ಕಾರ ಸಿಎಂ ಚನ್ನಿ ಹೆಲಿಕಾಪ್ಟರ್ ಲ್ಯಾಂಡ್ ಗೆ ಅನುಮತಿ ನೀಡಿರಲಿಲ್ಲ. ಹಾಗಾಗಿ ಬುಧವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆಯಲ್ಲಿ ಲಖಿಂಪುರ ಖೇರಿಗೆ ತೆರಳಿ ಮೃತ ರೈತ ಕುಟುಂಬಸ್ಥರನ್ನು ಭೇಟಿಯಾಗಿ ಸಂತಾಪ ಸೂಚಿಸಿದ್ದರು. ನಂತರ ಮೃತರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡುವದಾಗಿ ಘೋಷಿಸಿದ್ದರು. ಇಂದು ಬೆಳಗ್ಗೆ ಸಿಎಂ ಚನ್ನಿ ಪಂಜಾಬ್‍ಗೆ ಹಿಂದಿರುಗಿದ್ದಾರೆ.

  ಮಹ್ಮದ್ ರಫೀಕ್​ ಕೆ
  Published by:Seema R
  First published: