ಮುಖ್ಯಮಂತ್ರಿಯ ಹೆಂಡತಿಗೆ ಆನ್​ಲೈನ್​ನಲ್ಲಿ 23 ಲಕ್ಷ ರೂ. ವಂಚನೆ ಮಾಡಿದ ಖದೀಮ!

ವಂಚಕನೋರ್ವ ಸಂಸದೆ ಪ್ರಣೀತ್​​​​​ ಕೌರ್​​ ಅವರಿಗೆ ಕರೆ ಮಾಡಿದ್ದು, ನಾನು ರಾಷ್ಟ್ರೀಯ ಬ್ಯಾಂಕ್​ ಮ್ಯಾನೇಜರ್​ ಮಾತನಾಡುತ್ತಿದ್ದೇನೆ. ನಿಮ್ಮ ಬ್ಯಾಂಕ್​ ಖಾತೆ ವಿವರ ಕೊಡಿ, ಸಂಬಳ ಡೆಪಾಸಿಟ್​ ಮಾಡಬೇಕಾಗಿದೆ ಎಂದು ವಂಚಕ ಹೇಳಿದ್ದನ್ನು ನಂಬಿದ್ದಾರೆ.

news18
Updated:August 10, 2019, 10:12 AM IST
ಮುಖ್ಯಮಂತ್ರಿಯ ಹೆಂಡತಿಗೆ ಆನ್​ಲೈನ್​ನಲ್ಲಿ 23 ಲಕ್ಷ ರೂ. ವಂಚನೆ ಮಾಡಿದ ಖದೀಮ!
ಪ್ರಣೀತ್​​​​​ ಕೌರ್
  • News18
  • Last Updated: August 10, 2019, 10:12 AM IST
  • Share this:
ದೇಶದಲ್ಲಿ ಆನ್​ಲೈನ್​ ವಂಚಕರ ಕರಾಮತ್ತು ಹೆಚ್ಚಾಗುತ್ತಿದ್ದು, ಬಳಕೆದಾರರ ಖಾಸಗಿ ಮಾಹಿತಿಯನ್ನು ಕದ್ದು ಬ್ಯಾಂಕ್​ ಖಾತೆಯ ಮೇಲೆ ಕಣ್ಣುಹಾಯಿಸುತ್ತಿದ್ದಾರೆ. ಈಗ ಇದಕ್ಕೆಪಂಜಾಬ್​ ಮುಖ್ಯಮಂತ್ರಿಯೊಬ್ಬರ ಹೆಂಡತಿಯೇ ಸಂತ್ರಸ್ತೆಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಸಿಎಂ ಕುಟುಂಬದವರಿಗೇ ವಂಚನೆ ಹೋಗುವಾಗ ಸಾಮಾನ್ಯರ ಪರಿಸ್ಥಿತಿ ಏನು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

ಪಂಜಾಬ್​ ಮುಖ್ಯಮಂತ್ರಿ ಅಮರಿಂದರ್​ ಸಿಂಗ್​ ಅವರ ಪತ್ನಿ ಹಾಗೂ ಸಂಸದೆಯಾಗಿರುವ ಪ್ರಣೀತ್​​​​​ ಕೌರ್​ ಅವರು ಸೈಬರ್​ ವಂಚನೆಗೆ ಒಳಗಾಗಿದ್ದು, 23 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ.

ವಂಚಕನೋರ್ವ ಸಂಸದೆ ಪ್ರಣೀತ್​​​​​ ಕೌರ್​​ ಅವರಿಗೆ ಕರೆ ಮಾಡಿದ್ದು, ನಾನು ರಾಷ್ಟ್ರೀಯ ಬ್ಯಾಂಕ್​ ಮ್ಯಾನೇಜರ್​ ಮಾತನಾಡುತ್ತಿದ್ದೇನೆ. ನಿಮ್ಮ ಬ್ಯಾಂಕ್​ ಖಾತೆ ವಿವರ ಕೊಡಿ, ಸಂಬಳ ಡೆಪಾಸಿಟ್​ ಮಾಡಬೇಕಾಗಿದೆ ಎಂದು ವಂಚಕ ಹೇಳಿದ್ದನ್ನು ನಂಬಿದ್ದಾರೆ. ನಂತರ ವಂಚಕನ ಮಾತಿಗೆ ಮರುಳಾದ  ಪ್ರಣೀತ್​​​​​ ಕೌರ್​​ ಅವರು ಬ್ಯಾಂಕ್​ ಖಾತೆ ವಿವರ, ಎಟಿಎಮ್​ ಪಿನ್​, ಸಿವಿಸಿ ನಂಬರ್​ ಜೊತೆಗೆ ಒಟಿಪಿಯನ್ನು ನೀಡಿದ್ದಾರೆ. ಇವೆಲ್ಲಾ ಮಾಹಿತಿಯನ್ನು ತೆಗೆದುಕೊಂಡ ವಂಚಕರು ಅವರ ಖಾತೆಯಿಂದ 23 ಲಕ್ಷ ರೂ. ಹಣ ದೋಚಿದ್ದಾರೆ. ಈ ಪ್ರಕರಣಕ್ಕೆ ಸಂಭಂದಿಸಿ ಆರೋಪಿಯನ್ನು ಪತ್ತೆ ಹಚ್ಚಿದ ಪೋಲಿಸರು ಆತನನ್ನು ಬಂಧಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಆನ್​ ವಂಚನೆಗಳು ಹೆಚ್ಚಾಗುತ್ತಿದ್ದು, ಬಳಕೆದಾರನ ಖಾಸಗಿ ಮಾಹಿತಿಯ ಮೂಲಕ ಬ್ಯಾಂಕ್​ ಖಾತೆಗಳ ಮೇಲೆ ಕಣ್ಣು ಹಾಯಿಸುತ್ತಿದ್ದಾರೆ. ಇನ್ನೆಂದೆಡೆ ಸ್ಮಾರ್ಟ್​ಫೋನ್​​ಗಳ ಮೇಲೆ ಮಾಲ್ವೇರ್​ಗಳನ್ನು ಬಿಡುವ ಮೂಲಕ ಬಳಕೆದಾರರ ಮಾಹಿತಿಯನ್ನು ಕದಿಯುತ್ತಿದ್ದಾರೆ.
First published: August 10, 2019, 9:02 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading