Punjab Govt: ಸೇವೆ ಮಾಡಲು ಬಂದವರಿಗೆ ಪಿಂಚಣಿ ಏಕೆ.. ಮಾಜಿ ಶಾಸಕರ Pensionಗೆ ಬ್ರೇಕ್ ಹಾಕಿದ ಮಾನ್

ರಾಜಕೀಯ ನಾಯಕರು ಸೇವೆ ಮಾಡಲು ಅವಕಾಶ ನೀಡಿ ಎಂದು ಮತ ಕೇಳುತ್ತಾರೆ. ಚುನಾವಣೆಯಲ್ಲಿ ಸೋತ ಬಳಿಕ ಸರ್ಕಾರದಿಂದ ಪಿಂಚಣಿ ಪಡೆಯುತ್ತಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಆಗಲಿದೆ ಎಂದು ಭಗವಂತ್ ಮಾನ್ ಹೇಳಿದ್ದಾರೆ.

ಪಂಜಾಬ್​ ಸಿಎಂ ಭಗವಂತ್ ಮಾನ್

ಪಂಜಾಬ್​ ಸಿಎಂ ಭಗವಂತ್ ಮಾನ್

  • Share this:
ನವದೆಹಲಿ, ಮಾ.‌ 26: ಗಡಿ ರಾಜ್ಯ ಪಂಜಾಬಿನಲ್ಲಿ (Border State Punjab) 117 ಸ್ಥಾನಗಳ ಪೈಕಿ 92 ಕ್ಷೇತ್ರಗಳನ್ನು ಗೆದ್ದು ಗೆದ್ದುಗೆ ಹಿಡಿದಿರುವ ಆಮ್ ಆದ್ಮಿ ಪಕ್ಷ (Aam Admi Party) ಹಲವು ವಿಶೇಷಗಳಿಂದ ಕೂಡಿದೆ. ಮುಖ್ಯಮಂತ್ರಿ ಭಗವಂತ್ ಮಾನ್ (Chief Minister Bhagawanth Maan) ಮೊದಲಿಗೆ ತಮ್ಮ ಸಚಿವ ಸಂಪುಟಕ್ಕೆ (Cabinet) ವಿಶೇಷ ವ್ಯಕ್ತಿಗಳನ್ನು ಸೇರಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದರು. ಇದೀಗ ಹಲವು ಸಮಸ್ಯೆಗಳಿಂದ ಬಳಲುತ್ತಿರುವ ಪಂಜಾಬ್ ಸರ್ಕಾರದ ಬೊಕ್ಕಸಕ್ಕೆ (Treasury) ಹೊರೆ ಆಗದಂತೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಮಾಜಿ ಶಾಸಕರ ಪಿಂಚಣಿಗೆ ಬ್ರೇಕ್
ಒಮ್ಮೆ ವಿಧಾನಸಭೆ ಅಥವಾ ವಿಧಾನ ಪರಿಷತ್ ಶಾಸಕರಾಗಿ ಆಯ್ಕೆ ಆದವರು ಜೀವಮಾನವಿಡೀ ಪಿಂಚಣಿ ಪಡೆಯುತ್ತಿದ್ದಾರೆ. ಇದು ಎಲ್ಲಾ ರಾಜ್ಯಗಳಲ್ಲೂ ನಡೆದುಕೊಂಡು‌ ಬರುತ್ತಿದೆ. ಇದರಿಂದ ಸರ್ಕಾರಗಳಿಗೆ‌ ಕೋಟ್ಯಂತರ ರೂಪಾಯಿ ಖರ್ಚಾಗುತ್ತಿದೆ. ಪಂಜಾಬಿನ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ರಾಜ್ಯದಲ್ಲಿ ‌ಈ ಅನಗತ್ಯ ವೆಚ್ಛಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ.

ಇದನ್ನೂ ಓದಿ: Delhi Budget 2022: ಮುಂದಿನ 5 ವರ್ಷಗಳಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿ: ದೆಹಲಿ ಸರ್ಕಾರದ ಗುರಿ

'ಒಬ್ಬ ಶಾಸಕನಿಗೆ ಒಂದೇ ಅವಧಿ ಪಿಂಚಣಿ’ ಯೋಜನೆ ಜಾರಿ
ಪಂಜಾಬಿನಲ್ಲಿ ಶಾಸಕರಾಗಿದ್ದು ಮತ್ತೆ ಚುನಾವಣೆಗೆ ನಿಲ್ಲದೆ ಅಥವಾ ಸೋತು ಮಾಜಿ ಆದ ಬಳಿಕ ಮೊದಲ ಅವಧಿಯಲ್ಲಿ ಪ್ರತಿ ತಿಂಗಳಿಗೆ ಸುಮಾರು 75,000 ರೂಪಾಯಿ ಪಿಂಚಣಿ ಪಡೆಯುತ್ತಾರೆ. ಮುಂದಿನ ಅವಧಿಗೆ ಪಿಂಚಣಿ ಮೊತ್ತ ಶೇಕಡಾ 66ರಷ್ಟು ಹೆಚ್ಚಾಗುತ್ತದೆ. ಹೀಗೆ ಸದ್ಯ ಪಂಜಾಬ್‌ನಲ್ಲಿ ಪಿಂಚಣಿ ಪಡೆಯುತ್ತಿರುವ ಮಾಜಿ ಶಾಸಕರ ಸಂಖ್ಯೆ 250ಕ್ಕೂ ಹೆಚ್ಚಿದೆ. ಇದರಿಂದ ಪ್ರತಿ ತಿಂಗಳು ಪಂಜಾಬ್ ಸರ್ಕಾರ ಮಾಜಿ ಶಾಸಕರಿಗೆ ಪಿಂಚಣಿ ನೀಡಲೆಂದೇ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸರ್ಕಾರ ’ಒಬ್ಬ ಶಾಸಕನಿಗೆ ಒಂದೇ ಅವಧಿ ಪಿಂಚಣಿ’ ಯೋಜನೆ ಜಾರಿ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಭಗವಂತ್ ಮಾನ್‌ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಸೇವೆ ಮಾಡಲು ಬಂದವರಿಗೆ ಪಿಂಚಣಿ ಏಕೆ?
ಮಾಜಿ ಶಾಸಕರಿಗೆ ಪಿಂಚಣಿ ನೀಡುತ್ತಿದ್ದ ಹಣವನ್ನು ಉಳಿಸಿ  ಜನರ ಕಲ್ಯಾಣಕ್ಕೆ ವಿನಿಯೋಗಿಸಲಾಗುವುದು ಎಂದು ಹೇಳಿರುವ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ರಾಜಕೀಯ ನಾಯಕರು ನಿಮ್ಮ ಸೇವೆ ಮಾಡಲು ಅವಕಾಶ ನೀಡಿ ಎಂದು ಮತ ಕೇಳುತ್ತಾರೆ. ಆದರೆ ಚುನಾವಣೆಯಲ್ಲಿ ಸೋತ ಬಳಿಕ ಸರ್ಕಾರದಿಂದ ಪಿಂಚಣಿ ಪಡೆಯುತ್ತಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟ ಆಗಲಿದೆ. ಈ‌ ಹಿನ್ನೆಲೆಯಲ್ಲಿ ನಾವು ಸುಧಾರಣಾ ಕ್ರಮ ತರಲು ಮುಂದಾಗಿದ್ದೇವೆ ಎಂದು ಮಾನ್ ಹೇಳಿದ್ದಾರೆ.

ಇದನ್ನೂ ಓದಿ: Yogi Govt 2.0: ಮತ್ತೆ ಅಧಿಕಾರಕ್ಕೆ ಬಂದೊಡನೆ ಉಚಿತ ಪಡಿತರ ಯೋಜನೆಯನ್ನು ಮುಂದುವರೆಸಿದ ‘ಯೋಗಿ ಸರ್ಕಾರ್’

ಮಾಜಿ ಶಾಸಕರ ಭದ್ರತೆಗೂ ಬ್ರೇಕ್ ಹಾಕಿರುವ ಮಾನ್
ಪಂಜಾಬಿನಲ್ಲಿ ಬಹುತೇಕ ಶಾಸಕರು, ಮಾಜಿ ಶಾಸಕರು, ಸಂಸದರು, ಮಾಜಿ ಸಂಸದರು ವಿವಿಧ ರೀತಿಯ ಭದ್ರತೆ ಪಡೆಯುತ್ತಿದ್ದರು. ಸುಮಾರು ನಾಲ್ಕೈದು ಸಾವಿರ ಪೊಲೀಸರು ಜನಪ್ರತಿನಿಧಿಗಳ ಅಂಗರಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಇದು ಕೂಡ ಬೊಕ್ಕಸಕ್ಕೆ ಹೊರೆಯಾಗುತ್ತಿತ್ತು. ಅನಗತ್ಯವಾಗಿ ಅಂಗರಕ್ಷರನ್ನು ನೀಡಲು ಸಾಧ್ಯವಿಲ್ಲ ಎಂದು ನಿರ್ಣಯಕ್ಕೆ ಬಂದಿರುವ ಭಗವಂತ್ ಮಾನ್ ಈ ಮೂಲಕ ಆಗುತ್ತಿದ್ದ ಖರ್ಚಿಗೂ ಕಡಿವಾಣ ಹಾಕಿದ್ದಾರೆ.

ಆಪ್ ಅಡ್ವೊಕೇಟ್ ಜನರಲ್ ಗೆ 1 ರೂ. ಸಂಬಳ
ಆಪ್ ಸರ್ಕಾರದ ಅಡ್ವೊಕೇಟ್ ಜನರಲ್ ನೇಮಕ ಆಗಿರುವ ಅನ್ಮೂಲ್ ರತ್ತನ್ ಸಿಧು  'ರಾಜ್ಯದ ಪರ ವಕೀಲಿಕೆ ಮಾಡಲು ಕೇವಲ ಒಂದು ರೂಪಾಯಿ ಸಂಭಾವನೆ ಪಡೆಯುತ್ತೇನೆ ಎಂದು ತಿಳಿಸಿದ್ದಾರೆ‌‌. ಸರ್ಕಾರದ ಕೆಲಸವನ್ನು ಸಂಪೂರ್ಣ ಪಾರದರ್ಶಕತೆಯೊಂದಿಗೆ ಮಾಡುತ್ತೇನೆ. ಸರ್ಕಾರದ ಪ್ರಕರಣಗಳನ್ನು ನಿರ್ವಹಿಸುವುದಕ್ಕಾಗಿ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
Published by:Kavya V
First published: