Punjab Election 2022: ಬಿಜೆಪಿ, ಅಕಾಲಿದಳ ಗೆಲುವಿಗಾಗಿ ಡೇರಾ ಸಚ್ಚಾ ಸೌದಾ ಮೊರೆ ಹೋಗಿವೆ: ಚನ್ನಿ ವಾಗ್ದಾಳಿ

ಅಕಾಲಿದಳ ಮತ್ತು ಬಿಜೆಪಿ ಪಾಲುದಾರಿಕೆ ಹೊಂದಿವೆ. ಎರಡೂ ಪಕ್ಷಗಳು ಡೇರಾ ಸಚ್ಚಾ ಸೌದಾದಿಂದ ಬೆಂಬಲವನ್ನು ಪಡೆಯಲು ಒಂದು ತಂಡಗಳಾಗಿ ಪ್ರಯತ್ನಿಸುತ್ತಿವೆ. ಆದರೆ ಪಂಜಾಬ್‌ನ ಜನರು ಈ ತಂಡಗಳನ್ನು ನಿಯಂತ್ರಿಸುತ್ತಾರೆ. ತಮ್ಮ ಮತಗಳ ಮೂಲಕ ಅಕಾಲಿದಳ ಮತ್ತು ಬಿಜೆಪಿಗೆ ಪಾಠ ಕಲಿಸುತ್ತಾರೆ.

ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ

ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ

  • Share this:
ನವದೆಹಲಿ, ಫೆ.‌ 20: ಪಂಜಾಬ್ ವಿಧಾನಸಭಾ ಚುನಾವಣೆಯನ್ನು (Punjab Assembly Elections) ಕಾಂಗ್ರೆಸ್ ಪಕ್ಷ (Congress Party) ಗೆದ್ದೇ ಗೆಲ್ಲುವ ವಿಶ್ವಾಸ ಇಟ್ಟುಕೊಂಡಿದೆ. ಇಂಥದೇ ವಿಶ್ವಾಸ ಇರುವ ಕಾರಣಕ್ಕೆ ಮತದಾನ ನಡೆಯುತ್ತಿರುವ ಹೊತ್ತಿನಲ್ಲೇ ಅಲ್ಲಿನ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ (Chief Minister Charanjit Singh Channi) ಅವರು ಭಾನುವಾರ ಶಿರೋಮೋನಿ ಅಕಾಲಿದಳ (Shiromani Akhali Dal) ಮತ್ತು ಭಾರತೀಯ ಜನತಾ ಪಕ್ಷ (BJP) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎರಡೂ ಪಕ್ಷಗಳಿಗೆ ಡೇರಾ ಸಚ್ಚಾ ಸೌದಾದ (Dear Saccha Sowdha) ಬೆಂಬಲ ಪಡೆಯುವ ದೈನೇಸಿ ಸ್ಥಿತಿ ಬಂದೊದಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: UP Election 2022: ಸಮಾಜವಾದಿ ಪಕ್ಷ ಈಗಾಗಲೇ ಗೆದ್ದಿದೆ, BJPಗೆ ಆತಂಕ ಶುರುವಾಗಿದೆ: ಅಖಿಲೇಶ್ ಯಾದವ್

ಬಿಜೆಪಿ-ಅಖಾಲಿದಳಗಳಿಗೆ ಜನ ಪಾಠ ಕಲಿಸುತ್ತಾರೆ
'ಅಕಾಲಿ ಮತ್ತು ಬಿಜೆಪಿ ಪಾಲುದಾರಿಕೆ ಹೊಂದಿವೆ. ಎರಡೂ ಪಕ್ಷಗಳು ಡೇರಾ ಸಚ್ಚಾ ಸೌದಾದಿಂದ ಬೆಂಬಲವನ್ನು ಪಡೆಯಲು ಒಂದು ತಂಡಗಳಾಗಿ ಪ್ರಯತ್ನಿಸುತ್ತಿವೆ. ಆದರೆ ಪಂಜಾಬ್‌ನ ಜನರು ಈ ತಂಡಗಳನ್ನು ನಿಯಂತ್ರಿಸುತ್ತಾರೆ. ತಮ್ಮ ಮತಗಳ ಮೂಲಕ ಅಖಾಲಿದಳ ಮತ್ತು ಬಿಜೆಪಿ ಪಕ್ಷಗಳಿಗೆ ಪಾಠ ಕಲಿಸುತ್ತಾರೆ. ಬಾರಾತ್ ಜಿನ್ನಿ ಮರ್ಜಿ ವಡ್ಡಿ ಹೋವ್, ಪಿಂಡ್ ತೋನ್ ಘಾಟ್ ಹೈ ಹುಂಡಿ ಹೈ' ಎಂದು ಮುಖ್ಯಮಂತ್ರಿ ಚರಣಜಿತ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಇದಲ್ಲದೆ ಆಮ್ ಆದ್ಮಿ ಪಕ್ಷ ಕೂಡ ಡೇರಾ ಸಚ್ಚಾ ಸೌದದ ಬೆಂಬಲ ಪಡೆಯುತ್ತಿದೆ. ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಮತ್ತು ಎಎಪಿ ಧುರಿಯಲ್ಲಿ ಡೇರಾ ಬೆಂಬಲವನ್ನು ಕೋರಿದ್ದಾರೆ ಎಂದು ಚರಣಜಿತ್ ಸಿಂಗ್ ಚನ್ನಿ ಆರೋಪಿಸಿದ್ದಾರೆ.

ಸಿಧು ಗೆಲ್ಲೋದು‌ ಗ್ಯಾರಂಟಿ
ಅಮೃತಸರ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಪಂಜಾಬ್ ಕಾಂಗ್ರೆಸ್‌ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸೋಲುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಮತದಾನ ಮುಗಿಯುತ್ತಿದ್ದಂತೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಸಂಸದ ಗುರ್ಜಿತ್ ಸಿಂಗ್ ಔಜ್ಲಾ ಅವರು, ಅಮೃತಸರ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಅಖಾಲಿದಳದ ಅಭ್ಯರ್ಥಿ ಬಿಕ್ರಮ್ ಮಜಿಥಿಯಾ ಮತ್ತು ಆಮ್ ಆದ್ಮಿ ಪಕ್ಷದ ಹುರಿಯಾಳು ಜೀವನ್ ಜ್ಯೋತ್ ಕೌರ್ ಏನೇ ಹೋರಾಟ ನಡೆಸಿದರೂ ಅಂತಿಮವಾಗಿ ಜನ ನವಜೋತ್ ಸಿಂಗ್ ಸಿಧುಗೆ ಅವರಿಗೆ ಮತ ಹಾಕಿದ್ದಾರೆ. ಸಿಧು ಈ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ.

ಅತಂತ್ರ ವಿಧಾನಸಭಾ ಸಾಧ್ಯತೆ ಇಲ್ಲ
ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಮತ್ತು ಸಂಗ್ರೂರ್‌ನಿಂದ ಎರಡು ಬಾರಿ ಸಂಸದರಾಗಿರುವ ಭಗವಂತ್ ಮಾನ್ ಅವರು ಹಂಗ್ ಅಸೆಂಬ್ಲಿಯ ಯಾವುದೇ ಸಾಧ್ಯತೆಯನ್ನು ನಿರಾಕರಿಸಿದರು. ಪಂಜಾಬಿನ 117 ವಿಧಾನಸಭಾ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಲ್ಷ 80ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿದರು.‌ ಮತ ಚಲಾಯಿಸುವ ಮೊದಲು ಮೊಹಾಲಿಯ ಗುರುದ್ವಾರಕ್ಕೆ ಭೇಟಿ ನೀಡಿ ನಂತರ ತಾವು ಸ್ಪರ್ಧಿಸುತ್ತಿರುವ ಧುರಿ ಕ್ಷೇತ್ರದ ರಾಣಿಕೆ ಗ್ರಾಮದಲ್ಲಿ ರಂಕೇಶ್ವರ ಮಹಾದೇವ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಮಾನ್ ನ್ಯೂಸ್ 18 ಜೊತೆ ಮಾತನಾಡಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ ನಾಯಕರ ಸಭೆ ಕರೆದ Rahul Gandhi; ಫೆ. 25 ಅಥವಾ 26ಕ್ಕೆ ಸಭೆ

ಆಮ್ ಆದ್ಮಿ ಪಕ್ಷದ ಮಾಜಿ ಸದಸ್ಯ ಕುಮಾರ್ ವಿಶ್ವಾಸ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಈ ಬಾರಿಯ ಚುನಾವಣೆಯಲ್ಲಿ ಸೋಲುವ ಭಯದಿಂದ ಹತಾಶರಾಗಿ ಮಾತನಾಡುತ್ತಿದ್ದಾರೆ ಮತ್ತು ಆಮ್ ಆದ್ಮಿ ಪಕ್ಷದ ವಿರುದ್ಧ ಎಲ್ಲರೂ ಒಗ್ಗೂಡಿದ್ದಾರೆ ಎಂದು ಮಾನ್ ಹೇಳಿದರು. ಪಂಜಾಬ್ ಪ್ರಚಾರದ ಸಮಯದಲ್ಲಿ ಅರವಿಂದ್ ಕೇಜ್ರಿವಾಲ್ ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡಿದ್ದಾರೆ ಎಂದು ಕುಮಾರ್ ವಿಶ್ವಾಸ್ ಮಾಡಿದ್ದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಭಗವಂತ್ ಮಾನ್ 'ಅವರ ಆರೋಪದಲ್ಲಿ ಹುರುಳಿಲ್ಲ' ಎಂದು ನಿರಾಕರಿಸಿದ್ದಾರೆ.

ಪಂಜಾಬ್‌ನ 117 ವಿಧಾನಸಭಾ ಸ್ಥಾನಗಳಿಗೆ ಇಂದು ಒಂದೇ ಹಂತದಲ್ಲಿ ಮತದಾನ ನಡೆದಿದೆ. ಕಾಂಗ್ರೆಸ್, ಆಮ್ ಆದ್ಮಿ, ಶಿರೋಮಣಿ ಅಖಾಲಿದಳ, ಬಹುಜನ ಸಮಾಜವಾದಿ ಪಕ್ಷ, ಬಿಜೆಪಿ, ಪಿಎಲ್‌ಸಿ, ಎಸ್‌ಎಡಿ (ಸಂಯುಕ್ತ) ಮತ್ತು ವಿವಿಧ ರೈತ ಸಂಘಟನೆಗಳ ರಾಜಕೀಯ ಮುಂಭಾಗವಾದ ಸಂಯುಕ್ತ ಸಮಾಜ ಮೋರ್ಚಾ ನಡುವೆ ಸ್ಪರ್ಧೆಗೆ ನಡೆದಿದೆ. ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ‌.
Published by:Kavya V
First published: