• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Mann Marriage: ಮುಖ್ಯಮಂತ್ರಿಗೆ ಮದುವೆ ಸಂಭ್ರಮ! ಮನ್ ಹಾಗೂ ಗುರ್​ಪ್ರೀತ್​ ನಡುವೆ ಭಾರೀ ವಯಸ್ಸಿನ ಅಂತರ

Mann Marriage: ಮುಖ್ಯಮಂತ್ರಿಗೆ ಮದುವೆ ಸಂಭ್ರಮ! ಮನ್ ಹಾಗೂ ಗುರ್​ಪ್ರೀತ್​ ನಡುವೆ ಭಾರೀ ವಯಸ್ಸಿನ ಅಂತರ

ಪಂಜಾಬ್ ಸಿಎಂ ಭಗವಂತ್ ಮಾನ್ ಹಾಗೂ ಡಾ. ಗುರುಪ್ರೀತ್ ಕೌರ್

ಪಂಜಾಬ್ ಸಿಎಂ ಭಗವಂತ್ ಮಾನ್ ಹಾಗೂ ಡಾ. ಗುರುಪ್ರೀತ್ ಕೌರ್

ಡಾ ಗುರ್​ಪ್ರೀತ್ ಕೌರ್ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದಾರೆ (Doctor). ಅವರು ಹರಿಯಾಣದ ಕುರುಕ್ಷೇತ್ರದ ಪೆಹೋವಾ ಮೂಲ ಬಂದವರು. 1993 ರಲ್ಲಿ ಜನಿಸಿದ ಗುರುಪ್ರೀತ್ ಕೌರ್ ಸದ್ಯ ವೈದ್ಯೆಯಾಗಿದ್ದಾರೆ.

  • Share this:

ಪಂಜಾಬ್(ಜು.07): ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಗುರುವಾರ ಚಂಡೀಗಢದ ತಮ್ಮ ನಿವಾಸದಲ್ಲಿ ಡಾ ಗುರ್​ಪ್ರೀತ್ ಕೌರ್
(Gurpreet Kaur) ಅವರನ್ನು ಖಾಸಗಿ ಸಮಾರಂಭದಲ್ಲಿ ವಿವಾಹವಾಗಲಿದ್ದಾರೆ (Marriage). ಸಿಎಂ ಮನ್ 2015ರಲ್ಲಿ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದರು. ಡಾ ಗುರ್​ಪ್ರೀತ್ ಕೌರ್ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದಾರೆ (Doctor). ಅವರು ಹರಿಯಾಣದ ಕುರುಕ್ಷೇತ್ರದ ಪೆಹೋವಾ ಮೂಲ ಬಂದವರು. 1993 ರಲ್ಲಿ ಜನಿಸಿದ ಗುರುಪ್ರೀತ್ ಕೌರ್​ಗೆ 29 ವರ್ಷ. 29 ವರ್ಷದ ಕೌರ್ ಜೊತೆಗೆ 48 ವರ್ಷದ ಭಗವಂತ್ ಮಾನ್ ಅವರ ವಿವಾಹ ನಡೆಯಲಿದ್ದು ಈ ಜೋಡಿಯ ಮಧ್ಯೆ 19 ವರ್ಷಗಳ (19 Years) ಅಂತರವಿದೆ.


ವಿವಾಹದಲ್ಲಿ ಯಾರೆಲ್ಲಾ ಭಾಗಿ?


ಸಮಾರಂಭದಲ್ಲಿ ಪಂಜಾಬ್ ಸಿಎಂ ತಾಯಿ, ಸಹೋದರಿ, ಸಂಬಂಧಿಕರು ಮತ್ತು ಕೆಲವೇ ಅತಿಥಿಗಳು ಮಾತ್ರ ಭಾಗವಹಿಸಲಿದ್ದಾರೆ. ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಕುಟುಂಬ ಕೂಡ ಕಾರ್ಯಕ್ರಮಕ್ಕೆ ಬರುವ ನಿರೀಕ್ಷೆಯಿದೆ. ಎಎಪಿಯ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರು ಈಗಾಗಲೇ ಚಂಡೀಗಢಕ್ಕೆ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.


ಸಿಖ್ ಸಂಪ್ರದಾಯದಂತೆ ಮದುವೆ


ಡಾ ಗುರುಪ್ರೀತ್ ಕೌರ್ 2018 ರಲ್ಲಿ ಹರಿಯಾಣದ ಮುಲ್ಲಾನಾದಲ್ಲಿರುವ ಮಹರ್ಷಿ ಮಾರ್ಕಂಡೇಶ್ವರ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಮಾಡಿದರು.
ಸುದ್ದಿ ಸಂಸ್ಥೆ ಐಎಎನ್ಎಸ್ ಮೂಲಗಳನ್ನು ಉಲ್ಲೇಖಿಸಿ, ಮಾನ್ ಅವರ ತಾಯಿ ಮಗನಿಗೆ ಮದುವೆ ಮಾಡಲು ಬಯಸಿದ್ದರು. ಪಿಟಿಐ ಉಲ್ಲೇಖಿಸಿದ ಮೂಲಗಳ ಪ್ರಕಾರ, ಇದು ನಿಯೋಜಿತ ಮದುವೆಯಾಗಿದೆ. ಸಿಖ್ ಸಂಪ್ರದಾಯದಂತೆ ಮದುವೆ ನಡೆಯಲಿದೆ.


ಇದನ್ನೂ ಓದಿ: Bhagwant Mann: 50ರ ಹರೆಯದಲ್ಲಿ ಭಗವಂತ್ ಮನ್ ಮರು ಮದುವೆ! ಈ ವಿವಾಹಕ್ಕೆ ಒತ್ತಾಯಿಸಿದ್ಯಾರು?


ಮಾನ್ ಅವರ ಮಾಜಿ ಪತ್ನಿ ಇಂದರ್‌ಪ್ರೀತ್ ಕೌರ್ ಮತ್ತು ಅವರ ಮಕ್ಕಳು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುತ್ತಿದ್ದಾರೆ. ಅವರ ಮಗಳು ಸೀರತ್ ಕೌರ್ ಮಾನ್ (21) ಮತ್ತು ಮಗ ದಿಲ್ಶನ್ ಮಾನ್ (17) ಅವರು ಮಾರ್ಚ್ 16 ರಂದು ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ಯುಎಸ್‌ನಿಂದ ಭಾರತಕ್ಕೆ ಬಂದಿದ್ದರು.
ಎಎಪಿ ಸಂಸದ ರಾಘವ್ ಚಡ್ಡಾ ಅವರು ಮಾನ್ ಅವರಿಗೆ ದಾಂಪತ್ಯ ಜೀವನಕ್ಕೆ ಶುಭ ಹಾರೈಸಿದರು.


ಮನೆ ಖಾಲಿ, ಮನಸು ಭಾರ ಎಂದಿದ್ದ ಮನ್


ಮನ್ ಅವರ ತಾಯಿ ಹರ್ಪಾಲ್ ಕೌರ್ ಮತ್ತು ಸಹೋದರಿ ಮನ್‌ಪ್ರೀತ್ ಕೌರ್ ಅವರು ಮನ್ ಅವರನ್ನು ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದಾಗ ಅವರ ಯಶಸ್ಸಿಗೆ ತಮ್ಮ ಸಂತೋಷ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು. ಆಗಾಗ ತನ್ನ ಸಂದರ್ಶನಗಳಲ್ಲಿ, ಇಡೀ ಪಂಜಾಬ್ ಈಗ ತನ್ನ ಕುಟುಂಬವಾಗಿದ್ದರೂ, ಕೆಲಸದಿಂದ ಹಿಂತಿರುಗಿದಾಗ ತನ್ನ ಮನೆ ಖಾಲಿಯಾಗಿರುವುದನ್ನು ಕಂಡು ಹೃದಯ ಇನ್ನೂ ಭಾರವಾಗುತ್ತಿದೆ ಎಂದು ಮನ್ ವ್ಯಕ್ತಪಡಿಸಿದ್ದರು.


ಇದನ್ನೂ ಓದಿ: Bhagwant Mann Marriage: ಪಂಜಾಬ್ ಸಿಎಂ ಭಗವಂತ್ ಮಾನ್ ಮದುವೆ, ವಧು ಯಾರು?


ಅವರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ತಮ್ಮ ಮಕ್ಕಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಅವರ ಜನ್ಮದಿನದಂದು ಶುಭ ಹಾರೈಸಿದ್ದಾರೆ, ಅವರು ಮಕ್ಕಳನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿಯೂ ಹೇಳಿದ್ದಾರೆ.


ಕುಟುಂಬ ಬಿಟ್ಟು ಪಂಜಾಬ್ ಆರಿಸಿಕೊಂಡ ಮನ್


ವಿಚ್ಛೇದನದ ಪ್ರಕ್ರಿಯೆಯ ಸಮಯದಲ್ಲಿ, ಮಾನ್ ತನ್ನ ಸ್ವಂತ ಕುಟುಂಬಕ್ಕಿಂತ ಪಂಜಾಬ್ ಕುಟುಂಬವನ್ನು ಆರಿಸಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಹಾಸ್ಯನಟನಾಗಿ ಬದಲಾಗಿರುವ ರಾಜಕಾರಣಿ ತನ್ನ ವಿಚ್ಛೇದನವನ್ನು ವಿವರಿಸಿ, ದೀರ್ಘಕಾಲದ ಸಮಸ್ಯೆಯನ್ನು ಪರಿಹರಿಸಲಾಗಿದೆ. ನ್ಯಾಯಾಲಯವು ನಿರ್ಧರಿಸಿದೆ. ನಾನು ನನ್ನ ಎರಡು ಕುಟುಂಬಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ನಾನು ಪಂಜಾಬ್ ಅನ್ನು ಆರಿಸಿಕೊಂಡಿದ್ದೇನೆ ಎಂದಿದ್ದರು.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು