Bhagwant Mann Marriage: ಪಂಜಾಬ್ ಸಿಎಂ ಭಗವಂತ್ ಮಾನ್ ಮದುವೆ, ವಧು ಯಾರು?

Bhagwant Mann Marriage: ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಎರಡನೇ ಬಾರಿಗೆ ಮದುವೆಯಾಗುತ್ತಿದ್ದಾರೆ. ಖಾಸಗಿ ಸಮಾರಂಭದಲ್ಲಿ ಅವರು ಗುರ್​ಪ್ರೀತ್ ಕೌರ್​ ಅವರನ್ನು ವರಿಸಲಿದ್ದಾರೆ.

ಪಂಜಾಬ್ ಸಿಎಂ ಭಗವಂತ್ ಮಾನ್ ಹಾಗೂ ಡಾ. ಗುರುಪ್ರೀತ್ ಕೌರ್

ಪಂಜಾಬ್ ಸಿಎಂ ಭಗವಂತ್ ಮಾನ್ ಹಾಗೂ ಡಾ. ಗುರುಪ್ರೀತ್ ಕೌರ್

  • Share this:
ಪಂಜಾಬ್(ಜು.06): ಆಮ್ ಆದ್ಮಿ ಪಕ್ಷದ ನಾಯಕ ಮತ್ತು ಪಂಜಾಬ್ ಮುಖ್ಯಮಂತ್ರಿ (Punjab CM) ಭಗವಂತ್ ಮಾನ್ (Bhagwant Mann) ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಡಾ. ಗುರ್​ಪ್ರೀತ್ ಕೌರ್ ಅವರನ್ನು ಪಂಜಾಬ್ ಸಿಎಂ ಖಾಸಗಿ ಸಮಾರಂಭದಲ್ಲಿ ವರಿಸಲಿದ್ದಾರೆ. ಭಗವಂತ್ ಮಾನ್ ಆರು ವರ್ಷಗಳ ಹಿಂದೆ ವಿಚ್ಛೇದನ ಪಡೆದರು. ಅವರ ಮೊದಲ ಹೆಂಡತಿ ಮತ್ತು ಮಕ್ಕಳು ಅಮೇರಿಕಾದಲ್ಲಿ  (America) ವಾಸಿಸುತ್ತಿದ್ದಾರೆ. ವಿಚ್ಛೇದನೆ ನಂತರ ರಾಜಕೀಯ ವೃತ್ತಿ ಜೀವನದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಮಾನ್ ಈಗ ಮತ್ತೊಮ್ಮೆ ಮದುವೆಯಾಗಲಿದ್ದು ತಮ್ಮ ವೈವಾಹಿಕ ಜೀವನವನ್ನು ಮತ್ತೊಮ್ಮೆ ಶುರು ಮಾಡಲಿದ್ದಾರೆ. ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುವಾಗ ಸಮಾರಂಭಕ್ಕೆ ಭಗವಂತ ಮಾನ್ ಅವರ ಮಕ್ಕಳಿಬ್ಬರೂ ಬಂದಿದ್ದರು.

ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿದ್ದ ಭಗವಂತ್ ಮಾನ್‌

ಭಗವಂತ್ ಮಾನ್‌ ಅವರು ದೂರದರ್ಶನ ಕಾರ್ಯಕ್ರಮ 'ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್' ನಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಆಗಿ ಕೆಲಸ ಮಾಡಿದ್ದರು. ಭಗವಂತ್ ಮಾನ್‌ ಅವರು ವಿಶೇಷ ಅಗತ್ಯವುಳ್ಳ ಮಕ್ಕಳ ಮೇಲೆ ಕೇಂದ್ರೀಕರಿಸುವ ತಮ್ಮದೇ ಆದ ಚಾರಿಟಬಲ್ ಫೌಂಡೇಶನ್‌ ಆದ ಲೋಕ್ ಲೆಹರ್ ಫೌಂಡೇಶನ್ ಅನ್ನು ಹೊಂದಿದ್ದಾರೆ. ಇನ್ನು, ಇರಾಕ್‌ನಿಂದ ಸಿಕ್ಕಿಬಿದ್ದ ಭಾರತೀಯರನ್ನು ಮರಳಿ ಕರೆತರಲು ಸಹ ಭಗವಂತ್ ಮಾನ್ ಸಹಾಯ ಮಾಡಿದ್ದರು.

ಮದ್ಯ ಸೇವಿಸುವುದಿಲ್ಲ ಎಂದು ಪ್ರತಿಜ್ಞೆ

2019 ರಲ್ಲಿ ಪಂಜಾಬ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಅವರು ಇನ್ನು ಮುಂದೆ ಮದ್ಯ ಸೇವಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.ಆಮ್ ಆದ್ಮಿ ಪಕ್ಷ (ಎಎಪಿ) 2014 ರಲ್ಲಿ ಹಾಸ್ಯನಟ ಕಮ್‌ ರಾಜಕಾರಣಿಯನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿತು. ಮಾನ್ 2014 ರಲ್ಲಿ ಸಂಗ್ರೂರ್ ಕ್ಷೇತ್ರದಿಂದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಮೊದಲ ಬಾರಿಗೆ ಸಂಸದರಾಗಿದ್ದರು.

ಇದನ್ನೂ ಓದಿ: Bhagwant Mann Profile: ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿದ್ದ ಭಗವಂತ್ ಮಾನ್‌ ಪಂಜಾಬ್ ಸಿಎಂ ಆಗುವ ಮಟ್ಟಕ್ಕೆ ಬೆಳೆದಿದ್ದು ಹೇಗೆ?

ಅವರು 2019 ರಲ್ಲಿ ಮತ್ತೆ ಅದೇ ಸ್ಥಾನದಿಂದ ಗೆದ್ದು ತಮ್ಮ ಯಶಸ್ಸನ್ನು ಪುನರಾವರ್ತಿಸಿದರು. ಆ ವೇಳೆ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಕೇವಲ್ ಧಿಲ್ಲೋನ್ ಅವರನ್ನು 1,10,211 ಮತಗಳ ಅಂತರದಿಂದ ಸೋಲಿಸಿ ಸತತ ಎರಡನೇ ಬಾರಿಗೆ ಸಂಸದರಾಗಿ ಸ್ಥಾನ ಪಡೆದರು.

ಸಿಎಂ ಆಗುವ ಸಂದರ್ಭ ಶುಭ ಹಾರೈಸಿದ್ದ ಮಾಜಿ ಪತ್ನಿ

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮಾನ್ ಮತ್ತು ಎಎಪಿಯ ಬೃಹತ್ ವಿಜಯದ ನಂತರ ತನ್ನ ಮೊದಲ ಕಾಮೆಂಟ್‌ಗಳಲ್ಲಿ, ಇಂದರ್‌ಪ್ರೀತ್ ಕೌರ್ ಯುಎಸ್‌ನಿಂದ ಮಾತನಾಡಿ “ನಮ್ಮ ಮಕ್ಕಳಿಬ್ಬರೂ ಭಾರತವನ್ನು ತಲುಪಿದ್ದಾರೆ. ಅವರು ಖಟ್ಕರ್ ಕಲಾನ್‌ನಲ್ಲಿ ಭಗವಂತ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಅವರು ತುಂಬಾ ಉತ್ಸುಕರಾಗಿದ್ದಾರೆ ಎಂದಿದ್ದರು. ಭಗವಂತ್ ಮಾನ್ ಪಂಜಾಬ್ ಸಿಎಂ ಆಗುವ ಬಗ್ಗೆ ತನ್ನ ಪ್ರತಿಕ್ರಿಯೆ "ಅತ್ಯಂತ ಧನಾತ್ಮಕ" ಎಂದು ಇಂದರ್‌ಪ್ರೀತ್ ಹೇಳಿದ್ದಾರೆ. ಅವನು ಯಾವಾಗಲೂ ತನ್ನ ಪ್ರಾರ್ಥನೆಯಲ್ಲಿದ್ದಾನೆ ಮತ್ತು ಮುಂದುವರಿಯುತ್ತಾನೆ ಎಂದು ಅವರು ಹೇಳಿದ್ದರು..

"ನಾನು ಯಾವಾಗಲೂ ಅವರ ಯಶಸ್ಸಿಗೆ ಶ್ರಮಿಸುತ್ತೇನೆ. ಅವರ ಬೆನ್ನಿನ ಹಿಂದೆ ಇರುತ್ತೇನೆ. ನನ್ನ ಕಡೆಯಿಂದ ನಾನು ಅವರಿಗೆ ಕೆಟ್ಟದ್ದನ್ನು ಹೇಳಿಲ್ಲ. ಈ ಎಲ್ಲಾ ವರ್ಷಗಳಿಂದ ಅವರು ಯಾವಾಗಲೂ ನನ್ನ ಪ್ರಾರ್ಥನೆಯಲ್ಲಿದ್ದರು. ಯಾವಾಗಲೂ ಇರುತ್ತಾರೆ ಎಂದಿದ್ದಾರೆ.
ಭೌತಿಕ ಅಂತರಗಳಿದ್ದವು. ಆದರೆ ನಾವು ಅವರ ಯಶಸ್ಸಿಗಾಗಿ ಪ್ರಾರ್ಥಿಸುತ್ತಿಲ್ಲ ಎಂದು ಅರ್ಥವಲ್ಲ. ನನ್ನ ಕೆಲಸ ಮತ್ತು ಮಕ್ಕಳ ಅಧ್ಯಯನದಲ್ಲಿ ನಾನು ಇಲ್ಲಿ ಯುಎಸ್‌ನಲ್ಲಿ ನಿರತಳಾಗಿದ್ದೆ, ಎಂದು ಇಂದರ್‌ಪ್ರೀತ್ ಹೇಳಿದರು. ಅವರು ಮೂಲತಃ ಲುಧಿಯಾನಾದ ಬರೇವಾಲ್‌ನವರು.

ಮನೆ ಖಾಲಿ, ಮನಸು ಭಾರ ಎಂದಿದ್ದ ಮನ್

ಇತ್ತೀಚಿನ ದಿನಗಳಲ್ಲಿ ಪಂಜಾಬ್ ಚುನಾವಣೆಯ ಸಮಯದಲ್ಲಿ, ಮನ್ ಅವರ ತಾಯಿ ಹರ್ಪಾಲ್ ಕೌರ್ ಮತ್ತು ಸಹೋದರಿ ಮನ್‌ಪ್ರೀತ್ ಕೌರ್ ಅವರು ಮನ್ ಅವರನ್ನು ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದಾಗ ಅವರ ಯಶಸ್ಸಿಗೆ ತಮ್ಮ ಸಂತೋಷ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು.

ಆಗಾಗ ತನ್ನ ಸಂದರ್ಶನಗಳಲ್ಲಿ, ಇಡೀ ಪಂಜಾಬ್ ಈಗ ತನ್ನ ಕುಟುಂಬವಾಗಿದ್ದರೂ, ಕೆಲಸದಿಂದ ಹಿಂತಿರುಗಿದಾಗ ತನ್ನ ಮನೆ ಖಾಲಿಯಾಗಿರುವುದನ್ನು ಕಂಡು ಹೃದಯ ಇನ್ನೂ ಭಾರವಾಗುತ್ತಿದೆ ಎಂದು ಮನ್ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: Mamata Banerjee: ರಾಡ್ ಹಿಡಿದು ಸಿಎಂ ಮಮತಾ ಬ್ಯಾನರ್ಜಿ ಮನೆಗೆ ನುಗ್ಗಿದ ವ್ಯಕ್ತಿ, ದೀದಿ ಭದ್ರತೆ ಹೆಚ್ಚಳ

ಅವರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ತಮ್ಮ ಮಕ್ಕಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಅವರ ಜನ್ಮದಿನದಂದು ಶುಭ ಹಾರೈಸಿದ್ದಾರೆ, ಅವರು ಮಕ್ಕಳನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿಯೂ ಹೇಳಿದ್ದಾರೆ.

ಕುಟುಂಬ ಬಿಟ್ಟು ಪಂಜಾಬ್ ಆರಿಸಿಕೊಂಡ ಮನ್

ವಿಚ್ಛೇದನದ ಪ್ರಕ್ರಿಯೆಯ ಸಮಯದಲ್ಲಿ, ಮಾನ್ ತನ್ನ ಸ್ವಂತ ಕುಟುಂಬಕ್ಕಿಂತ ಪಂಜಾಬ್ ಕುಟುಂಬವನ್ನು ಆರಿಸಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಹಾಸ್ಯನಟನಾಗಿ ಬದಲಾಗಿರುವ ರಾಜಕಾರಣಿ ತನ್ನ ವಿಚ್ಛೇದನವನ್ನು ವಿವರಿಸಿ, ದೀರ್ಘಕಾಲದ ಸಮಸ್ಯೆಯನ್ನು ಪರಿಹರಿಸಲಾಗಿದೆ. ನ್ಯಾಯಾಲಯವು ನಿರ್ಧರಿಸಿದೆ. ನಾನು ನನ್ನ ಎರಡು ಕುಟುಂಬಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ನಾನು ಪಂಜಾಬ್ ಅನ್ನು ಆರಿಸಿಕೊಂಡಿದ್ದೇನೆ ಎಂದಿದ್ದರು.
Published by:Divya D
First published: