ರಾತ್ರಿ ಸಂಚರಿಸುವ ಮಹಿಳೆಯರಿಗೆ ಪೊಲೀಸರಿಂದ ಫ್ರೀ ಡ್ರಾಪ್; ಮಹಿಳಾ ಸುರಕ್ಷತೆಗೆ ಪಂಜಾಬ್​ನಲ್ಲಿ ಹೊಸ ಕ್ರಮ

ಪಂಜಾಬ್​ನಲ್ಲಿ ರಾತ್ರಿ ವೇಳೆ ಸಂಚರಿಸುವ ಮಹಿಳೆಯರ ಬಳಿ ವಾಹನ ಇಲ್ಲದಿದ್ದರೆ ಅಥವಾ ಟ್ಯಾಕ್ಸಿ ಸಿಗದಿದ್ದರೆ ಅವರಿಗೆ ಇನ್ನುಮುಂದೆ ಪೊಲೀಸರೇ ಪಿಕಪ್ ಮತ್ತು ಡ್ರಾಪ್ ಸೌಲಭ್ಯ ಒದಗಿಸುತ್ತಾರೆ. ಮಹಿಳೆಯರಿಗೆ ಎಲ್ಲ ರೀತಿಯ ಸುರಕ್ಷತೆ ಒದಗಿಸುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

Sushma Chakre | news18-kannada
Updated:December 4, 2019, 11:54 AM IST
ರಾತ್ರಿ ಸಂಚರಿಸುವ ಮಹಿಳೆಯರಿಗೆ ಪೊಲೀಸರಿಂದ ಫ್ರೀ ಡ್ರಾಪ್; ಮಹಿಳಾ ಸುರಕ್ಷತೆಗೆ ಪಂಜಾಬ್​ನಲ್ಲಿ ಹೊಸ ಕ್ರಮ
ಪ್ರಾತಿನಿಧಿಕ ಚಿತ್ರ
  • Share this:
ಚಂಡೀಗಢ (ಡಿ. 4): ನಿರ್ಭಯಾ ಅತ್ಯಾಚಾರ ಪ್ರಕರಣ ನಂತರ ಮತ್ತೊಮ್ಮೆ ದೇಶಾದ್ಯಂತ ಮಹಿಳೆಯರ ಸುರಕ್ಷತೆಯ ಬಗ್ಗೆ ಆತಂಕದ ಕೂಗುಗಳು ಧ್ವನಿಸತೊಡಗಿವೆ. ಪ್ರತಿದಿನ ದೇಶದ ನಾನಾ ರಾಜ್ಯಗಳಲ್ಲಿ ಅತ್ಯಾಚಾರ ಮತ್ತು ಮಹಿಳೆಯರ ಕೊಲೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿರುವ ಪಂಜಾಬ್ ಸರ್ಕಾರ ರಾತ್ರಿ ವೇಳೆ ಸಂಚರಿಸುವ ಮಹಿಳೆಯರಿಗೆ ಉಚಿತ ಡ್ರಾಪ್ ನೀಡುವುದಾಗಿ ಘೋಷಿಸಿದೆ.

ದೇಶದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಆತಂಕ ಎದುರಾಗಿದ್ದು, ಒಂಟಿಯಾಗಿ ಸಂಚರಿಸುವ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಭದ್ರತೆಯೇ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ರಾತ್ರಿ ಹೊತ್ತು ಸಂಚರಿಸುವ ಮಹಿಳೆಯರನ್ನು ಅವರ ಮನೆಗಳಿಗೆ ತಲುಪಿಸುವ ಹೊಣೆಯನ್ನು ಪೊಲೀಸರಿಗೆ ವಹಿಸಿ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹೊಸ ಕ್ರಮ ಕೈಗೊಂಡಿದ್ದಾರೆ.

ಹನಿಟ್ರ್ಯಾಪ್​ ಪ್ರಕರಣ; ಬೆಳಗಾವಿ ಬಟ್ಟೆ ವ್ಯಾಪಾರಿಯ ನಗ್ನ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆಯಿಟ್ಟ ಯುವತಿಯ ಗ್ಯಾಂಗ್ ಬಂಧನ

ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 6 ಗಂಟೆಯವರೆಗೆ ಪಂಜಾಬ್​ನಲ್ಲಿ ಪ್ರಯಾಣಿಸುವ ಮಹಿಳೆಯರನ್ನು ಅವರ ಮನೆಗಳಿಗೆ ಸುರಕ್ಷಿತವಾಗಿ ತಲುಪಿಸಲು ಪೊಲೀಸರಿಗೆ ಸೂಚಿಸಲಾಗಿದೆ. ಕಳೆದ ವಾರ ತೆಲಂಗಾಣದಲ್ಲಿ ಪಶು ವೈದ್ಯೆಯನ್ನು ನಡು ರಸ್ತೆಯಲ್ಲಿ ಅಪಹರಿಸಿ, ಸಾಮೂಹಿಕ ಅತ್ಯಾಚಾರ ನಡೆಸಿ, ಜೀವಂತವಾಗಿ ಸುಟ್ಟುಹಾಕಿದ್ದ ಘಟನೆಯಿಂದ ದೇಶವೇ ಬೆಚ್ಚಿಬಿದ್ದಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಮುಂದಾಗಿರುವ ಪಂಜಾಬ್ ಸರ್ಕಾರ ತನ್ನ ರಾಜ್ಯದ ಮಹಿಳೆಯರ ಸುರಕ್ಷತೆಗಾಗಿ ಈ ಆದೇಶ ಹೊರಡಿಸಿದೆ.

ಪಂಜಾಬ್ ರಾಜ್ಯದಲ್ಲಿ ಯಾವುದೇ ಮಹಿಳೆಯರು 100, 112, 181 ಸಂಖ್ಯೆಗೆ ಫೋನ್ ಮಾಡಿದರೆ ಅದು ಪೊಲೀಸ್ ಕಂಟ್ರೋಲ್​ ರೂಂಗೆ ಕನೆಕ್ಟ್​ ಆಗುತ್ತದೆ. ಆ ಮಹಿಳೆ ಯಾವ ಸ್ಥಳದಲ್ಲಿದ್ದಾಳೆಂದು ನೋಡಿ ತಕ್ಷಣ ಪೊಲೀಸರು ಕಾರ್ಯೋನ್ಮುಖರಾಗುವಂತೆ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಸೂಚಿಸಿದ್ದಾರೆ ಎಂದು 'ಟೈಮ್ಸ್​ ಆಫ್ ಇಂಡಿಯಾ'  ವರದಿ ಮಾಡಿದೆ. ಅಲ್ಲದೆ, ಈ ಸೌಲಭ್ಯವನ್ನು ರಾಜ್ಯದ ಹಳ್ಳಿಹಳ್ಳಿಗಳಲ್ಲೂ ಜಾರಿಗೆ ತರಲು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

6 ವರ್ಷದ ವಿದ್ಯಾರ್ಥಿನಿ ಮೇಲೆ ತರಗತಿಯಲ್ಲೇ ಅತ್ಯಾಚಾರ ನಡೆಸಿದ 51 ವರ್ಷದ ಶಿಕ್ಷಕ

ಪಂಜಾಬ್​ನಲ್ಲಿ ರಾತ್ರಿ ವೇಳೆ ಸಂಚರಿಸುವ ಮಹಿಳೆಯರ ಬಳಿ ವಾಹನ ಇಲ್ಲದಿದ್ದರೆ ಅಥವಾ ಟ್ಯಾಕ್ಸಿ ಸಿಗದಿದ್ದರೆ ಅವರಿಗೆ ಇನ್ನುಮುಂದೆ ಪೊಲೀಸರೇ ಪಿಕಪ್ ಮತ್ತು ಡ್ರಾಪ್ ಸೌಲಭ್ಯ ಒದಗಿಸುತ್ತಾರೆ. ಮಹಿಳೆಯರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲ ರೀತಿಯ ಸುರಕ್ಷತೆ ಒದಗಿಸುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಪಂಜಾಬ್​ನ ಮೊಹಾಲಿ, ಪಟಿಯಾಲ, ಬತೀಂದ ಮುಂತಾದ ಪ್ರಮುಖ ನಗರಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ರಾತ್ರಿ ವೇಳೆ ಪೊಲೀಸರೇ ವಾಹನ ವ್ಯವಸ್ಥೆ ಕಲ್ಪಿಸಲಿದ್ದಾರೆ.
First published: December 4, 2019, 11:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading