• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಕೇಂದ್ರ ಕೃಷಿ ಮಸೂದೆ ವಿರೋಧಿಸಿ ಪಂಜಾಬ್ ರೈತ ಹೋರಾಟ; ಬಿಜೆಪಿ ರಾಜ್ಯಾಧ್ಯಕ್ಷನ ಮೇಲೆ ದಾಳಿಗೆ ಯತ್ನ, ಕಾರು ಧ್ವಂಸ!

ಕೇಂದ್ರ ಕೃಷಿ ಮಸೂದೆ ವಿರೋಧಿಸಿ ಪಂಜಾಬ್ ರೈತ ಹೋರಾಟ; ಬಿಜೆಪಿ ರಾಜ್ಯಾಧ್ಯಕ್ಷನ ಮೇಲೆ ದಾಳಿಗೆ ಯತ್ನ, ಕಾರು ಧ್ವಂಸ!

ದಾಳಿ ವೇಳೆ ಧ್ವಂಸಗೊಂಡಿರುವ ಕಾರು.

ದಾಳಿ ವೇಳೆ ಧ್ವಂಸಗೊಂಡಿರುವ ಕಾರು.

ಈ ದಾಳಿಯನ್ನು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್​ ಸಿಂಗ್ ಖಂಡಿಸಿದ್ದು, ಅಪರಾಧಿಗಳನ್ನು ಗುರುತಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದ್ದಾರೆ ಎಂದು ತುಕ್ರಲ್ ಟ್ವೀಟ್ ಮಾಡಿದ್ದಾರೆ.

  • Share this:

    ಚಂಡೀಘಡ: ಇಲ್ಲಿನ ಹೋಶಿಯಾರ್​ಪುರ ಜಿಲ್ಲೆಯ ಟೋಲ್ ಬೂತ್ ದಾಟುತ್ತಿದ್ದ ವೇಳೆ ಪಂಜಾಬ್ ರಾಜ್ಯದ ಬಿಜೆಪಿ ಅಧ್ಯಕ್ಷ ಅಶ್ವಾನಿ ಶರ್ಮಾ ಮೇಲೆ ಸೋಮವಾರ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಪಂಜಾಬ್ ಹರಿಯಾಣ ರಾಜ್ಯಗಳಲ್ಲಿ ವಾರಗಟ್ಟಲೆ ಪ್ರತಿಭಟನೆ ನಡೆಸುತ್ತಿರುವ ರೈತ ಹೋರಾಟದ ಬೆನ್ನಿಗೆ ಈ ದಾಳಿ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ದಾಳಿಯ ವೇಳೆ ಅಶ್ವಾನಿ ಶರ್ಮಾ ಅವರ ಕಾರನ್ನು ಧ್ವಂಸಗೊಳಿಸಲಾಗಿದೆ. ಅಲ್ಲದೆ, ಈ ಘಟನೆ ಸಂಬಂಧ ಅಶ್ವಾನಿ ಶರ್ಮಾ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸರ್ಕಾರವನ್ನು ದೂಷಿಸಿದ್ದಾರೆ. ಈ ದಾಳಿಯ ದೃಶ್ಯಗಳು ಟೋಲ್​ಗೇಟ್ ಕ್ಯಾಮೆರಾದಲ್ಲಿ ದಾಖಲಾಗಿದ್ದು, ದೃಶ್ಯದಲ್ಲಿ ಪ್ರತಿಭಟನಾಕಾರರು ಶರ್ಮಾ ಅವರ ಟೊಯೋಟಾ ಇನ್ನೋವಾ ಕಾರಿನ ಗಾಜುಗಳನ್ನು ಒಡೆದು ಪುಡಿ ಮಾಡಿರುವುದು ಕಂಡುಬಂದಿದೆ. ಅಲ್ಲದೆ, ದಾಳಿಯ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರದ ಪರ ಘೋಷಣೆಗಳನ್ನೂ ಕೂಗಿದ್ದಾರೆ ಎನ್ನಲಾಗುತ್ತಿದೆ.


    ಈ ಕುರಿತು ಮಾತನಾಡಿರುವ ಪಂಜಾಬ್ ಬಿಜೆಪಿ ನಾಯಕ ಅಶ್ವಾನಿ ಶರ್ಮಾ, “ಟೋಲ್ ಪ್ಲಾಜಾ ಬಳಿ ನನ್ನ ಮೇಲೆ ಹಲ್ಲೆ ನಡೆದಾಗ ನನ್ನ ಬಂದೂಕುಧಾರಿಗಳು ನನ್ನನ್ನು ರಕ್ಷಿಸಿದರು. ರೈತರು ನಿರ್ಬಂಧಿಸಿದ ಸ್ಥಳಗಳಲ್ಲಿ ಪೊಲೀಸರನ್ನು ಏಕೆ ನಿಯೋಜಿಸಲಾಗಿಲ್ಲ? ಅಂತಹ ಸಾಮಾಜಿಕ ವಿರೋಧಿ ಅಂಶಗಳು ತಮ್ಮ ಪ್ರತಿಭಟನೆಯನ್ನು ಕೆಣಕುತ್ತವೆ ಎಂದು ರೈತರು ಸಹ ತಿಳಿದಿರಬೇಕು" ಎಂದು ಅವರು ಘಟನೆಯ ನಂತರ ಅಭಿಪ್ರಾಯಪಟ್ಟಿದ್ದಾರೆ.


    "ಪಂಜಾಬ್​ನಲ್ಲಿ ನಮ್ಮ ನಾಯಕರ ಮನೆಗಳನ್ನು ಸುತ್ತುವರೆದಿರುವ ರೈತರಿಗೆ ಪೊಲೀಸರು ಬೆಂಬಲ ನೀಡುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿರುವ ಅಮರಿಂದರ್ ಸಿಂಗ್ ಬೇಜಾವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ಅಲ್ಲದೆ, ಈ ದಾಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಜವಾಬ್ದಾರಿ ಹೊರಬೇಕು” ಎಂದು ಅವರು ಕಿಡಿಕಾರಿದ್ದಾರೆ.


    ಆದರೆ, ಪಂಜಾಬ್ ಸರ್ಕಾರ ಅಶ್ವಾನಿ ಶರ್ಮಾ ಅವರ ಆರೋಪಗಳು ನಿರಾಧಾರ ಎಂದು ದೂಷಿಸಿದೆ. ಈ ಸಂಬಂಧ ಮಾಹಿತಿ ನೀಡಿರುವ ಕ್ಯಾಪ್ಟನ್ ಸಿಂಗ್ ಅವರ ಮಾಧ್ಯಮ ಸಲಹೆಗಾರ ರವೀನ್ ತುಕ್ರಲ್ "ಬಿಜೆಪಿ ಪಂಜಾಬ್ ಮುಖ್ಯಸ್ಥ ಅಶ್ವಿನಿ ಶರ್ಮಾ ಅವರ ಮೇಲೆ ದಾಳಿಯಲ್ಲಿ ಪಂಜಾಬ್ ಕಾಂಗ್ರೆಸ್ ಭಾಗಿಯಾಗಿರುವ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ. ಅವರು ಮತ್ತು ಬಿಜೆಪಿ ಕ್ಷುಲ್ಲಕ ಮತ್ತು ರಾಜಕೀಯ ಪ್ರೇರಿತ ಆರೋಪಗಳನ್ನು ಮಾಡುವುದರಿಂದ ದೂರವಿರಬೇಕು. ಪಂಜಾಬ್ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದು ಶೀಘ್ರದಲ್ಲಿ ಸತ್ಯ ಹೊರಬರಲಿದೆ” ಎಂದು ತಿಳಿಸಿದ್ದಾರೆ.


    ಈ ದಾಳಿಯನ್ನು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್​ ಸಿಂಗ್ ಖಂಡಿಸಿದ್ದು, ಅಪರಾಧಿಗಳನ್ನು ಗುರುತಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದ್ದಾರೆ ಎಂದು ತುಕ್ರಲ್ ಟ್ವೀಟ್ ಮಾಡಿದ್ದಾರೆ.


    ಇದನ್ನೂ ಓದಿ : ಎನ್​ಐಎ ತನಿಖೆಯಲ್ಲಿ ಸ್ಪೋಟಕ ಮಾಹಿತಿ; ಸಿರಿಯಾದ ಉಗ್ರಗಾಮಿ ಸಂಘಟನೆಗಳಲ್ಲಿ ಬೆಂಗಳೂರಿನ ಯುವಕರು


    ಇತ್ತೀಚಿನ ಮಾನ್ಸೂನ್ ಅಧಿವೇಶನದಲ್ಲಿ ಸಂಸತ್ತು ಅಂಗೀಕರಿಸಿದ ಮೂರು ಕೃಷಿ ಕಾನೂನುಗಳ ವಿರುದ್ಧ ಪಂಜಾಬ್ ರಾಜ್ಯದ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ, ಪ್ರತಿಭಟನಾಕಾರರು ರಸ್ತೆಗಳು ಮತ್ತು ರೈಲ್ವೆ ಸಂಚಾರಗಳನ್ನು ನಿರ್ಬಂಧಿಸಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಅಗತ್ಯ ಸಾಮಗ್ರಿಗಳ ಕೊರತೆ ಉಂಟಾಗಿದೆ.


    ಇನ್ನೂ ರೈಲು ದಿಗ್ಬಂಧನದಿಂದಾಗಿ ಪಂಜಾಬ್ನ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಆಹಾರ ಧಾನ್ಯ, ರಸಗೊಬ್ಬರ ಮತ್ತು ಪೆಟ್ರೋಲಿಯಂನಂತಹ ಇತರ ಅಗತ್ಯ ವಸ್ತುಗಳ ಪೂರೈಕೆಗೆ ಸಹ ತೊಂದರೆಯಾಗಿದೆ ಎನ್ನಲಾಗುತ್ತಿದೆ.

    Published by:MAshok Kumar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು