Punjab Elections: ಪಂಜಾಬ್​​ನಲ್ಲಿ ಇಂದು ಪ್ರಚಾರ ನಡೆಸಲಿರುವ ರಾಹುಲ್ ಗಾಂಧಿ & ಪ್ರಿಯಾಂಕಾ ಗಾಂಧಿ

ರಾಹುಲ್ ಗಾಂಧಿ ಅವರು ಫತೇಘರ್ ಸಾಹಿಬ್ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರೆ ಪ್ರಿಯಾಂಕಾ ಗಾಂಧಿ ಅವರು ಪಠಾಣ್ ಕೋಟ್ ಮತ್ತು ಲೂಧಿಯಾನ ಜಿಲ್ಲೆಗಳಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. 

ಪ್ರಿಯಾಂಕಗಾ ಗಾಂಧಿ-ರಾಹುಲ್ ಗಾಂಧಿ

ಪ್ರಿಯಾಂಕಗಾ ಗಾಂಧಿ-ರಾಹುಲ್ ಗಾಂಧಿ

  • Share this:
ನವದೆಹಲಿ, ಫೆ. 17: ಪಂಜಾಬ್ ವಿಧಾನಸಭಾ ಚುನಾವಣೆಯನ್ನು (Punjab Assembly Elections) ಗೆದ್ದೇ ಗೆಲ್ಲುವುದಾಗಿ ಕಾಂಗ್ರೆಸ್ (Congress) ವಿಶ್ವಾಸ ಇಟ್ಟುಕೊಂಡಿದೆ. ಆದರೆ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ (Chief Minister Charanjith Sing Chenni) ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು (Punjab Congress President Navjoth Sing Sidhu) ನಡುವೆ ನಡೆಯುತ್ತಿರುವ ಶೀತಲ ಸಮರದ ಕಾರಣಕ್ಕೆ ಕಾಂಗ್ರೆಸಿಗೆ ಗೆಲುವು ಅಷ್ಟು ಸುಲಭವಾಗಿ ಉಳಿದಿಲ್ಲ. ಇದರಿಂದಾಗಿ ಇಂದು ಎಐಸಿಸಿಯ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ್ ಗಾಂಧಿ (AICC Former President and Member of Parliament Rahul Gandhi) ಹಾಗೂ ಅವರ ಸಹೋದರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (AICC General Secretary Priyanka Gandhi) ಪಂಜಾಬಿನಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ.

ಪ್ರತ್ಯೇಕ ಪ್ರಚಾರ

ರಾಹುಲ್ ಗಾಂಧಿ ಅವರು ಫತೇಘರ್ ಸಾಹಿಬ್ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರೆ ಪ್ರಿಯಾಂಕಾ ಗಾಂಧಿ ಅವರು ಪಠಾಣ್ ಕೋಟ್ ಮತ್ತು ಲೂಧಿಯಾನ ಜಿಲ್ಲೆಗಳಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮತದಾನಕ್ಕೆ ಮೂರೇ ದಿನ ಬಾಕಿ ಉಳಿದಿರುವುದರಿಂದ (ಫೆಬ್ರವರಿ 20ಕ್ಕೆ) ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಪ್ರತ್ಯೇಕವಾಗಿ ಚುನಾವಣಾ ಪ್ರಚಾರ ನಡೆಸುವ ಸಾಧ್ಯತೆಗಳು ಕಂಡುಬರುತ್ತಿವೆ.

ಸಾರ್ವಜನಿಕ ಸಭೆ ಉದ್ದೇಶಿಸಿ ರಾಹುಲ್ ಗಾಂಧಿ ಭಾಷಣ

ರಾಹುಲ್ ಗಾಂಧಿ ಅವರು ಫತೇಘರ್ ಸಾಹಿಬ್ ಜಿಲ್ಲೆಯ ಬಸ್ಸಿ ಪಠಾಣದ ಹೊಸ ದಾನ ಮಂಡಿಯಲ್ಲಿ ಇಂದು ಮಧ್ಯಾಹ್ನ 2.30ಕ್ಕೆ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಂತರ ಸಂಜೆ 4 ಗಂಟೆಗೆ ಸಿರ್ಹಿಂದ್, ಫತೇಘರ್ ಸಾಹಿಬ್ ಜಿಲ್ಲೆಯ ಸಿರ್ಹಿಂದ್ ದ ಹೊಸ ಅನಾಜ್ ಮಂಡಿಯ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಇದನ್ನೂ ಓದಿ: Morning Digest: ಚಿನ್ನದ ಬೆಲೆಯಲ್ಲಿ ಇಳಿಕೆ, ಮದುವೆ ಮನೆಯಲ್ಲಿ 13 ಮಂದಿ ಸಾವು, ಮುಂದಿನ 24 ಗಂಟೆ ಮಳೆ, ಬೆಳಗಿನ ಟಾಪ್ ನ್ಯೂಸ್

ಪಠಾಣ್ ಕೋಠ್ ನಲ್ಲಿ ಪ್ರಿಯಾಂಕಾ ಗಾಂಧಿ ಭಾಷಣ

ಉತ್ತರ ಪ್ರದೇಶದ ಕಾಂಗ್ರೆಸ್ ಉಸ್ತುವಾರಿಯಾಗಿರುವ ಪ್ರಿಯಾಂಕಾ ಗಾಂಧಿ ಅವರು ಪಂಜಾಬಿನ ಪಠಾಣ್ ಕೋಟ್ ಮೈದಾನದಲ್ಲಿ ಇಂದು ಮಧ್ಯಾಹ್ನ  12ಗಂಟೆಗೆ ಸಾರ್ವಜನಿಕ ಸಭೆ ಉದ್ದೇಶಿ ಭಾಷಣ ಮಾಡಲಿದ್ದಾರೆ. ಇದಾದ ಮೇಲೆ ಮಧ್ಯಾಹ್ನ 3ಗಂಟೆಗೆ ಲೋಧಿಯಾನದಲ್ಲಿ ಘಾಟಿ ವಾಲ್ಮಿಕಿ ವೃತ್ತದಿಂದ ಬಸ್ತಿ ಜೊಧೆವಾಲ್ ವೃತ್ತದವರೆಗೆ ಮನೆ ಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.

ಗೆಲುವಿನ‌ ವಿಶ್ವಾಸ ವ್ಯಕ್ತಪಡಿಸಿದ ಹರೀಶ್ ರಾವತ್

ಗಡಿ ರಾಜ್ಯವಾದ ಪಂಜಾಬಿನ ವಿಧಾನಸಭಾ ಚುನಾವಣೆ‌ ಬಗ್ಗೆ  ಅಲ್ಲಿನ ಕಾಂಗ್ರೆಸ್ ಪಕ್ಷದ ಹಿಂದಿನ ಉಸ್ತುವಾರಿ ಹರೀಶ್ ರಾವತ್ ಅವರು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನ್ಯೂಸ್ 18 ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು 'ಫೆಬ್ರವರಿ 20 ರಂದು ನಡೆಯಲಿರುವ ಪಂಜಾಬ್ ಚುನಾವಣೆಯಲ್ಲಿ ಜನರು ತಮ್ಮ ಪಕ್ಷಕ್ಕೆ ಇಡಿಯಾಗಿ ಮತ ಹಾಕುತ್ತಾರೆ ಮತ್ತು ಪಂಜಾಬಿಗಳು ಅತಂತ್ರ ವಿಧಾನಸಭೆ ನಿರ್ಮಾಣ ಮಾಡುವುದಿಲ್ಲ' ಎಂದು ಹೇಳಿದ್ದಾರೆ.

ಫೆಬ್ರವರಿ 20ರಂದು ಮತದಾನ

ಮೊದಲಿಗೆ ಪಂಜಾಬ್ ಚುನಾವಣೆ ಫೆಬ್ರವರಿ 14ಕ್ಕೆ ನಿಗದಿಯಾಗಿತ್ತು. ಪಂಜಾಬಿನಲ್ಲಿ ಗುರು ರವಿದಾಸ್​ ಜಯಂತಿ ಅತ್ಯಂತ ದೊಡ್ಡ ಆಚರಣೆ. ಗುರು ರವಿದಾಸ್​ ಜಯಂತಿ ಆಚರಣೆಗಾಗಿ ರಾಜ್ಯದ ಪರಿಶಿಷ್ಠ ಜಾತಿ ಸಮುದಾಯದ ಭಕ್ತರು ಫೆಬ್ರವರಿ 10 ರಿಂದ 16ರವರೆಗೆ ವಾರಣಾಸಿಗೆ ತೆರಳಲಿದ್ದಾರೆ. ಹೀಗೆ ಪ್ರವಾಸ ಕೈಗೊಳ್ಳುವ ಪರಿಶಿಷ್ಟ ಜಾತಿ ಸಮುದಾಯ ಮತದಾರರ ಸಂಖ್ಯೆ ಸುಮಾರು 20 ಪಕ್ಷ. ಪಂಜಾಬಿನಲ್ಲಿ ಶೇಕಡಾ 32ರಷ್ಟು ಪರಿಶಿಷ್ಟ ಜಾತಿಗಳ ಸಮುದಾಯದ ಮತದಾರರಿದ್ದು ಆ ಪೈಕಿ 20 ಲಕ್ಷದಷ್ಟು ಜನ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ. ಮತದಾನ ಮಾಡುವುದು ಅವರ ಸಾಂವಿಧಾನಿಕ ಹಕ್ಕು ಆದುದರಿಂದ ಮತದಾನದ ದಿನಾಂಕವನ್ನು ಮುಂದೂಡಬೇಕು ಎಂದು ಮುಖ್ಯಮಂತ್ರಿ ಚರಣಜಿತ್ ಚನ್ನಿ ಅವರು ಪತ್ರದ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು.

ಇದನ್ನೂ ಓದಿ: Tragedy: ಮಸಣವಾದ ಮದುವೆ ಮನೆ, ಆಕಸ್ಮಿಕವಾಗಿ ಬಾವಿಗೆ ಬಿದ್ದು 13 ಮಹಿಳೆಯರು ಸಾವು

ಆ ಮನವಿಗೆ ಸ್ಪಂದಿಸಿರುವ ಚುನಾವಣಾ ಆಯೋಗ ಮತದಾನದ ದಿನಾಂಕವನ್ನು ಫೆಬ್ರವರಿ 14ರಿಂದ 20ಕ್ಕೆ ಮುಂದೂಡಿದೆ. ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ.
Published by:Latha CG
First published: