ಮಗ MLA ಆದರೂ ಸರ್ಕಾರಿ ಶಾಲೆಯಲ್ಲಿ ಸ್ವೀಪರ್ ಆಗಿಯೇ ಇರುವೆ ಎಂದ ತಾಯಿ!

ಪಂಜಾಬ್​ನ ಭದೌರ್ ವಿಧಾನಸಭಾ ಕ್ಷೇತ್ರದಲ್ಲಿ 37,550 ಮತಗಳ ಅಂತರದಿಂದ ಲಭ್ ಸಿಂಗ್ ಉಗೋಕೆ ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಚರಂಜಿತ್ ಸಿಂಗ್ ಚನ್ನಿ ಅವರಿಗೆ ಸೋಲಿನ ಕಹಿ ಉಣಿಸಿದ್ದರು.

ಬಲ್ದೇವ್ ಕೌರ್

ಬಲ್ದೇವ್ ಕೌರ್

  • Share this:
ಅಮೃತಸರ: ಪಂಜಾಬ್‌ನಲ್ಲಿ 2022 ರ ವಿಧಾನಸಭಾ ಚುನಾವಣೆಯಲ್ಲಿ ತನ್ನ ಮಗ ಗೆದ್ದ ನಂತರವೂ ಆಮ್ ಆದ್ಮಿ ಪಕ್ಷದ ಶಾಸಕ ಲಭ್ ಸಿಂಗ್ ಉಗೋಕೆ ಅವರ ತಾಯಿ (MLA Labh Singh Ugoke Mother) ಬಲ್ದೇವ್ ಕೌರ್ ಅವರು ಶನಿವಾರ ಸರ್ಕಾರಿ ಶಾಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸ್ವೀಪರ್ ಆಗಿ ಕೆಲಸ ಮಾಡುವುದನ್ನು ಮುಂದುವರೆಸಿದ್ದಾರೆ. ಅಂದಹಾಗೆ ಲಭ್ ಸಿಂಗ್ ಉಗೋಕೆ (MLA Labh Singh Ugoke) ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಚರಂಜಿತ್ ಸಿಂಗ್ ಚನ್ನಿ (Charanjit Singh Channi)  ಅವರ ಸೋಲಿಸಿದ್ದಾರೆ. ಈಮೂಲಕ ಮಗ ಶಾಸಕನಾದರೂ ತಮ್ಮ ಮೊದಲಿನ ಕೆಲಸವನ್ನೇ ಮುಂದುವರೆಸುವುದಾಗಿ ಅವರು ತಿಳಿಸಿದ್ದಾರೆ.

ಪಂಜಾಬ್​ನ ಭದೌರ್ ವಿಧಾನಸಭಾ ಕ್ಷೇತ್ರದಲ್ಲಿ 37,550 ಮತಗಳ ಅಂತರದಿಂದ ಲಭ್ ಸಿಂಗ್ ಉಗೋಕೆ ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಚರಂಜಿತ್ ಸಿಂಗ್ ಚನ್ನಿ ಅವರಿಗೆ ಸೋಲಿನ ಕಹಿ ಉಣಿಸಿದ್ದರು. ಇನ್ನೂ ವಿಶೇಷವೆಂದರೆ ಉಗೋಕೆ ಅವರು ಮೊಬೈಲ್ ರಿಪೇರಿ ಅಂಗಡಿಯಲ್ಲಿ ಈಮುನ್ನ ಕೆಲಸ ಮಾಡುತ್ತಿದ್ದರು.

ಕಷ್ಟಪಟ್ಟು ಹಣ ಸಂಪಾದಿಸುತ್ತೇವೆ!
ನಾವು ಬಹಳ ಹಿಂದಿನಿಂದಲೂ ಹಣ ಸಂಪಾದಿಸಲು ಕಷ್ಟಪಟ್ಟು ಶ್ರಮಿಸಿದ್ದೇವೆ. ನನ್ನ ಮಗ ಈಗ ಶಾಸಕನಾಗಿದ್ದಾನೆ. ಆತ ಗೌರವಾನ್ವಿತ ಸ್ಥಾನ ಪಡೆದರೂ ನನ್ನ ಹಳೆಯ ಕಾಯಕವನ್ನು ನಾನು ಮುಂದುವರೆಸುತ್ತೇನೆ. ನಾನು ಶಾಲೆಯಲ್ಲಿ ಈಮುನ್ನ ನಿರ್ವಹಿಸುತ್ತಿದ್ದ ಕರ್ತವ್ಯವನ್ನು ಮುಂದುವರಿಸುತ್ತೇನೆ ಎಂದು ಕೌರ್ ವಿವರಿಸಿದ್ದಾರೆ.

ಲಭ್ ಸಿಂಗ್ ಉಗೋಕೆ ಆಮ್ ಆದ್ಮಿ ಪಕ್ಷದಿಂದ ಗೆಲುವು ಸಾಧಿಸಿದ್ದಾರೆ. ಎಎಪಿ ಅಭ್ಯರ್ಥಿಯಾಗಿ ಪಕ್ಷದ ಚಿಹ್ನೆ ಪೊರಕೆಯಾಗಿರುವುದು ಬಹಳ ಸಂತೋಷ ತಂದಿದೆ ಎಂದು ಕೌರ್ ಸಂತಸ ವ್ಯಕ್ತಪಡಿಸಿದ್ದಾರೆ.

ಮೊದಲೇ ಗೆಲುವಿನ ವಿಶ್ವಾಸ ಇತ್ತು!
ತಮ್ಮ ಮಗನ ಗೆಲುವು ತಮ್ಮ ಜೀವನದ ಪ್ರಮುಖ ಭಾಗವಾಗಿದೆ ಎಂದು ಅವರು ಖುಷಿಗೊಂಡಿದ್ದಾರೆ. ಅಲ್ಲದೇ ಅವರಿಗೆ ಪಂಜಾಬ್ ರಾಜ್ಯದ ಮುಖ್ಯಮಂತ್ರಿ ವಿರುದ್ಧ ಸ್ಪರ್ಧಿಸಿದ್ದ ತಮ್ಮ ಮಗ ಗೆಲ್ಲುತ್ತಾನೆ ಎಂದು ಭಾರೀ ವಿಶ್ವಾಸ ಇತ್ತಂತೆ.

ಇದನ್ನೂ ಓದಿ: Bhagwant Mann Profile: ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿದ್ದ ಭಗವಂತ್ ಮಾನ್‌ ಪಂಜಾಬ್ ಸಿಎಂ ಆಗುವ ಮಟ್ಟಕ್ಕೆ ಬೆಳೆದಿದ್ದು ಹೇಗೆ?

ಸದ್ಯ ನೂತನ ಶಾಸಕರಾಗಿರುವ ಉಗೋಕೆ ತಮ್ಮ ತಾಯಿ ಸ್ವೀಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರಂತೆ. ಅಲ್ಲದೇ ಅದೇ ಶಾಲೆಯಲ್ಲಿ ಓದಿ ಅನೇಕ ಪ್ರಶಸ್ತಿಗಳನ್ನು ಗಳಿಸಿಕೊಂಡಿದ್ದರು ಎಂದು ಶಾಲೆಯ ಪ್ರಿನ್ಸಿಪಾಲ್ ಅಮೃತ್ ಪಾಲ್ ಕೌರ್ ಎಎನ್‌ಐಗೆ ತಿಳಿಸಿದ್ದಾರೆ.

ಉಗೋಕೆ ಅಫಿಡವಿಟ್ ವರ್ಸಸ್ ಚನ್ನಿ ಅಫಿಡವಿಟ್
ಉಗೋಕೆ ಅವರ ಚುನಾವಣಾ ಅಫಿಡವಿಟ್‌ನಲ್ಲಿ 2014 ರಲ್ಲಿ ಖರೀದಿಸಿದ ಹೀರೋ ಹೋಂಡಾ ಮೋಟಾರ್‌ಸೈಕಲ್ ಅನ್ನು ಉಲ್ಲೇಖಿಸಿದ್ದರೆ, ಚನ್ನಿ 7.97 ಕೋಟಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಯನ್ನು ಮತ್ತು 4 ಕೋಟಿ ಮೌಲ್ಯದ ನಿವಾಸವನ್ನು ಹೊಂದಿದ್ದೇನೆಂದು ಉಲ್ಲೇಖಿಸಿದ್ದರು.

ಚನ್ನಿಯೂ ಹೀಗೇ ಗೆದ್ದಿದ್ದರು
ಈಮುನ್ನ ಪಂಜಾಬ್​ನ ಹಿರಿಯ ರಾಜಕಾರಣಿಯಾಗಿರುವ ಚನ್ನಿ ಸಹ ಇಂತಹುದೇ ಸಾಧನೆ ಮಾಡಿದ್ದರು. ಚಮ್ಕೌರ್ ಸಾಹಿಬ್‌ ಕ್ಷೇತ್ರದಲ್ಲಿ ಶಿರೋಮಣಿ ಅಕಾಲಿದಳದ ಬೀಬಿ ಸತ್ವಂತ್ ಕೌರ್ ಸಂಧು ಅವರನ್ನು ಚನ್ನಿ ತಮ್ಮ ರಾಜಕೀಯದ ಜೀವನದ ಮೊದಲ ಹಂತಗಳಲ್ಲಿ ಸೋಲಿಸಿದ್ದರು. ಆದರೆ ಪಂಜಾಬ್ ರಾಜಕಾರಣದಲ್ಲಿ ಆನಂತದ ಬಹಳ ನೀರು ಹರಿದುಹೊಗಿದೆ. ಬದಲಾದ ಕಾಲಘಟ್ಟದಲ್ಲಿ ಆಮ್​ ಆದ್ಮಿ ಪಕ್ಷದಿಂದ ಸ್ಪರ್ಧಿಸಿದ ಲಭ್ ಸಿಂಗ್ ಉಗೋಕೆ ವಿರುದ್ಧ ಈಗ ಚನ್ನಿ ಅವರೇ ಸೋಲನ್ನಪ್ಪಿದ್ದಾರೆ.

ಇದನ್ನೂ ಓದಿ: Bhagwant Mann: ಮಾರ್ಚ್‌ 16ಕ್ಕೆ ಪಂಜಾಬ್‌ ಸಿಎಂ ಪದಗ್ರಹಣ, ಭಗತ್ ಸಿಂಗ್ ಊರಿನಲ್ಲಿ ಪ್ರಮಾಣವಚನಕ್ಕೆ ಸಿದ್ಧತೆ

ಉಗೋಕೆ ಅವರ ತಂದೆ ದರ್ಶನ್ ಸಿಂಗ್ ಚಾಲಕರಾಗಿದ್ದಾರೆ. ಅವರು ಸಹ ನಮ್ಮ ಕುಟುಂಬವು ಹಿಂದಿನ ರೀತಿಯಲ್ಲಿಯೇ ಮುಂದುವರಿಯುತ್ತದೆ. ಮಗ ಶಾಸಕರಾದ ನಂತರ ಹೆಚ್ಚೇನೂ ಬದಲಾಗುವುದಿಲ್ಲ ಎಂದು ಹೇಳಿದ್ದಾರೆ.
Published by:guruganesh bhat
First published: