ದೆಹಲಿ ಗಲಭೆಯ ಹಿಂದೆ ಆಪ್ ಕಾರ್ಯಕರ್ತರ ಕೈವಾಡ ಇದ್ದದ್ದೇ ಆದರೆ ಎರಡರಷ್ಟು ಶಿಕ್ಷೆಯಾಗಲಿ; ಕೇಜ್ರಿವಾಲ್

ಗಲಭೆಯನ್ನು ಪ್ರಚೋಧಿಸುವುದು, ಪಾಲ್ಗೊಳ್ಳುವುದು ಎರಡೂ ಅಕ್ಷಮ್ಯ ಅಪರಾಧ. ಈ ಗಲಭೆಯ ಹಿಂದೆ ಯಾರೇ ಇದ್ದರೂ ಅವರನ್ನು ಬಂಧಿಸಬೇಕು, ಕಠಿಣ ಶಿಕ್ಷೆ ನೀಡಬೇಕು. ಈ ಗಲಭೆಯಲ್ಲಿ ಆಪ್ ಪಕ್ಷದ ಕಾರ್ಯಕರ್ತ ಅಥವಾ ಕೊನೆಗೆ ನನ್ನ ಸಂಪುಟದ ಸಚಿವರೇ ಈ ಗಲಭೆಯ ಹಿಂದೆ ಇದ್ದಾರೆ ಎಂಬುದು ಸಾಬೀತಾದರೂ ಅವರಿಗೆ ಎರಡರಷ್ಟು ಶಿಕ್ಷೆಯಾಗಲಿ ಎಂದು ಅರವಿಂದ ಕೇಜ್ರಿವಾಲ್ ಕಿಡಿಕಾರಿದ್ದಾರೆ.

MAshok Kumar | news18-kannada
Updated:February 27, 2020, 5:47 PM IST
ದೆಹಲಿ ಗಲಭೆಯ ಹಿಂದೆ ಆಪ್ ಕಾರ್ಯಕರ್ತರ ಕೈವಾಡ ಇದ್ದದ್ದೇ ಆದರೆ ಎರಡರಷ್ಟು ಶಿಕ್ಷೆಯಾಗಲಿ; ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
  • Share this:
ದೆಹಲಿ (ಫೆಬ್ರವರಿ 27); ದೆಹಲಿ ಹಿಂಸಾಚಾರದ ಹಿಂದೆ ಯಾರದ್ದೇ ಕೈವಾಡ ಇದ್ದರೂ ಅವರನ್ನು ಬಂಧಿಸಿ ಶಿಕ್ಷಿಸಲೇಬೇಕು. ಇನ್ನೂ ಈ ಗಲಭೆಯಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಅಥವಾ ನನ್ನ ಸಂಪುಟದ ಸದಸ್ಯರದ್ದೇ ಕೈವಾಡ ಇದ್ದದ್ದು ಸಾಬೀತಾದರೆ ಅವರಿಗೆ ಎರಡರಷ್ಟು ಶಿಕ್ಷೆಯಾಗಲಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುಡುಗಿದ್ದಾರೆ.

ದೆಹಲಿ ಹಿಂಸಾಚಾರದ ಹಿನ್ನೆಲೆಯಲ್ಲಿ ಇಂದು ಪತ್ರಿಕಾಗೋಷ್ಠಿ ಕರೆದು ಮಾತನಾಡಿರುವ ಅರವಿಂದ ಕೇಜ್ರಿವಾಲ್, “ದೆಹಲಿ ಗಲಭೆ ವಿಚಾರದಲ್ಲಿ ರಾಜಕೀಯ ಸಲ್ಲದು. ಇಂಟಲಿಜೆನ್ಸ್ ಬ್ಯೂರೋ ನೌಕರ ಅಂಕಿತ್ ಶರ್ಮಾ ಅವರ ಹತ್ಯೆಯಲ್ಲಿ ಎಎಪಿ ಕಾರ್ಪೊರೇಟರ್ ತಹೀರ್ ಹುಸೇನ್ ಸಹಚರರ ಕೈವಾಡ ಇದೆ ಎಂಬ ಆರೋಪ ಕೇಳಿಬರುತ್ತಿದೆ. ಧರ್ಮ ಜಾತಿಗಳನ್ನು ಲೆಕ್ಕಿಸದೆ ಪ್ರಾಮಾಣಿಕ ವಿಚಾರಣೆ ನಡೆದು ಆತ ತಪ್ಪಿತಸ್ಥ ಎಂದು ಸಾಬೀತಾದರೆ ಆತನಿಗೆ ಕಠಿಣ ಶಿಕ್ಷೆಯಾಗಲಿ.

ಗಲಭೆಯನ್ನು ಪ್ರಚೋಧಿಸುವುದು, ಪಾಲ್ಗೊಳ್ಳುವುದು ಎರಡೂ ಅಕ್ಷಮ್ಯ ಅಪರಾಧ. ಈ ಗಲಭೆಯ ಹಿಂದೆ ಯಾರೇ ಇದ್ದರೂ ಅವರನ್ನು ಬಂಧಿಸಬೇಕು, ಕಠಿಣ ಶಿಕ್ಷೆ ನೀಡಬೇಕು. ಈ ಗಲಭೆಯಲ್ಲಿ ಆಪ್ ಪಕ್ಷದ ಕಾರ್ಯಕರ್ತ ಅಥವಾ ಕೊನೆಗೆ ನನ್ನ ಸಂಪುಟದ ಸಚಿವರೇ ಈ ಗಲಭೆಯ ಹಿಂದೆ ಇದ್ದಾರೆ ಎಂಬುದು ಸಾಬೀತಾದರೂ ಅವರಿಗೆ ಎರಡರಷ್ಟು ಶಿಕ್ಷೆಯಾಗಲಿ” ಎಂದು ಕಿಡಿಕಾರಿದ್ದಾರೆ.

“ಗಲಭೆಯಲ್ಲಿ ಮೃತಪಟ್ಟವರಿಗೆ ದೆಹಲಿ ಸರ್ಕಾರ 10 ಲಕ್ಷ, ಮನೆಮಠ ಕಳೆದುಕೊಂಡವರಿಗೆ 5 ಲಕ್ಷ ಹಾಗೂ ಗಾಯಗೊಂಡವರಿಗೆ 2 ಲಕ್ಷ ಪರಿಹಾರ ನೀಡಲಿದೆ. ಇನ್ನೂ ಗಲಭೆಯಲ್ಲಿ ಗಾಯಗೊಂಡವರ ಸಂಪೂರ್ಣ ಕಿಚಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ದೆಹಲಿ ಪೊಲೀಸರ ಬಳಿ ಗಲಭೆ ನಿಯಂತ್ರಣದ ಕುರಿತು ಚರ್ಚೆ ನಡೆಸಲಾಗಿದ್ದು, ಪೊಲೀಸರು ಸಹಾಯವಾಣಿ ಆರಂಭಿಸಿದ್ದಾರೆ” ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : 1 ಕೋಟಿ. ರೂ ಪರಿಹಾರ ಕೇಳಿದ ಜಾಮಿಯಾ ವಿದ್ಯಾರ್ಥಿ: ದೆಹಲಿ ಸರ್ಕಾರ ಮತ್ತು ಪೊಲೀಸರಿಗೆ ಹೈಕೋರ್ಟ್​ ನೋಟಿಸ್​​​
First published:February 27, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ