• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಆನ್​ಲೈನ್​ ಶಾಪಿಂಗ್ ಮಾಡುವ ಮುನ್ನ ಎಚ್ಚರ!; ನೇಲ್ ಪಾಲಿಶ್​ ಖರೀದಿಸಿ ರೂ. 92,446 ಕಳೆದುಕೊಂಡ ಯುವತಿ

ಆನ್​ಲೈನ್​ ಶಾಪಿಂಗ್ ಮಾಡುವ ಮುನ್ನ ಎಚ್ಚರ!; ನೇಲ್ ಪಾಲಿಶ್​ ಖರೀದಿಸಿ ರೂ. 92,446 ಕಳೆದುಕೊಂಡ ಯುವತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೊಬೈಲ್ ಆ್ಯಪ್ ಮೂಲಕ ಪುಣೆಯ ಟೆಕ್ಕಿ ನೇಲ್ ಪಾಲಿಶ್ ಬುಕ್ ಮಾಡಿದ್ದಳು. ಅದಕ್ಕಾಗಿ ತನ್ನ ಬ್ಯಾಂಕ್ ಖಾತೆಯಿಂದ 388 ರೂ. ಪಾವತಿ ಮಾಡಿದ್ದಳು. ಪ್ರಾಡಕ್ಟ್​ ತಲುಪದ ಬಗ್ಗೆ ಕಸ್ಟಮರ್ ಕೇರ್ ಸಿಬ್ಬಂದಿ ಬಳಿ ವಿಚಾರಿಸಿದಾಗ ಹಣ ಪಾವತಿಯೇ ಆಗಿಲ್ಲ ಎಂದಿದ್ದರು.

  • Share this:

ಪುಣೆ (ಫೆ. 17): ಆನ್​ಲೈನ್ ಶಾಪಿಂಗ್ ತಾಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಬಹುತೇಕ ಜನರು ಅಂಗಡಿಗಳಿಗೆ ಹೋಗಿ ಖರೀದಿ ಮಾಡುವುದನ್ನೇ ನಿಲ್ಲಿಸಿದ್ದಾರೆ. ಆದರೆ, ಆನ್​ಲೈನ್ ಶಾಪಿಂಗ್ ಆ್ಯಪ್​ಗಳು ನಿಮ್ಮ ಖಾಸಗಿ ಮಾಹಿತಿಯನ್ನು ಸುರಕ್ಷಿತವಾಗಿಡುತ್ತವೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ಫೋನ್​ ಪೇ, ಪೇಟಿಎಂ, ಗೂಗಲ್ ಪೇ ಮುಂತಾದ ಆ್ಯಪ್​ಗಳ ಮೂಲಕ ಆನ್​ಲೈನ್​ನಲ್ಲಿ ವಸ್ತುಗಳನ್ನು ಖರೀದಿ ಮಾಡಿ ಹಣ ಪಾವತಿ ಮಾಡಲಾಗುತ್ತದೆ. ಇದಕ್ಕೆ ಅತ್ಯಾಕರ್ಷಕ ಆಫರ್​ಗಳನ್ನೂ ನೀಡಲಾಗುತ್ತದೆ. ಇದೇ ರೀತಿ ಆನ್​ಲೈನ್​ನಲ್ಲಿ ನೇಲ್ ಪಾಲಿಶ್​ ಖರೀದಿ ಮಾಡಿದ ಯುವತಿಯೊಬ್ಬಳು ಬರೋಬ್ಬರಿ 92,446 ರೂ. ಕಳೆದುಕೊಂಡಿದ್ದಾಳೆ!


ಅಚ್ಚರಿಯಾದರೂ ಇದು ಸತ್ಯ. ಪುಣೆಯ ಟೆಕ್ಕಿಯೊಬ್ಬಳು ಇ- ಕಾಮರ್ಸ್​ ವೆಬ್​ಸೈಟಿನಲ್ಲಿ 388 ರೂ. ಬೆಲೆಯ ನೇಲ್ ಪಾಲಿಶ್ ಖರೀದಿ ಮಾಡಿದ್ದಳು. 4ರಿಂದ 5 ದಿನದೊಳಗೆ ಆಕೆ ಆರ್ಡರ್ ಮಾಡಿದ್ದ ವಸ್ತು ಕೈ ಸೇರಬೇಕಿತ್ತು. ಆದರೆ, 1 ವಾರವಾದರೂ ನೇಲ್ ಪಾಲಿಶ್ ಬಾರದ ಕಾರಣ ಆಕೆ ಕಸ್ಟಮರ್ ಕೇರ್​ಗೆ ಫೋನ್ ಮಾಡಿ ವಿಚಾರಿಸಿದ್ದಳು. ನಿಮ್ಮಿಂದ ಹಣ ಸಂದಾಯವಾಗದ ಕಾರಣ ಪ್ರಾಡಕ್ಟ್​ ಡೆಲಿವರಿಯಾಗಿಲ್ಲ ಎಂದು ಕಸ್ಟಮರ್ ಕೇರ್ ಸಿಬ್ಬಂದಿ ಹೇಳಿದ್ದರು.


ಇದನ್ನೂ ಓದಿ: ಕ್ಯಾಬ್ ಹತ್ತಿದ ಯುವತಿಗೆ ಲೈಂಗಿಕ ಕಿರುಕುಳ; ಬೆಂಗಳೂರಲ್ಲಿ ಉಬರ್ ಚಾಲಕನ ಬಂಧನ


ಆರ್ಡರ್ ಮಾಡುವಾಗಲೇ 388 ರೂ. ನೀಡಿರುವುದಾಗಿ ತಿಳಿಸಿದ ಯುವತಿ ಹಣ ಸಂದಾಯವಾದ ದಾಖಲೆ ನೀಡುವುದಾಗಿ ತಿಳಿಸಿದ್ದಳು. ಆಕೆಯ ಆರ್ಡರ್​ ಬಗ್ಗೆ ತಿಳಿಯಲು ಕಸ್ಟಮರ್ ಕೇರ್ ಸಿಬ್ಬಂದಿ ಫೋನ್ ನಂಬರ್ ಕೇಳಿದ್ದರು. ಆಕೆ ತನ್ನ ಮೊಬೈಲ್ ನಂಬರ್ ನೀಡುತ್ತಿದ್ದಂತೆ ಆಕೆಯ 2 ಪ್ರೈವೇಟ್ ಖಾತೆಗಳಿಂದ 92,466 ರೂ. ಡೆಬಿಟ್ ಆಗಿತ್ತು. ಇದರಿಂದ ಕಂಗಾಲಾದ ಆಕೆ ಮತ್ತೆ ಕಸ್ಟಮರ್ ಕೇರ್ ಸಿಬ್ಬಂದಿಗೆ ಫೋನ್ ಮಾಡಿದರೂ ಯಾರೂ ಉತ್ತರಿಸಿಲ್ಲ.


ಕಳೆದ ವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ಈ ಘಟನೆ ನಡೆದಿದೆ. ಹಣ ಕಳೆದುಕೊಂಡ ಸಾಫ್ಟ್​ವೇರ್ ಇಂಜಿನಿಯರ್ ಪೊಲೀಸರಿಗೆ ದೂರು ನೀಡಿದ್ದಾಳೆ. ಡಿಸೆಂಬರ್ 17ರಂದು ಪುಣೆಯ ಯುವತಿ ಮೊಬೈಲ್ ಆ್ಯಪ್ ಮೂಲಕ ನೇಲ್ ಪಾಲಿಶ್ ಬುಕ್ ಮಾಡಿದ್ದಳು. ಅದಕ್ಕಾಗಿ ತನ್ನ ಪ್ರೈವೇಟ್ ಬ್ಯಾಂಕ್ ಖಾತೆಯಿಂದ 388 ರೂ. ಪಾವತಿ ಮಾಡಿದ್ದಳು. ಪ್ರಾಡಕ್ಟ್​ ತಲುಪದ ಬಗ್ಗೆ ಕಸ್ಟಮರ್ ಕೇರ್ ಸಿಬ್ಬಂದಿ ಬಳಿ ವಿಚಾರಿಸಿದಾಗ  ಹಣ ಪಾವತಿಯೇ ಆಗಿಲ್ಲ ಎಂದಿದ್ದರು. ಅಲ್ಲದೆ, ಒಂದುವೇಳೆ ಪಾವತಿಯಾಗಿದ್ದರೆ ಹಣವನ್ನು ವಾಪಾಸ್ ನೀಡುವುದಾಗಿಯೂ ತಿಳಿಸಿದ್ದರು ಎಂದು ಟೈಮ್ಸ್​ ಆಫ್ ಇಂಡಿಯಾ ವರದಿ ಮಾಡಿದೆ.


ಇದನ್ನೂ ಓದಿ: ಬೆದರಿಕೆಯೊಡ್ಡಿದ ಕಾಂಗ್ರೆಸ್ ಶಾಸಕಿಗೆ ಡೋಂಟ್ ಕೇರ್ ಎಂದ ಮಹಿಳಾ ಐಪಿಎಸ್ ಅಧಿಕಾರಿ; ವಿಡಿಯೋ ವೈರಲ್


ಆದರೆ, ಆಕೆ ತನ್ನ ಮೊಬೈಲ್ ನಂಬರ್ ನೀಡುತ್ತಿದ್ದಂತೆ 2 ಪ್ರೈವೇಟ್ ಅಕೌಂಟ್​ನಿಂದ 90,946 ರೂ. ಡೆಬಿಟ್ ಆಗಿ ಬೇರೆ ಬ್ಯಾಂಕ್​ಗೆ ವರ್ಗಾವಣೆಯಾಗಿತ್ತು. ಪಬ್ಲಿಕ್ ಸೆಕ್ಟರ್​ ಬ್ಯಾಂಕ್​ನಿಂದಲೂ 1,500 ರೂ. ಡ್ರಾ ಆಗಿತ್ತು. ಆ ಯುವತಿ ತನ್ನ ಬ್ಯಾಂಕ್ ಮಾಹಿತಿಯನ್ನು ಎಲ್ಲೂ ಬಿಟ್ಟುಕೊಟ್ಟಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಆದರೂ ಅಷ್ಟು ದೊಡ್ಡ ಮೊತ್ತದ ಹಣ ಹೇಗೆ ಡ್ರಾ ಆಯಿತೆಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 388 ರೂ. ಬೆಲೆಯ ನೇಲ್ ಪಾಲಿಶ್​ಗೆ ಆ ಯುವತಿ 92,446 ರೂ. ಹಣವನ್ನು ಕಳೆದುಕೊಂಡಿದ್ದಾಳೆ.

Published by:Sushma Chakre
First published: