Pune: ಬೀದಿ ನಾಯಿಗಳ ರಕ್ಷಣೆಗೆ ವಿಶಿಷ್ಟ ಕತ್ತು ಪಟ್ಟಿ ತಯಾರಿಸಿದ ಯುವಕ!

ವಾಹನಗಳ ಚಕ್ರದಡಿಗೆ ಬಿದ್ದು, ಉಸಿರು ಬಿಡುತ್ತಿರುವ ಅದೆಷ್ಟೋ ನಾಯಿಗಳ ರಕ್ಷಣೆಗಾಗಿ ಒಂದು ವಿಶೇಷ ಕೊರಳ ಪಟ್ಟಿಯನ್ನು. ಕಂಡುಹಿಡಿದು, ಅದೆಷ್ಟೋ ನಾಯಿಗಳ ಜೀವಗಳನ್ನು ಉಳಿಸಿ,ಟಾಟಾ ಸಮೂಹದ ಅಧ್ಯಕ್ಷರಾದ ರತನ್ ಟಾಟಾರವರಿಂದ ಭೇಷ್ ಎನಿಸಿಕೊಂಡ ಯುವಕನ ಕಥೆ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತನ್ನ ವಿಶೇಷ ಪ್ರಾಮಾಣಿಕತೆಯಿಂದ ಮತ್ತು ಶಿಸ್ತಿನಿಂದ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವ ಪ್ರಾಣಿ ಎಂದರೆ ಅದು ನಾಯಿ (Dog). ನಾಯಿಗಳು ಮನುಷ್ಯನ ಅಂತಾರಾಳದ ಭಾವನೆಯನ್ನು ಅರಿತು, ಅದಕ್ಕೆ ಸ್ಪಂದಿಸುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದೆ. ಇಂತಹ ವಿಶೇಷ ಗುಣಗಳನ್ನ ಹೊಂದಿರುವ ಅದೆಷ್ಟೋ ನಾಯಿಗಳು ಆಕಸ್ಮಿಕವಾಗಿಯೋ ಅಥವಾ ಬೇರೆ ರೀತಿಯಲ್ಲಿಯೋ ರಸ್ತೆಗಳಲ್ಲಿ ಸಂಚರಿಸುತ್ತಿರೋ ವಾಹನಗಳ ಚಕ್ರದಡಿಗೆ ಬಿದ್ದು ಸಾಯುತ್ತಿರುವ ಸುದ್ದಿಗಳನ್ನು ಸಾಮಾನ್ಯವಾಗಿ ಮಾಧ್ಯಮದ ಮೂಲಕ, ಪತ್ರಿಕೆಗಳ ಮೂಲಕ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಕೇಳುತ್ತಿರುತ್ತೇವೆ. ಅದೆಷ್ಟೋ ಇಂತಹ ಘಟನೆಗಳನ್ನು ಕಣ್ಣಾರೆ ಕಂಡಿರುತ್ತೇವೆ ಕೂಡ. ಇಂತಹ ಸುದ್ದಿಗಳನ್ನು ಕೇಳಿದಾಗ, ಕಣ್ಣಾರೆ ಕಂಡಾಗ ಯಾವುದೇ ವ್ಯಕ್ತಿಯ ಕರುಳು ಒಂದು ಬಾರಿ ಚುರುಕ್ಕೆನ್ನದೆ ಇರಳಾರದು. ಹೀಗಿರುವಾಗ ವಾಹನಗಳ ಚಕ್ರದಡಿಗೆ ಬಿದ್ದು, ಉಸಿರು ಬಿಡುತ್ತಿರುವ ಅದೆಷ್ಟೋ ನಾಯಿಗಳ ರಕ್ಷಣೆಗಾಗಿ ಒಂದು ವಿಶೇಷ ಕೊರಳ ಪಟ್ಟಿಯನ್ನು. ಕಂಡುಹಿಡಿದು, ಅದೆಷ್ಟೋ ನಾಯಿಗಳ ಜೀವಗಳನ್ನು ಉಳಿಸಿ,ಟಾಟಾ ಸಮೂಹದ ಅಧ್ಯಕ್ಷರಾದ ರತನ್ ಟಾಟಾರವರಿಂದ (Ratan Tata) ಭೇಷ್ ಎನಿಸಿಕೊಂಡ ಯುವಕನ ಕಥೆ ಇಲ್ಲಿದೆ.

ಇವರ ಹೆಸರು ಶಾಂತನು ನಾಯ್ಡು. ಮೂಲತಃ ಮಹಾರಾಷ್ಟ್ರ ರಾಜ್ಯದ ಪುಣೆ ಮೂಲದವರು. ತನ್ನ ಮೆಕಾನಿಕಲ್‌ ಇಂಜಿನಿಯರಿಂಗ್ ಪದವಿ ಮುಗಿದ ಬಳಿಕ, ಎಂ.ಬಿ.ಎ ಪದವಿಯನ್ನು ಪ್ರಖ್ಯಾತ ಕಾರ್ನೆಲ್‌ ಯೂನಿವರ್ಸಿಟಿಯಲ್ಲಿ ಪಡೆದರು.

ಶಾಂತನು ಪುಣೆಯಲ್ಲಿಇಂಜಿನಿಯರಿಂಗ್ ಪದವಿ ಓದುತ್ತಿರುವ ಸಂದರ್ಭದಲ್ಲಿ, ಒಂದು ದಿನ ರಾತ್ರಿ ಮನೆಗೆ ಹಿಂತಿರುಗಿ ಬರುವಾಗ ರಸ್ತೆಯ ಮಧ್ಯದಲ್ಲಿ ಬೀದಿ ನಾಯಿಯೊಂದು ರಸ್ತೆಯಲ್ಲಿ ಯಾವುದೋ ವಾಹನದಡಿಗೆ ಡಿಕ್ಕಿ ಹೊಡೆದು, ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣ ಬಿಟ್ಟಿರುವುದನ್ನು ನೋಡುತ್ತಾರೆ. ಈ ದೃಶ್ಯವನ್ನು ಕಣ್ಣಾರೆ ಕಂಡು ತುಂಬಾ ಮರುಕ ಪಡುತ್ತಾರೆ. ಹೀಗೆ ಅನಾಥವಾಗಿ ಸಾಯುತ್ತಿರುವ ಈ ಬೀದಿ ನಾಯಿಗಳ ಜೀವವನ್ನು ಉಳಿಸಲು ತನ್ನ ಕೈಲಾದಷ್ಟು ಏನಾದರು ಮಾಡಬೇಕು ಎಂದು ಯೋಚಿಸಿ, ಒಂದು ಯೋಜನೆಯನ್ನು ಹಾಕುತ್ತಾರೆ.

ಇದನ್ನೂ ಓದಿ: Dog Breeds: ಜಗತ್ತಿನ ಅತಿ ದುಬಾರಿ ಶ್ವಾನಗಳ ಬಗ್ಗೆ ಮಾಹಿತಿ ಇಲ್ಲಿದೆ

ಯೋಜನೆ ಹಾಕಿದ ಶಾಂತನುವಿಗೆ ಮೊದಲು ತೋಚಿದ್ದು ನಾಯಿಯ ಕತ್ತಿನಲ್ಲಿರುವ ಬೆಲ್ಟ್ ಅಥವಾ ಕತ್ತು ಪಟ್ಟಿ. ಸಾಮಾನ್ಯವಾಗಿ ಹೆಚ್ಚಿನ ಸಂದರ್ಭದಲ್ಲಿ ನಾಯಿಗಳು ವಾಹನಗಳಡಿಗೆ ಬಿದ್ದು ಸಾವಿಗೀಡಾಗುತ್ತಿದ್ದು ರಾತ್ರಿಯ ಪಾಳಿಯಲ್ಲಿ. ಹಾಗಂತ ಹಗಲು ಸಮಯದಲ್ಲಿಯೂ ವಾಹನಗಳಡಿಗೆ ಬೀಳುವುದಿಲ್ಲ ಅಂತ ಅರ್ಥ ಅಲ್ಲ.

ರಾತ್ರಿ ವೇಳೆ ಪ್ರತಿಫಲಿಸುವ ಬೆಲ್ಟ್

ಹೀಗೆ ತನ್ನ ಯೋಜನೆಯಂತೆಯೇ ಶಾಂತನು ರಾತ್ರಿ ವೇಳೆಯಲ್ಲಿ ವಾಹನಗಳ ಅಥವಾ ಬೇರೆ ರೀತಿಯ ದೀಪಗಳಿಗೆ ಪ್ರತಿಫಲಿಸುವಂತಹ ನಾಯಿಯ ಕೊರಳ ಪಟ್ಟಿಯನ್ನು ತಯಾರಿಸುತ್ತಾನೆ. ಈ ಕೊರಳು ಪಟ್ಟಿಗಳು ಪ್ರತಿಫಲಕಗಳನ್ನು ಹೊಂದಿದ್ದು, ರಾತ್ರಿ ವೇಳೆಯಲ್ಲಿ ವಾಹನಗಳ ಲೈಟ್ ಗಳಿಗೆ ಪ್ರತಿಫಲಿಸುವ ರೀತಿಯಲ್ಲಿ ವಿಶಿಷ್ಟವಾಗಿ ಡಿಸೈನ್ ಮಾಡಲಾಗಿತ್ತು. ಹೀಗೆ ತಯಾರಾದ ಕೊರಳ ಪಟ್ಟಿಯನ್ನು ತನ್ನ ಮನೆಯ ಅಕ್ಕ ಪಕ್ಕದ ಹಲವಾರು ಬೀದಿ ನಾಯಿಗಳಿಗೆ ಅಳವಡಿಸುವ ಕಾರ್ಯ ಮಾಡಿದನು. ಹೀಗೆ ಹಲವಾರು ನಾಯಿಗಳ ಮೇಲೆ ಈ ವಿಶಿಷ್ಟ ಕೊರಳ ಅಳವಡಿಸಿದ ಬಳಿಕ ಹಲವಾರು ಬೀದಿ ನಾಯಿಗಳು ಬದುಕಿದ್ದವು ಎಂಬ ಧನಾತ್ಮಕ ಸುದ್ದಿಯನ್ನುಇವರಿಗೆ ಲಭಿಸುತ್ತದೆ.

ಶಾಂತನು ನಡೆಗೆ ಭಾರೀ ಪ್ರಶಂಸೆ

ಶಾಂತನುರವರು ಬೀದಿ ನಾಯಿಗಳ ರಕ್ಷಣೆಗೆಕೈಗೊಂಡ ಈ ಕ್ರಮಗಳು ಎಲ್ಲೆಡೆಯೂ ಪ್ರಚಾರ ಪಡೆದುಕೊಂಡು ವ್ಯಾಪಕ ಪ್ರಸಿದ್ದಿಯನ್ನು ಪಡೆದುಕೊಳ್ಳುತ್ತದೆ. ತಾನು ದುಡಿದ ಹಣದಲ್ಲಿ ಉಳಿಸಿ ಮತ್ತುತನ್ನ ಒಂದಿಷ್ಟು ಗೆಳೆಯರನ್ನು ಸೇರಿಸಿಕೊಂಡು ಪುಣೆಯಲ್ಲಿ ಹಲವಾರು ಮನೆಗಳಿಂದ ಡೆನಿಮ್‌ಜೀನ್ಸ್ ಗಳನ್ನು ಬಳಸಿ, 500 ಕಾಲರ್ ಗಳನ್ನು ತಯಾರಿಸಿ ತನ್ನ ಅಕ್ಕಪಕ್ಕದ ಬೀದಿಗಳಲ್ಲಿ ಹಂಚುತ್ತಾರೆ. ಇವನ ಬೀದಿನಾಯಿಗಳ ಈ ಹೊಸ ಕ್ರಮವು ಸಾಮಾಜಿಕ ಜಾಲತಾಣದಲ್ಲಿಯೂ ಪ್ರಚಾರವನ್ನು ಪಡೆಯಿತು. ಟಾಟಾ ಸಂಸ್ಥೆಯ ಹೌಸ್‌ಜರ್ನಲ್ ನಲ್ಲಿ " ಕಾಲರ್ ವಿಥ್ ಎ ಕಾಸ್" ಎಂಬ ಶೀರ್ಷಿಕೆಯಲ್ಲಿ ಶಂತನುವಿನ ಶ್ವಾನ ಪ್ರೀತಿಯಕುರಿತಾಗಿ ವರದಿಯಾಯಿತು.

ಹೀಗೆ ಹಲವಾರು ರೀತಿಯಿಂದ ಪ್ರಚಾರ ಪಡೆದುಕೊಂಡುಈತ ತಯಾರಿಸಿದ ಕೊರಳ ಪಟ್ಟಿಯು ವ್ಯಾಪಕ ಬೇಡಿಕೆಯನ್ನುಕೂಡ ಪಡೆದುಕೊಳ್ಳುತ್ತದೆ. ಆದರೆ ಇವರು ಬೇಡಿಕೆಯನ್ನು ಮೊದಲೇ ಪೂರೈಸಿಕೊಡಲು ಹಣಕಾಸಿನ ಸಮಸ್ಯೆ ಇದ್ದುದರಿಂದ ಸಾಧ್ಯವಾಗುವುದಿಲ್ಲ.

ಟಾಟಾಗೆ ಪತ್ರ

ಹೀಗಿರುವಾಗ ತನ್ನ ತಂದೆಯ ಸಲಹೆ ಮೇರೆಗೆ ನೇರವಾಗಿ ತಾನು ಎದುರಿಸುತಿದ್ದ ಸಮಸ್ಯೆಯ ಕುರಿತಾಗಿ ರತನ್‌ ಟಾಟಾರವರಿಗೆ ಪತ್ರವನ್ನು ಬರೆಯುತ್ತಾರೆ. ಹಲವು ದಿನಗಳ ಬಳಿಕ ರತನ್‌ ಟಾಟಾರವರನ್ನು ಭೇಟಿ ಮಾಡುವ ಸದಾವಕಾಶವು ಶಾಂತನುವಿಗೆ ಸಿಗುತ್ತದೆ. ಶಾಂತನು ಅವ್ರಿಗೂ ರತನ್‌ಟಾಟಾ ಅವರು ತಮ್ಮ ಮನೆಯ ನಾಯಿಗಳನ್ನು ಪರಿಚಯಿಸಿದಲ್ಲದೆ , ಬೀದಿ ನಾಯಿಗಳ ರಕ್ಷಣೆಗೆ ಬೇಕಾದ ವೆಚ್ಚವನ್ನು ಟಾಟಾ ಫೌಂಡೇಶನ್ ನಿಂದ ಕೊಡುವ ಭರವಸೆಯನ್ನು ನೀಡಿದರು. ಈ ವರದಿಯನ್ನು ಸ್ವತಃ ಟಾಟಾ ಸಮೂಹದ ಅಧ್ಯಕ್ಷ ಮತ್ತು ದಿಗ್ಗಜರಾದ ರತನ್‌ ಟಾಟಾರವರು ಓದಿ, ಇವನ ಕಾರ್ಯವನ್ನು ಮೆಚ್ಚಿ ಸ್ವತಃ ತನ್ನ ಮನೆಗೆ ಬರುವಂತೆ ಆಹ್ವಾನವನ್ನು ಕೂಡ ನೀಡಿದ್ದರು.

ಇದನ್ನೂ ಓದಿ: Charlie Special: ಚಾರ್ಲಿಗೆ ಧರ್ಮನೇ ಯಾಕೆ ಇಷ್ಟ ಗೊತ್ತಾ? ಮನುಷ್ಯ ಮತ್ತು ನಾಯಿಗಳ ಬಾಂಧವ್ಯದ ಇಂಟ್ರೆಸ್ಟಿಂಗ್ ಕಥೆ ಇಲ್ಲಿದೆ

ಇದರ ಬಳಿಕ ಟಾಟಾ ಕಂಪೆನಿಯಲ್ಲಿ ಡಿ. ಜಿ. ಎಂ. (ಡೆಪ್ಯೂಟಿ ಜನರಲ್ ಮ್ಯಾನೇಜರ್ ) ಆಗಿ ಅತೀ ಚಿಕ್ಕ ವಯಸ್ಸಿನಲ್ಲಿ ಆಯ್ಕೆಯಾಗುತ್ತಾರೆ. ಶಾಂತನು ನಾಯ್ಡು ಅವರು ತಮ್ಮ ಮತ್ತು ಟಾಟಾ ಸಮೂಹದ ಅಧ್ಯಕ್ಷರಾದ ರತನ್‌ ಟಾಟಾ ಅವರ 5 ವರ್ಷದ ಸಂಬಂಧದ ಕುರಿತು " ಐ ಕೇಮ್‌ಅಪಾನ್ ಎ ಲೈಟ್ ಹೌಸ್: ಎ ಶಾರ್ಟ್ ಮೆಮೊಯಿರ್‌ಆಫ್ ಲೈಫ್ ವಿತ್‌ ರತನ್‌ಟಾಟಾ' ಎಂಬ ಪುಸ್ತಕವನ್ನು ಕೂಡ ಬರೆದಿದ್ದಾರೆ.

ಹೀಗೆ ಬೀದಿ ನಾಯಿಗಳ ಸುರಕ್ಷತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ ಅವುಗಳಿಗೆ ಹೊಸ ರೀತಿಯ ಕತ್ತು ಪಟ್ಟಿಗಳನ್ನು ತಯಾರಿಸಿ, ಅವುಗಳಿಗೂ ಬದುಕುವ ಹಕ್ಕಿದೆ ಎಂದು ತೋರಿಸಿಕೊಟ್ಟ ಶಂತನು ನಾಯ್ಡು ಅವರ ಕಾರ್ಯ ಎಲ್ಲರಿಗೂ ಮಾದರಿ.

-ಶಶಿಧರ ನಾಯ್ಕ ಎ, ಎಸ್. ಡಿ. ಎಂ. ಸ್ನಾತಕೋತ್ತರ ಕೇಂದ್ರ ಉಜಿರೆ
Published by:Precilla Olivia Dias
First published: