ಪುಣೆ(ಆ.09): ನೆರೆಹೊರೆಯಲ್ಲಿ ಅನೇಕರು ತಮ್ಮ ಅಕ್ಕಪಕ್ಕದ (Neigbours) ಮನೆಮಂದಿ ಜೊತೆ ಘರ್ಷಣೆಯನ್ನು ಹೊಂದಿರುತ್ತಾರೆ. ಬೇಲಿ ವಿಚಾರಕ್ಕೋ (Fence), ರಸ್ತೆ ವಿಚಾರಕ್ಕೋ, ಒಳ್ಳೆಯ ನಡತೆ ಹೊಂದಿರದ್ದಕ್ಕೊ ಜಗಳಗಳಾಗುತ್ತವೆ. ಯಾವುದೇ ತೊಂದರೆಯನ್ನು ಉಂಟುಮಾಡದ ನೆರೆಹೊರೆಯವರು ಸಿಕ್ಕಿದರೆ ಅದು ಅದೃಷ್ಟ. ತಮ್ಮ ನೆರೆಹೊರೆಯವರಿಂದ ಸಾಕಷ್ಟು ತೊಂದರೆಗಳನ್ನು ಎದುರಿಸಿದರೆ, ಅವರಲ್ಲಿ ಕೆಲವರು ಪೊಲೀಸ್ ಠಾಣೆಯನ್ನು (Police Station) ಸಹ ಸಂಪರ್ಕಿಸುತ್ತಾರೆ. ಶಿವಾಜಿನಗರದ (Shivaji Nagar) ನಿವಾಸಿಯೊಬ್ಬರು ತಮ್ಮ ನೆರೆಮನೆಯ ಸಾಕು ಗಿಣಿಯ ನಿರಂತರ ಶಿಳ್ಳೆ ಮತ್ತು ಕಿರುಚಾಟದಿಂದ ಸಿಟ್ಟಿಗೆದ್ದಿದ್ದು, ಗುರುವಾರ ರಾತ್ರಿ ಹಕ್ಕಿಯ ಮಾಲೀಕರ ವಿರುದ್ಧ ಖಡ್ಕಿ ಪೊಲೀಸರಿಗೆ ದೂರು ನೀಡಿದ್ದಾರೆ. ಹಿರಿಯ ನಾಗರಿಕರಿಂದ ದೂರನ್ನು ಸ್ವೀಕರಿಸಿದ ಮೇಲೆ ಪೊಲೀಸರು ಅರಿಯಲಾಗದ ಅಪರಾಧವನ್ನು ದಾಖಲಿಸಿದ್ದಾರೆ. ಗಿಳಿಯ ಮಾಲೀಕರ ವಿರುದ್ಧ ಶಾಂತಿ ಭಂಗ ಮತ್ತು ಕ್ರಿಮಿನಲ್ ಬೆದರಿಕೆಯ ಆರೋಪಗಳನ್ನು (Accuse) ಹೊರಿಸಿದ್ದಾರೆ. ಖಾಡ್ಕಿ ಪೊಲೀಸರ ಪ್ರಕಾರ, ಗಿಳಿಯ ಮಾಲೀಕರು ಮತ್ತು ದೂರುದಾರರು ಹಳೆಯ ಪುಣೆ-ಮುಂಬೈ ಹೆದ್ದಾರಿಯ ಶಿವಾಜಿನಗರದ ಹೌಸಿಂಗ್ ಸೊಸೈಟಿಯ (Housing Society) ನೆರೆಹೊರೆಯವರು.
ಗಿಳಿ ಮಾಲೀಕರ ಫ್ಲಾಟ್‌ನ ಪ್ರವೇಶ ದ್ವಾರದ ಬಳಿ ನೇತಾಡುವ ಬೋನಿನಲ್ಲಿ ಗಿಳಿಯನ್ನು ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಿಣಿಯ ಕೂಗಿನಿಂದ ಕಿರಿಕಿರಿ
ಗಿಳಿಗಳ ಶಿಳ್ಳೆ ಮತ್ತು ಕಿರುಚಾಟವು 72 ವರ್ಷದ ವ್ಯಕ್ತಿಯನ್ನು ಅಸಮಾಧಾನಗೊಳಿಸಿತು ಎಂದು ಅವರು ಹೇಳಿದರು. ಅದರ ಬಗ್ಗೆ ಅದರ ಮಾಲೀಕರೊಂದಿಗೆ ಮಾತನಾಡಿದ ಅವರು, ಪಕ್ಷಿಯನ್ನು ಮನೆಯೊಳಗೆ ಇಟ್ಟುಕೊಳ್ಳಲು ಹೇಳಿದರು. ಅದು ಅವನಿಗೆ ತೊಂದರೆಯಾಗದಂತೆ. ಆದರೆ, ಗಿಳಿಯ ಮಾಲೀಕರು ವೃದ್ಧೆಗೆ ಬೆದರಿಕೆ ಹಾಕಿದರು.
ಗಿಣಿ ಮನೆಯೊಳಗೆ ಇಟ್ಟು ಕೊಳ್ಳಲು ಸೂಚನೆ
ನೀವು ಹೋಗಿ ನಿಮ್ಮ ಕೆಲಸ ನೋಡಿಕೊಳ್ಳಿ ಎಂದು ಅವಾಜ್ ಹಾಕಿದ್ದರು. ನಂತರ ವೃದ್ಧ ಪೊಲೀಸರನ್ನು ಸಂಪರ್ಕಿಸಲು ನಿರ್ಧರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತರರಿಗೆ ತೊಂದರೆಯಾಗದಂತೆ ಸಾಕುಪ್ರಾಣಿಯನ್ನು ಮನೆಯೊಳಗೆ ಇಟ್ಟುಕೊಳ್ಳುವಂತೆ ನಾವು ಗಿಣಿ ಮಾಲೀಕರಿಗೆ ಹೇಳಿದ್ದೇವೆ ಎಂದು ಅವರು ಹೇಳಿದರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ