ಪುಲ್ವಾಮಾ ಮಾದರಿಯಲ್ಲೇ ಮತ್ತೊಂದು ದಾಳಿಗೆ ಉಗ್ರರ ಸಂಚು?; 52 ಕೆ.ಜಿ ಸ್ಪೋಟಕಗಳನ್ನು ವಶಪಡಿಸಿಕೊಂಡ ಸೇನೆ

ನೀರಿನ ತೊಟ್ಟಿಯಲ್ಲಿ 50 ಸ್ಪೋಟಕಗಳು ಪತ್ತೆಯಾಗಿವೆ. ಪತ್ತೆಯಾದ ಈ ಸ್ಪೋಟಕಗಳನ್ನು ಸೂಪರ್-90 ಅಥವಾ ಸಂಕ್ಷಿಪ್ತವಾಗಿ ಎಸ್-90 ಎಂದು ಕರೆಯಲಾಗುತ್ತದೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಸೇನೆ ವಶಪಡಿಸಿಕೊಂಡ ಅಪಾರ ಪ್ರಮಾಣದ ಸ್ಪೋಟಕಗಳು

ಭಾರತೀಯ ಸೇನೆ ವಶಪಡಿಸಿಕೊಂಡ ಅಪಾರ ಪ್ರಮಾಣದ ಸ್ಪೋಟಕಗಳು

 • Share this:
  ನವದೆಹಲಿ(ಸೆ.18): ಕಳೆದ ವರ್ಷ ನಡೆದ ಪುಲ್ವಾಮಾ ದಾಳಿ ಇಡೀ ಭಾರತದ ಇತಿಹಾಸದಲ್ಲೇ ಒಂದು ಕಪ್ಪು ಚುಕ್ಕೆ. ಯಾರೂ ಮರೆಯಲಾಗದ ಕಹಿ ಘಟನೆ, ಜೊತೆಗೆ ಅದು ದೇಶಕ್ಕೆ ಕರಾಳ ದಿನವೂ ಹೌದು. ಇನ್ನೂ ಸಹ ಆ ಘಟನೆಯಿಂದ ಭಾರತ ಚೇತರಿಸಿಕೊಂಡಿಲ್ಲ. ಆಗಲೇ ಉಗ್ರರು ಇಂತಹದ್ದೇ ಮತ್ತೊಂದು ದಾಳಿ ನಡೆಸಲು ಸಂಚು ಹೂಡಿದ್ದರು ಎನ್ನಲಾಗಿದೆ. ಅದೃಷ್ಟವಶಾತ್​ ಭಾರತೀಯ ಸೇನೆ ಜಮ್ಮು ಕಾಶ್ಮೀರದ ಕರೇವಾ ಪ್ರದೇಶದಲ್ಲಿ ಗುರುವಾರ ಉಗ್ರರು ಅಟಗಿಸಿಟ್ಟಿದ್ದ 52 ಕೆಜಿ ಸ್ಪೋಟಕಗಳನ್ನು ವಶಪಡಿಸಿಕೊಳ್ಳುವ ಮೂಲಕ ಪುಲ್ವಾಮಾ ಮಾದರಿಯ ದಾಳಿಯನ್ನು ತಪ್ಪಿಸಿದೆ. ಈ ಸ್ಥಳ ಪುಲ್ವಾಮಾ ದಾಳಿ ನಡೆದ ಸ್ಥಳದಿಂದ ಬಹಳ ದೂರವೇನೂ ಇರಲಿಲ್ಲ ಎಂದು ಭಾರತೀಯ ಸೇನಾಧಿಕಾರಿಗಳು ತಿಳಿಸಿದ್ದಾರೆ. ಉಗ್ರರು ಅಡಗಿಸಿಟ್ಟಿದ್ದ ಸ್ಪೋಟಕಗಳನ್ನು ವಶಪಡಿಸಿಕೊಂಡ ಸ್ಥಳವು ಜಮ್ಮು-ಕಾಶ್ಮೀರ ಹೆದ್ದಾರಿಯ ಸಮೀಪದಲ್ಲೇ ಇದೆ. ಪುಲ್ವಾಮಾ ದಾಳಿ ನಡೆದ ಸ್ಥಳದಿಂದ ಕೇವಲ 9 ಕಿ.ಮೀ.ದೂರದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ನಡೆದ ಪುಲ್ವಾಮಾ ದಾಳಿಯಲ್ಲಿ ಸುಮಾರು 40 ಮಂದಿ ಭಾರತೀಯ ಯೋಧರು ಸಾವನ್ನಪ್ಪಿದ್ದರು.

  ನಾವು ಪುಲ್ವಾಮಾ ಮಾದರಿಯ ಮತ್ತೊಂದು ದಾಳಿಯನ್ನು ತಪ್ಪಿಸಿದ್ದೇವೆ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಮ್ಮು ಕಾಶ್ಮೀರದ ಗಡಿಕಲ್​ನ ಕರೇವಾ ಪ್ರದೇಶದಲ್ಲಿನ ಸಿಂಟೆಕ್ಸ್​​ ನೀರಿನ ತೊಟ್ಟಿಯಲ್ಲಿ ಸ್ಪೋಟಕಗಳು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಭಾರತೀಯ ಸೇನೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಈ ಸಂಗತಿ ಬಯಲಾಗಿದೆ.

  ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೇವೆ ಹೆಚ್ಚಿಸಲು ಭಕ್ತಾಧಿಗಳ ಆಗ್ರಹ ; ಸೌಕರ್ಯವಿದ್ದರೂ ಸೇವೆಗಿಲ್ಲ ಅವಕಾಶ

  ಒಟ್ಟು 416 ಪ್ಯಾಕೆಟ್​ ಸ್ಪೋಟಕ​ಗಳು ಪತ್ತೆಯಾಗಿದ್ದು, ಪ್ರತಿಯೊಂದು ಸಹ 125 ಗ್ರಾಂ ತೂಕ ಇದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರದ ಶೋಧ ಕಾರ್ಯಾಚರಣೆಯಲ್ಲಿ ಮತ್ತೊಂದು ನೀರಿನ ತೊಟ್ಟಿಯಲ್ಲಿ 50 ಸ್ಪೋಟಕಗಳು ಪತ್ತೆಯಾಗಿವೆ. ಪತ್ತೆಯಾದ ಈ ಸ್ಪೋಟಕಗಳನ್ನು ಸೂಪರ್-90 ಅಥವಾ ಸಂಕ್ಷಿಪ್ತವಾಗಿ ಎಸ್-90 ಎಂದು ಕರೆಯಲಾಗುತ್ತದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಈ ಸ್ಪೋಟಕಗಳನ್ನು ಭಾರತೀಯ ಸೇನೆ ವಶಪಡಿಸಿಕೊಂಡಿದೆ.

  ಕಳೆದ ವರ್ಷ ಫೆಬ್ರವರಿ 14ರಂದು ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪುರದ ಗೋರಿಪುರದಲ್ಲಿ ಸ್ಪೋಟಕಗಳನ್ನು ತುಂಬಿದ ಕಾರು ಭಾರತೀಯ ಭದ್ರತಾ ಪಡೆ ಇದ್ದ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಆಗ ಸ್ಥಳದಲ್ಲೇ ಸುಮಾರು 40 ಮಂದಿ ಯೋಧರು ಹುತಾತ್ಮರಾಗಿದ್ದರು. ಜೈಶ್​-ಇ-ಮೊಹಮ್ಮದ್ ಸಂಘಟನೆಯು ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು.

  ಈ ಪುಲ್ವಾಮಾ ದಾಳಿ ನಡೆದು 12 ದಿನಗಳ ಬಳಿಕ ಅಂದರೆ ಫೆಬ್ರವರಿ 26ರಂದು ಭಾರತೀಯ ವಾಯುಸೇನೆ ಪಾಕಿಸ್ತಾನದ ಕೈಬರ್​​ ಪುಕ್ತುಂಖ್ವಾದ ಬಾಲಾಕೋಟ್​ನಲ್ಲಿರುವ ಜೈಶ್​-ಇ-ಮೊಹಮ್ಮದ್ ಶಿಬಿರದ ಮೇಲೆ ದಾಳಿ ನಡೆಸಿ ಅನೇಕ ಉಗ್ರರನ್ನು ಹತ್ಯೆಗೈದು ಪ್ರತೀಕಾರ ತೀರಿಸಿಕೊಂಡಿತು.
  Published by:Latha CG
  First published: