HOME » NEWS » National-international » PULWAMA LIKE ATTACK AVERTED IN JAMMU AND KASHMIR AS SECURITY FORCES NEUTRALISE IED RECOVERED FROM CAR SNVS

ಕಾಶ್ಮೀರದಲ್ಲಿ ಕಾರ್ ಬಾಂಬ್ ಪತ್ತೆ; ಮತ್ತೊಂದು ಪುಲ್ವಾಮ ಮಾದರಿ ದಾಳಿ ತಪ್ಪಿಸಿದ ಭದ್ರತಾ ಪಡೆ

ಪ್ತಚರರು ಕೂಡ ಉಗ್ರ ದಾಳಿ ಸಾಧ್ಯತೆ ಬಗ್ಗೆ ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲ ಕಡೆಯೂ ಕಟ್ಟೆಚ್ಚರ ವಹಿಸಲಾಗಿತ್ತು. ಆ ಸಂದರ್ಭದಲ್ಲೇ ಸ್ಫೋಟಕಗಳಿರುವ ಕಾರು ಸಿಕ್ಕಿಬಿದ್ದಿದೆ.

news18
Updated:May 28, 2020, 12:08 PM IST
ಕಾಶ್ಮೀರದಲ್ಲಿ ಕಾರ್ ಬಾಂಬ್ ಪತ್ತೆ; ಮತ್ತೊಂದು ಪುಲ್ವಾಮ ಮಾದರಿ ದಾಳಿ ತಪ್ಪಿಸಿದ ಭದ್ರತಾ ಪಡೆ
ಭಾರತೀಯ ಸೇನೆ
  • News18
  • Last Updated: May 28, 2020, 12:08 PM IST
  • Share this:
ಶ್ರೀನಗರ(ಮೇ 28): ಪುಲ್ವಾಮದಲ್ಲಿ ಕಳೆದ  ವರ್ಷ ಸಂಭವಿಸಿದ ಭೀಕರ ಉಗ್ರ ದಾಳಿಯ ಮಾದರಿಯಲ್ಲೇ ಮತ್ತೊಂದು ದಾಳಿಗೆ ಪ್ರಯತ್ನ ನಡೆದಿರುವುದು ಬೆಳಕಿಗೆ ಬಂದಿದೆ. ನಿನ್ನೆ ರಾತ್ರಿ ಪುಲ್ವಾಮದಲ್ಲಿ 20 ಕಿಲೋಗೂ ಹೆಚ್ಚು ತೂಕದ IED ಸ್ಫೋಟಕಗಳಿಗಳಿರುವ ವಾಹನವೊಂದನ್ನು ಭದ್ರತಾ ಪಡೆಗಳು ತಡೆಹಿಡಿದಿದ್ದಾರೆ. ಹ್ಯುಂಡೆ ಸ್ಯಾಂಟ್ರೊ ಕಾರು ಹಾಗೂ ಅದರಲ್ಲಿ ಸಾಗಿಸಲಾಗುತ್ತಿದ್ದ ಸ್ಫೋಟಕಗಳನ್ನು ನಾಶ ಮಾಡಲಾಗಿದೆ. ಇದರೊಂದಿಗೆ ದೊಡ್ಡ ಮಟ್ಟದ ಉಗ್ರ ದಾಳಿ ತಪ್ಪಿದಂತಾಗಿದೆ.

ಕಳೆದ ವರ್ಷದ ಫೆಬ್ರುವರಿ ತಿಂಗಳಲ್ಲಿ ಇದೇ ಪುಲ್ವಾಮದಲ್ಲಿ ಸ್ಫೋಟಕಗಳು ತುಂಬಿದ್ದ ಕಾರೊಂದು ಭದ್ರತಾ ಪಡೆಗಳು ಪಹರೆ ವಾಹನಗಳಿಗೆ ಡಿಕ್ಕಿ ಹೊಡೆದು ದಾಳಿ ಮಾಡಲಾಗಿತ್ತು. ಆ ದಾಳಿಯಲ್ಲಿ 40 ಸೈನಿಕರು ಸಾವನ್ನಪ್ಪಿದ್ದರು. ಈಗ ಅಂಥದ್ದೇ ಮಾದರಿಯಲ್ಲಿ ಉಗ್ರರು ಮತ್ತೊಂದು ದಾಳಿಗೆ ಪ್ರಯತ್ನಿಸಿರುವುದು ನಿನ್ನೆ ಸಿಕ್ಕಿಬಿದ್ದ ಸ್ಯಾಂಟ್ರೊ ಕಾರು ಸಾಕ್ಷಿಯಾಗಿದೆ. ಗುಪ್ತಚರರು ಕೂಡ ಉಗ್ರ ದಾಳಿ ಸಾಧ್ಯತೆ ಬಗ್ಗೆ ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲ ಕಡೆಯೂ ಕಟ್ಟೆಚ್ಚರ ವಹಿಸಲಾಗಿತ್ತು. ಆ ಸಂದರ್ಭದಲ್ಲೇ ಸ್ಫೋಟಕಗಳಿರುವ ಕಾರು ಸಿಕ್ಕಿಬಿದ್ದಿದೆ.

ಇದನ್ನೂ ಓದಿ: Locust Attack - ಕಳೆದ ಮೂರು ದಶಕದಲ್ಲೇ ಅತ್ಯಂತ ಭೀಕರ ಮಿಡತೆ ದಾಳಿಗೆ ನಡುಗುತ್ತಿರುವ ಉತ್ತರ ಭಾರತ

ಸುಧಾರಿತ ಶಕ್ತಿಯ ಬಾಂಬ್​ಗಳಿದ್ದ ಹ್ಯುಂಡೈ ಕಾರು ನಕಲಿ ನೊಂದಣಿ ಸಂಖ್ಯೆ ಹೊಂದಿತ್ತು. ಚೆಕ್ ಪಾಯಿಂಟ್ ಬಳಿ ಕಾರನ್ನು ಪರಿಶೀಲಿಸಲು ತಡೆಯಲಾಯಿತು. ಆದರೆ, ಕಾರಿನ ಚಾಲಕ ವೇಗ ಹೆಚ್ಚಿಸಿ ಬ್ಯಾರಿಕೇಡ್ ಬಿಳಿಸಿ ಹೋಗಲು ಯತ್ನಿಸಿದ. ಆಗ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸುತ್ತಾರೆ. ಕಾರಿನ ಚಾಲಕ ವಾಹನ ಬಿಟ್ಟು ಕೂಡಲೇ ಪರಾರಿಯಾಗುತ್ತಾನೆ. ಆಗ ಕಾರನ್ನು ಪರಿಶೀಲಿಸಿದಾಗ ಐಇಡಿ ಸ್ಫೋಟಕಗಳಿರುವುದು ಗೊತ್ತಾಗುತ್ತದೆ.

ಆ ಕಾರನ್ನು ಮುಂದಕ್ಕೆ ಚಲಿಸಿದರೆ ಸ್ಫೋಟಗೊಳ್ಳುವ ಅಪಾಯ ಇದ್ದರಿಂದ ರಾತ್ರಿಯಿಡೀ ಹಾಗೇ ಬಿಡಲಾಗಿತ್ತು. ಸಮೀಪದ ಮನೆಗಳಿಂದ ಜನರನ್ನು ತೆರವುಗೊಳಿಸಲಾಗಿತ್ತು. ಬಳಿಕ ಬಾಂಬ್ ಸ್ಕ್ವಾಡ್​ನವರು ಸ್ಫೋಟಕಗಳನ್ನ ನಿಷ್ಕ್ರಿಯಗೊಳಿಸಿದರು.

First published: May 28, 2020, 12:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading