HOME » NEWS » National-international » PULWAMA ENCOUNTER TERRORIST KILLED AND SOLDIER COP INJURED IN ENCOUNTER IN JAMMU AND KASHMIRS PULWAMA LG

Pulwama Encounter: ಪುಲ್ವಾಮಾದಲ್ಲಿ ಎನ್​ಕೌಂಟರ್​: ಉಗ್ರನ ಹತ್ಯೆ; ಯೋಧ, ಪೊಲೀಸ್​ಗೆ ಗಾಯ

ಉಗ್ರರು ಅಡಗಿ ಕುಳಿತಿದ್ದಾರೆ ಎಂಬ ಗುಪ್ತಚರ ಇಲಾಖೆಯ ಖಚಿತ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿ ಗೂಸು ಗ್ರಾಮದಲ್ಲಿ ಶೋಧ ಕಾರ್ಯಾಚರಣೆಯನ್ನು ಕೈಗೊಂಡಿದ್ದರು ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

news18-kannada
Updated:July 7, 2020, 9:41 AM IST
Pulwama Encounter: ಪುಲ್ವಾಮಾದಲ್ಲಿ ಎನ್​ಕೌಂಟರ್​: ಉಗ್ರನ ಹತ್ಯೆ; ಯೋಧ, ಪೊಲೀಸ್​ಗೆ ಗಾಯ
ಸಾಂದರ್ಭಿಕ ಚಿತ್ರ
  • Share this:
ಜಮ್ಮು(ಜು.07): ಇಂದು ಮುಂಜಾನೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಉಗ್ರನನ್ನು ಸೆದೆಬಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಎನ್​ಕೌಂಟರ್ ವೇಳೆ ಓರ್ವ ಭಾರತೀಯ ಯೋಧ ಮತ್ತು ಜಮ್ಮು-ಕಾಶ್ಮೀರದ ಓರ್ವ ಪೊಲೀಸ್​ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಪುಲ್ವಾಮಾ ಜಿಲ್ಲೆಯ ಗೂಸು ಗ್ರಾಮದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ.

 Delhi Coronavirus Updates: ದೆಹಲಿಯಲ್ಲಿ ಕೋವಿಡ್​​-19 ಕಾವು: ಒಂದೇ ದಿನ 1,379 ಕೇಸ್​​ ಪತ್ತೆ, ಒಂದು ಲಕ್ಷದ ಗಡಿ ದಾಟಿದ ಸೋಂಕಿತರ ಸಂಖ್ಯೆಉಗ್ರರು ಅಡಗಿ ಕುಳಿತಿದ್ದಾರೆ ಎಂಬ ಗುಪ್ತಚರ ಇಲಾಖೆಯ ಖಚಿತ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿ ಗೂಸು ಗ್ರಾಮದಲ್ಲಿ ಶೋಧ ಕಾರ್ಯಾಚರಣೆಯನ್ನು ಕೈಗೊಂಡಿದ್ದರು ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.
Youtube Video

ಬಳಿಕ ಶೋಧ ಕಾರ್ಯಾಚರಣೆ ಎನ್​ಕೌಂಟರ್​ಗೆ ತಿರುಗಿತು. ಈ ವೇಳೆ ಉಗ್ರರು ಮತ್ತು ಭದ್ರತಾ ಸಿಬ್ಬಂದಿ ನಡುಗೆ ಗುಂಡಿನ ಚಕಮಕಿ ನಡೆಯಿತು. ಈ ದಾಳಿಯಲ್ಲಿ ಭಾರತೀಯ ಸೇನೆ ಓರ್ವ ಉಗ್ರನನ್ನು ಹತ್ಯೆ ಮಾಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 
Published by: Latha CG
First published: July 7, 2020, 9:34 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories