• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Syria Earthquake: ಪ್ಲೀಸ್​, ನನ್ನ ತಮ್ಮನನ್ನು ಕಾಪಾಡಿ, ನೀವು ಹೇಳಿದಂತೆ ಕೇಳ್ತೇನೆ, ಕುಸಿದ ಕಟ್ಟಡದಡಿ ಸಿಲುಕಿದ ಪುಟ್ಟ ಬಾಲಕಿ ಮನವಿ!

Syria Earthquake: ಪ್ಲೀಸ್​, ನನ್ನ ತಮ್ಮನನ್ನು ಕಾಪಾಡಿ, ನೀವು ಹೇಳಿದಂತೆ ಕೇಳ್ತೇನೆ, ಕುಸಿದ ಕಟ್ಟಡದಡಿ ಸಿಲುಕಿದ ಪುಟ್ಟ ಬಾಲಕಿ ಮನವಿ!

ತಮ್ಮನ್ನನ್ನು ಕಾಪಾಡುವಂತೆ ಸಹೋದರಿ ಮನವಿ

ತಮ್ಮನ್ನನ್ನು ಕಾಪಾಡುವಂತೆ ಸಹೋದರಿ ಮನವಿ

ಸಿರಿಯಾದಲ್ಲಿ ಭೂಕಂಪ ಸಂಭವಿಸಿ ಸಾವಿರಾರು ಕಟ್ಟಡಗಳು ಕುಸಿದಿದ್ದು, ಕಟ್ಟಡವೊಂದರ ಅವಶೇಷದಡಿ ಏಳು ವರ್ಷದ ಬಾಲಕಿ ಹಾಗೂ ಆಕೆಯ ಕಿರಿಯ ಸಹೋದರ ಕೂಡ ಸಿಲುಕಿದ್ದಾರೆ. ಆದರೆ ಇಂತಹ ಕಷ್ಟದ ಸಂದರ್ಭದಲ್ಲೂ ತಮ್ಮನ ಜವಾಬ್ದಾರಿ ತೆಗೆದುಕೊಂಡಿರುವ ಬಾಲಕಿ, ಪುಟ್ಟ ಮಗುವಿನ ತಲೆಯನ್ನು ತನ್ನ ಕೈಯಲ್ಲಿ ಹಿಡಿಕೊಂಡು ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾಳೆ.

ಮುಂದೆ ಓದಿ ...
  • Share this:

ಸಿರಿಯಾ : ಸಿರಿಯಾ ಮತ್ತು ಟರ್ಕಿಯಲ್ಲಿ (Syria and and Turkey)  ಭೂಕಂಪ (Earthquake) ಸಂಭವಿಸಿ ಸುಮಾರು 9 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 15 ರಿಂದ 20 ಸಾವಿರಕ್ಕೂ ಹೆಚ್ಚು ಮಂದಿ ದುರಂತದಲ್ಲಿ ಗಾಯಗೊಂಡಿದ್ದಾರೆ. ಎರಡು ದಿನಗಳಿಂದ ರಕ್ಷಣಾ ಕಾರ್ಯ ನಡೆಯುತ್ತಲೇ ಇದೆ. ಟರ್ಕಿಯಲ್ಲಿ ಈವರೆಗೆ ಮೂರು ಬಾರಿ ಭೂಮಿ ಕಂಪಿಸಿದೆ. ಸಾವಿರಾರು ಕಟ್ಟಡಗಳು ಕುಸಿದಿದ್ದು, ಇನ್ನೂ ಅದೆಷ್ಟೋ ಮಂದಿ ಅವಶೇಷಗಳ ಅಡಿಯಲ್ಲಿ ಸಿಲಿಕಿದ್ದಾರೋ ಗೊತ್ತಿಲ್ಲ. ಈಗಾಗಲೇ ಭಾರತ (India) ಸೇರಿದಂತೆ ಹಲವು ರಾಷ್ಟ್ರಗಳು ಟರ್ಕಿ ಮತ್ತು ಸಿರಿಯಾದಲ್ಲಿ ಶೋಧ ಕಾರ್ಯ ಮತ್ತು ರಕ್ಷಣೆಗೆ ಕೈ ಜೋಡಿಸಿವೆ. ರಕ್ಷಣ ಕಾರ್ಯದ ವೇಳೆ ಕೆಲವು ಕಣ್ಣೀರಿಗೆ ಕಾರಣವಾಗುವ ಘಟನೆಗಳು ನಡೆದಿವೆ. ಸಿರಿಯಾದಲ್ಲಿ 7 ವರ್ಷದ ಪುಟ್ಟ ಮಗುವೊಂದು ಕುಸಿದ ಕಟ್ಟಡಗಳಲ್ಲಿ ಸಿಲುಕಿದ್ದು, ತನ್ನನ್ನು ಮತ್ತು ತನ್ನ ತಮ್ಮನ್ನು ಕಾಪಾಡುವಂತೆ ಬೇಡಿ ಕೊಳ್ಳುತ್ತಿರುವ ಘಟನೆ ಎಂತಹವರ ಮನಸ್ಸು ಒಂದು ಕ್ಷಣ ಕರಗುವಂತೆ ಮಾಡುತ್ತದೆ. ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ.


ತಮ್ಮನನ್ನು ರಕ್ಷಿಸುವಂತೆ ಮನವಿ ಮಾಡಿ ಬಾಲಕಿ


ಭೂಕಂಪ ಸಂಭವಿಸಿ ಸಾವಿರಾರು ಕಟ್ಟಡಗಳು ಕುಸಿದಿದ್ದು, ಈ ಏಳು ವರ್ಷದ ಬಾಲಕಿ ಹಾಗೂ ಆಕೆಯ ಕಿರಿಯ ಸಹೋದರ ಕೂಡ ಸಿಲುಕಿದ್ದಾರೆ. ಆದರೆ ಇಂತಹ ಕಷ್ಟದ ಸಂದರ್ಭದಲ್ಲೂ ತಮ್ಮನ ಜವಾಬ್ದಾರಿ ತೆಗೆದುಕೊಂಡಿರುವ ಬಾಲಕಿ, ಪುಟ್ಟ ಮಗುವಿನ ತಲೆಯನ್ನು ತನ್ನ ಕೈಯಲ್ಲಿ ಹಿಡಿಕೊಂಡು ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾಳೆ. ರಕ್ಷಣಾ ಕಾರ್ಯಾಚರಣೆ ವೇಳೆ ಮನ ಕಲಕುವ ಘಟನೆ ನಡೆದಿದ್ದು, ಇವರನ್ನು ನೋಡಿದವರು ರಕ್ಷಣಾ ತಂಡದ ಗಮನಕ್ಕೆ ತಂದಿದ್ದಾರೆ. ಇದೀಗ ಈ ಫೋಟೋವನ್ನು ಯುಎನ್ ಪ್ರತಿನಿಧಿ ಮೊಹಮ್ಮದ್ ಸಫಾ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


17 ಗಂಟೆ ಅವಶೇಷಗಳಡಿಯಲ್ಲೇ ಇದ್ದ ಪುಟಾಣಿಗಳು


ಸೋಮವಾರ ಸಿರಿಯಾದಲ್ಲಿ ಭೂಕಂಪದ ಸಂಭವಿಸಿ ಹಲವು ಕಟ್ಟಡಗಳು ಕುಸಿದಿವೆ. ಈ ಪುಟಾಣಿಗಳು ಆ ಕಟ್ಟಡಗಳ ಕೆಳಗೆ ಬರೋಬ್ಬರಿ 17 ಗಂಟೆಗಳ ಕಾಲ ಸಿಲುಕಿ ಒದ್ದಾಡಿವೆ. ನೀರು, ಆಹಾರ ಇಲ್ಲದ ಈ ಇಬ್ಬರೂ ಮಕ್ಕಳು ಅವಶೇಷಗಳಡಿಯಲ್ಲಿ 17 ಗಂಟೆ ಕಳೆದು ಬದುಕುಳಿದಿರುವುದು ನಿಜಕ್ಕೂ ಅವರ ಅದೃಷ್ಟ ಎನ್ನಬಹುದು.


ಇದನ್ನೂ ಓದಿ: Turkey Earthquake: ಭೂಕಂಪಕ್ಕೆ ಉರುಳಿಬಿದ್ದ ಕಟ್ಟಡದ ಅವಶೇಷಗಳಡಿ ಮಗುವಿಗೆ ಜನ್ಮ ನೀಡಿ ಮಹಿಳೆ ಮೃತ್ಯು!


ನಮ್ಮನ್ನು ಕಾಪಾಡಿ ನೀವೇಳಿದಂತೆ ಕೇಳುತ್ತೇನೆ


ಈ ಮಕ್ಕಳನ್ನು ಕಂಡವರು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆ ಸಂದರ್ಭದಲ್ಲಿ ತನ್ನ ತಮ್ಮನನ್ನು ಅಪ್ಪಿಕೊಂಡಿರುವ 7 ವರ್ಷಕ್ಕೂ ಚಿಕ್ಕದಾಗಿರುವ ಬಾಲಕಿ, " ದಯವಿಟ್ಟು ನಮ್ಮನ್ನು ಇಲ್ಲಿಂದ ಹೊರ ತೆಗೆಯಿರಿ, ನಾನು ನೀವು ಹೇಳಿದಂತೆ ಕೇಳುತ್ತೇನೆ, ನಿಮ್ಮ ಮನೆ ಕೆಲಸದವಳಾಗಿ ಇರುತ್ತೇನೆ " ಎಂದು ಆ ವ್ಯಕ್ತಿಗೆ ಹೇಳಿದೆ. ನಿಜಕ್ಕೂ ಪುಟ್ಟ ಬಾಲಿಕಿಯ ಈ ಮಾತು ಎಂತಹ ಕಲ್ಲು ಹೃದಯದವರನ್ನು ಕಣ್ಣೀರುಡುವಂತೆ ಮಾಡುತ್ತದೆ. ಈ ವಿಡಿಯೋವನ್ನು ಮೊಹಮ್ಮದ್​ ಸ್ಮಿರಿ ಎಂಬುವವರು ಶೇರ್ ಮಾಡಿದ್ದು, ಸುಮಾರು 37 ಲಕ್ಷ ವೀಕ್ಷಣೆ ಬಂದಿದೆ. 4,000 ಸಾವಿರಕ್ಕೂ ಹೆಚ್ಚು ಜನ ಆ ಮಕ್ಕಳಿಗೆ ಏನು ಆಗದಿರಲಿ ಎಂದು ಪ್ರಾರ್ಥಿಸಿ ಕಮೆಂಟ್ ಮಾಡುತ್ತಿದ್ದಾರೆ.




ಇಬ್ಬರು ಮಕ್ಕಳ ರಕ್ಷಣೆ


ವಿಡಿಯೋ ಟ್ವೀಟ್ ಮಾಡಿರುವ ವ್ಯಕ್ತಿಯೇ ಮತ್ತೊಂದು ಟ್ವೀಟ್​ನಲ್ಲಿ, ಇಬ್ಬರು ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಆದರೆ ಆ ಮಕ್ಕಳ ಕುಟುಂಬಸ್ಥರು ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದರ ಬಗ್ಗೆ ಇನ್ನೂ ಖಚಿತ ಮಾಹಿತಿ ಹೊರಬಿದ್ದಿಲ್ಲ.


ಪುಟ್ಟ ಸಹೋದರಿಯ ದಿಟ್ಟತನಕ್ಕೆ ಸಲಾಂ ಎಂದ ನೆಟ್ಟಿಗರು


ಈ ಇಬ್ಬರು ಪುಟ್ಟ ಮಕ್ಕಳ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟಿಜನ್‌ಗಳು ಇಬ್ಬರು ಮಕ್ಕಳಿಗೆ ಏನು ಆಗದಿರಲಿ ಎಂದು ಪ್ರಾರ್ಥಿಸಿದ್ದಾರೆ. ಈ ಪುಟ್ಟ ಹೃದಯಗಳು ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ಹೊಂದಲಿ ಆಶಿಸುತ್ತಿದ್ದಾರೆ. " ಇದೊಂದು ಪವಾಡವಾಗಿದೆ, ಆ ಪುಟ್ಟ ಸಹೋದರಿ ಅಂತಹ ಒತ್ತಡದ ಸಂದರ್ಭಗಳಲ್ಲಿ ತಮ್ಮನನ್ನು ಪ್ರೀತಿಯಿಂದ ರಕ್ಷಿಸಿದ್ದಾಳೆ. ಕಠಿಣ ಸಂದರ್ಭದಲ್ಲಿ ದಣಿವರಿಯಿಲ್ಲದೆ ಕೆಲಸ ಮಾಡುತ್ತಿರುವ ಎಲ್ಲಾ ರಕ್ಷಣ ತಂಡದವರಿಗೆ ನಾವೆಲ್ಲರೂ ಗೌರವಿಸೋಣ " ಎಂದು ಟ್ವಿಟರ್ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ.



ಪ್ರತೀ ಮಹಿಳೆಯರಲ್ಲೂ ಮಾತೃ ಹೃದಯವಿದೆ


ಮಹಿಳೆ ಸ್ವಾಭಾವಿಕವಾಗಿಯೇ ರಕ್ಷಕರು, ವೈದ್ಯರು, ಪ್ರೇಮಿಗಳಾಗಿರುತ್ತಾರೆ. ಅವರು ಮಕ್ಕಳಿಗೆ ಜನ್ಮ ನೀಡಿರುವವರಾದರೂ ಅಥವಾ ನೀಡಿಲ್ಲದವರಾದರೂ ಅವರಲ್ಲಿ ತಾಯಿಯ ಪ್ರವೃತ್ತಿಯನ್ನು ಇರುತ್ತದೆ. ಅದೇ ಕಾರಣಕ್ಕಾಗಿ ಮಹಿಳೆಯರಿಗೆ ಗರ್ಭವನ್ನು ನೀಡಲಾಗಿದೆ " ಎಂದು ಮತ್ತೊಬ್ಬರು ಟ್ವೀಟ್​ಗೆ ಪ್ರತಿಕ್ರಿಯೆ ಮಾಡಿದ್ದಾರೆ. " ಅಕ್ಕ ಎನಿಸಿಕೊಂಡವಳು ಮಾಡುವ ಕೆಲಸವನ್ನು ಅವಳು ಮಾಡಿದ್ದಾಳೆ. ಈ ಘಟನೆ ಅವಳು ಎಷ್ಟರ ಮಟ್ಟಿಗೆ ತಮ್ಮನನ್ನು ಪ್ರೀತಿಸುತ್ತಾಳೆ ಎನ್ನುವುದನ್ನು ತೋರಿಸಿದೆ. ಟರ್ಕಿ ಮತ್ತು ಸಿರಿಯಾ ಜನರಿಗೆ ನನ್ನ ಪ್ರಾರ್ಥನೆಯಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

Published by:Rajesha M B
First published: