News18 India World Cup 2019

"ಪಕ್ಕಾ ಮುಸ್ಲಿಂ" ಎಂದು ದೇಶದ ಬಾವುಟ ಹರಿದು ಗೂಸಾ ತಿಂದಿದ್ದವ ಹಿಂದೂ; ತನಿಖೆಯಲ್ಲಿ ಬಯಲಾಯ್ತು ಬಣ್ಣ

news18
Updated:August 23, 2018, 7:06 PM IST
news18
Updated: August 23, 2018, 7:06 PM IST
(ನವದೆಹಲಿ): ಈ ಬಾರಿಯ 72 ನೇ ಸ್ವಾತಂತ್ರ್ಯ ದಿನಾಚರಣೆಯ ಕೆಲವು ದಿನಗಳ ನಂತರ, ಆಕ್ಷೇಪಾರ್ಹ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್​ ಆಗಿತ್ತು.

ಹುಡುಗನೊಬ್ಬ ಭಾರತದ ಬಾವುಟವನ್ನು ಕೈಯಲ್ಲಿ ಹಿಡಿದು, ತಾನು 'ಪಕ್ಕಾ ಮುಸಲ್ಮಾನ್​​' ಎಂದು ಹೇಳುತ್ತಾ ಕೈಯಲ್ಲಿದ್ದ ಬಾವುಟವನ್ನು ಹರಿದು ಹಾಕಿದ್ದ. ಅಷ್ಟೇ ಅಲ್ಲದೇ  ಬಾವುಟವನ್ನು ಚೂರು ಮಾಡಿ ಬಿಸಾಡಿದ್ದ. ಟ್ವಿಟ್ಟರ್​ ಖಾತೆಯನ್ನು ನಿರ್ವಹಿಸುವ 'ಅನುಮಿಶ್ರಾಬಿಜೆಪಿ' ಈ ವೀಡಿಯೋವನ್ನು ಟ್ವಿಟ್ಟರ್​ ನಲ್ಲಿ ಪೋಸ್ಟ್​​ ಮಾಡಿದ್ದರು. ಇದು ಪತ್ರಕರ್ತ ರೋಹಿತ್ ಸರ್ದನ ಅವರ ಫೇಕ್​ ಅಕೌಂಟ್​ ಆಗಿದ್ದು, ಬಿಜೆಪಿ ನಾಯಕ ತಿಜೇಂದರ್​ ಸಿಂಗ್​ ಬಗ್ಗ ಎಂಬ ಒಬ್ಬ ಫಾಲೋವರ್​ ಇದ್ದಾರೆ.ಈ ವೀಡಿಯೋ ಟ್ವಿಟ್ಟರ್​ ಮತ್ತು ಫೇಸ್​ಬುಕ್​ಲ್ಲಿ ಹೆಚ್ಚು ವೈರಲ್​ ಆಗಿ ಕೋಮು ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು.  20 ಸಾವಿರಕ್ಕಿಂತಲೂ ಹೆಚ್ಚು ಬಾರಿ ರಿಟ್ವೀಟ್​ ಆಗಿತ್ತು. ಈ ವೀಡಿಯೋದಲ್ಲಿ ಬಾವುಟ ಹರಿದು ಹಾಕಿದ ಹುಡುಗನಿಗೆ ಹೊಡೆಯುವ ದೃಶ್ಯವನ್ನು ಸೆರೆಹಿಡಿಯಲಾಗಿತ್ತು. ನಂತರದ ವೀಡಿಯೋದಲ್ಲಿ ಆ ಹುಡುಗ 'ನಾನು ಹಿಂದೂ ಧರ್ಮದವನು' ಎಂದು ಹೇಳಿದ್ದಾನೆ.ಈ ಎಲ್ಲಾ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ವೈರಲ್​ ಆಗಿದ್ದವು. ಸುದರ್ಶನ್​ ನ್ಯೂಸ್​ನ ಸುದೇಶ್​​ ಚಾವಂಕೆ ಸೇರಿದಂತೆ, ಹಲವಾರು ಪತ್ರಕರ್ತರು ಮತ್ತು ಮಾಧ್ಯಮದವರು ಈ ವೀಡಿಯೋವನ್ನು ಶೇರ್ ಮಾಡಿದ್ದರು.ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು, ವೀಡಿಯೋ ಮಾಡಿರುವ ಹುಡುಗರನ್ನು ಪತ್ತೆ ಹಚ್ಚಿದ್ದಾರೆ. ಆ ಹುಡುಗ ಮುಸ್ಲಿಂ ಅಲ್ಲ, ಹಿಂದೂ ಹುಡುಗ. ತಮಾಷೆಗಾಗಿ ಆತ ಹಾಗೆ ಮಾಡಿರಬೇಕು ಎಂದು 'ಟೈಮ್ಸ್​ ಆಫ್​ ಇಂಡಿಯಾ' ವರದಿ ಮಾಡಿದೆ. ಅಷ್ಟೇ ಅಲ್ಲದೇ ಅಧಿಕಾರಿಗಳು ಆ ಹುಡುಗರ ಮನೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಪೋಸಕರು ಕ್ಷಮೆಯಾಚಿಸಿದ ನಂತರ, ಮುಂದೆ ಇಂತಹ ಕೋಮು ಪ್ರಚೋದಕ ಕೃತ್ಯಗಳನ್ನು ಎಸಗದಂತೆ ಎಚ್ಚರಿಕೆ ನೀಡಿದ್ದಾರೆ.ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್​ ಆಗಿತ್ತು. ಇಂದಿನ ಯುವಜನತೆ ಇಂತಹ ಕೋಮು ಪ್ರಚೋದಕ ಕೃತ್ಯಗಳಲ್ಲಿ ತೊಡಗಿರುವುದು ಗಂಭೀರ ವಿಷಯವಾಗಿದೆ.
First published:August 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...