ಸಾರ್, ಹಾವು ಹಿಡಿಸಿಕೊಡಿ: ರಾತ್ರೋರಾತ್ರಿ ಮುಖ್ಯಮಂತ್ರಿಗೇ ಫೋನ್ ಮಾಡಿದ ಭೂಪ..!

ಇದಕ್ಕೆ ಸ್ಪಂದಿಸಿದ ಸಿಎಂ ಭಯ ಪಡಬೇಡಿ, ಹಾವನ್ನು ಹಿಡಿಯಲಿಕ್ಕೆ ಜನರನ್ನು ನಾನು ಕಳಿಸುತ್ತೇನೆ ಎಂದು ಭರವಸೆ ನೀಡುತ್ತಾರೆ. ಸಿಎಂ ಫೋನ್​​ ಕಟ್​ ಮಾಡಿದ ಕೆಲವೇ ಕ್ಷಣಗಳಲ್ಲಿ ರಾಜ ಮನೆಗೆ ಇಬ್ಬರು ಅರಣ್ಯ ಅಧಿಕಾರಿಗಳು ಬರುತ್ತಾರೆ. ನಂತರ ಹಾವನ್ನು ಹಿಡಿದು ಹೊರಡುತ್ತಾರೆ.

Ganesh Nachikethu
Updated:December 6, 2018, 7:54 PM IST
ಸಾರ್, ಹಾವು ಹಿಡಿಸಿಕೊಡಿ: ರಾತ್ರೋರಾತ್ರಿ ಮುಖ್ಯಮಂತ್ರಿಗೇ ಫೋನ್ ಮಾಡಿದ ಭೂಪ..!
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಡಿ.06): ಏಕಾಏಕಿ ಮಧ್ಯರಾತ್ರಿ ಸಿಎಂಗೆ ಪೋನಾಯಿಸಿದ ವ್ಯಕ್ತಿಯೊಬ್ಬ... ‘ಹಲೋ ಸಾ ನಮ್ಮ ಮನೆಯಲ್ಲಿ ಹಾವು ಸೇರಿಕೊಂಡಿದೆ.. ದಯವಿಟ್ಟು ಸಹಾಯ ಮಾಡಿ ಸಾರ್​ ಎಂದು ಕೇಳಿದ. ಅದು ಡೇ ಟೈಮ್​ನಲ್ಲಿ ಅಲ್ಲ, ಮಧ್ಯರಾತ್ರಿಯಲ್ಲಿ.. ಈ ಮಧ್ಯರಾತ್ರಿ ವೇಳೆಯೂ ಅಪರಿಚಿತ ವ್ಯಕ್ತಿಯ ಕಾಲ್​​ಗೆ ಸ್ಪಂದಿಸಿದ ಮುಖ್ಯಮಂತ್ರಿ, ಈಗ ನಾಡಿನ ಜನತೆಯ ನೆಚ್ಚಿನ ನಾಯಕ. ಅಷ್ಟಕ್ಕೂ ಈ ಘಟನೆ ನಡೆದಿದ್ದು, ಎಲ್ಲಿ ಅಂತೀರಾ? ಪುದುಚೇರಿಯಲ್ಲಿ.

ಪುದುಚೇರಿಯಲ್ಲಿನ ಅರಿಯಾಂ ಕುಪ್ಪುವ ಎಂಬ ಪ್ರಾಂತ್ಯದಲ್ಲೊಬ್ಬ ವ್ಯಾಪರಿ. ಈತನ ಹೆಸರು ರಾಜ, ಹೆಂಡತಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ. ನಿನ್ನೆಯಲ್ಲ ಮೊನ್ನೆ(ಮಂಗಳವಾರ) ರಾತ್ರಿ ರಾಜ ಕೆಲಸದ ನಿಮಿತ್ತ ಮನೆಯಿಂದ ಹೊರಗೆ ತೆರಳಿದ್ದಾನೆ. ಆತನ ಹೆಂಡತಿ ವಿಜಯ ಜೊತೆಗೆ ಇಬ್ಬರು ಮಕ್ಕಳು ಮನೆಯಲ್ಲಿ ನಿದ್ರೆಗೆ ಜಾರಿದ್ದಾರೆ. ಮಧ್ಯರಾತ್ರಿ ವೇಳೆ ಅಡುಗೆ ಕೋಣೆಯಿಂದ ದಿಢೀರ್​ ಶಬ್ದ ಕೇಳಿ ಬಂದಿದೆ. ಈ ವೇಳೆ ವಿಜಯ ಎದ್ದು ಕೋಣೆಯತ್ತ ಹೋಗುತ್ತಾರೆ.

ಅಡುಗೆ ಕೋಣೆಯೊಳಗಿನ ಲೈಟ್​ ಹಾಕಿ ನೋಡಿದ್ರೆ, ಐದು ಇಂಚಿನ ಕರಿ ಹಾವೊಂದು ಕಾಣಿಸಿಕೊಂಡಿದೆ. ಹಾವನ್ನು ಕಂಡ ಕೂಡಲೇ ಹೆಸರಿದ ಈಕೆ ತನ್ನ ಮಕ್ಕಳೊಂದಿಗೆ ಮನೆಯಿಂದ ಕಾಲ್ಕಿತ್ತಿದ್ದಾಳೆ. ಅಲ್ಲದೇ ಹಾವು.. ಹಾವು ನೋಡಿ ಬನ್ನಿ ಎಂದು ದಂಗಾಗಿ ಕಿರುಚಾಡಿದ್ದಾಳೆ. ಈಕೆ ಎಷ್ಟೇ ಕೂಗಾಡಿದರೂ ಮಧ್ಯರಾತ್ರಿಯಾದ ಕಾರಣ ಯಾರು ಕೂಡ ಸಹಾಯಕ್ಕೆ ಬಂದಿಲ್ಲ. ಏನು ಮಾಡಬೇಕೆಂದು ಅರಿಯದೇ ಸೀದಾ ಗಂಡ ರಾಜನಿಗೆ ಫೋನಾಯಿಸಿ ವಿಚಾರ ತಿಳಿಸುತ್ತಾರೆ.

ಇದನ್ನೂ ಓದಿ: ವೇಗದ ಜಿಡಿಪಿ ಅಭಿವೃದ್ಧಿ: ಟಾಪ್-20 ಪಟ್ಟಿಯಲ್ಲಿ ಭಾರತದ 17 ನಗರಗಳು; ಬೆಂಗಳೂರು ನಂ. 3

ಇನ್ನೊಂದೆಡೆ ಪೊಲೀಸರಿಗೆ ಫೋನಾಯಿಸಿದ ರಾಜು ಮಗ ವಸಂತ್​​ ಸಹಾಯಕ್ಕೆ ಬರುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಪೊಲೀಸರು ಹಾವು ಹಿಡಿಯುವ ಕೆಲಸ ನಮ್ಮದಲ್ಲವೆಂದು ಹೇಳಿ ಉರಗ ತಜ್ಞರ ನಂಬರ್​​ ನೀಡಿದ್ದಾರೆ. ಈ ನಂಬರ್​ಗೆ ಎಷ್ಟೇ ಬಾರಿ ಕಾಲ್​ ಮಾಡಿದರೂ ತೆಗೆಯುವುದಿಲ್ಲ. ಇದರಿಂದ ತಬ್ಬಿಬ್ಬಾಗಿ ದಿಕ್ಕು ತೋಚದೆ ಸರ್ಕಾರಿ ಅಧಿಕಾರಿಗಳಿಗೆ ವಿಚಾರ ತಿಳಿಸಲು ಮುಂದಾಗುತ್ತಾರೆ.

ಹೀಗಾಗಿ ಸರ್ಕಾರದ ಟೆಲಿಪೋನ್​​ ಡೈರಿ ತೆಗೆದು ಅದರಲಿದ್ದ ಮೊದಲನೇ ನಂಬರ್​​ಗೆ ಫೋನಾಯಿಸುತ್ತಾರೆ. ಸರ್ಕಾರದ ಅಧಿಕೃತ ಟೆಲಿಪೋನ್​ ಡೈರಿಯಲ್ಲಿ ಮೊದಲ ನಂಬರ್​​ ಮುಖ್ಯಮಂತ್ರಿಗಳದ್ದೇ ಇರುತ್ತದೆ. ಇದು ಗೊತ್ತಿಲ್ಲದೇ ಸಿಎಂ ವಿ.ನಾರಾಯಣ ಸ್ವಾಮಿಯವರಿಗೆ ಫೋನ್​ ಮಾಡಿದ ವಸಂತ್​​, ತೆಗೆಯುತ್ತಾರೋ ಇಲ್ಲವೋ ಎಂಬ ಭೀತಿಯಲ್ಲಿದ್ದ. ದಿಢೀರ್​ ಸಿಎಂ ಕಾಲ್​ ರಿಸೀವ್​ ಮಾಡಿದ್ದೇ ತಡ, ಸಾರ್​​ ನಮ್ಮ ಮನೆಯಲ್ಲಿ ಹಾವು ಸೇರಿಕೊಂಡಿದೆ. ಪೊಲೀಸರಿಗೆ ಪೋನ್​ ಮಾಡಿದೆವು, ಉರಗತಜ್ಞರಿಗೆ ಪೋನಾಯಿಸಿದೆವು ಯಾರು ಸ್ಪಂದಿಸುತ್ತಿಲ್ಲ. ಹೀಗಾಗಿ ನಿಮಗೆ ಪೋನ್​ ಮಾಡಿದೆವು. ಸಹಾಯ ಮಾಡಿ ಸಾರ್​ ಎನ್ನುತ್ತಾನೆ.

ಇದನ್ನೂ ಓದಿ: ಸಿಎಂ ಕುಟುಂಬದ ಅಕ್ರಮದ ವಿರುದ್ಧ ಸಿಎಂ ಬಳಿಯೇ ದೂರುಇದಕ್ಕೆ ಸ್ಪಂದಿಸಿದ ಸಿಎಂ ಭಯ ಪಡಬೇಡಿ, ಹಾವನ್ನು ಹಿಡಿಯಲಿಕ್ಕೆ ಜನರನ್ನು ನಾನು ಕಳಿಸುತ್ತೇನೆ ಎಂದು ಭರವಸೆ ನೀಡುತ್ತಾರೆ. ಸಿಎಂ ಫೋನ್​​ ಕಟ್​ ಮಾಡಿದ ಕೆಲವೇ ಕ್ಷಣಗಳಲ್ಲಿ ರಾಜ ಮನೆಗೆ ಇಬ್ಬರು ಅರಣ್ಯ ಅಧಿಕಾರಿಗಳು ಬರುತ್ತಾರೆ. ನಂತರ ಹಾವನ್ನು ಹಿಡಿದು ಹೊರಡುತ್ತಾರೆ. ಬಳಿಕ ಇದರಿಂದ ಎಚ್ಚೆತ್ತ ಸಿಎಂ ವಿ. ನಾರಾಯಣ ಸ್ವಾಮಿಯವರು ಸುತ್ತಮುತ್ತ ಪ್ರಾಂತ್ಯದಲ್ಲಿರುವ ಎಲ್ಲಾ ಹಾವುಗಳ ಹುತ್ತಗಳನ್ನು ತೆರವುಗೊಳಿಸುವಂತೆ ಆದೇಶಿಸುತ್ತಾರೆ ಎನ್ನಲಾಗಿದೆ.

-----------------
ನಾಪತ್ತೆಯಾಗಿದ್ದ ಅಶೋಕ ಆನೆ ಪತ್ತೆ
First published:December 6, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading