HOME » NEWS » National-international » PUDUCHERRY CMS WRONG TRANSLATION OF WOMANS COMPLAINT TO RAHUL GANDHI GOES VIRAL STG MAK

Rahul Gandhi: ರಾಹುಲ್‌ ಗಾಂಧಿಗೆ ಮಹಿಳೆ ಹೇಳಿದ ದೂರನ್ನು ತಪ್ಪಾಗಿ ಅನುವಾದಿಸಿದ ಪುದುಚೇರಿ ಸಿಎಂ!

ನಿನ್ನೆ ರಾಹುಲ್‌ ಗಾಂಧಿ ಅವರು ಪುದುಚೇರಿಯಲ್ಲಿ ನಡೆದ ಮೀನುಗಾರರ ಸಂವಾದಾತ್ಮಕ ಅಧಿವೇಶನ ನಡೆಸಿದರು. ಈ ವೇಳೆ ಮೀನುಗಾರರು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಕಾಂಗ್ರೆಸ್‌ ಹಿರಿಯ ನಾಯಕ ರಾಹುಲ್‌ ಗಾಂಧಿ ಅನುವು ಮಾಡಿಕೊಟ್ಟರು.

digpu-news-network
Updated:February 18, 2021, 5:01 PM IST
Rahul Gandhi: ರಾಹುಲ್‌ ಗಾಂಧಿಗೆ ಮಹಿಳೆ ಹೇಳಿದ ದೂರನ್ನು ತಪ್ಪಾಗಿ ಅನುವಾದಿಸಿದ ಪುದುಚೇರಿ ಸಿಎಂ!
ಪಾಂಡಿಚೇರಿಯ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ.
  • Share this:
ಪಾಂಡಿಚೇರಿ:‘ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನಿನ್ನೆ ಪುದುಚೇರಿ ಪ್ರವಾಸ ಮಾಡಿದ್ದರು. ಈ ವೇಳೆ ರಾಹುಲ್‌ ಗಾಂಧಿ ಇಂಗ್ಲಿಷ್‌ನಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸಾಮಿ ತಪ್ಪು ಅನುವಾದ ಮಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ರಾಹುಲ್ ಗಾಂಧಿ ಅವರು ಈ ಹಿಂದೆ ತಮಿಳುನಾಡಿನಲ್ಲಿಯೂ ಕೂಡ ಇಂಗ್ಲಿಷ್‌ನಲ್ಲಿ ಮಾತನಾಡುವ ವೇಳೆ ತಮಿಳಿಗೆ ಅನುವಾದ ಮಾಡುವ ವ್ಯಕ್ತಿಯೊಬ್ಬರು ತಪ್ಪಾಗಿ ಅನುವಾದಿಸಿದ್ದರು.

ನಿನ್ನೆ ರಾಹುಲ್‌ ಗಾಂಧಿ ಅವರು ಪುದುಚೇರಿಯಲ್ಲಿ ನಡೆದ ಮೀನುಗಾರರ ಸಂವಾದಾತ್ಮಕ ಅಧಿವೇಶನ ನಡೆಸಿದರು. ಈ ವೇಳೆ ಮೀನುಗಾರರು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಕಾಂಗ್ರೆಸ್‌ ಹಿರಿಯ ನಾಯಕ ರಾಹುಲ್‌ ಗಾಂಧಿ ಅನುವು ಮಾಡಿಕೊಟ್ಟರು. ಮೊದಲಿಗೆ ವಯಸ್ಸಾದ ಮೀನುಗಾರ ಮಹಿಳೆಯೊಬ್ಬರು ತಮಿಳಿನಲ್ಲಿ ರಾಹುಲ್‌ ಗಾಂಧಿ ಅವರನ್ನು ಪ್ರಶ್ನೆ ಮಾಡಿದರು.

ಮಹಿಳೆ ದೂರು ಏನು?

ತಪ್ಪಾಗಿ ಅನುವಾದ ಮಾಡಿರುವ ಸಂಭಾಷಣೆ ಹೀಗಿದೆ. ನಮಗೆ ಯಾರು ಬೆಂಬಲ ನೀಡುತ್ತಿಲ್ಲ. ನಮಗೆ ಯಾರು ಸಹಾಯ ಮಾಡುತ್ತಿಲ್ಲ. ಸಮುದ್ರವೇ ನಮ್ಮ ಪಾಲಿಗೆ ಎಲ್ಲ ಆಗಿದೆ. ಉದಾಹರಣೆಗೆ ಇಲ್ಲಿನ ಮುಖ್ಯಮಂತ್ರಿಗಳನ್ನೆ ತೆಗೆದುಕೊಳ್ಳಿ. ನಿವಾರ್‌ (ಚಂಡಮಾರುತ) ವೇಳೆ ನೀವು ಇಲ್ಲಿಗೆ ಬಂದಿದ್ದೀರಾ ಎಂದು ಪ್ರಶ್ನಿಸಿದಳು.

ಆಗ ತಮಿಳಿನಿಂದ ಇಂಗ್ಲಿಷ್‌ಗೆ ಅನುವಾದ ಮಾಡಿದ ಸಿಎಂ ನಾರಾಯಣಸ್ವಾಮಿ, ನಿವಾರ್‌ ಚಂಡಮಾರುತ ಬಳಿಕ ನಾನು (ಸಿಎಂ ನಾರಾಯಣಸ್ವಾಮಿ) ಭೇಟಿ ಮಾಡಿದ್ದೇವೆ. ಆಗ ಅವರಿಗೆ ಪರಿಹಾರವನ್ನು ನೀಡಿದ್ದೇನೆ. ಆಕೆಯೂ ಅದನ್ನೆ ಹೇಳುತ್ತಿದ್ದಾಳೆ ಎಂದು ಅನುವಾದ ಮಾಡಿದ್ದರು. ಇದು ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಬಿಜೆಪಿ ನಾಯಕರು ಲೇವಡಿ!

ಇನ್ನು, ಈ ವಿಡಿಯೋವನ್ನು ಬಿಜೆಪಿ ನಾಯಕ ಸಿ,ಟಿ.ರವಿ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಸುಳ್ಳು ಹೇಳುವಲ್ಲಿ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಅವರೊಂದಿಗೆ ಸ್ಪರ್ಧಿಸುತ್ತಿದ್ದಾರೆಂದು ತೋರುತ್ತದೆ. ವಿಡಿಯೋದಲ್ಲಿ ತಮಿಳು ಭಾಷೆಯಲ್ಲಿ ಹಿರಿಯ ಮಹಿಳೆಯೊಬ್ಬರು ಚಂಡಮಾರುತದ ಸಮಯದಲ್ಲಿ ಸರ್ಕಾರ ನಮಗೆ ಸಹಾಯ ಮಾಡಲಿಲ್ಲ ಎಂದು ಪ್ರಶ್ನೆ ಮಾಡುತ್ತಾರೆ.ಇದನ್ನೂ ಓದಿ: ಎಲ್ಲದಕ್ಕೂ ದೇಶದ್ರೋಹ ಪ್ರಕರಣ ದಾಖಲಿಸಲು ಇದು ಭಾರತವಲ್ಲ, ಪಾಕಿಸ್ತಾನ!; ಪಾಕ್​ ನ್ಯಾಯಾಧೀಶನ ಹೇಳಿಕೆ

ಆಗ ಪುದುಚೇರಿ ಸಿಎಂ ನಾರಾಯಣಸ್ವಾಮಿ ಅವರು, ರಾಹುಲ್‌ ಗಾಂಧಿ ಅವರಿಗೆ ಚಂಡಮಾರುತದ ಸಮಯದಲ್ಲಿ ತನ್ನನ್ನು ಭೇಟಿ ಮಾಡಿ ಪರಿಹಾರ ನೀಡಿದ್ದಕ್ಕಾಗಿ ಅವರು ನನಗೆ ಧನ್ಯವಾದಗಳು ಹೇಳುತ್ತಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ ಎಂದು ಕಾಂಗ್ರೆಸ್‌ ನಾಯಕರನ್ನು ಬಿಜೆಪಿ ನಾಯಕರು ಲೇವಡಿ ಮಾಡಿದ್ದಾರೆ.
Youtube Video

ಈ ವಿಡಿಯೋ ಹಂಚಿಕೊಂಡ ಬಿಜೆಪಿ ನಾಯಕರು ರಾಹುಲ್‌ ಗಾಂಧಿಯನ್ನು ದಾರಿ ತಪ್ಪಿಸುತ್ತಿದ್ದಾರೆ. ವಿಡಿಯೋವನ್ನು ಪೋಸ್ಟ್‌ ಮಾಡಿ ಸಿಎಂ ನಾರಾಯಣಸಾಮಿ ಅವರನ್ನು ಟೀಕಿಸುತ್ತಿದ್ದಾರೆ. ಇನ್ನು, ಇತ್ತೀಚೆಗೆ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರಲು ಸಿದ್ಧರಾಗಿರುವ ಎ.ನಮಸ್ಸಿವಾಯಂ ಅವರು ಕೂಡ ಸಿಎಂ ವಿರುದ್ಧ ಕಿಡಿಕಾರಿದ್ದಾರೆ.
Published by: MAshok Kumar
First published: February 18, 2021, 4:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories