ಮನಮೋಹನ್​ ಸಿಂಗ್​-ರಘುರಾಮ್​ ರಾಜನ್​ ಆಡಳಿತಾವಧಿಯಲ್ಲಿ ಬ್ಯಾಂಕ್​ಗಳ ಸ್ಥಿತಿ ಶೋಚನೀಯವಾಗಿತ್ತು; ನಿರ್ಮಲಾ ಸೀತಾರಾಮನ್​

ಮಂಗಳವಾರ ಕೊಲಂಬಿಯಾ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಮತ್ತು ಸಾರ್ವಜನಿಕ ವ್ಯವಹಾರಗಳ ವಿಭಾಗದಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಸಾರ್ವಜನಿಕ ವಲಯಗಳಿಗೆ ಚೈತನ್ಯ ತುಂಬುವುದು ನನ್ನ ಆದ್ಯ ಕರ್ತವ್ಯ ಎಂದರು.

Rajesh Duggumane | news18-kannada
Updated:October 16, 2019, 1:49 PM IST
ಮನಮೋಹನ್​ ಸಿಂಗ್​-ರಘುರಾಮ್​ ರಾಜನ್​ ಆಡಳಿತಾವಧಿಯಲ್ಲಿ ಬ್ಯಾಂಕ್​ಗಳ ಸ್ಥಿತಿ ಶೋಚನೀಯವಾಗಿತ್ತು; ನಿರ್ಮಲಾ ಸೀತಾರಾಮನ್​
ನಿರ್ಮಲಾ ಸೀತಾರಾಮನ್
  • Share this:
ನ್ಯೂಯಾರ್ಕ್​: ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಹಾಗೂ ಆರ್​ಬಿಐ ಮಾಜಿ ಗವರ್ನರ್​ ರಘುರಾಮ್​ ರಾಜನ್​ ಅವರ ಆಡಳಿತಾವಧಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್​ಗಳು ದುಸ್ಥಿತಿ ತಲುಪಿದ್ದವು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದ್ದಾರೆ.

ಮಂಗಳವಾರ ಕೊಲಂಬಿಯಾ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಮತ್ತು ಸಾರ್ವಜನಿಕ ವ್ಯವಹಾರಗಳ ವಿಭಾಗದಲ್ಲಿ ಮಾತನಾಡಿದ ನಿರ್ಮಲಾ, ಸಾರ್ವಜನಿಕ ವಲಯಗಳಿಗೆ ಚೈತನ್ಯ ತುಂಬುವುದು ನನ್ನ ಆದ್ಯ ಕರ್ತವ್ಯ ಎಂದರು.

“ರಾಜನ್​ ಆರ್​ಬಿಐ ಗವರ್ನರ್​ ಆಗಿದ್ದ ಸಂದರ್ಭದಲ್ಲಿ ಪ್ರಭಾವಿಶಾಲಿ ವ್ಯಕ್ತಿಗಳಿಗೆ ಒಂದು ಫೋನ್​ ಕರೆ ಮೂಲಕ ಸಾಲ ಸಿಗುತ್ತಿತ್ತು. ಅದರಿಂದ ಉಂಟಾದ ತೊಂದರೆಗಳನ್ನು ಇನ್ನೂ ಎದುರಿಸಬೇಕಾಗುತ್ತಿದೆ” ಎಂದರು ಸೀತಾರಾಮನ್​.

ಮುಂದುವರಿದು, “ನಾನು ಯಾರ ಬಗ್ಗೆಯೂ ಟೀಕೆ ಮಾಡಲು, ತಮಾಷೆ ಮಾಡಲು ಈ ಮಾತನ್ನು ಹೇಳುತ್ತಿಲ್ಲ. ಮನಮೋಹನ್​ ಸಿಂಗ್​ ಹಾಗೂ ರಾಜನ್​ ಕಾಂಬಿನೇಷನ್​ನಲ್ಲಿ  ಬ್ಯಾಂಕ್​ಗಳು ಕಷ್ಟದ ದಿನಗಳನ್ನು ಎದುರಿಸಿದ್ದವು,’ ಎಂದು ಆರೋಪಿಸಿದರು. ದೇಶದ ಆರ್ಥಿಕತೆ ಬಗ್ಗೆ ಮಾತನಾಡಿದ್ದ ರಘುರಾಮ್​ ರಾಜನ್​, “ಮೋದಿ ಸರ್ಕಾರ ಆರ್ಥಿಕತೆಯನ್ನು ನೆಲಕ್ಕೆ ತಳ್ಳುವ ಕೆಲಸ ಮಾಡುತ್ತಿದೆ. ಅಧಿಕಾರ ಕೆಲವರ ಕೈಯಲ್ಲಿ ಕೇಂದ್ರೀಕೃತವಾಗಿದೆ” ಎಂದು ಟೀಕಿಸಿದ್ದರು.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್​ನಲ್ಲಿ ಸಿಲುಕಿದವರಿಗೆ ಮೂತ್ರ ಮಾಡಲು ಬಾಟಲಿ ಕೊಡ್ತಾರಾ?; ಹರಿದಾಡ್ತಿದೆ ಹೀಗೊಂದು ಸುದ್ದಿ

ಈ ಕಾರ್ಯಕ್ರಮದಲ್ಲಿ ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್​ ಪನಗರಿಯಾ, ಪ್ರೊ. ಜಗದೀಶ್​ ಭಾಗ್ವತಿ ಮತ್ತು ನ್ಯೂಯಾರ್ಕ್​ನಲ್ಲಿರುವ ಭಾರತದ ಕೌನ್ಸಿಲ್​ ಜನರಲ್​  ಸಂದೀಪ್​ ಚಕ್ರವರ್ತಿ ಕೂಡ ಪಾಲ್ಗೊಂಡಿದ್ದರು.

First published:October 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading