HOME » NEWS » National-international » PUBLIC HOLIDAY DECLARED IN TAMIL NADU DUE TO CYCLONE NIVAR SESR

Cyclone Nivar: ರಾಜ್ಯಾದ್ಯಂತ ನಾಳೆ ಸಾರ್ವತ್ರಿಕ ರಜೆ ಘೋಷಿಸಿದ ತಮಿಳುನಾಡು, ಪುದುಚೇರಿಯಲ್ಲಿ ನಿಷೇಧಾಜ್ಞೆ

ಪರಿಸ್ಥಿತಿ ನಿರ್ವಹಣೆಗೆ ಐದು ಪ್ರವಾಹ ಪರಿಹಾರ ತಂಡ ಮತ್ತು ಡೈವಿಂಗ್​ ತಂಡವನ್ನು ಭಾರತೀಯ ನೌಕಪಡೆ ಚೆನ್ನೈಗೆ ಕಳುಹಿಸಿದೆ. ರಾಮೇಶ್ವರಂ, ನಾಗಪಟ್ಟಣಂ, ಐಎನ್​ಎಸ್​ ಪರಂಡುನಲ್ಲಿ ಒಂದು ಪ್ರವಾಹ ಪರಿಹಾರ ತಂಡವನ್ನು ನಿಯೋಜಿಸಲಾಗಿದೆ.

news18-kannada
Updated:November 24, 2020, 5:06 PM IST
Cyclone Nivar: ರಾಜ್ಯಾದ್ಯಂತ ನಾಳೆ ಸಾರ್ವತ್ರಿಕ ರಜೆ ಘೋಷಿಸಿದ ತಮಿಳುನಾಡು, ಪುದುಚೇರಿಯಲ್ಲಿ ನಿಷೇಧಾಜ್ಞೆ
ಪುದುಚೇರಿ ಕಡಲ ತೀರ
  • Share this:
ಚೆನ್ನೈ (ನ.24): ತಮಿಳುನಾಡು ಕರಾವಳಿಗೆ ನಾಳೆ ನಿವಾರ್​ ಚಂಡಮಾರುತ ಅಪ್ಪಳಿಸಲಿದೆ. ಇದರ ಪರಿಣಾಮ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಭಾರೀ ಮಳೆಯಾಗಲಿದ್ದು. ಈಗಾಗಲೇ ಹೈ ಆಲರ್ಟ್​ ಘೋಷಣೆ ಮಾಡಲಾಗಿದೆ. ರಾಜ್ಯದ್ಯಾಂತ ರೆಡ್​ ಆಲರ್ಟ್​ ಘೋಷಣೆ ಮಾಡಿದರೂ, ಮುನ್ನೆಚ್ಚರಿಕಾ ಕ್ರಮವಾಗಿ ತಮಿಳುನಾಡು ಸರ್ಕಾರ ನಾಳೆ ರಾಜ್ಯಾದ್ಯಂತ ಸಾರ್ವತ್ರಿಕ ರಜೆ ಘೋಷಣೆ ಮಾಡಿದೆ. ಇನ್ನು ಪುದುಚೇರಿಯಲ್ಲಿ ಮುಂದಿನ ಮೂರು ದಿನ ಸೆಕ್ಷನ್​ 144 ನಿಷೇಧಾಜ್ಞೆಯನ್ನು ವಿಧಿಸಲಾಗಿದೆ. ಈ ನಿವಾರ್​ ಚಂಡ ಮಾರುತ ವಾಯುವ್ಯ ದಿಕ್ಕಿಗೆ ತೆರಳಿ ಕಾರೈಕಲ್​ ಮಮಲ್ಲಾಪುರಂ ಕರಾವಳಿ ಹಾದು ಹೋಗುವ ಸಾಧ್ಯತೆ ಇದೆ ಎಂದು ಹವಾಮಾಜ ಇಲಾಖೆ ತಿಳಿಸಿದೆ. ಚಂಡ ಮಾರುತದಿಂದ ಇಲ್ಲಿನ ವಿಲ್ಲುಪುರಂ, ಕಡಲೂರು, ಪುದುಚೇರಿ ಮತ್ತು ಚೆನ್ನೈನಲ್ಲಿ ಅತಿ ಹೆಚ್ಚು ಮಳೆಹಾನಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.ನಿವಾರ್​ ಚಂಡಮಾರುತ ಗಂಟೆಗೆ 5 ಕಿ.ಮೀ ವೇಗದಲ್ಲಿ ಬೀಸಲಿದೆ.
ನಿವಾರ್​ ಚಂಡಮಾರುತದ ಪರಿಣಾಮ ಆಂಧ್ರ ಪ್ರದೇಶದ ಕರಾವಳಯಲ್ಲಿಯೂ ಮಳೆಯಾಗುವ ಸಾಧ್ಯತೆ ಇದೆ. ರಾಯಲ ಸೀಮಾದ ಕೆಲವು ಭಾಗಗಳಲ್ಲಿ ಹೆಚ್ಚಿನ ಮಳೆಯಾಗಲಿದ್ದು ಈ ಹಿನ್ನಲೆ ಮುನ್ನೆಚ್ಚರಿಕೆ ವಹಿಸುವಂತೆ ಆಂಧ್ರ ಸರ್ಕಾರವನ್ನು ಎಚ್ಚರಿಸಲಾಗಿದೆ.


ಪರಿಸ್ಥಿತಿ ನಿರ್ವಹಣೆಗೆ ಐದು ಪ್ರವಾಹ ಪರಿಹಾರ ತಂಡ ಮತ್ತು ಡೈವಿಂಗ್​ ತಂಡವನ್ನು ಭಾರತೀಯ ನೌಕಪಡೆ ಚೆನ್ನೈಗೆ ಕಳುಹಿಸಿದೆ. ರಾಮೇಶ್ವರಂ, ನಾಗಪಟ್ಟಣಂ, ಐಎನ್​ಎಸ್​ ಪರಂಡುನಲ್ಲಿ ಒಂದು ಪ್ರವಾಹ ಪರಿಹಾರ ತಂಡವನ್ನು ನಿಯೋಜಿಸಲಾಗಿದೆ.

ರಾಜ್ಯದಲ್ಲೂ ಮಳೆ: 

ಹವಾಮಾನ ವೈಪರೀತ್ಯದ ಹಿನ್ನಲೆ ಬುಧವಾರ ಅಂದರೆ, ನ.25ರಿಂದ ಎರಡು ದಿನಗಳ ಕಾಲ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸೂಚನೆ ಇದೆ ಎಂದು  ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕ ಸಿ ಎಸ್ ಪಾಟೀಲ್ ತಿಳಿಸಿದ್ದಾರೆ. ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ, ಚಾಮರಾಜನಗರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಆಲರ್ಟ್​ ಘೋಷಣೆ ಮಾಡಲಾಗಿದೆ. ಇನ್ನು ಕರಾವಳಿಯಲ್ಲಿ ಈ ಮೂರು ದಿನ ಹಗುರ, ಸಾಧಾರಣೆ ಮಳೆಯಾಗಲಿದೆ
Published by: Seema R
First published: November 24, 2020, 5:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories