PPUBG: ಪಬ್​ಜಿ ಪ್ರಿಯರಿಗೆ ಶಾಕಿಂಗ್ ಸುದ್ದಿ: ಭಾರತದಲ್ಲಿ PUBG ಗೇಮ್​ಗೆ ನಿರ್ಬಂಧ

ಈ ಹಿನ್ನೆಲೆಯಲ್ಲಿ ಈಗಾಗಲೇ ಗುಜರಾತ್​ನ ರಾಜ್​ಕೋಟ್​ ಹಾಗೂ ಸೂರತ್ ವ್ಯಾಪ್ತಿಯಲ್ಲಿ ತಾತ್ಕಾಲಿಕ ಪಬ್​ಜಿ ಆಡುವುದು ನಿಷೇಧಿಸಲಾಗಿದೆ.

zahir | news18
Updated:March 26, 2019, 9:22 AM IST
PPUBG: ಪಬ್​ಜಿ ಪ್ರಿಯರಿಗೆ ಶಾಕಿಂಗ್ ಸುದ್ದಿ: ಭಾರತದಲ್ಲಿ PUBG ಗೇಮ್​ಗೆ ನಿರ್ಬಂಧ
PUBG
zahir | news18
Updated: March 26, 2019, 9:22 AM IST
ವಿಶ್ವದಾದ್ಯಂತ ಹೊಸ ಕ್ರೇಜ್ ಹುಟ್ಟು ಹಾಕಿರುವ ಮೊಬೈಲ್ ಗೇಮ್ PUBG ತನ್ನ ನಿಯಮದಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಲಿದೆ. ಹೊಸ ನಿಯಮದಂತೆ ಕಂಪೆನಿಯು ಗೇಮ್ ಆಡಲು ಟೈಮಿಂಗ್ ಗಡುವನ್ನು ವಿಧಿಸಲಿದ್ದು,  ಈ ಮೂಲಕ ಗೇಮಿನ ಚಟಕ್ಕೆ ಒಳಗಾಗಿರುವವರನ್ನು ನಿಯಂತ್ರಿಸಲಿದೆ ಎಂದು ವರದಿಯೊಂದು ತಿಳಿಸಿದೆ. ಮಾಹಿತಿ ಪ್ರಕಾರ, ಈ ನಿಯಮವನ್ನು ಭಾರತದ ಪಬ್​ಜಿ ಗೇಮರ್ಸ್​ಗಾಗಿ ಜಾರಿಗೆ ತರಲಾಗುತ್ತಿದೆ ಎಂದು ಹೇಳಲಾಗಿದೆ. ಹೀಗಾಗಿ ಶೀಘ್ರದಲ್ಲೇ ದೇಶದಲ್ಲಿ ಕೇವಲ 6 ಗಂಟೆಗಳು ಮಾತ್ರ ಪಬ್​ಜಿ ಆಡಬಹುದು ಎನ್ನಲಾಗಿದೆ. ಆದರೆ ಈ ಬಗ್ಗೆ ಕಂಪೆನಿಯು ಇನ್ನೂ ಕೂಡ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಇದರ ಹೊರತಾಗಿಯು ಹೊಸ ನಿಯಮ ಜಾರಿಯಾಗುವುದು ಸ್ಪಷ್ಟ ಎನ್ನಲಾಗುತ್ತಿದೆ.

ಹೊಸ ನಿಯಮದಲ್ಲಿ ಏನಿರಲಿದೆ?
ಭಾರತದಲ್ಲಿ ಈ ನಿಯಮ ಜಾರಿಯಾದರೆ, ಪಬ್​ಜಿ ಆಡುತ್ತಿದ್ದ ವೇಳೆ ನಿಮಗೆ ಎಚ್ಚರಿಕೆ ಸಂದೇಶ ನೀಡಲಾಗುತ್ತದೆ. ಮೊದಲ 2 ಗಂಟೆಯ ಬಳಿಕ ಅಲ್ರಾಮ್ ಸಂದೇಶ ಬರಲಿದೆ. ಈ ವಾರ್ನಿಂಗ್ ಬಳಿಕ ನೀವು ಆಟವನ್ನು ಮುಂದುವರೆಸಿದರೆ 4 ಗಂಟೆಯ ನಂತರ ಮತ್ತೊಂದು ಮಿತಿ ಮೀರಿದೆ ಎಂಬ ಅಲ್ರಾಮ್ ಸಂದೇಶ ಕಳುಹಿಸಲಾಗುತ್ತದೆ. ಇದರ ನಂತರ ನೀವು 6 ಗಂಟೆಗಳ ಕಾಲ ಗೇಮ್​ನಲ್ಲಿ ತೊಡಗಿಸಿಕೊಂಡರೆ ನಿಮ್ಮನ್ನು ನಿರ್ಬಂಧಿಸಲಾಗುತ್ತದೆ. ಅಂದರೆ ಒಂದು ದಿನ ಕೇವಲ 6 ಗಂಟೆಗಳ ಕಾಲ ಮಾತ್ರ ಗೇಮ್ ಆಡುವ ಅವಕಾಶ ನೀಡಲಿದೆ ಎನ್ನಲಾಗಿದೆ. ಈ ಮೂಲಕ ಗೇಮಿಂಗ್ ಅಡಿಕ್ಟರ್ಸ್​ಗಳನ್ನು ನಿಯಂತ್ರಿಸಲು ಯೋಜನೆ ಹಾಕಿಕೊಂಡಿದೆ ಎಂದು ತಿಳಿಸಲಾಗಿದೆ.

PUBG ನಿರ್ಬಂಧಕ್ಕೆ ಕಾರಣಗಳೇನು?
ಭಾರತದಲ್ಲಿ ಪಬ್​ಜಿ ಮೊಬೈಲ್​ ಗೇಮ್ ವ್ಯಾಪಕ ಕ್ರೇಜ್ ಹುಟ್ಟುಹಾಕಿದೆ. ಈ ಗೇಮಿಂಗ್​ಗೆ ಮಾರುಹೋಗಿರುವ ಯುವ ಸಮೂಹ ಹೊಸ ರೀತಿಯ ಮಾನಸಿಕ ಅಸ್ವಸ್ಥೆಗೆ ಒಳಗಾಗುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಗುಜರಾತ್​ನ ರಾಜ್​ಕೋಟ್​ ಹಾಗೂ ಸೂರತ್ ವ್ಯಾಪ್ತಿಯಲ್ಲಿ ತಾತ್ಕಾಲಿಕ ಪಬ್​ಜಿ ಆಡುವುದು ನಿಷೇಧಿಸಲಾಗಿದೆ. ಗುಜರಾತ್ ಪೊಲೀಸರು ಹೊರಡಿಸಿರುವ ಈ ಆದೇಶವನ್ನು ಮೀರಿ ಪಬ್​ಜಿ ಆಡಿದ 10 ಮಂದಿಯನ್ನು ಇತ್ತೀಗಷ್ಟೇ ಬಂಧಿಸಲಾಗಿತ್ತು. ಇಂತಹದೊಂದು ಕ್ರಮಕ್ಕೆ ಮುಖ್ಯ ಕಾರಣ, ಪಬ್​ಜಿ ಆಟದಿಂದ ವಿದ್ಯಾರ್ಥಿಗಳ ಅಧ್ಯಯನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಪೋಷಕರಿಂದ ಆಯೋಗಕ್ಕೆ ವ್ಯಾಪಕ ದೂರುಗಳು ಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ರಾಜ್​ಕೋಟ್ ಹಾಗೂ ಸೂರತ್​ನಲ್ಲಿ ಪಬ್​ಜಿಗೆ ನಿರ್ಬಂಧ ಹೇರಲಾಗಿದೆ.

ಹಾಗೆಯೇ ಈ ಆಕ್ರಮಣಕಾರಿ ಆಟವನ್ನು ನಿಷೇಧಿಸಬೇಕೆಂದು ಇತ್ತೀಚೆಗೆ ತಮಿಳುನಾಡು ವಿಧಾನಸಭೆಯಲ್ಲೂ ಚರ್ಚೆ ನಡೆಸಲಾಗಿತ್ತು. ಅಲ್ಲದೆ ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ​ ಪಬ್​ಜಿ ಆಟದ ವ್ಯಸನಕ್ಕೆ ಸಿಲುಕಿದ್ದ 19 ವರ್ಷದ ಯುವಕನೊಬ್ಬ ಹೆತ್ತ ತಂದೆ, ತಾಯಿ ಹಾಗೂ ತಂಗಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧನಕ್ಕಿಡಾಗಿದ್ದನು.
Loading...

ಅದೇ ರೀತಿ ಜಮ್ಮು ಕಾಶ್ಮೀರದ ಯುವಕನೊಬ್ಬ ಪಬ್​ಜಿ ಚಟಕ್ಕೆ ಬಿದ್ದು ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದು ಹೇಳಲಾಗಿದೆ. ಹಾಗೆಯೇ ವ್ಯಕ್ತಿಯೊಬ್ಬರು ಪಬ್​ಜಿ ಆಟದಲ್ಲಿ ನಿರತರಾಗಿದ್ದ ವೇಳೆ ನೀರೆಂದು ಆ್ಯಸಿಡ್ ಕುಡಿದ ಘಟನೆ  ಮಧ್ಯಪ್ರದೇಶದಲ್ಲಿ ನಡೆದಿದೆ. ಹಾಗೆಯೇ ಗದಗ ವಿದ್ಯಾರ್ಥಿಯೊಬ್ಬ ಉತ್ತರ ಪತ್ರಿಕೆಯಲ್ಲಿ ಪಬ್​ಜಿ ಆಡುವುದು ಹೇಗೆ ಎಂದು ಬರೆದು ಅನುತೀರ್ಣನಾಗಿದ್ದನು. ಎಸ್​ಎಸ್​ಎಲ್​ಸಿ ಉತ್ತಮ ಅಂಕ ಪಡೆದಿದ್ದ ಈ ವಿದ್ಯಾರ್ಥಿ ಫೇಲ್ ಆಗಲು ಪಬ್​ಜಿ ಆಟವನ್ನು ನೆಚ್ಚಿಕೊಂಡಿದ್ದೇ ಮುಖ್ಯ ಕಾರಣ ಎನ್ನಲಾಗಿತ್ತು. ಇಂತಹ ಪ್ರಕರಣಗಳು ಇತ್ತೀಚೆಗೆ ದೇಶದೆಲ್ಲೆಡೆ ಕೇಳಿ ಬರುತ್ತಿದ್ದು, ಹಾಗೆಯೇ ಗೇಮ್​ನ ಮೇಲೆ ನಿರ್ಬಂಧ ವಿಧಿಸುವಂತೆ ಒತ್ತಾಯಿಸಲಾಗುತ್ತಿದೆ. ಸರ್ಕಾರ ಪಬ್​ಜಿಯನ್ನು ನಿಷೇಧಿಸುವ ಮುನ್ನವೇ  ಕಂಪೆನಿಯು ಭಾರತದ ಆಟಗಾರರನ್ನು ನಿಯಂತ್ರಿಸಲು ಇಂತಹದೊಂದು ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.

ಪಬ್​ಜಿ ಗೇಮ್ ಎಂದರೇನು?
ವಿಶ್ವದಾದ್ಯಂತ ಹೊಸ ಕ್ರೇಜ್ ಹುಟ್ಟು ಹಾಕಿರುವ ಮೊಬೈಲ್ ಗೇಮ್ ಹೆಸರು ಪಬ್​ಜಿ. ಇದನ್ನು ಮೊಬೈಲ್​, ಕಂಪ್ಯೂಟರ್ ಮತ್ತು ಗೇಮ್​​ ಅಡ್ಡಗಳಲ್ಲಿಯೂ ಆಡಲಾಗುತ್ತದೆ. ಈ ಆ್ಯನಿಮೇಷನ್​ ಗೇಮ್​ನಲ್ಲಿ ಒಂದಷ್ಟು ಜನರನ್ನು ಒಂದು ನಿರ್ದಿಷ್ಟ ಸ್ಥಳದಲ್ಲಿ ವಿಮಾನದ ಮೂಲಕ ಇಳಿಸಲಾಗುತ್ತದೆ. ಅಲ್ಲಿ ಸಿಗುವ ಶಸ್ತ್ರಾಸ್ತ್ರಗಳನ್ನು ಬಳಸಿ ಎದುರಾಳಿಗಳನ್ನು ಹೊಡೆದುರುಳಿಸುವ ರೋಮಾಂಚಕಾರಿ ಗೇಮ್.

ಇದನ್ನೂ ಓದಿ: IPL 2019-VIDEO: ಕೀರನ್ ಪೊಲಾರ್ಡ್ ಅದ್ಭುತ ಕ್ಯಾಚ್​ ವಿಡಿಯೋ ವೈರಲ್

ಇದನ್ನು ಒಬ್ಬರು, ಇಬ್ಬರು ಅಥವಾ ನಾಲ್ಕು ಜನರ ತಂಡವಾಗಿ ಕೂಡ ಆಡಬಹುದು. ಅದ್ಭುತ ಗ್ರಾಫಿಕ್ಸ್ ಮತ್ತು ಸೌಂಡ್ ಎಫೆಕ್ಟ್​ನಿಂದ ಅತಿ ಕಡಿಮೆ ಸಮಯದಲ್ಲಿ ವಿಶ್ವದ ಗೇಮ್​ ಪ್ರಿಯರನ್ನು ಪಬ್​ಜಿ ತನ್ನತ್ತ ಸೆಳೆದುಕೊಳ್ಳಲು ಯಶಸ್ವಿಯಾಗಿದೆ.​ ಈ ಗೇಮ್​ನ ಜನಪ್ರಿಯತೆ ಮತ್ತು ಮತ್ತಷ್ಟು ಮಾರ್ಕೆಟಿಂಗ್​ ದೃಷ್ಟಿಯಿಂದ ಟೆನ್​ಸೆಂಟ್ ಗೇಮ್ಸ್​ ಮತ್ತು ಪಬ್​ಜಿ ಕಾರ್ಪೋರೇಷನ್ ವಿಶ್ವದ ಮೊದಲ ಇ-ಸ್ಪೋರ್ಟ್ಸ್​ ಟೂರ್ನಮೆಂಟ್ ಅನ್ನು ಕೂಡ ಆಯೋಜಿಸಿತ್ತು.

ಇದನ್ನೂ ಓದಿ: VIDEO: ಪಂದ್ಯಶ್ರೇಷ್ಠ​ ಪ್ರಶಸ್ತಿಯನ್ನು ವಿಶೇಷ ಅಭಿಮಾನಿಗೆ ನೀಡಿದ ಆ್ಯಂಡ್ರೆ ರಸೆಲ್: ಫ್ಯಾನ್ಸ್​ನಿಂದ ಮೆಚ್ಚುಗೆಯ ಮಹಾಪೂರ
First published:March 25, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626