Psycho Killer: 50ಕ್ಕೂ ಹೆಚ್ಚು ಯುವತಿಯರೊಂದಿಗೆ ಸಂಬಂಧದಲ್ಲಿದ್ದ, ಜೊತೆಗಿದ್ದವಳನ್ನೇ ಕೊಂದ! ಕೊನೆಗೂ ಸಿಕ್ಕಿಬಿದ್ದ ಸೈಕೋ ಕಿಲ್ಲರ್!

Psycho Killer: ಪಶ್ಚಿಮ ಡಿಸಿಪಿ ರಿಚಾ ತೋಮರ್ ನೇತೃತ್ವದ ಪೊಲೀಸರು ಭಿವಾಡಿಯಿಂದ ಮಿಂಟು ಅಲಿಯಾಸ್ ವಿಕ್ರಮ್ ಎಂಬಾತನನ್ನು ಬಂಧಿಸಿದ್ದಾರೆ. ಫೆಬ್ರವರಿ 23 ರಂದು ಮಿಂಟು ತನ್ನ ಗೆಳತಿಯನ್ನು ಕತ್ತು ಹಿಸುಕಿ ಕೊಂದಿದ್ದ.

ಆರೋಪಿ ವಿಕ್ರಮ್

ಆರೋಪಿ ವಿಕ್ರಮ್

 • Share this:
  ಆರೋಪಿ ವಿಕ್ರಮ್ಬರೋಬ್ಬರಿ 50ಕ್ಕೂ ಹೆಚ್ಚು ಹುಡುಗಿಯರನ್ನು ಟ್ರ್ಯಾಪ್ (Trap) ಮಾಡಿ ಇಬ್ಬರು ಯುವತಿಯರನ್ನು ಕೊಂದ (Murder) ಆರೋಪಿಯನ್ನು ರಾಜಸ್ಥಾನ (Rajasthan) ಪೊಲೀಸರು (Police) ಬಂಧಿಸಿದ್ದಾರೆ. ರಾಜಧಾನಿ ಜೈಪುರದ (Jaipur) ಕರ್ಧಾನಿಯಲ್ಲಿ ಪೊಲೀಸರು ಅನೇಕ ತಿಂಗಳ ಹಿಂದೆಯಿಂದಲೇ ಈ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದರು. ಗೆಳತಿಯನ್ನುಕೊಂದಿದ್ದಕ್ಕಾಗಿ ಪೊಲೀಸರು ಆತನಿಗೆ ಬಲೆ ಬೀಸಿದ್ದರು. ಕೊನೆಗೆ ಆರೋಪಿಯು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಆತನನ್ನು ಬಂಧಿಸುವಲ್ಲಿ (Arrest) ಯಶಸ್ವಿಯಾಗಿದ್ದಾರೆ.

  ಪಶ್ಚಿಮ ಡಿಸಿಪಿ ರಿಚಾ ತೋಮರ್ ನೇತೃತ್ವದ ಪೊಲೀಸರು ಭಿವಾಡಿಯಿಂದ ಮಿಂಟು ಅಲಿಯಾಸ್ ವಿಕ್ರಮ್ ಎಂಬಾತನನ್ನು ಬಂಧಿಸಿದ್ದಾರೆ. ಫೆಬ್ರವರಿ 23 ರಂದು ಮಿಂಟು ತನ್ನ ಗೆಳತಿಯನ್ನು ಕತ್ತು ಹಿಸುಕಿ ಕೊಂದಿದ್ದ. ವಿಚಾರಣೆ ವೇಳೆ ಆರೋಪಿ ಹಲವು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾನೆ. ಪೊಲೀಸರ ಪ್ರಕಾರ, ವಿಕ್ರಮ್ ಲೈಂಗಿಕ ವ್ಯಸನಿಯಾಗಿದ್ದು, ಇದುವರೆಗೆ ಹಲವಾರು ಹುಡುಗಿಯರೊಂದಿಗೆ ಸಂಬಂಧ ಹೊಂದಿದ್ದನು.

  ಆರೋಪಿ ವಿಕ್ರಮ್ ಪ್ರತಿ ಘಟನೆಯ ನಂತರ ತನ್ನ ಗುರುತು ಮತ್ತು ಸ್ಥಳವನ್ನು ಬದಲಾಯಿಸುತ್ತಿದ್ದನು. ಹಲವು ಬಾರಿ ಆರ್ಮಿ ಆಫೀಸರ್ ಎಂದು ಹೇಳಿಕೊಂಡು ಹುಡುಗಿಯರನ್ನು ವಂಚಿಸುತ್ತಿದ್ದನು. ಕೆಲವೊಮ್ಮೆ ಆದಾಯ ತೆರಿಗೆ ಅಧಿಕಾರಿ ಎಂದು ಸುಳ್ಳು  ಹೇಳುತ್ತಿದ್ದನು. ವಿಕ್ರಮ್ ಹಲವಾರು ಹುಡುಗಿಯರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯು ಚಂಡೀಗಢ ಮತ್ತು ಮಧ್ಯಪ್ರದೇಶದಲ್ಲೂ ಕೆಲಕಾಲ ನೆಲೆಸಿದ್ದ. ಅಲ್ಲಿ ಆದಾಯ ತೆರಿಗೆ ಅಧಿಕಾರಿಯಂತೆ ನಟಿಸಿ ಹಲವು ಹೆಣ್ಣು ಮಕ್ಕಳ ಬದುಕಿನೊಂದಿಗೆ ಆಟವಾಡುತ್ತಿದ್ದ. ಆತನ ಹೆಸರಿನಲ್ಲಿ ಅಲ್ವಾರ್‌ನಲ್ಲಿ ಸಾಮೂಹಿಕ ಅತ್ಯಾಚಾರದ ಆರೋಪವೂ ಇದೆ.

  ಇದನ್ನೂ ಓದಿ: Viral Video: ಪಂದ್ಯದ ವೇಳೆ ಟಾಪ್​ ಲೆಸ್​ ಆಗಿ ಮೈದಾನಕ್ಕೆ ಬಂದ ಮಹಿಳೆ! ಇದೆಕ್ಕೆಲ್ಲಾ ಕಾರಣ ಸ್ನೇಹಿತ ನೀಡಿದ ಚಾಲೆಂಜ್​!

  ಪೊಲೀಸರ ಪ್ರಕಾರ, ಆರೋಪಿ ಮಿಂಟು ತನ್ನ ಗೆಳತಿ ರೋಶ್ನಿಯೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದನು. ಇಬ್ಬರೂ ಹೋಟೆಲ್‌ನಲ್ಲಿ ಭೇಟಿಯಾದರು ಮತ್ತು ಅಂದಿನಿಂದ ಒಟ್ಟಿಗೆ ವಾಸಿಸುತ್ತಿದ್ದರು. ಲೈಟ್ ಸ್ಪಾ ಸೆಂಟರ್‌ನಲ್ಲಿ ಕೆಲಸ ಮಾಡುವುದು ಮತ್ತು ಹೋಟೆಲ್‌ಗಳಿಗೆ ಹೋಗುವುದು ಮಿಂಟುಗೆ ಇಷ್ಟವಾಗಲಿಲ್ಲ. ಕೆಲಸ ಬಿಡುವಂತೆ ರೋಶ್ನಿಗೆ ಹೇಳಿದ್ದರೂ ಆಕೆ ಕೇಳದ ಕಾರಣ ಆರೋಪಿ ಆಕೆಯನ್ನು ಕೊಂದಿದ್ದಾನೆ.

  ಇದನ್ನೂ ಓದಿ: Japanese Children: ಹುಟ್ಟಿದ 2 ವರ್ಷದಲ್ಲೇ ಏಕಾಂಗಿಯಾಗಿ ಶಾಪಿಂಗ್ ಮಾಡುತ್ತಾರಂತೆ ಜಪಾನಿನ ಮಕ್ಕಳು! ಏನ್ ಗುರು ಇದು..

  ಮೃತ ಯುವತಿಯ ತಂದೆ ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇದೇ ವಿಚಾರವಾಗಿ ರೋಶನಿ ತಂದೆಗೆ ಜಾಮೀನು ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ವಿಕ್ರಮ್ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಯುವತಿಯನ್ನು ಕೊಂದು ಶವವನ್ನು ರೈಲು ಹಳಿ ಮೇಲೆ ಎಸೆದಿರುವುದಾಗಿಯೂ ಆರೋಪಿ ಒಪ್ಪಿಕೊಂಡಿದ್ದಾನೆ. ಕೊಲೆಯಾದ ಹುಡುಗಿಯ ಹೆಸರು ಪೂಜಾ ಶರ್ಮಾ ಎಂದಾಗಿದ್ದು, ಆರೋಪಿ 2021ರ ಏಪ್ರಿಲ್‌ನಲ್ಲಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
  Published by:Harshith AS
  First published: