• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Prozo: ಲಕ್ನೋದಲ್ಲಿ 23000 ಚದರ ಅಡಿಯ ಮಲ್ಟಿ ಚಾನೆಲ್ ಫುಲ್‌ಫಿಲ್ಮೆಂಟ್ ಕೇಂದ್ರ ಆರಂಭಿಸಿದ ಪ್ರೊಜೊ

Prozo: ಲಕ್ನೋದಲ್ಲಿ 23000 ಚದರ ಅಡಿಯ ಮಲ್ಟಿ ಚಾನೆಲ್ ಫುಲ್‌ಫಿಲ್ಮೆಂಟ್ ಕೇಂದ್ರ ಆರಂಭಿಸಿದ ಪ್ರೊಜೊ

ಪ್ರೊಜೊ

ಪ್ರೊಜೊ

ಪ್ರೊಜೊದ ಪ್ರತಿ ಬಳಕೆಗೆ ಪಾವತಿ ಎಂಬ ಸಿದ್ಧಾಂತದ ಅನ್ವಯ ಸಂಪೂರ್ಣ ದೇಶಾದ್ಯಂತ ಯಾವುದೇ ಬ್ರ್ಯಾಂಡ್‌ಗಳು ಸಂಸ್ಥೆಯ ಗೋದಾಮಿನ ಸೌಲಭ್ಯಗಳನ್ನು ಪಡೆದುಕೊಳ್ಳುತ್ತವೆ. ಬ್ರ್ಯಾಂಡ್‌ಗಳು ತಾವು ಬಳಸುವ ಸೇವೆಗಳಿಗೆ ಮಾತ್ರ ಪಾವತಿಸುತ್ತವೆ.

 • Share this:

  ಉತ್ತರಪ್ರದೇಶ: ಸಪ್ಲೈ ಚೈನ್ (ಪೂರೈಕೆ ಸರಪಳಿ) ಸ್ಟಾರ್ಟಪ್ ಪ್ರೊಜೊ (Prozo) ಲಕ್ನೋದ ಖಾಸರವಾರ (Khasarwara ) ಗ್ರಾಮದಲ್ಲಿ ಹೊಸ ಫುಲ್‌ಫಿಲ್ಮೆಂಟ್ ಕೇಂದ್ರವನ್ನು ತೆರೆಯುವುದಾಗಿ ಘೋಷಿಸಿದೆ. ಸುಮಾರು 23,000 ಚದರ ಅಡಿ ವಿಸ್ತೀರ್ಣವನ್ನು ವ್ಯಾಪಿಸಲಿರುವ ವೇರ್‌ಹೌಸ್ ಇದಾಗಲಿದ್ದು, NH27 ಹೆದ್ದಾರಿಯಿಂದ 5 ಕಿಮೀ ಅಂತರದಲ್ಲಿದೆ. ಕೇಂದ್ರವು 3 ಲಕ್ಷ ಯೂನಿಟ್‌ಗಳ ಉಡುಪುಗಳು, ಪರಿಕರಗಳು ಅಥವಾ ಸಣ್ಣ ಎಲೆಕ್ಟ್ರಾನಿಕ್ಸ್‌ಗಳಿಗೆ ಸಂಗ್ರಹಣಾ ಸ್ಥಳವನ್ನು ಹೊಂದಿದೆ.


  100 ಕ್ಕೂ ಅಧಿಕ ಬ್ರ್ಯಾಂಡ್‌ಗಳಿಗೆ ಸೇವೆ ಸಲ್ಲಿಸುತ್ತಿರುವ ಪ್ರೊಜೊ


  ಪ್ರೊಜೊ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಅಟೊಮೇಶನ್ ಮೂಲಕ ತನ್ನ ಕ್ಲೈಂಟ್‌ಗಳಿಗೆ ವೇರ್ ಹೌಸಿಂಗ್, ಫುಲ್‌ಫಿಲ್ಮೆಂಟ್ ಹಾಗೂ ಲಾಜಿಸ್ಟಿಕ್ ಸೇವೆಗಳನ್ನು ಒದಗಿಸುತ್ತಿದೆ. 100 ಕ್ಕೂ ಅಧಿಕ ಬ್ರ್ಯಾಂಡ್‌ಗಳಿಗೆ ಸಂಸ್ಥೆಯು ಪೂರೈಕೆ ಸರಪಳಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಯಶಸ್ವಿ ಸಂಸ್ಥೆ ಎಂದೆನಿಸಿದೆ.


  ಸೆಂಟರ್ ಅತ್ಯಂತ ಕಠಿಣ ಭದ್ರತಾ ವ್ಯವಸ್ಥೆಗಳನ್ನು ಹೊಂದಿದ್ದು 12 ಮೀಟರ್ ಎತ್ತರ ಮತ್ತು 5 ಮೆಟ್ರಿಕ್ ಟನ್ ಭಾರ ಹೊರುವ ಸಾಮರ್ಥ್ಯದ FM2 ಕ್ಲಾಸ್ ಫ್ಲೋರಿಂಗ್ ಅನ್ನು ಒಳಗೊಂಡಿದೆ. ಸರ್ಕ್ಯೂಟ್ ಕ್ಯಾಮೆರಾಗಳು, ಭದ್ರತಾ ಸಿಬ್ಬಂದಿಗಳು ಹಾಗೂ ಅಗ್ನಿಶಾಮಕ ದಳವನ್ನು ಹೊಂದಿದೆ.


  ಇದನ್ನೂ ಓದಿ: Online Marketing: ಸಣ್ಣ ವ್ಯಾಪಾರಿಗಳಿಗೆ ಸೋಶಿಯಲ್ ಮೀಡಿಯಾಗಳಿಂದ ಏನು ಲಾಭ? ಇವುಗಳಿಂದ ಉತ್ಪನ್ನ ಪ್ರಚಾರ ಮಾಡುವುದು ಹೇಗೆ?


  ಲಕ್ನೋದ ಹೊಸ ಕೇಂದ್ರದಲ್ಲಿ ಇನ್ನಷ್ಟು ಸೌಲಭ್ಯಗಳ ಅವಕಾಶ


  ಲಕ್ನೋದಲ್ಲಿ ಹೊಸ ಫುಲ್‌ಫಿಲ್ಮೆಂಟ್ ಕೇಂದ್ರವನ್ನು ತೆರೆಯಲು ಉತ್ಸುಕರಾಗಿದ್ದೇವೆ ಹಾಗೂ ಈ ಸೌಲಭ್ಯವು ಗ್ರಾಹಕರಿಗೆ ಹೆಚ್ಚು ದಕ್ಷತೆ ಹಾಗೂ ಸಮಗ್ರತೆಯಿಂದ ಸೇವೆ ಸಲ್ಲಿಸಲು ಅನುವು ಮಾಡಿಕೊಡುತ್ತದೆ ಎಂದು ಪ್ರೊಜೋದ ಸಂಸ್ಥಾಪಕ ಮತ್ತು ಸಿಇಒ ಅಶ್ವಿನಿ ಜಖರ್ ತಿಳಿಸಿದ್ದಾರೆ. ಲಕ್ನೋ, ಕಾನ್ಪುರ್, ಪ್ರಗರಾಜ್ ಮತ್ತು ವಾರಣಾಸಿ ನಡುವೆ ಸುಲಭ ಸಂಪರ್ಕವನ್ನುಂಟು ಮಾಡಲಿದೆ ಎಂದು ಅಶ್ವಿನಿ ತಿಳಿಸಿದ್ದಾರೆ.


  ಸಂಸ್ಥೆಗಳ ಈಡೇರಿಕೆಗೆ ಬದ್ಧವಾಗಿದೆ


  ಎಂಟರ್‌ಪ್ರೈಸ್-ಗ್ರೇಡ್ ಪೂರೈಕೆ ಸರಪಳಿಗಳನ್ನು ಎಲ್ಲಾ ಗಾತ್ರದ ಕಂಪನಿಗಳಿಗೆ ದೊರೆಯುವಂತೆ ಮಾಡಲು ಪ್ರೊಜೊ ಕಾರ್ಯನಿರತವಾಗಿದ್ದು, ಸಂಸ್ಥೆಯು ಎಂಟರ್‌ಪ್ರೈಸ್‌ಗಳು, ಡಿ2ಸಿ ಬ್ರ್ಯಾಂಡ್‌ಗಳು ಅಥವಾ ಎಸ್‌ಎಂಇಗಳು, ಮತ್ತು ಇತ್ತೀಚಿನ ಸೌಲಭ್ಯಗಳ ಎಲ್ಲಾ ಉದ್ದೇಶಗಳನ್ನು ಈಡೇರಿಸಲು ಸಹಕಾರಿಯಾಗಿದೆ ಎಂದು ಜಖರ್ ತಿಳಿಸಿದ್ದಾರೆ.


  ಭಾರತದಲ್ಲಿ 12 ಕ್ಕೂ ಹೆಚ್ಚು ನಗರಗಳಲ್ಲಿ ಪ್ರೊಜೊ


  ಭಾರತದಾದ್ಯಂತ 12 ನಗರಗಳಲ್ಲಿ ನೆಲೆಗೊಂಡಿರುವ ಪ್ರೊಜೊ 10+ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ರಿಲಯನ್ಸ್ ಜಿಯೋಮಾರ್ಟ್, ಅರ್ಬನ್ ಲ್ಯಾಡರ್, MPL, ಹುಂಡೈ, ವಂಡರ್‌ಚೆಫ್, ಟಾಟಾ ಗ್ರಾಹಕ ಸೇವೆಗಳು, ಆದಿತ್ಯ ಬಿರ್ಲಾ ಗ್ರೂಪ್, ಸ್ನ್ಯಾಪ್‌ಡೀಲ್, WH ಸ್ಮಿತ್, ಚಾಯ್ ಪಾಯಿಂಟ್, ಪೆಪೆ ಜೀನ್ಸ್, ಸ್ಟಿನ್ ಕೇರ್ (ಬೀಟ್ XP), ಮುಂತಾದ ಮಾರ್ಕ್ಯೂ ಬ್ರ್ಯಾಂಡ್‌ಗಳಿಗೆ ಸೇವೆ ಸಲ್ಲಿಸುತ್ತದೆ.


  ದೊಡ್ಡ ಉದ್ಯಮಗಳು, ಮಧ್ಯಮ-ಮಾರುಕಟ್ಟೆಯ SMEಗಳು ಅಥವಾ ಬೆಳೆಯುತ್ತಿರುವ D2C ಬ್ರ್ಯಾಂಡ್‌ಗಳು ಹೀಗೆ ಎಲ್ಲಾ ಗಾತ್ರದ ಕಂಪನಿಗಳಿಗೆ ಸೇವೆ ಸಲ್ಲಿಸುತ್ತಿದೆ. ನಮ್ಮ ಒಂದು ಅಥವಾ ಹೆಚ್ಚಿನ ಸೇವಾ ಕೊಡುಗೆಗಳು/ತಂತ್ರಜ್ಞಾನದ ಪರಿಹಾರಗಳನ್ನು ತೆಗೆದುಕೊಳ್ಳುವ ಮೂಲಕ ಬ್ರ್ಯಾಂಡ್‌ಗಳು ಪ್ರೊಜೊದೊಂದಿಗೆ ಕೆಲಸ ಮಾಡಲು ಪ್ರಾರಂಭಿಸಬಹುದು ಎಂದು ಸಂಸ್ಥೆ ತಿಳಿಸಿದೆ.


  ಇದನ್ನೂ ಓದಿ: DigiLocker: ಡಿಜಿಲಾಕರ್​ನಿಂದ ವ್ಯಾಪಾರಿಗಳಿಗಿದೆ ಇಷ್ಟೆಲ್ಲ ಪ್ರಯೋಜನ! ನೀವೂ ಚೆಕ್ ಮಾಡಿ


  ಸೇವೆಗೆ ತಕ್ಕಂತೆ ಪಾವತಿ ಸೌಲಭ್ಯ ಪ್ರೊಜೊದ ವಿಶಿಷ್ಟತೆ


  ಪ್ರೊಜೊದ ಪ್ರತಿ ಬಳಕೆಗೆ ಪಾವತಿ ಎಂಬ ಸಿದ್ಧಾಂತದ ಅನ್ವಯ ಸಂಪೂರ್ಣ ದೇಶಾದ್ಯಂತ ಯಾವುದೇ ಬ್ರ್ಯಾಂಡ್‌ಗಳು ಸಂಸ್ಥೆಯ ಗೋದಾಮಿನ ಸೌಲಭ್ಯಗಳನ್ನು ಪಡೆದುಕೊಳ್ಳುತ್ತವೆ. ಬ್ರ್ಯಾಂಡ್‌ಗಳು ತಾವು ಬಳಸುವ ಸೇವೆಗಳಿಗೆ ಮಾತ್ರ ಪಾವತಿಸುತ್ತವೆ.


  ಅಮೆಜಾನ್ ಫ್ಲಿಪ್‌ಕಾರ್ಟ್‌ಗಿಂತ ಭಿನ್ನ


  ಪ್ರೊಜೊ ಇ-ಕಾಮರ್ಸ್ ಅನ್ನು ಸಕ್ರಿಯಗೊಳಿಸಲು ತಂತ್ರಜ್ಞಾನದ ಬೆಂಬಲವನ್ನು ಒದಗಿಸುತ್ತದೆ ಹಾಗೂ ಎಲ್ಲಾ ಮಾರುಕಟ್ಟೆ ಸ್ಥಳಗಳೊಂದಿಗೆ ಏಕೀಕರಣ ಆರ್ಡರ್ ನಿರ್ವಹಣೆ ವ್ಯವಸ್ಥೆಯನ್ನು ಅನುಸರಿಸುತ್ತದೆ ಅಂತೆಯೇ ಅತ್ಯುತ್ತಮ ಸಾರಿಗೆ ನಿರ್ವಹಣೆ ಸೌಲಭ್ಯವನ್ನು ಬ್ರ್ಯಾಂಡ್‌ಗಳಿಗೆ ಒದಗಿಸುತ್ತದೆ.


  ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ಗಳಿಗಿಂತ ಪ್ರತ್ಯೇಕ ರೀತಿಯಲ್ಲಿ ಸೇವೆಯನ್ನೊದಗಿಸುವ ಪ್ರೊಜೊ ಇ-ಕಾಮರ್ಸ್ ಮಾರಾಟಗಾರರ ಸೇವೆಗಳನ್ನು ನೀಡುತ್ತದೆ ಹಾಗೂ ಕೆಲವೇ ದಿನಗಳಲ್ಲಿ ಹದಿನೈದಕ್ಕಿಂತ ಹೆಚ್ಚಿನ ಮಾರುಕಟ್ಟೆ ಸ್ಥಳಗಳಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲು ಸಂಸ್ಥೆ ಸಹಾಯ ಮಾಡುತ್ತದೆ.

  Published by:Avinash K
  First published: