ರಜಿನಿಕಾಂತ್ ಪತ್ನಿ ವಿರುದ್ಧ ವಂಚನೆ ಪ್ರಕರಣದ ತನಿಖೆಗೆ ಸುಪ್ರೀಂಕೋರ್ಟ್ ಆದೇಶ


Updated:July 10, 2018, 5:59 PM IST
ರಜಿನಿಕಾಂತ್ ಪತ್ನಿ ವಿರುದ್ಧ ವಂಚನೆ ಪ್ರಕರಣದ ತನಿಖೆಗೆ ಸುಪ್ರೀಂಕೋರ್ಟ್ ಆದೇಶ

Updated: July 10, 2018, 5:59 PM IST
-ನ್ಯೂಸ್ 18

ನವದೆಹಲಿ(ಜು.10): ಜಾಹೀರಾತು ಸಂಸ್ಥೆಗೆ 6.2 ಕೋಟಿ ರೂ. ಪಾವತಿಸದ ಹಿನ್ನೆಲೆಯಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ ಪತ್ನಿ ಲತಾ ಅವರು ವಂಚನೆ ಪ್ರಕರಣದಲ್ಲಿ ವಿಚಾರಣೆ ಎದುರಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಇದೇವೇಳೆ, ಸಾಲ ಮರುಪಾವತಿಸದ ಪ್ರಕರಣಕ್ಕೆ ಸಂಬಂಧಿಸಿದ ಖಾಸಗಿ ದೂರನ್ನ ವಜಾ ಮಾಡಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನ ಸುಪ್ರೀಂಕೋರ್ಟ್ ರದ್ದು ಮಾಡಿದೆ.

ಇದು ಸೂಕ್ತವಾಗಿ ವಿಚಾರಣೆಗೆ ಒಳಪಡಬೇಕಾದ ಪ್ರಕರಣ. ಹೈಕೋರ್ಟ್ ದೂರನ್ನ ವಜಾ ಮಾಡಿರುವುದಕ್ಕೆ ಯಾವುದೇ ಕಾರಣಗಳಿಲ್ಲ. ವಿಚಾರಣೆ ವೇಳೆ ನಿರ್ದೋಷಿ ಎಂಬುದನ್ನ ಸಾಬೀತುಪಡಿಸಿ ಎಂದು ಸರ್ವೋಚ್ಛ ನ್ಯಾಯಾಲಯ ಲತಾ ರಜಿನಿಕಾಂತ್ ಅವರಿಗೆ ಆದೇಶಿಸಿದೆ. ಜಾಹೀರಾತು ಕಂಪನಿ ನೀಡಿರುವ ದೂರಿನಲ್ಲಿ ವಿಚಾರಣೆ ನಡೆಸಬಹುದಾದ ಅಂಶಗಳಿವೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

2014ರಲ್ಲಿ ಕೊಚಾಡೈಯನ್ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಸಂದರ್ಭ ಲತಾ ಅವರು ನಿರ್ದೇಶಕರಾಗಿರುವ ಮೀಡಿಯಾ ಒನ್ ಕಂಪನಿಗೆ ಲತಾ ಅವರ ವೈಯಕ್ತಿಕ ಗ್ಯಾರಂಟಿ ಮೇಲೆ ಹಣ ನೀಡಿದ್ದೆವು. ಹಣ ಹಿಂದಿರುಗಿಸಲು ವಿಫಲವಾದ ಲತಾ, ಅದೇ ಹಣದಲ್ಲಿ ಕೆಲಸ ಹಳೆಯ ಸಾಲ ತೀರಿಸಲು ಬಳಸಿಕೊಂಡಿದ್ದಾರೆ. ಹೀಗಾಗಿ, ವಂಚನೆ ಆರೋಪದಡಿ ವಿಚಾರಣೆ ನಡೆಸುವಂತೆ ಜಾಹೀರಾತು ಕಂಪನಿ ದೂರಿನಲ್ಲಿ ಮನವಿ ಮಾಡಿತ್ತು. ದೂರಿನ ವಿಚಾರಣೆ ನಡೆಸಿದ್ದ ಕೆಳಹಂತದ ನ್ಯಾಯಾಲಯ ತನಿಖೆ ಆದೇಶಿಸಿತ್ತು. ಬಳಿಕ ಹೈಕೋರ್ಟ್​ ದೂರನ್ನ ವಜಾ ಮಾಡಿ ಆದೇಶಿಸಿತ್ತು. ಇದರ ವಿರುದ್ಧ ದೂರುದಾರರು ಸುಪ್ರೀಂಕೋರಟ್​ ಮೆಟ್ಟಿಲೇರಿದ್ದರು.

ಈ ಕುರಿತಂತೆ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್ ಮುಂದೆ ಹೇಳಿಕೆ ನಿಡಿದ್ದ ಲತಾ, ಮೂರು ತಿಂಗಳಲ್ಲಿ ಮೀಡಿಯಾ ಒನ್ ಕಂಪನಿ ಹಣ ಪಾವತಿಸಲು ವಿಫಲವಾದರೆ, ತಾನೇ 6.2 ಕೋಟಿ ರೂ. ಪಾವತಿಸುವುದಾಗಿ ಒಪ್ಪಿಕೊಂಡಿದ್ದರು.

ಈ ಮಧ್ಯೆ, ಕಳೆದ ವಾರ ಮೀಡಿಯಾ ಒನ್ ಕಂಪನಿ ಪರ ವಕೀಲರು ಕೇವಲ 10 ಲಕ್ಷ ರೂ. ಚೆಕ್ ನೀಡಲು ಮುಂದಾಗಿದ್ದರು. ಜೊತೆಗೆ ಲತಾ ಸಮ್ಮತಿ ಇಲ್ಲದೆ 6.2 ಕೋಟಿ ರೂ. ಹಣ ಪಾವತಿಸುವ ಕುರಿತು ನ್ಯಾಯಾಲಯಕ್ಕೆ ತಿಳಿಸಲಾಗಿದೆ ಎಂದು ಲತಾ ಪರ ವಕೀಲ ಬಾಲಾಜಿ ಶ್ರೀನಿವಾಸನ್ ಕೋರ್ಟ್ ಮುಂದೆ ಹೇಳಿಕೆ ನೀಡಿದ್ದರು.

ಈ ಸಂದರ್ಭ, ದೂರನ್ನ ವಜಾ ಮಾಡಿದ ಹೈಕೋರ್ಟ್ ಆದೇಶ ಸರಿಯೇ ಅಲ್ಲವೇ ಎಂಬ ಬಗ್ಗೆ ಮಾತ್ರವೇ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಕಳೆದ ವಾರ ತಿಳಿಸಿತ್ತು.  ಇವತ್ತಿನ ವಿಚಾರಣೆ ವೇಳೆ, ಲತಾ ಅವರು ಮಿಡಿಯಾ ಒನ್ ಕಂಪನಿಯ ನಿರ್ದೇಶಕರಲ್ಲ. ಪ್ರಕರಣ ಶುದ್ಧ ಸಿವಿಲ್ ವಿಚಾರವಾಗಿದೆ ಎಂದು ವಕೀಲ ಶ್ರೀನಿವಾಸನ್ ವಾದಿಸಿದ್ದರು. ಲತಾ ಪರ ವಕೀಲರ ವಾದದಿಂದ ತೃಪ್ತರಾಗದ ಸುಪ್ರೀಂಕೋರ್ಟ್ ವಿಭಾಗೀಯ ಪೀಠ ತನಿಖೆಗೆ ಆದೇಶಿಸಿದೆ.
Loading...

 
First published:July 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...