RIL AGM 2020: ‘ರಿಲಾಯನ್ಸ್​​ ಜಿಯೋ ಬಿಸಿನೆಸ್​​ ಪಾರ್ಟ್ನರ್ ಆಗಲು ಹೆಮ್ಮೆ ಇದೆ‘ - ಗೂಗಲ್ ಸಿಇಒ ಸುಂದರ್ ಪಿಚೈ

ವಿಶ್ವದ 6ನೇ ಅತಿ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿರುವ ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ನ ಮುಖ್ಯಸ್ಥ ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ಪ್ಲಾಟ್​ಫಾರ್ಮ್​ನಲ್ಲಿ ಗೂಗಲ್ ಸಂಸ್ಥೆ 33,000 ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿದೆ.

ಸುಂದರ್ ಪಿಚ್ಚೈ

ಸುಂದರ್ ಪಿಚ್ಚೈ

  • Share this:
    "ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಇಂಟರ್​​ನೆಟ್​​ ಸೇವೆ ಸಿಗಬೇಕು ಎಂಬುದು ನಮ್ಮ ಉದ್ದೇಶ. ಹೀಗಾಗಿ ಭಾರತದ ಕೋಟ್ಯಾಂತರ ಜನರಿಗೆ ಸ್ಮಾರ್ಟ್​​ಫೋನ್​​ ಮೂಲಕ ಇಂಟರ್​​ನೆಟ್​ ಸೇವೆ ತಲುಪಿಸುವ ಉದ್ದೇಶದಿಂದ ಗೂಗಲ್​​ ಕಂಪನಿ ಜಿಯೋ ಜತೆ ಒಪ್ಪಂದ ಮಾಡಿಕೊಂಡಿದೆ. ಜಿಯೋ ಪ್ಲಾಟ್​ಫಾರ್ಮ್​ನಲ್ಲಿ ನಮ್ಮ ಸಂಸ್ಥೆಯ ಮೊದಲನೇ ಹೂಡಿಕೆಯಾಗಿ 33,000 ಕೋಟಿ ರೂ. ಇನ್ವೆಸ್ಟ್​​ ಮಾಡಲು ಹೆಮ್ಮೆ ಇದೆ" ಎಂದು ಗೂಗಲ್ ಸಂಸ್ಥೆಯ ಮುಖ್ಯಸ್ಥ ಸಿಇಓ ಸುಂದರ್‌ ಪಿಚೈ ಸಂತಸ ವ್ಯಕ್ತಪಡಿಸಿದ್ಧಾರೆ.



    ಇತ್ತೀಚೆಗಷ್ಟೇ ಮುಂದಿನ 5-7 ವರ್ಷಗಳಲ್ಲಿ ಭಾರತದಲ್ಲಿ ನಾವು 75 ಸಾವಿರ ಕೋಟಿ ರೂ. ಅಂದರೆ 10 ಬಿಲಿಯನ್​​ ಡಾಲರ್​​​​ ಹೂಡಿಕೆ ಮಾಡಲು ನಿರ್ಧರಿಸಿದ್ದೇವೆ ಎಂದು ಗೂಗಲ್ ಸಂಸ್ಥೆಯ ಮುಖ್ಯಸ್ಥ ಸಿಇಓ ಸುಂದರ್‌ ಪಿಚೈ ಘೋಷಿಸಿದ್ದರು. ಈ ಮೂಲಕ ಭಾರತದಲ್ಲಿ ಎಲ್ಲಾ ಡಿಜಿಟಲ್​​ ಮಾಡಲು ನೆರವಾಗಲಿದ್ದೇವೆ ಎಂದಿದ್ದರು.

    ವಿಶ್ವದ 6ನೇ ಅತಿ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿರುವ ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ನ ಮುಖ್ಯಸ್ಥ ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ಪ್ಲಾಟ್​ಫಾರ್ಮ್​ನಲ್ಲಿ ಗೂಗಲ್ ಸಂಸ್ಥೆ 33,000 ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿದೆ.

    ಇಂದು ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್ ಕಂಪನಿಯ 43ನೇ ವಾರ್ಷಿಕ ಸಭೆ (ಎಜಿಎಂ)ನಲ್ಲಿ ಮಾತನಾಡಿರುವ ಮುಕೇಶ್ ಅಂಬಾನಿ ಈ ವಿಚಾರವನ್ನು ಘೋಷಿಸಿದ್ದಾರೆ. ರಿಲಯನ್ಸ್​ ಇಂಡಸ್ಟ್ರೀಸ್​ನ ಭಾಗವಾಗಿರುವ ಜಿಯೋದಲ್ಲಿ ಗೂಗಲ್ ಶೇ. 7.7ರಷ್ಟು ಷೇರು ಹೊಂದುವ ಮೂಲಕ 33,000 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ಖಚಿತಪಡಿಸಿದ್ದಾರೆ.



    ಇದನ್ನೂ ಓದಿ: RIL AGM 2020: Jioದಲ್ಲಿ Google 33,000 ಕೋಟಿ ರೂ. ಹೂಡಿಕೆ; ಮುಕೇಶ್ ಅಂಬಾನಿ ಘೋಷಣೆ

    ಈ ಕುರಿತು ಗೂಗಲ್ ಮತ್ತು ರಿಲಯನ್ಸ್​ ಕಂಪನಿಗಳ ನಡುವೆ ಕೆಲವು ದಿನಗಳಿಂದ ಚರ್ಚೆ ನಡೆದಿತ್ತು. ಇದೀಗ ಅದು ಅಧಿಕೃತವಾಗಿ ಘೋಷಣೆಯಾಗಿದೆ. ಈಗಾಗಲೇ ಜಿಯೋ ಪ್ಲಾಟ್​ಫಾರ್ಮ್​ನಲ್ಲಿ ಫೇಸ್​ಬುಕ್, ಕ್ವಾಲ್ಕಂ ವೆಂಚರ್ಸ್​ ಮುಂತಾದ 10ಕ್ಕೂ ಹೆಚ್ಚು ಸಂಸ್ಥೆಗಳು ಬಂಡವಾಳ ಹೂಡಿಕೆ ಮಾಡಿವೆ. ಭಾರತದಲ್ಲಿ 1.3 ಶತಕೋಟಿ ಜನರಿಗೆ ಉದ್ಯೋಗಾವಕಾಶ ನೀಡುವುದಷ್ಟೇ ಅಲ್ಲದೆ ಡಿಜಿಟಲ್ ಇಂಡಿಯಾ ಪರಿಕಲ್ಪನೆಯನ್ನು ಕಾರ್ಯರೂಪಕ್ಕಿಳಿಸುವುದು ರಿಲಯನ್ಸ್​ ಇಂಡಸ್ಟ್ರೀಸ್​ನ ಉದ್ದೇಶ. ಈ ಹಿನ್ನೆಲೆಯಲ್ಲಿ ಜಿಯೋ ವೇದಿಕೆಯನ್ನು ಬಂಡವಾಳ ಹೂಡಿಕೆಗೆ ಮುಕ್ತವಾಗಿಸಲಾಗಿದೆ.
    Published by:Ganesh Nachikethu
    First published: