ಬಾಬ್ರಿ ಮಸೀದಿ ಕೆಡವಿದ್ದಕ್ಕೆ ಹೆಮ್ಮೆ ಇದೆ; ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾಗೆ ಒಂದೇ ದಿನ ಎರಡು ನೊಟೀಸ್​

ಸಂದರ್ಶನವೊಂದರಲ್ಲಿ ಪ್ರಗ್ಯಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 1992ರಲ್ಲಿ ಬಾಬ್ರಿ ಮಸೀದಿ ಕೆಡವಿದ್ದಕ್ಕೆ ಪ್ರಗ್ಯಾಗೆ ಬೇಸರವಿಲ್ಲವಂತೆ. ನನ್ನ ನಿರ್ಧಾರದ ಬಗ್ಗೆ ನನಗೆ ಸಂತಸವಿದೆ ಎಂದು ಪ್ರಗ್ಯಾ ಹೇಳಿಕೊಂಡಿದ್ದಾರೆ.

Rajesh Duggumane | news18
Updated:April 21, 2019, 12:45 PM IST
ಬಾಬ್ರಿ ಮಸೀದಿ ಕೆಡವಿದ್ದಕ್ಕೆ ಹೆಮ್ಮೆ ಇದೆ; ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾಗೆ ಒಂದೇ ದಿನ ಎರಡು ನೊಟೀಸ್​
ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್
  • News18
  • Last Updated: April 21, 2019, 12:45 PM IST
  • Share this:
ನವದೆಹಲಿ (ಏ.21): ಭೋಪಾಲ್​ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸಾಧ್ವಿ ಪ್ರಗ್ಯಾ ಸಿಂಗ್​ ಠಾಕೂರ್​ ಸಾಲು ಸಾಲು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ಚುನಾವಣಾ ಆಯೋಗ ಒಂದೇ ದಿನ ಎರಡು ನೊಟೀಸ್​ ಜಾರಿಮಾಡಿದೆ.

ಸಂದರ್ಶನವೊಂದರಲ್ಲಿ ಪ್ರಗ್ಯಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 1992ರಲ್ಲಿ ಬಾಬ್ರಿ ಮಸೀದಿ ಕೆಡವಿದ್ದಕ್ಕೆ ಪ್ರಗ್ಯಾಗೆ ಬೇಸರವಿಲ್ಲವಂತೆ. ನನ್ನ ನಿರ್ಧಾರದ ಬಗ್ಗೆ ನನಗೆ ಸಂತಸವಿದೆ ಎಂದು ಪ್ರಗ್ಯಾ ಹೇಳಿಕೊಂಡಿದ್ದಾರೆ.

“ಬಾಬ್ರಿ ಮಸೀದಿ ಕೆಡವಿದ್ದಕ್ಕೆ ಬೇಸರವೇಕೆ ಮಾಡಿಕೊಳ್ಳಬೇಕು? ನನಗೆ ಆ ಬಗ್ಗೆ ಹೆಮ್ಮೆ ಇದೆ. ರಾಮ ಮಂದಿರ ಸಮೀಪ ಅನೇಕ ಬೇಡದ ವಸ್ತುಗಳಿದ್ದವು. ಅದನ್ನು ನಾವು ತೆಗೆದು ಹಾಕಿದ್ದೇವೆ. ನಾವು ರಾಮ ಮಂದಿರ ಕಟ್ಟುತ್ತೇವೆ,” ಎಂದು ಹೇಳಿದ್ದಾರೆ.

ಇದಕ್ಕೂ ಮೂರು ದಿನ ಮೊದಲು ಮಾತನಾಡಿದ್ದ ಅವರು, 26/11ರ ಮುಂಬೈ ಭಯೋತ್ಪಾದನಾ ದಾಳಿಯ ವೇಳೆ ಹುತಾತ್ಮರಾಗಿದ್ದ ಪೊಲೀಸ್​ ಅಧಿಕಾರಿ ಹಾಗೂ ಮುಂಬೈ ಭಯೋತ್ಪಾದಕ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಹೇಮಂತ್​ ಕರ್ಕರೆ ಸಾಯಲು ನನ್ನ ಶಾಪವೇ ಕಾರಣ ಎಂದು ಹೇಳಿದ್ದರು.

ಇದನ್ನೂ ಓದಿ: ಮಾಲೆಗಾಂವ್ ಬಾಂಬ್​ ಸ್ಫೋಟದ​​ ಆರೋಪಿ ಸಾಧ್ವಿ ಪ್ರಗ್ಯಾ ಬಿಜೆಪಿ ಸೇರ್ಪಡೆ; ಭೂಪಾಲ್​ನಲ್ಲಿ ದಿಗ್ವಿಜಯ ಸಿಂಗ್ ವಿರುದ್ಧ ಕಣಕ್ಕೆ?

ಹೇಮಂತ್​ ಕರ್ಕರೆ ಪೊಲೀಸ್​ ಅಧಿಕಾರಿಯಾಗಿದ್ದಾಗ ಹಿಂದೂ ಸಂಘಟನೆಯ ಹಲವು ಸದಸ್ಯರನ್ನು ಬಂಧಿಸಿದ್ದರು. ಮಾಲೆಗಾಂವ್​ ಬಾಂಬ್​ ಸ್ಫೋಟದಲ್ಲಿ ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿರಲಿಲ್ಲ. ಆದರೂ ನನ್ನನ್ನು ಬಂಧಿಸಿ ಹಿಂಸೆ ನೀಡಿದ್ದರು. ನನ್ನ ವಿರುದ್ಧ ಸಾಕ್ಷಿ ಕಲೆಹಾಕಿ ಶಿಕ್ಷೆ ಕೊಡಿಸುವುದಾಗಿ ಹೇಳಿದ್ದರು. ಆಗ ನಾನು ಅವರಿಗೆ ಶಾಪ ನೀಡಿದ್ದೆ. ಆ ಶಾಪ ಮತ್ತು ಅವರು ಮಾಡಿದ ಕರ್ಮದಿಂದಲೇ 2008ರ ನವೆಂಬರ್ 26ರಂದು ನಡೆದ ಮುಂಬೈ ದಾಳಿಯಲ್ಲಿ ಹೇಮಂತ್​ ಕರ್ಕರೆ ಉಗ್ರರ ಗುಂಡೇಟಿಗೆ ಬಲಿಯಾಗಿ ಸಾವನ್ನಪ್ಪಿದರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಚುನಾವಣಾ ಆಯೋಗ ಪ್ರಗ್ಯಾ ಅವರಿಗೆ ಒಂದೇ ದಿನ ಎರಡು ನೋಟೀಸ್​ ನೀಡಿದೆ.

2008ರಲ್ಲಿ ನಡೆದ ಮಾಲೆಗಾಂವ್​ ಬಾಂಬ್ ಸ್ಫೋಟ ಪ್ರಕರಣದಲ್ಲಿ 6 ಜನ ಸಾವನ್ನಪ್ಪಿದ್ದರು. 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ಸಾಧ್ವಿ ಪ್ರಗ್ಯಾ ಅವರನ್ನು ಬಂಧಿಸಿದ್ದರು. ಸದ್ಯಕ್ಕೆ ಆಕೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ (ಯುಎಪಿಎ) ಅಡಿ ಸಾಧ್ವಿ ಪ್ರಗ್ಯಾ ಮೇಲೆ ಇನ್ನೂ ಕಣ್ಗಾವಲಿನಲ್ಲಿದ್ದಾರೆ.ಇದನ್ನೂ ಓದಿ:  ಮಾಲೆಗಾಂವ್ ಬಾಂಬ್​ ಸ್ಫೋಟದ​​ ಆರೋಪಿ ಸಾಧ್ವಿ ಪ್ರಗ್ಯಾ ಬಿಜೆಪಿ ಸೇರ್ಪಡೆ; ಭೂಪಾಲ್​ನಲ್ಲಿ ದಿಗ್ವಿಜಯ ಸಿಂಗ್ ವಿರುದ್ಧ ಕಣಕ್ಕೆ

ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಗ್ಯಾ ಠಾಕೂರ್ ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಯಾದರು. ಅವರನ್ನು ಬಿಜೆಪಿ ಭದ್ರಕೋಟೆ ಆಗಿರುವ ಭೂಪಾಲ್​ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಸಲಾಗಿದೆ. ಕಾಂಗ್ರೆಸ್​ ನಾಯಕ ದಿಗ್ವಿಜಯ ಸಿಂಗ್ ವಿರುದ್ಧ ಪ್ರಗ್ಯಾ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

First published:April 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading