ಐಪಿಎಸ್​ ಮಗಳಿಗೆ, ಡಿಸಿಪಿ ಅಪ್ಪನ ಸೆಲ್ಯೂಟ್..!: ಮಗಳು ಆದೇಶ ಕೊಟ್ರೆ ಇವರಿಗೆ ಹೆಮ್ಮೆ

Precilla Olivia Dias
Updated:September 4, 2018, 12:25 PM IST
ಐಪಿಎಸ್​ ಮಗಳಿಗೆ, ಡಿಸಿಪಿ ಅಪ್ಪನ ಸೆಲ್ಯೂಟ್..!: ಮಗಳು ಆದೇಶ ಕೊಟ್ರೆ ಇವರಿಗೆ ಹೆಮ್ಮೆ
Precilla Olivia Dias
Updated: September 4, 2018, 12:25 PM IST
ನ್ಯೂಸ್​ 18 ಕನ್ನಡ

ತೆಲಂಗಾಣ(ಸೆ.04): ಆಕೆ ಅಪ್ಪನನ್ನು ಮೀರಿಸಿದ ಮಗಳು. ತನ್ನ ಕೈಬೆರಳು ಹಿಡಿದುಕೊಂಡೇ ಎದೆಯುದ್ದ ಬೆಳೆದ ಮಗಳು, ಇಂದು ಕೈತೋರಿ ಆದೇಶ ನೀಡುತ್ತಾಳೆ. ಮಗಳು ಆದೇಶ ಕೊಟ್ಟರೆ ಅಪ್ಪನಿಗೆ ಹೆಮ್ಮೆಯೋ ಹೆಮ್ಮೆ. ಅವರು ಯಾರು, ಎಲ್ಲಿಯವರು? ಇಲ್ಲಿದೆ ವಿವರ.

ಇಂಥದೊಂದು ಅಚ್ಚರಿಯ ಸನ್ನಿವೇಶ ಯಾವುದೋ ಸಿನಿಮಾ ಕಥೆಯಲ್ಲ. ತೆಲಂಗಾಣದಲ್ಲೀಗ ಮನೆ ಮಾತಾಗಿರುವ ಅಪ್ಪ - ಮಗಳ ಸ್ಟೋರಿ. ಅವರ ಹೆಸರು ಎ.ಆರ್.ಉಮಾಮಹೇಶ್ವರ್ ಶರ್ಮಾ. DCP ಆಗಿರುವ ಉಮಾಮಹೇಶ್ವರ್, ಈಗ SP ಆಗಿರುವ ಮಗಳು ಸಿಂಧು ಶರ್ಮಾಗೆ ಸೆಲ್ಯೂಟ್ ಹೊಡೀತಾರೆ. ಮಗಳು ಕೊಡೋ ಆದೇಶವನ್ನು ಹೆಮ್ಮೆಯಿಂದ ಪಾಲಿಸ್ತಾರೆ. ಮಗಳು ಪ್ರೀತಿಯಿಂದ ಆದೇಶ ಕೊಡುತ್ತಿದ್ದಾರೆ, ಹೆಮ್ಮೆಯಿಂದ ಎದೆಯುಬ್ಬಿಸಿಕೊಂಡು ಚಾಚೂ ತಪ್ಪದೆ ಆದೇಶ ಪಾಲಿಸುತ್ತಾರೆ. ಈ ಸುದ್ದಿ ಈಗ ತೆಲಂಗಾಣದಲ್ಲಿ ಮನೆ ಮಾತಾಗಿದ್ದು, ವಿಡಿಯೋ ವೈರಲ್ ಆಗಿದೆ.

ತಂದೆ ಉಮಾಮಹೇಶ್ವರ್ ಸಾಧಾರಣ SI ಆಗಿ ಪೊಲೀಸ್‌ ಇಲಾಖೆಗೆ ಸೇರಿದ್ದರು. ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ, ಗಮನ ಸೆಳೆದು IPS ಗೆ ಪ್ರಮೋಶನ್‌ ಪಡೆದವರು. ತಂದೆಯ ಕನಸಿನಂತೆ ಮಗಳು ಸಿಂಧು ನೇರವಾಗಿ IPS ಪಾಸ್‌ ಮಾಡಿ SP ಆಗಿದ್ದಾರೆ. ಒಬ್ಬ ತಂದೆಗೆ ಇದಕ್ಕಿಂತ ಸಾರ್ಥಕತೆ ಬೇರೆ ಏನಿದೆ ಎಂಬುವುದು ಉಮಾಮಹೇಶ್ವರ್ ಮಾತು.

ನಮ್ಮ ಕರ್ತವ್ಯದ ಸಂದರ್ಭದಲ್ಲಿ ನಾವು ಎದುರು ಬದುರಾಗಿದ್ದು ಇದೇ ಮೊದಲು. ಆಕೆಯೊಂದಿಗೆ ಕೆಲಸ ಮಾಡುವ ಅವಕಾಶ ಪಡೆದ ನಾನು ಅದೃಷ್ಟವಂತ. ಆಕೆ ನನ್ನ ಮೇಲಾಧಿಕಾರಿ. ಆಕೆಯನ್ನು ನೋಡಿದಾಗ ನಾನು ಸೆಲ್ಯೂಟ್​ ಹೊಡೆಯುತ್ತೇನೆ. ನಾವಿಬ್ಬರೂ ನಮ್ಮ ಕರ್ತವ್ಯ ಮಾಡುತ್ತಿದ್ದೇವೆ. ಆದರೆ ಮನೆಯಲ್ಲಿ ಸಾಮಾನ್ಯ ಅಪ್ಪ, ಮಗಳಂತೆ ಇರುತ್ತೇವೆ.

-ಉಮಾಮಹೆಶ್ವರ್​ ಶರ್ಮಾ, ಡಿಸಿಪಿ


First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ