Sri Lanka Crisis: ಪ್ರೆಸಿಡೆಂಟ್ ಮನೆಗೆ ನುಗ್ಗಿ ಸ್ವಿಮ್ಮಿಂಗ್ ಪೂಲ್​ನಲ್ಲಿ ಈಜಾಡಿದ ಶ್ರೀಲಂಕಾ ಜನ

Sri Lanka Economic Crisis: ಶ್ರೀಲಂಕಾದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ಉದ್ರಿಕ್ತ ಪ್ರತಿಭಟನಾಕಾರರು ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರ ಬಂಗಲೆಗೆ ನುಗ್ಗಿದ್ದಾರೆ.

ಶ್ರೀಲಂಕಾ ಅಧ್ಯಕ್ಷರ ಭವನಕ್ಕೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು

ಶ್ರೀಲಂಕಾ ಅಧ್ಯಕ್ಷರ ಭವನಕ್ಕೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು

  • Share this:
ಕೊಲಂಬೋ(ಜು.10): ಶ್ರೀಲಂಕಾದಲ್ಲಿ (Sri Lanka) ಸರ್ಕಾರ ವಿರೋಧಿ ಪ್ರತಿಭಟನೆಗಳು (Protest) ತೀವ್ರ ಸ್ವರೂಪಪಡೆದುಕೊಳ್ಳುತ್ತಲೇ ಇದೆ. ಪ್ರತಿಭಟನಾಕಾರರು ಶನಿವಾರ ಮಧ್ಯ ಕೊಲಂಬೊದ ಹೈ-ಸೆಕ್ಯುರಿಟಿ ಫೋರ್ಟ್  (High Security Fort) ಪ್ರದೇಶದಲ್ಲಿ ಅಧ್ಯಕ್ಷ ಗೊಟಬಯ ರಾಜಪಕ್ಸೆ (Gotabaya Rajapaksa) ಅವರ ಅಧಿಕೃತ ನಿವಾಸಕ್ಕೆ ನುಗ್ಗಿದ್ದಾರೆ. ಉದ್ರಿಕ್ತ ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ಮುರಿದು ರಾಜೀನಾಮೆಗಾಗಿ ಒತ್ತಾಯಿಸಿದ್ದಾರೆ. ಭದ್ರತಾ ಸಿಬ್ಬಂದಿ ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆಯಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಕನಿಷ್ಠ 30 ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಕೆಲವರು ಶ್ರೀಲಂಕಾದ ಧ್ವಜಗಳನ್ನು ಹಿಡಿದಿದ್ದರು. ಅವರು ಅಧ್ಯಕ್ಷ ರಾಜಪಕ್ಸೆ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟಿಸಿದ್ದಾರೆ.

ಗೋಟಾಬಯ ರಾಜಪಕ್ಸೆ ಅವರ ನಿವಾಸದ ಹೊರಗಿನ ಈ ನಾಟಕೀಯ ದೃಶ್ಯಗಳು  ಈಗ ಸೋಷಿಯಲ್ ಮೀಡಿಯಾಗಳಲ್ಲಿಯೂ ವೈರಲ್ ಆಗಿವೆ. ಪ್ರತಿಭಟನಾಕಾರರು ಕಾಂಪೌಂಡ್‌ಗೆ ನುಗ್ಗಿ, ಪೊಲೀಸರು ಹಾಕಿದ್ದ ಭದ್ರತಾ ವ್ಯವಸ್ಥೆ ನಾಶ ಮಾಡಿ ಅಧ್ಯಕ್ಷರ ಸ್ವಿಮ್ಮಿಂಗ್ ಪೂಲ್​​ನಲ್ಲಿ ಸ್ನಾನ ಮಾಡಿ ಅವರ ಅಡುಗೆಮನೆ ಮತ್ತು ಮನೆಯೊಳಗೆ ನುಗ್ಗುತ್ತಿರುವುದು ವಿಡಿಯೋಗಳಲ್ಲಿ ಕಂಡುಬಂದಿದೆ.

ಮಾರ್ಚ್​ನಿಂದ ಅಧ್ಯಕ್ಷರ ಭವನದಲ್ಲಿದ್ದ ರಾಜಪಕ್ಸೆ

ಮಾರ್ಚ್‌ನಿಂದ ರಾಜೀನಾಮೆಗಾಗಿ ಜನರಿಂದ ಒತ್ತಾಯ ಎದುರಿಸುತ್ತಿರುವ ರಾಜಪಕ್ಸೆ, ಏಪ್ರಿಲ್ ಆರಂಭದಲ್ಲಿ ಪ್ರತಿಭಟನಾಕಾರರು ತಮ್ಮ ಕಚೇರಿಯ ಪ್ರವೇಶದ್ವಾರವನ್ನು ಆಕ್ರಮಿಸಲು ಬಂದಾಗಿನಿಂದ ಅಧ್ಯಕ್ಷರ ಭವನವನ್ನು ತಮ್ಮ ನಿವಾಸ ಮತ್ತು ಕಚೇರಿಯಾಗಿ ಬಳಸುತ್ತಿದ್ದರು.

ಅಧ್ಯಕ್ಷರು  ಸ್ಥಳದಿಂದ ಶಿಫ್ಟ್

ಮೂಲಗಳ ಪ್ರಕಾರ, ಶನಿವಾರದ ಪ್ರತಿಭಟನೆಯ ಸಾಧ್ಯತೆಯನ್ನು ಮೊದಲೇ ನಿರೀಕ್ಷಿಸಿದ್ದ ಹಿನ್ನೆಲೆಯಲ್ಲಿ ಅಧ್ಯಕ್ಷರನ್ನು ಶುಕ್ರವಾರ ಅವರ ನಿವಾಸದಿಂದ ಸ್ಥಳಾಂತರಿಸಲಾಯಿತು. ಪ್ರತಿಭಟನಾಕಾರರು ಈಗ ಅವರ ಕಚೇರಿ ಮತ್ತು ಅಧಿಕೃತ ನಿವಾಸ ಎರಡನ್ನೂ ಆಕ್ರಮಿಸಿಕೊಂಡಿರುವುದರಿಂದ ಅವರು ಉಳಿದುಕೊಂಡಿರುವ ಸ್ಥಳ ಯಾರಿಗೂ ತಿಳಿದಿಲ್ಲ.

ಏಪ್ರಿಲ್‌ನಲ್ಲಿ ನಡೆದ ಸರ್ಕಾರದ ವಿರೋಧಿ ಪ್ರತಿಭಟನೆಗಳು ಮೇ ತಿಂಗಳಲ್ಲಿ ಅಧ್ಯಕ್ಷ ರಾಜಪಕ್ಸೆ ಅವರ ಹಿರಿಯ ಸಹೋದರ ಮಹಿಂದ ರಾಜಪಕ್ಸೆ ಅವರ ರಾಜೀನಾಮೆಗೆ ತೀವ್ರ ಒತ್ತಡ ಹಾಕಿತ್ತು. ರಾಷ್ಟ್ರಪತಿ ಭವನದ ಗೋಡೆಗಳನ್ನು ಹತ್ತಿದ ಪ್ರತಿಭಟನಾಕಾರರು ಯಾವುದೇ ಆಸ್ತಿಪಾಸ್ತಿಗೆ ಹಾನಿಯಾಗದಂತೆ ಅಥವಾ ಹಿಂಸಾಚಾರದಲ್ಲಿ ಪಾಲ್ಗೊಳ್ಳದೆ  ಭವನವನ್ನು ಆಕ್ರಮಿಸಿಕೊಂಡಿದ್ದಾರೆ.

ರಾಷ್ಟ್ರಪತಿ ಭವನದ ಎರಡು ರಸ್ತೆಗಳಲ್ಲಿ ಅಶ್ರುವಾಯು ಪ್ರಯೋಗ

ನಡೆಯುತ್ತಿರುವ ಪ್ರತಿಭಟನೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಕನಿಷ್ಠ 30 ಜನರು ಗಾಯಗೊಂಡಿದ್ದು, ಅವರನ್ನು ಕೊಲಂಬೊದ ರಾಷ್ಟ್ರೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದಕ್ಕೂ ಮೊದಲು, ಪೊಲೀಸರು ಅಧ್ಯಕ್ಷರ ಭವನದ ಎರಡು ಎಂಟ್ರಿ ರೋಡ್ ಚಾಥಮ್ ಸ್ಟ್ರೀಟ್ ಮತ್ತು ಲೋಟಸ್ ರಸ್ತೆಗಳಲ್ಲಿ ಅಶ್ರುವಾಯು ಪ್ರಯೋಗಿಸಿದರು. ಆದರೆ ಅದನ್ನು ಧಿಕ್ಕರಿಸಿದ ಪ್ರತಿಭಟನಾಕಾರರು ನಿರಂತರವಾಗಿ ಮುಂದುವರೆದರು.

ಇದನ್ನೂ ಓದಿ: Sri Lanka PM Ranil Wickremesinghe Resigns: ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ರಾಜೀನಾಮೆ; ಕಾರಣ ಏನು?

ಪ್ರತಿಭಟನಾಕಾರರು ಗಾಲೆ, ಕ್ಯಾಂಡಿ ಮತ್ತು ಮಾತಾರಾ ಪ್ರಾಂತೀಯ ಪಟ್ಟಣಗಳಲ್ಲಿ ರೈಲ್ವೇ ಅಧಿಕಾರಿಗಳೊಂದಿಗೆ ಘರ್ಷಣೆ ನಡೆಸಿದರು. ಪ್ರತಿಭಟನಾಕಾರರು ಕೊಲಂಬೊಗೆ ರೈಲುಗಳನ್ನು ಓಡಿಸಲು ಅಧಿಕಾರಿಗಳನ್ನು ಒತ್ತಾಯಿಸಿದರು. ಆ ಪ್ರದೇಶದ ಸುತ್ತಲೂ ಪೊಲೀಸ್, ವಿಶೇಷ ಕಾರ್ಯಪಡೆ ಮತ್ತು ಸೇನೆಯ ದೊಡ್ಡ ತುಕಡಿಗಳನ್ನು ನಿಯೋಜಿಸಲಾಗಿತ್ತು.

ಕೊಲಂಬೊದಲ್ಲಿ ಪ್ರತಿಭಟನಾಕಾರರ ಜೊತೆ ಸೇರಿಕೊಳ್ಳಲು ಜನರು ಉಪನಗರಗಳಿಂದ ನಡೆದುಕೊಂಡು ಹೋಗುತ್ತಿದ್ದಾರೆ ಎಂದು ಕೊಲಂಬೊ ಆಂದೋಲನದ ಸಂಘಟಕರು ಹೇಳಿದ್ದಾರೆ. ರಾಜಪಕ್ಸೆ ಅವರು ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುವವರೆಗೂ ನಾವು ಪಟ್ಟು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.

ಇದನ್ನೂ ಓದಿ: Fuel Crisis: ಇಂಧನ ತುಂಬಿಸಲು 5 ದಿನದಿಂದ ಬಂಕ್ ಮುಂದೆ ಕ್ಯೂ ನಿಂತಿದ್ದ ಟ್ರಕ್ ಡ್ರೈವರ್ ಸಾವು

ಉನ್ನತ ವಕೀಲರ ಸಂಘಗಳು, ಮಾನವ ಹಕ್ಕುಗಳ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳಿಂದ ನಿರಂತರ ಒತ್ತಡಕ್ಕೆ ಒಳಗಾದ ನಂತರ, ಯೋಜಿತ ಸರ್ಕಾರಿ ವಿರೋಧಿ ಪ್ರತಿಭಟನೆಗಳಿಗೆ ಮುಂಚಿತವಾಗಿ, ಕೊಲಂಬೊ ಸೇರಿದಂತೆ ದೇಶದ ಪಶ್ಚಿಮ ಪ್ರಾಂತ್ಯದ ಏಳು ವಿಭಾಗಗಳಲ್ಲಿ ವಿಧಿಸಲಾಗಿದ್ದ ಕರ್ಫ್ಯೂವನ್ನು ಪೊಲೀಸರು ಈ ಹಿಂದೆ ತೆಗೆದುಹಾಕಿದ್ದರು.
Published by:Divya D
First published: