• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Sri Lanka Crisis: ಕೊತ ಕೊತ ಕುದಿಯುತ್ತಿದೆ ಶ್ರೀಲಂಕಾ! ಪ್ರಧಾನಿ ರಾಜಪಕ್ಸ ನಿವಾಸಕ್ಕೆ ಪ್ರತಿಭಟನಾಕಾರರಿಂದ ಬೆಂಕಿ

Sri Lanka Crisis: ಕೊತ ಕೊತ ಕುದಿಯುತ್ತಿದೆ ಶ್ರೀಲಂಕಾ! ಪ್ರಧಾನಿ ರಾಜಪಕ್ಸ ನಿವಾಸಕ್ಕೆ ಪ್ರತಿಭಟನಾಕಾರರಿಂದ ಬೆಂಕಿ

ಮಹಿಂದ ರಾಜಪಕ್ಸ ಮನೆಗೆ ಬೆಂಕಿ

ಮಹಿಂದ ರಾಜಪಕ್ಸ ಮನೆಗೆ ಬೆಂಕಿ

ಶ್ರೀಲಂಕಾದಲ್ಲಿ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಬಿಗಡಾಯಿಸುತ್ತಿದೆ. ಪ್ರಧಾನಿ ಮಹಿಂದ ರಾಜಪಕ್ಸ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೂ ಪ್ರತಿಭಟನಾಕಾರರ ಆಕ್ರೋಶ ತಣ್ಣಗಾಗಿಲ್ಲ. ಇದೀಗ ಉದ್ರಿಕ್ತರು ಪ್ರಧಾನಿ ಮಹಿಂದ ರಾಜಪಕ್ಸ ಅವರ ನಿವಾಸಕ್ಕೆ ಬೆಂಕಿ ಹಚ್ಚಿದ್ದಾರೆ.

  • Share this:

ಕೊಲಂಬೋ, ಶ್ರೀಲಂಕಾ: ಆರ್ಥಿಕ (Economic) ಹಾಗೂ ರಾಜಕೀಯ ಬಿಕ್ಕಟ್ಟಿನಿಂದ (Political Crisis) ಕಂಗೆಟ್ಟಿರುವ ಶ್ರೀಲಂಕಾದಲ್ಲಿ (Sri Lanka) ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಕೈ ಮೀರುತ್ತಿದೆ. ಜನರ ತಾಳ್ಮೆ ಮಿತಿಮೀರುತ್ತಿದ್ದಂತೆ ದೇಶಾದ್ಯಂತ ಪ್ರತಿಭಟನೆ (Protest) ಹಿಂಸಾತ್ಮಕ (Violent) ರೂಪ ಪಡೆದಿದೆ. ಪ್ರತಿಭಟನಾಕಾರರು ಸಿಕ್ಕ ಸಿಕ್ಕಲ್ಲಿ, ಸಿಕ್ಕ ಸಿಕ್ಕ ವಸ್ತುಗಳಿಗೆ ಬೆಂಕಿ (Fire) ಹಚ್ಚಿ, ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಿನ್ನೆಯಷ್ಟೇ ಗಲಾಟೆಯಲ್ಲಿ ಆಡಳಿತಾರೂಢ ಪಕ್ಷದ ಸಂಸದ (MP) ಸಾವನ್ನಪ್ಪಿದ್ದರು. ಇದಾದ ಬಳಿಕ ಪ್ರಧಾನಿ ಮಹಿಂದ ರಾಜಪಕ್ಸ (Prime Minister Mahinda Rajapaksa) ತಮ್ಮ ಸ್ಥಾನಕ್ಕೆ ರಾಜೀನಾಮೆ (Resign) ನೀಡಿದ್ದರು. ಆದರೂ ಪ್ರತಿಭಟನಾಕಾರರ ಆಕ್ರೋಶ ತಣ್ಣಗಾಗಿಲ್ಲ. ಇದೀಗ ಉದ್ರಿಕ್ತರು ಪ್ರಧಾನಿ ಮಹಿಂದ ರಾಜಪಕ್ಸ ಅವರ ನಿವಾಸಕ್ಕೆ (House) ಬೆಂಕಿ ಹಚ್ಚಿದ್ದಾರೆ.


ಪ್ರಧಾನಿ ಮಹಿಂದ ರಾಜಪಕ್ಸ ನಿವಾಸಕ್ಕೆ ಬೆಂಕಿ


ಪ್ರಧಾನಿ ಮಹಿಂದ ರಾಜಪಕ್ಸ ರಾಜೀನಾಮೆ ಬಳಿಕವೂ ಅವರ ರಾಜೀನಾಮೆ ಬಳಿಕವೂ ಪ್ರತಿಭಟನಾಕಾರರ ಆಕ್ರೋಶ ತಣ್ಣಗಾಗಿಲ್ಲ. ಸರ್ಕಾರದ ವಿರುದ್ಧದ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆ ಉತ್ತರದ ನಗರವಾದ ಕುರುನಾಗಲದಲ್ಲಿರುವ ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರ ನಿವಾಸಕ್ಕೆ ಬೆಂಕಿ ಹಚ್ಚಲಾಗಿದೆ. ಅವರು ರಾಜೀನಾಮೆ ಸಲ್ಲಿಸಿದ ಕೆಲವೇ ಗಂಟೆಗಳ ನಂತರ ರಾಜಪಕ್ಸೆ ಅವರ ಕುರುನಾಗಲ ಮೂಲದ ಮನೆಗೆ ಬೆಂಕಿ ಹಚ್ಚಲಾಗಿದೆ.


ಪ್ರಧಾನಿ ನಿವಾಸದ ಎದುದು ದಾಂಧಲೆ


ಪ್ರಧಾನ ಮಂತ್ರಿಯ ಅಧಿಕೃತ ನಿವಾಸದ ಒಳಗಿನಿಂದ ಗುಂಡು ಹಾರಿಸಲಾಯಿತು, ಸಾವಿರಾರು ಪ್ರತಿಭಟನಾಕಾರರು ಮುಖ್ಯ ಗೇಟ್ ಅನ್ನು ಮುರಿದು ನಿಲ್ಲಿಸಿದ ಟ್ರಕ್ ಅನ್ನು ಸುಟ್ಟುಹಾಕಿದರು. ಇನ್ನು ಪ್ರಧಾನಿ ಮನೆಗೆ ಬೆಂಕಿ ಹಚ್ಚಿದ ಪರಿಣಾಮ ಮನೆ ಸಂಪೂರ್ಣವಾಗಿ ಸುಟ್ಟುಹೋಗಿದೆ.


ಇದನ್ನೂ ಓದಿ: Explained: ಸ್ವರ್ಣ'ಲಂಕೆ'ಯಲ್ಲಿ ನಿಲ್ಲದ ಸಂಕಷ್ಟ; ತುತ್ತು ಊಟಕ್ಕೂ ಪರದಾಟ-ಹಣಕ್ಕಾಗಿ ಹಾಹಾಕಾರ! ಮುಂದೇನು ಗತಿ?


ಹಿಂಸಾಚಾರದಲ್ಲಿ 23 ಮಂದಿಗೆ ಗಾಯ


ಶ್ರೀಲಂಕಾ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರ ಕಚೇರಿಯ ಹೊರಗೆ ಘರ್ಷಣೆ ಹಿಂಸಾಚಾರಕ್ಕೆ ತಿರುಗಿ 23 ಮಂದಿ ಗಾಯಗೊಂಡಿದ್ದಾರೆ. ಹೀಗಾಗಿ ತಕ್ಷಣವೇ ಜಾರಿಗೆ ಬರುವಂತೆ ಇಡೀ ಶ್ರೀಲಂಕಾದಲ್ಲಿ ಕರ್ಫ್ಯೂ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರದ ಪರ ಗುಂಪುಗಳು ಪ್ರಧಾನಿ ಕಚೇರಿಯ ಹೊರಗೆ ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಿದ್ದು, ಕರ್ಫ್ಯೂಗೆ ಕಾರಣವಾಗಿದೆ.


ನಿನ್ನೆ ರಾಜೀನಾಮೆ ನೀಡಿದ್ದ ಪ್ರಧಾನಿ


ದೇಶದಲ್ಲಿ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ನಿವಾರಣೆಗೆ ಮಧ್ಯಂತರ ಆಡಳಿತವನ್ನು ರಚಿಸಲು ಪ್ರಧಾನಿ ಮಹಿಂದಾ ರಾಜಪಕ್ಸೆ ಅವರ ಮೇಲೆ ಒತ್ತಡ ಹೆಚ್ಚಾಗಿತ್ತು. ಆದರೂ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ನಿವಾರಿಸಲು ಸರ್ಕಾರ ವಿಫಲವಾದ ಕಾರಣ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರನ್ನು ಅಧಿಕಾರಕ್ಕೆ ರಾಜೀನಾಮೆ ನೀಡಿದ್ದಾರೆ . ಹೀಗಾಗಿ ಸರ್ಕಾರದ ಪರ ಗುಂಪುಗಳು ಹಾಗೂ ಪ್ರತಿಭಟನೆಯ ಗುಂಪುಗಳ ನಡುವೆ ಹಿಂಸಾಚಾರ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಗಳು ಇವೆ.


ರಾಜಪಕ್ಸ ಕುಟುಂಬದ ವಿರುದ್ಧ ಆಕ್ರೋಶ


ರಾಜಪಕ್ಸ ಕುಟುಂಬದ ಹಿರಿಯಣ್ಣ, ಪ್ರಧಾನಿ ಮಹಿಂದಾ ರಾಜಪಕ್ಸ ಅವರು ಭಾನುವಾರ ಧಾರ್ಮಿಕ ಸ್ಥಳ ಅನುರಾಧಪುರಕ್ಕೆ ತೆರಳಿದ್ದಾಗ ಅಲ್ಲಿ ಸಾರ್ವಜನಿಕರಿಂದ ಪ್ರತಿಭಟನೆ ಎದುರಿಸಬೇಕಾಯಿತು. ಇಂಧನ, ಅಡುಗೆ ಅನಿಲಕ್ಕಾಗಿ ಜನ ಆಗ್ರಹಿಸಿದರು. ವಿದ್ಯುತ್ ಕಡಿತವನ್ನು ನಿಲ್ಲಿಸುವಂತೆ ಒತ್ತಾಯಿಸಿ ಘೇರಾವ್‌ ಹಾಕಿದರು.ಇಡೀ ರಾಜಪಕ್ಸ ಕುಟುಂಬ ರಾಜಕೀಯ ತ್ಯಜಿಸಬೇಕು ಮತ್ತು ದೇಶದಿಂದ ಲೂಟಿ ಮಾಡಿರುವ ಆಸ್ತಿಯನ್ನು ಹಿಂದಿರುಗಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಬೌದ್ಧ ಬಿಕ್ಕುಗಳು ಕೂಡ ಮಧ್ಯಂತರ ಸರ್ಕಾರ ರಚನೆಗೆ ಹಾದಿ ಮಾಡಿಕೊಡಬೇಕೆಂದು ರಾಜಪಕ್ಸ ಸೋದರರಿಗೆ ಆಗ್ರಹಿಸಿದ್ದು, ಅದಕ್ಕಾಗಿ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು.


ಇದನ್ನೂ ಓದಿ: Explainer: ದಶಕಗಳಲ್ಲೇ ಶ್ರೀಲಂಕಾ ಅನುಭವಿಸುತ್ತಿರುವ ಅತ್ಯಂತ ಭೀಕರ ಅರ್ಥಿಕ ಬಿಕ್ಕಟ್ಟಿಗೆ ಕಾರಣ ಏನು?


ಎಲ್ಲಾ ಪಕ್ಷಗಳಿಗೂ ಸರ್ಕಾರ ರಚನೆಗೆ ಆಹ್ವಾನ?


ಶ್ರೀಲಂಕಾದ ಆರ್ಥಿಕ ಹಾಗೂ ರಾಜಕೀಯ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಇದೀಗ ಪ್ರಧಾನಿ ರಾಜೀನಾಮೆ ನೀಡಿದ್ದು, ಅಧ್ಯಕ್ಷ ರಾಜಪಕ್ಸ ಅವರು ಸಂಸತ್ತಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳನ್ನು ಸರ್ವಪಕ್ಷಗಳ ಸಂಪುಟ ರಚನೆಗೆ ಆಹ್ವಾನಿಸುವ ನಿರೀಕ್ಷೆಯಿದೆ.

top videos
    First published: