ನವ ದೆಹಲಿ (ಸಪ್ಟೆಂಬರ್ 27); ಕೇಂದ್ರ ಸರ್ಕಾರದ (Central Government) ರೈತ ವಿರೋಧಿ ಕೃಷಿ ನೀತಿಯ (Agriculture Bill) ವಿರುದ್ಧ ಇಂದು ಘೋಷಿಸಲಾಗಿರುವ ಭಾರತ್ ಬಂದ್ (Bharat Bhand) ಬಹುತೇಕ ಯಶಸ್ವಿಯಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್‌ಗೆ ದೇಶಾದಂತ್ಯ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕರ್ನಾಟಕ (Karnataka) ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೂ ಸಹ ರೈತರು ರಸ್ತೆಗೆ ಇಳಿದು ಪ್ರತಿಭಟಿಸುತ್ತಿದ್ದಾರೆ. ಇನ್ನೂ ಭಾರತ್ ಬಂದ್‌ಗೆ ತಮಿಳುನಾಡು (Tamilnadu), ಕೇರಳ (Kerala), ಪಶ್ಚಿಮ ಬಂಗಾಳ (West Bengal), ಬಿಹಾರ (Bihar), ಹರಿಯಾಣ (Hariyana) ಮತ್ತು ಪಂಜಾಬ್ (Punjab) ಸಂಪೂರ್ಣವಾಗಿ ಸ್ತಬ್ಧವಾಗಿದೆ. ಇನ್ನೂ ಭಾರತದ ಬಂದ್ನಿಂದಾಗಿ ಉತ್ತರಪ್ರದೇಶ-ದೆಹಲಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಟ್ರಾಫಿಕ್ ಜಾಮ್ಗೆ ಸಿಲುಕಿದೆ ಎಂಬ ಮಾಹಿತಿಗಳು ದೊರಕುತ್ತಿವೆ. ಪರಿಣಾಮ ದೆಹಲಿಯ ಗಡಿ ಭಾಗಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ವಿವಾದಿತ ಕೃಷಿ ಕಾನೂನುಗಳ ಜಾರಿಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ, ರೈತ ಸಂಘಟನೆಗಳು "ಭಾರತ್ ಬಂದ್" ಗೆ ಕರೆ ನೀಡಿವೆ. ಬೆಳಗ್ಗೆ 6 ಗಂಟೆಗೆ ಬಂದ್ ಆರಂಭವಾಗಿದ್ದು, ಇಂದು ಸಂಜೆ 4 ಗಂಟೆಯವರೆಗೂ ಮುಂದುವರಿಯಲಿದೆ.
KMP Expressway blocked by farmers #आज_भारत_बंद_है #FarmersBharatBandh https://t.co/njMJjHRBoE pic.twitter.com/WaOGCYPBzR
— Kisan Ekta Morcha (@Kisanektamorcha) September 27, 2021
Guru Nanak Dev University, Amritsar Main Gate blocked by students and employees.#आज_भारत_बंद_है pic.twitter.com/GMsm5rGc3I
— Kisan Ekta Morcha (@Kisanektamorcha) September 27, 2021
Purnea, Bihar#आज_भारत_बंद_है#FarmersBharatBandh pic.twitter.com/9cB4e3ZtL2
— Kisan Ekta Morcha (@Kisanektamorcha) September 27, 2021
ಸರ್ಕಾರಿ ಮತ್ತು ಖಾಸಗಿ ಕಚೇರಿಗಳು, ಶೈಕ್ಷಣಿಕ ಮತ್ತು ಇತರ ಸಂಸ್ಥೆಗಳು, ಅಂಗಡಿಗಳು, ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳನ್ನು ಮುಚ್ಚುವಂತೆ ಸಂಯುಕ್ತ ಕಿಸಾನ್ ಮೋರ್ಚಾ (SKM) ಕರೆ ನೀಡಿದೆ. ಆದರೆ, ಆಸ್ಪತ್ರೆಗಳು, ಮೆಡಿಕಲ್‌ಗಳು, ಪರಿಹಾರ ಮತ್ತು ರಕ್ಷಣಾ ಕಾರ್ಯಗಳು, ಎಲ್ಲಾ ತುರ್ತು ಸಂಸ್ಥೆಗಳು ಮತ್ತು ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗುತ್ತದೆ. ಜೊತೆಗೆ ಬಂದ್ ಅನ್ನು ಸ್ವಯಂಪ್ರೇರಿತ ಮತ್ತು ಶಾಂತಿಯುತವಾಗಿ ಜಾರಿಗೊಳಿಸಲಾಗುವುದು ಎಂದು ರೈತ ಸಂಘಟನೆ ಭರವಸೆ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ