• Home
  • »
  • News
  • »
  • national-international
  • »
  • Hindu temple in England: ಇಂಗ್ಲೆಂಡ್​ನ ಹಿಂದೂ ದೇವಾಲಯದ ಆವರಣದೊಳಗೆ 'ಅಲ್ಲಾ ಹು ಅಕ್ಬರ್' ಕೂಗು; 47 ಜನರ ಬಂಧನ

Hindu temple in England: ಇಂಗ್ಲೆಂಡ್​ನ ಹಿಂದೂ ದೇವಾಲಯದ ಆವರಣದೊಳಗೆ 'ಅಲ್ಲಾ ಹು ಅಕ್ಬರ್' ಕೂಗು; 47 ಜನರ ಬಂಧನ

ಇಂಗ್ಲೆಂಡ್‌ ನ ಹಿಂದೂ ದೇವಾಲಯ

ಇಂಗ್ಲೆಂಡ್‌ ನ ಹಿಂದೂ ದೇವಾಲಯ

ಮುಸ್ಲಿಂ ಸಮುದಾಯಕ್ಕೆ ಸೇರಿದವರೆಂದು ಹೇಳಲಾದ ಸುಮಾರು 200 ಜನರು ಇಂಗ್ಲೆಂಡ್‌ನ ವೆಸ್ಟ್ ಮಿಡ್‌ಲ್ಯಾಂಡ್ಸ್‌ನಲ್ಲಿರುವ ಸ್ಮೆಥ್‌ವಿಕ್ ಪಟ್ಟಣದ ಹಿಂದೂ ದೇವಾಲಯದ ಹೊರಗೆ ಸೆಪ್ಟೆಂಬರ್ 20 ಮಂಗಳವಾರ (GMT) ದಂದು ಯೋಜಿತ ಪ್ರತಿಭಟನೆ ನಡೆಸಿದ್ದಾರೆ. ಸ್ಮೆಥ್‌ವಿಕ್ ಪಟ್ಟಣದ ಲೇನ್‌ ನಲ್ಲಿರುವ ದುರ್ಗಾ ಭವನ ಹಿಂದೂ ಕೇಂದ್ರದ ಮುಂದೆ ಜಮಾಯಿಸಿದ ಸುಮಾರು 200ಕ್ಕೂ ಅಧಿಕ ಪ್ರತಿಭಟನಕಾರರು “‘ಅಲ್ಲಾ ಹು ಅಕ್ಬರ್” ಘೋಷಣೆ ಕೂಗಿ ದೇವಾಲಯದ ಆವರಣದೊಳಗೆ ದೊಂಬಿ ಎಬ್ಬಿಸಿ ವಾತಾವರಣವನ್ನು ಹದಗೆಡಿಸಿದ್ದಾರೆ.

ಮುಂದೆ ಓದಿ ...
  • Share this:

ವಿದೇಶದಲ್ಲಿ ಹಿಂದೂ ದೇವಾಲಯಗಳನ್ನು (Hindu temple) ವಿರೂಪಗೊಳಿಸುವಿಕೆ, ದೇವಾಲಯಗಳ ಮುಂದೆ ಯೋಜಿತ ಪ್ರತಿಭಟನೆಗಳಂತಹ ವರದಿಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವರದಿಯಾಗುತ್ತಿವೆ. ಮುಸ್ಲಿಂ ಸಮುದಾಯಕ್ಕೆ (Muslim Community) ಸೇರಿದವರೆಂದು ಹೇಳಲಾದ ಸುಮಾರು 200 ಜನರು ಇಂಗ್ಲೆಂಡ್‌ನ ವೆಸ್ಟ್ ಮಿಡ್‌ಲ್ಯಾಂಡ್ಸ್‌ನಲ್ಲಿರುವ ಸ್ಮೆಥ್‌ವಿಕ್ ಪಟ್ಟಣದ ಹಿಂದೂ ದೇವಾಲಯದ ಹೊರಗೆ ಸೆಪ್ಟೆಂಬರ್ 20 ಮಂಗಳವಾರ (GMT) ದಂದು ಯೋಜಿತ ಪ್ರತಿಭಟನೆ ನಡೆಸಿದ್ದಾರೆ. ಸ್ಮೆಥ್‌ವಿಕ್ ಪಟ್ಟಣದ ಲೇನ್‌ ನಲ್ಲಿರುವ ದುರ್ಗಾ ಭವನ (Durga Bhawan) ಹಿಂದೂ ಕೇಂದ್ರದ ಮುಂದೆ ಜಮಾಯಿಸಿದ ಸುಮಾರು 200ಕ್ಕೂ ಅಧಿಕ ಪ್ರತಿಭಟನಕಾರರು (Protesters) “‘ಅಲ್ಲಾ ಹು ಅಕ್ಬರ್” ಘೋಷಣೆ ಕೂಗಿ ದೇವಾಲಯದ ಆವರಣದೊಳಗೆ ದೊಂಬಿ ಎಬ್ಬಿಸಿ ವಾತಾವರಣವನ್ನು ಹದಗೆಡಿಸಿದ್ದಾರೆ. ಅಲ್ಲದೇ ಗೋಡೆಗಳ ಮುಂದೆ ನಿಂತು ಅಸಹ್ಯಕರ ರೀತಿಯಲ್ಲಿ ವರ್ತಿಸುತ್ತಿರುವುದು ಕಂಡು ಬಂದಿದೆ.


'ಅಲ್ಲಾ ಹು ಅಕ್ಬರ್' ಘೋಷಣೆ ಕೂಗಿ ದೇವಾಲಯದ ಆವರಣದೊಳಗೆ ದೊಂಬಿ
ಸಾಮಾಜಿಕ ಮಾಧ್ಯಮದಲ್ಲಿ ಘಟನೆಗಳ ವೀಡಿಯೋ ಸಾಕಷ್ಟು ವೈರಲ್‌ ಕೂಡ ಆಗಿವೆ. ಬರ್ಮಿಂಗ್‌ಹ್ಯಾಮ್ ವರ್ಲ್ಡ್‌ ವರದಿ ಮಾಡಿರುವ ಪ್ರಕಾರ, ಅಪ್ನಾ ಮುಸ್ಲಿಮ್ಸ್ ಎಂಬ ಸಾಮಾಜಿಕ ಮಾಧ್ಯಮ ಖಾತೆಯು ಮಂಗಳವಾರ ದುರ್ಗಾ ಭವನದ ದೇವಸ್ಥಾನದ ಹೊರಗೆ "ಶಾಂತಿಯುತ ಪ್ರತಿಭಟನೆ" ಗೆ ಕರೆ ನೀಡಿತ್ತು. ಆದರೆ ದೇವಾಲಯದಲ್ಲಿ ಸೇರಿದ ನೂರಾರು ಮುಸ್ಲಿಂ ಪ್ರತಿಭಟನಾಕಾರರು ಹೊರಗೆ ದಾಂಧಲೆ ನಡೆಸಿದ್ದಾರೆ.


ಇದನ್ನೂ ಓದಿ: Afghanistan: ಹೊಟ್ಟೆಗೆ ಹಿಟ್ಟಿಲ್ಲ, ಹುಲ್ಲು ತಿಂದು ಹಸಿವು ನೀಗಿಸ್ತಿರೋ ಪುಟ್ಟ ಪುಟ್ಟ ಮಕ್ಕಳು: ಕರುಳು ಕಿವುಚುವಂತಿದೆ ಚಿತ್ರಗಳು


ತಕ್ಷಣವೇ ಸ್ಥಳಕ್ಕೆ ಪೊಲೀಸರು ಧಾವಿಸಿದರು. ಇಂಗ್ಲೆಂಡ್‌ ಖಾಕಿ ಪಡೆ ಕಾನೂನು ಜಾರಿ ಸಿಬ್ಬಂದಿ ಸುವ್ಯವಸ್ಥೆಯ ಕ್ರಮ ತೆಗೆದುಕೊಳ್ಳುತ್ತಿದ್ದಂತೆ, ಕೆಲವು ಪ್ರತಿಭಟನಾಕಾರರು ಗೋಡೆಗಳನ್ನು ಹತ್ತುವ ದೃಶ್ಯಗಳನ್ನು ವೀಡಿಯೋದಲ್ಲಿ ನೋಡಬಹುದಾಗಿದೆ.


ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ನಂತರ ಭುಗಿಲೆದ್ದ ಘರ್ಷಣೆ
ಇನ್ನೂ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ನಂತರ ಪೂರ್ವ ಇಂಗ್ಲೆಂಡ್‌ನ ಲೀಸೆಸ್ಟರ್‌ನಲ್ಲಿ ಭುಗಿಲೆದ್ದ ಹಿಂಸಾತ್ಮಕ ಘರ್ಷಣೆಯ ಈಗ ಎಲ್ಲೆಡೆ ವ್ಯಾಪಿಸುತ್ತಿದೆ. ಇತ್ತೀಚೆಗೆ ಲೀಸೆಸ್ಟರ್‌ ನಗರದಲ್ಲಿನ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಲಾಗಿದೆ ಮತ್ತು ಅದರ ಹೊರಗಿನ ಕೇಸರಿ ಧ್ವಜವನ್ನು ಅಪರಿಚಿತ ವ್ಯಕ್ತಿಗಳು ಎಳೆದಾಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.


ದುಬೈನಲ್ಲಿ ನಡೆದ ಭಾರತ-ಪಾಕಿಸ್ತಾನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯದ ನಂತರ ಹಿಂದೂ ಮತ್ತು ಮುಸ್ಲಿಂ ಗುಂಪುಗಳು ನಗರದಲ್ಲಿ ಹೆಚ್ಚಾಗಿವೆ ಎಂದು ಪೊಲೀಸರು ವರದಿ ಮಾಡಿದ್ದಾರೆ.


ಕೆನಡಾದಲ್ಲಿನ ಹಿಂದೂ ದೇವಾಲಯ ವಿರೂಪಗೊಳಿಸಿದ ಕಿಡಿಗೇಡಿಗಳು
ಕೆನಡಾದಲ್ಲಿ ಖಲಿಸ್ತಾನ ತೀವ್ರವಾದಿಗಳ ಗುಂಪೊಂದು ಟೊರೊಂಟೊದಲ್ಲಿರುವ ಹಿಂದೂ ದೇವಾಲಯ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರವನ್ನು ವಿರೂಪಗೊಳಿಸಿರುವ ಘಟನೆ ಮೊನ್ನೆ ತಾನೇ ವರದಿಯಾಗಿದ್ದು, ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ. ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಭಾರತೀಯ ಸಮುದಾಯದ ವಿರುದ್ಧದ ಹಿಂಸಾಚಾರವನ್ನು ಖಂಡಿಸಿ ಮತ್ತು ಸಂತ್ರಸ್ತರಿಗೆ ರಕ್ಷಣೆ ನೀಡುವಂತೆ ಟ್ವೀಟ್‌ ಮಾಡಿದೆ. ಅಪರಾಧಿಗಳ ಮೇಲೆ ತ್ವರಿತ ಕ್ರಮ ಕೈಗೊಳ್ಳಲು ಕೆನಡಾದ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.


ಇದನ್ನೂ ಓದಿ:  Saudi: ಸೌದಿ ರಾಜರ ಐಷಾರಾಮಿ ಜೀವನ: ಒಬ್ಬನಿಗೆ 30 ಪತ್ನಿಯರಾದರೆ, ಮತ್ತೊಬ್ಬ 100 ಮಕ್ಕಳ ತಂದೆ!


ಹಲವು ಗಣ್ಯರು ಕೃತ್ಯವನ್ನು ಖಂಡಿಸಿ ಟ್ವೀಟ್‌ ಮಾಡಿದ್ದರು. ಭಾರತ ಮೂಲದ ಕೆನಡಾದ ಸಂಸತ್ ಸದಸ್ಯ ಚಂದ್ರ ಆರ್ಯ ಕೂಡ ಟ್ವೀಟ್‌ ಮಾಡಿ, ಕೆನಡಾದ ಖಲಿಸ್ತಾನಿ ತೀವ್ರವಾದಿಗಳಿಂದ ಟೊರೊಂಟೊ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರ ವಿರೂಪಗೊಳಿಸಿರುವುದನ್ನು ಎಲ್ಲರೂ ಖಂಡಿಸಬೇಕು. ಇದು ಕೇವಲ ಒಂದು ಘಟನೆಯಲ್ಲ. ಕೆನಡಾದ ಹಿಂದೂ ದೇವಾಲಯಗಳು ಇತ್ತೀಚಿನ ದಿನಗಳಲ್ಲಿ ಈ ರೀತಿಯ ದಾಳಿಗೆ ಗುರಿಯಾಗುತ್ತಿವೆ ಎಂದು ಕಿಡಿಕಾರಿದ್ದಾರೆ.


ಗಲಭೆಯಲ್ಲಿ ಭಾಗಿಯಾಗಿದ್ದ 47 ಜನರ ಬಂಧನ
ಲೈಸೆಸ್ಟರ್ ಗಲಭೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಇದುವರೆಗೆ 47 ಜನರನ್ನು ಬಂಧಿಸಲಾಗಿದೆ. ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಮುಖಂಡರು ಮಂಗಳವಾರ ಬೆಳಗ್ಗೆ ಲೈಸೆಸ್ಟರ್‌ನ ಮಸೀದಿಯ ಮೆಟ್ಟಿಲುಗಳ ಮೇಲೆ ಜಮಾಯಿಸಿ ಶಾಂತಿ ಮತ್ತು ಸೌಹಾರ್ದತೆಗೆ ಒತ್ತಾಯಿಸಿ "ಪ್ರಚೋದನೆ ಮತ್ತು ಹಿಂಸಾಚಾರ"ವನ್ನು ತಕ್ಷಣವೇ ಕೊನೆಗೊಳಿಸಬೇಕೆಂದು ಜಂಟಿ ಕರೆ ನೀಡಿದರು.

Published by:Ashwini Prabhu
First published: