ತಿರುವನಂತಪುರಂನಲ್ಲಿ ಸಿಎಂ ಬಿಎಸ್​ವೈ ವಿರುದ್ಧ ಕೆಎಸ್​​ಯು ಪ್ರತಿಭಟನೆ; ಕೇರಳ ಪತ್ರಕರ್ತರ ಬಂಧಿಸಿದ್ದರ ವಿರುದ್ಧ ಆಕ್ರೋಶ

ಬಳಿಕ ವಶಕ್ಕೆ ಪಡೆದ ಪತ್ರಕರ್ತರನ್ನು ಬಿಡುಗಡೆ ಮಾಡುವಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿದ್ದರು. ಕೇರಳ ಸಿಎಂ ಮನವಿ ಪತ್ರದ ಬಳಿಕ ಬಂಧಿತ ಪತ್ರಕರ್ತರನ್ನು ಬಿಡುಗಡೆ ಮಾಡಲಾಗಿದೆ.

ಕೆಎಸ್​ಯು ಕಾರ್ಯಕರ್ತರು

ಕೆಎಸ್​ಯು ಕಾರ್ಯಕರ್ತರು

 • Share this:
  ತಿರುವನಂತಪುರಂ(ಡಿ.24): ಕೇರಳದ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ವಿರುದ್ಧ ಕೇರಳ ಸ್ಟೂಡೆಂಟ್ಸ್​​​ ಯೂನಿಯನ್​​(ಕೆಎಸ್​ಯು) ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಡಿಸೆಂಬರ್​​​​ 26ನೇ ತಾರೀಕಿನಂದು ಸೂರ್ಯಗ್ರಹಣ ಇರುವುದರಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೇರಳದ ವಿವಿಧ ದೇವಾಲಯಗಳಿಗೆ ತೆರಳಿ ಇಂದು ಮತ್ತು ನಾಳೆ ವಿಶೇಷ ಪೂಜೆ ಸಲ್ಲಿಸುತ್ತಿದ್ಧಾರೆ. ಇಲ್ಲಿನ ತಿರವನಂತಪುರಂ ಏರ್​​ಪೋರ್ಟ್​ನಿಂದ ಕಣ್ಣೂರು ರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಲು ಕಾರಿನಲ್ಲಿ ತೆರಳುತ್ತಿದ್ದಾಗ ಕೆಎಸ್​ಯು ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಮಂಗಳೂರಿನಲ್ಲಿ ಗೋಲಿಬಾರ್​​ ನಡೆದಾಗ ವರದಿ ಮಾಡಲು ಬಂದಿದ್ದ ಕೇರಳ ಪತ್ರಕರ್ತರನ್ನು ಬಂಧಿಸಿದ್ದಕ್ಕಾಗಿ ಕೆಎಸ್​ಯು ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಇದೀಗ ಕೆಎಸ್​​ಯು ಕಾರ್ಯಕರ್ತರನ್ನು ಕೇರಳ ಪೊಲೀಸರು ಬಂಧಿಸಿದ್ದು, ಸಿಎಂ ಬಿಎಸ್​​ ಯಡಿಯೂರಪ್ಪಗೆ ಬಿಗಿ ಭದ್ರತೆ ನೀಡಿದ್ಧಾರೆ. 

  ಇನ್ನು ನಿನ್ನೆ ರಾತ್ರಿಯೂ ಕೇರಳದ ತಿರುವನಂತಪುರಂ ಪ್ರವೇಶಿಸುತ್ತಿದ್ದಂತೆ ಸಿಎಂ ಯಡಿಯೂರಪ್ಪನವರ ಕಾರಿಗೆ ಅಡ್ಡ ಹಾಕಿದ್ದ ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಗೆ ಮುಂದಾಗಿದ್ದರು. ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಮತ್ತು ಕೇರಳದ ಪತ್ರಕರ್ತರನ್ನು ಪೊಲೀಸ್ ವಶಕ್ಕೆ ಪಡೆದಿದ್ದನ್ನು ಖಂಡಿಸಿ ಸಿಎಂ ಕಾರಿಗೆ ಅಡ್ಡ ಹಾಕಿದ್ದರು. ಗೋ ಬ್ಯಾಕ್​ ಯಡಿಯೂರಪ್ಪ ಎಂದು ಘೋಷಣೆ ಕೂಗುತ್ತಿದ್ದ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಯಡಿಯೂರಪ್ಪನವರಿಗೆ ಮುಂದೆ ಸಾಗಲು ಅನುವು ಮಾಡಿಕೊಟ್ಟಿದ್ದರು.

  ಮಂಗಳೂರಿನಲ್ಲಿ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ವೇಳೆ ಪೊಲೀಸ್ ಗೋಲಿಬಾರ್​ನಲ್ಲಿ ಇಬ್ಬರು ಮೃತಪಟ್ಟಿದ್ದರು. ಆಗ ಇಬ್ಬರ ಮೃತದೇಹಗಳನ್ನು ಇಟ್ಟಿದ್ದ ನಗರದ ವೆನ್​ಲಾಕ್​ ಆಸ್ಪತ್ರೆಯಲ್ಲಿ ವರದಿ ಮಾಡಲು ತೆರಳಿದ್ದ ಕೇರಳದ ಏಳು ಪತ್ರಕರ್ತರನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು.

  ಇದನ್ನೂ ಓದಿ: ಗ್ರಹಣ ಹಿನ್ನೆಲೆ ಕೇರಳದ ದೇವಸ್ಥಾನಗಳಿಗೆ ತೆರಳಿದ ಸಿಎಂ ಯಡಿಯೂರಪ್ಪ; ಗೋ ಬ್ಯಾಕ್ ಎಂದ ಕಾಂಗ್ರೆಸ್ ಕಾರ್ಯಕರ್ತರು

  ಬಳಿಕ ವಶಕ್ಕೆ ಪಡೆದ ಪತ್ರಕರ್ತರನ್ನು ಬಿಡುಗಡೆ ಮಾಡುವಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿದ್ದರು. ಕೇರಳ ಸಿಎಂ ಮನವಿ ಪತ್ರದ ಬಳಿಕ ಬಂಧಿತ ಪತ್ರಕರ್ತರನ್ನು ಬಿಡುಗಡೆ ಮಾಡಲಾಗಿದೆ.

  ಏಷ್ಯಾನೆಟ್​ ನ್ಯೂಸ್​ ವರದಿಗಾರ ಮುಜೀಬ್ ಚೆರಿಯಾಪುರಂ, ಕ್ಯಾಮರಾಮನ್ ಪ್ರಥೀಶ್ ಕಪ್ಪೊತಾ, ನ್ಯೂಸ್​ 18 ಕೇರಳ ಕ್ಯಾಮರಾಮನ್ ಸುಮೇಶ್ ವಿಸಿ, 24 ನ್ಯೂಸ್ ವರದಿಗಾರರಾದ ಆನಂದ್ ಕೊಟ್ಟಿಲಾ, ರೆಂಜಿತ್, ಮೀಡಿಯಾ ವನ್ ವರದಿಗಾರ ಸಬೀರ್ ಒಮರ್, ಕ್ಯಾಮರಾಮನ್ ಅನೀಶ್​ ಬಂಧನಕ್ಕೆ ಒಳಗಾಗಿ ಬಿಡುಗಡೆಯಾದ ಪತ್ರಕರ್ತರು.
  Published by:Ganesh Nachikethu
  First published: