HOME » NEWS » National-international » PROSTITUTION HAS BEEN STARTED IN BUDHWAR PETH AFTER UNLOCK ONLY THOSE WHO HAVE BATH CAN DO SEX HERE VB

ಲಾಕ್​ಡೌನ್ ಬಳಿಕ ವೇಶ್ಯಾವಾಟಿಕೆ ಪುನರಾರಂಭ; ರೆಡ್​ಲೈಟ್ ಏರಿಯಾದಲ್ಲಿನ್ನು ಸ್ನಾನ ಮಾಡಿದರೆ ಮಾತ್ರ ಸೆಕ್ಸ್!

ಎಲ್ಲಾ ವೇಶ್ಯಾಗೃಹಗಳ ಹೊರಗೆ ದೇಹದ ಉಷ್ಣತೆ ಪರೀಕ್ಷಿಸುವ ಉಪಕರಣ, ಸ್ಯಾನಿಟೈಸರ್ ಇರಿಸಲಾಗಿದೆ. ಹೀಗೆ ಮಾರ್ಗದರ್ಶಿ ಸೂತ್ರಗಳಿಗೆ ಅನುಸಾರವಾಗಿ ಬುಧವಾರ್ ಪೇಟೆಯಲ್ಲಿರುವ ರೆಡ್ ಲೈಟ್ ಪ್ರದೇಶದಲ್ಲಿ ವೇಶ್ಯಾವಾಟಿಕೆ ಪುನರಾರಂಭಗೊಂಡಿದೆ.

news18-kannada
Updated:September 11, 2020, 11:56 AM IST
ಲಾಕ್​ಡೌನ್ ಬಳಿಕ ವೇಶ್ಯಾವಾಟಿಕೆ ಪುನರಾರಂಭ; ರೆಡ್​ಲೈಟ್ ಏರಿಯಾದಲ್ಲಿನ್ನು ಸ್ನಾನ ಮಾಡಿದರೆ ಮಾತ್ರ ಸೆಕ್ಸ್!
ಸಾಂದರ್ಭಿಕ ಚಿತ್ರ
  • Share this:
ಕಳೆದ ಐದು- ಆರು ತಿಂಗಳುಗಳಿಂದ ಕೊರೋನಾ ಎಂಬ ಮಹಾಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಈ ಕಣ್ಣಿಗೆ ಕಾಣದ ವೈರಸ್​ಗೆ ಬೆಚ್ಚಿ ಬಿದ್ದಿದೆ. ಹೀಗಿರುವಾಗ ಇದನ್ನು ತಾತ್ಕಾಲಿಕವಾಗಿ ನಿಯಂತ್ರಿಸಲು ಅನೇಕ ದೇಶಗಳು ಲಾಕ್‌ಡೌನ್ ಹೇರಿದ್ದವು. ಸದ್ಯ ಈ ಲಾಕ್‌ಡೌನ್‌  ನಿಧಾನವಾಗಿ ತೆರವಾಗುತ್ತಿದೆ. ಭಾರತದಲ್ಲೂ ಲಾಕ್‌ಡೌನ್ ಸಡಿಲಿಸುತ್ತಿದ್ದಂತೆಯೇ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಲಾರಂಭಿಸಿದೆ. ಆದರೆ, ಇವೆಲ್ಲರದ ನಡುವೆ ಪುಣೆಯಲ್ಲಿರುವ ಏಷ್ಯಾದ ಎರಡನೇ ಅತಿ ದೊಡ್ಡ ರೆಡ್​ಲೈಟ್ ಏರಿಯಾ ತೆರೆಯಲಾಗಿದೆ. ಕೊರೋನಾ ಪ್ರಕರಣಗಳು ದಾಖಲಾಗದ ಹಿನ್ನೆಲೆ ಈ ಅನುಮತಿ ನೀಡಲಾಗಿದೆ. ಹೀಗಾಗೇ ವಿಭಿನ್ನ ರಾಜ್ಯಗಳಲ್ಲಿರುವ ಸೆಕ್ಸ್‌ ವರ್ಕರ್ಸ್‌ ಸದ್ಯ ಪುಣೆ ಕಡೆ ಮುಖ ಮಾಡಿದ್ದಾರೆ.

ಲಾಕ್​ಡೌನ್ ಸಡಿಲವಾಗುತ್ತಿದ್ದಂತೆ ವೇಶ್ಯಾವಾಟಿಕೆ ಶುರುವಾಗಿದ್ದು, ಸ್ನಾನ, ಮಾಸ್ಕ್, ಗ್ಲೌಸ್ ಕಡ್ಡಾಯ ಎಂದು ಹೇಳಿ ಅನೇಕ ಸೂತ್ರ ಸಿದ್ಧಪಡಿಸಲಾಗಿದೆ. ಲಾಕ್​ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಪುಣೆಯ ವೇಶ್ಯಾವಾಟಿಕೆ ಕೇಂದ್ರಗಳು ಆರಂಭವಾಗಿವೆ. ಪುಣೆಯ ಬುಧವಾರ್ ಪೇಟೆಯಲ್ಲಿನ ರೆಡ್ ಲೈಟ್ ಪ್ರದೇಶದಲ್ಲಿ ಸುಮಾರು 3000ಕ್ಕೂ ಅಧಿಕ ವೇಶ್ಯಾವಾಟಿಕೆ ವೃತ್ತಿಯಲ್ಲಿ ತೊಡಗಿರುವ ಮಹಿಳೆಯರಿದ್ದು ತಮ್ಮ ವೃತ್ತಿಯನ್ನು ಆರಂಭಿಸಿದ್ದಾರೆ.

Ragini Dwivedi: ಸ್ಯಾಂಡಲ್​ವುಡ್​ ಡ್ರಗ್​ ಪ್ರಕರಣ; ನಟಿ ರಾಗಿಣಿ ದ್ವಿವೇದಿಗೆ ಇಂದು ಜೈಲಾ? ಜಾಮೀನಾ?

ಸಹೇಲಿ ಎನ್.ಜಿ.ಓ. ಸಂಘಟನೆಯ ನೆರವಿನಿಂದ ವೇಶ್ಯಾವಾಟಿಕೆ ವೃತ್ತಿ ಪುನರಾರಂಭಿಸಿದ್ದು, ನಿಯಮದಡಿಯಲ್ಲಿ ಲೈಂಗಿಕ ಕ್ರಿಯೆ ನಡೆಸಲು ಸೂಚಿಸಿದ್ದಾರೆ. ಪ್ರಮುಖವಾಗಿ ಗಿರಾಕಿಗಳು ವೇಶ್ಯಾಗೃಹ ಪ್ರವೇಶಿಸಿದ ಕೂಡಲೇ ಸ್ನಾನ ಮಾಡಬೇಕು. ರೂಮ್ ಪ್ರವೇಶಿಸುವ ಮುನ್ನ ಮುಖಕ್ಕೆ ಮಾಸ್ಕ್ ಮತ್ತು ಕೈಗೆ ಗ್ಲೌಸ್ ಧರಿಸುವುದು ಕಡ್ಡಾಯ. ವೃತ್ತಿನಿರತ ಮಹಿಳೆಯರು ಕೂಡ ಮಾಸ್ಕ್ ಮತ್ತು ಗ್ಲೌಸ್ ಧರಿಸಿ ಕಾಂಡೋಮ್ ಕಡ್ಡಾಯವಾಗಿ ಬಳಸಿ ಲೈಂಗಿಕ ಕ್ರಿಯೆ ನಡೆಸಬೇಕು.

ಎಲ್ಲಾ ವೇಶ್ಯಾಗೃಹಗಳ ಹೊರಗೆ ದೇಹದ ಉಷ್ಣತೆ ಪರೀಕ್ಷಿಸುವ ಉಪಕರಣ, ಸ್ಯಾನಿಟೈಸರ್ ಇರಿಸಲಾಗಿದೆ. ಹೀಗೆ ಮಾರ್ಗದರ್ಶಿ ಸೂತ್ರಗಳಿಗೆ ಅನುಸಾರವಾಗಿ ಬುಧವಾರ್ ಪೇಟೆಯಲ್ಲಿರುವ ರೆಡ್ ಲೈಟ್ ಪ್ರದೇಶದಲ್ಲಿ ವೇಶ್ಯಾವಾಟಿಕೆ ಪುನರಾರಂಭಗೊಂಡಿದೆ.

ಕೊರೋನಾ ಸಂಕಟದ ನಡುವೆ ಸೆಕ್ಸ್ ವರ್ಕರ್ಸ್‌ ತಮ್ಮ ಗ್ರಾಹಕರಿಗೆ ಫೋನ್ ಮೂಲಕವೂ ಸರ್ವಿಸ್ ಕೊಡಲಾರಂಭಿಸಿದ್ದಾರೆ. ಬುಧವಾರ್‌ ಪೇಟ್‌ನ ಮುಖ್ಯಸ್ಥೆ ಈ ಸಂಬಂಧ ಪ್ರತಿಕ್ರಿಯಿಸಿ, ವಿಡಿಯೋ ಕಾಲ್ ಮೂಲಕ ಗ್ರಾಹಕರಿಗೆ ಹುಡುಗಿಯರನ್ನು ಪರಿಚಯಿಸುವ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

ಇದರಿಂದ ಸಾಮಾಜಿಕ ಅಂತರ ಪಾಲನೆಯಾಗುವುದರೊಂದಿಗೆ ಸೆಕ್ಸ್‌ ವರ್ಕರ್ಸ್‌ಗಳಿಗೆ ದುಡಿಮೆಯೂ ಸಿಗುತ್ತದೆ. ಇನ್ನು ಪರಿಸ್ಥಿತಿ ಸರಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ಹೊಸ ಆಯ್ಕೆ ನೋಡಿಕೊಳ್ಳಬೇಕಾಗುತ್ತದೆ ಎಂದೂ ಅವರು ಹೇಳಿದ್ದಾರೆ.
Published by: Vinay Bhat
First published: September 11, 2020, 11:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories