Union Budget 2019 | 5 ಲಕ್ಷದವರೆಗೆ ಸಂಬಳ ಪಡೆಯುವವರಿಗೆ ತೆರಿಗೆ ಇಲ್ಲ; ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ

ಈವರೆಗೆ ವಾರ್ಷಿಕವಾಗಿ 2.5 ಲಕ್ಷ ಸಂಬಳ ಪಡೆಯುವವರೂ ತೆರಿಗೆ ಕಟ್ಟಬೇಕಿತ್ತು. ಇದರಿಂದ ಮಧ್ಯಮವರ್ಗದ ಸಂಬಳದಾರರು ಆರ್ಥಿಕ ಮುಗ್ಗಟ್ಟಿಗೆ ಸಿಲುಕುವಂತಾಗಿತ್ತು. ಇದೀಗ ಕೇಂದ್ರ ಸರ್ಕಾರ ತನ್ನ ಬಜೆಟ್​ನಲ್ಲಿ ವಾರ್ಷಿಕವಾಗಿ ಐದು ಲಕ್ಷದವರೆಗೆ ಸಂಬಳ ಪಡೆಯುವವರು ಯಾವುದೇ ತೆರಿಗೆ ಕಟ್ಟುವಂತಿಲ್ಲ ಎಂದು ಘೋಷಿಸಿದೆ.

HR Ramesh | news18
Updated:February 1, 2019, 1:34 PM IST
Union Budget 2019 | 5 ಲಕ್ಷದವರೆಗೆ ಸಂಬಳ ಪಡೆಯುವವರಿಗೆ ತೆರಿಗೆ ಇಲ್ಲ; ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ
ಸಾಂದರ್ಭಿಕ ಚಿತ್ರ
HR Ramesh | news18
Updated: February 1, 2019, 1:34 PM IST
ನವದೆಹಲಿ: ಮಧ್ಯಮ ವರ್ಗದ ವೇತನದಾರರಿಗೆ ಮೋದಿ ಸರ್ಕಾರ ಬಂಪರ್​ ಬಿಗ್ ಗಿಫ್ಟ್​ ನೀಡಿದೆ. ವಾರ್ಷಿಕ ಐದು ಲಕ್ಷದವರೆಗೆ ವೇತನ ಪಡೆಯುವವರನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

ಈವರೆಗೆ ವಾರ್ಷಿಕವಾಗಿ 2.5 ಲಕ್ಷ ಸಂಬಳ ಪಡೆಯುವವರೂ ತೆರಿಗೆ ಕಟ್ಟಬೇಕಿತ್ತು. ಇದರಿಂದ ಮಧ್ಯಮವರ್ಗದ ಸಂಬಳದಾರರು ಆರ್ಥಿಕ ಮುಗ್ಗಟ್ಟಿಗೆ ಸಿಲುಕುವಂತಾಗಿತ್ತು. ಇದೀಗ ಕೇಂದ್ರ ಸರ್ಕಾರ ತನ್ನ ಬಜೆಟ್​ನಲ್ಲಿ ವಾರ್ಷಿಕವಾಗಿ ಐದು ಲಕ್ಷದವರೆಗೆ ಸಂಬಳ ಪಡೆಯುವವರು ಯಾವುದೇ ತೆರಿಗೆ ಕಟ್ಟುವಂತಿಲ್ಲ ಎಂದು ಘೋಷಿಸಿದೆ. ಈ ಮೂಲಕ ಮಧ್ಯಮವರ್ಗದ ಸಂಬಳದಾರರಿಗೆ ಬಂಪರ್ ಕೊಡುಗೆ ನೀಡಿದೆ. ಆದರೆ, ಇಲ್ಲೂ ರಾಜಕೀಯ ತಂತ್ರಗಾರಿಗೆ ಮೆರೆದಿರುವ ಮೋದಿ ಸರ್ಕಾರ ಈ ಯೋಜನೆ ಜಾರಿಯಾಗಬೇಕಾದರೆ ಮುಂದಿನ ಅಧಿಕಾರ ಹಿಡಿಯುವ ಸರ್ಕಾರ ಇದಕ್ಕೆ ಅನುಮೋದನೆ ನೀಡಿದರೆ ಮಾತ್ರ ಈ ಯೋಜನೆ ಜಾರಿಯಾಗಲಿದೆ.

ಇದನ್ನು ಓದಿ: Union Budget 2019 | ಗೋಯಲ್ ಬಜೆಟ್​ನಲ್ಲಿ ಕೇಂದ್ರ ಸರ್ಕಾರದ ಸಾಧನೆ ಬಣ್ಣನೆ; ಆಯವ್ಯಯದ ಪ್ರಮುಖಾಂಶಗಳು

ಅಸಂಘಟಿತ ವಲಯದ ಕಾರ್ಮಿಕರಿಗೂ ಕೊಡುಗೆ ನೀಡಿರುವ ಸರ್ಕಾರ, ಪ್ರಧಾನ ಮಂತ್ರಿ ಶ್ರಮಯೋಗಿ ಮನ್ದನ್ ಯೋಜನೆ ಅಡಿ ತಿಂಗಳಿಗೆ 15 ಸಾವಿರ ರೂ ವೇತನ ಪಡೆಯುವ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯವನ್ನು ಒದಗಿಸಿದೆ. ಈ ಯೋಜನೆ ಅಡಿ ಕಾರ್ಮಿಕರು ತಿಂಗಳಿಗೆ ನೂರು ರೂಪಾಯಿ ಕಟ್ಟುವ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕು. ಅವರಿಗೆ 60 ವರ್ಷ ತುಂಬಿದ ನಂತರ ಪ್ರತಿತಿಂಗಳಿಗೆ 3 ಸಾವಿರ ಪಿಂಚಣಿ ನೀಡಲಾಗುವುದು. ಇದಕ್ಕಾಗಿ ಸರ್ಕಾರ ಪ್ರತಿವರ್ಷ 500 ಕೋಟಿ ಹಣವನ್ನು ಮೀಸಲಿಡಲಿದೆ. ಗ್ರಾಚುಟಿ ಮಿತಿಯಲ್ಲಿ 10 ಲಕ್ಷ ದಿಂದ 30 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದ್ದು, ಕಾರ್ಮಿಕರು ಅಕಾಲಿಕ ಮರಣ ಹೊಂದಿದರೆ 6 ಲಕ್ಷ ಪರಿಹಾರ ನೀಡಲಾಗುವುದು ಎಂದು ಪಿಯೂಷ್​ ಗೋಯಲ್​ ತಿಳಿಸಿದರು.
First published:February 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626