Gujarat Elections: 'ಉಚಿತ ವಿದ್ಯುತ್ ಕೊಡುಗೆ'ಯ ಗೂಗ್ಲಿ ಎಸೆದಿರುವ ಅರವಿಂದ ಕೇಜ್ರಿವಾಲ್

ಸಿಎಂ ಅರವಿಂದ್​ ಕೇಜ್ರಿವಾಲ್​

ಸಿಎಂ ಅರವಿಂದ್​ ಕೇಜ್ರಿವಾಲ್​

ಮಂತ್ರಿಗಳು ಉಚಿತ ವಿದ್ಯುತ್ ಪಡೆಯುತ್ತಾರೆ. ಜನರಿಗೆ ಉಚಿತ ವಿದ್ಯುತ್ ನೀಡಿದರೆ ತೊಂದರೆ ಆಗುತ್ತದೆ ಏಕೆ? ಗುಜರಾತಿನಲ್ಲಿ ಭ್ರಷ್ಟಾಚಾರವಿದೆ. ದೆಹಲಿ, ಪಂಜಾಬ್‌ ರೀತಿ ಭ್ರಷ್ಟಾಚಾರ ಕೊನೆಗೊಳಿಸಿ ಉಚಿತ ವಿದ್ಯುತ್ ನೀಡಲು ಹಣ ಉಳಿಸಲಾಗುತ್ತದೆ ಎಂದು ಕೆಜ್ರಿವಾಲ್ ಹೇಳಿದ್ದಾರೆ.

  • Share this:

ನವದೆಹಲಿ, ಮೇ 27: ಇದೇ ವರ್ಷದ ಕೊನೆಯಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣಾ (Gujarat Assembly Elections) ಕಣ ನಿಧಾನಕ್ಕೆ ರಂಗೇರುತ್ತಿದೆ. ಪಂಜಾಬ್ (Punjab) ಗೆದ್ದ ನಂತರ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Aam Admi Party National Convener Aravind Kejriwal) ಗುಜರಾತ್ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಾಗಾಗಿ ರಾಷ್ಟ್ರ ರಾಜಧಾನಿ ದೆಹಲಿ (National Capital Delhi) ಮಾದರಿಯಲ್ಲಿ ಗುಜರಾತಿನಲ್ಲೂ 'ಉಚಿತ ವಿದ್ಯುತ್ ಕೊಡುಗೆ'ಯ ಗೂಗ್ಲಿ ಎಸೆದು ಆಡಳಿತಾರೂಢ ಬಿಜೆಪಿ (BJP)ಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.


ಫ್ರೀ ವಿದ್ಯುತ್ ಕೊಟ್ಟರೆ ಬಿಜೆಪಿಗೇನು ತೊಂದರೆ


ಗುಜರಾತಿನಲ್ಲಿ 'ಉಚಿತ ವಿದ್ಯುತ್ ಕೊಡುಗೆ'ಯ ಗೂಗ್ಲಿ ಎಸೆದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು 'ಗುಜರಾತ್‌ ಜನರಿಗೆ ಉಚಿತ ವಿದ್ಯುತ್ ನೀಡುವ ಪ್ರಸ್ತಾಪ ಮಾಡಿದರೆ ಬಿಜೆಪಿ ಕೇಸರಿ ಪಕ್ಷಕ್ಕೆ‌ ಏನು ತೊಂದರೆ?' ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ 'ಜನರಿಗೆ ಉಚಿತವಾಗಿ ವಿದ್ಯುತ್ ನೀಡಲು ಭ್ರಷ್ಟಾಚಾರವನ್ನು ಕೊನೆಗೊಳಿಸಬೇಕು' ಎಂದು ಹೇಳಿದ್ದಾರೆ. ಆ ಮೂಲಕ ಗುಜರಾತಿನ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬ ಆರೋಪ ಮಾಡಿದ್ದಾರೆ.


ಆಪ್ ವಿಸ್ತರಣೆಗೆ ಕಡಿವಾಣ ಹಾಕಲು ಬಿಜೆಪಿ ಸೂಚನೆ


ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಮತ್ತು ಬಿಜೆಪಿಗೆ ಗೆಲ್ಲುವ ಅವಕಾಶ ಇದೆ ಎನ್ನುವಂತಹ ರಾಜ್ಯಗಳಲ್ಲಿ ಆಮ್ ಆದ್ಮಿ ಪಕ್ಷ ವಿಸ್ತರಣೆ ಆಗದಂತೆ ಕಾರ್ಯತಂತ್ರ ರೂಪಿಸುವಂತೆ ಬಿಜೆಪಿಯ ರಾಷ್ಟ್ರೀಯ ನಾಯಕತ್ವವು ತನ್ನ ರಾಜ್ಯ ಘಟಕಗಳಿಗೆ ಸೂಚನೆ ನೀಡಿದೆ. ಆಮ್ ಆದ್ಮಿ ಪಕ್ಷಕ್ಕೆ ಸಂಘಟನಾ ಸಾಮರ್ಥ್ಯವನ್ನು ಕುಗ್ಗಿಸಲು ಆಪ್ ನಾಯಕರನ್ನು ಬಿಜೆಪಿ ಪಕ್ಷಕ್ಕೆ ಸೆಳೆದುಕೊಳ್ಳುವಂತೆ ಗುಜರಾತ್ ರಾಜ್ಯ ಘಟಕಗಳಿಗೆ ಸೂಚನೆ ನೀಡಗಿದೆ. ಈ ಸೂಚನೆ ಮೇರೆಗೆ ಇತ್ತೀಚೆಗೆ ಗುಜರಾತ್‌ನಲ್ಲಿ 500ಕ್ಕೂ ಹೆಚ್ಚು ಆಮ್ ಆದ್ಮಿ ಪಕ್ಷ ನಾಯಕರು ಬಿಜೆಪಿಗೆ ಸೇರಿದರು. ಉತ್ತರಾಖಂಡದಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಬಿಜೆಪಿ ಪಾಲಾದರು ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: Modi@8: ಮಾತೃಭೂಮಿಯನ್ನು ಮರೆಯದ ಪ್ರಧಾನಿ ನರೇಂದ್ರ ಮೋದಿ! ಗುಜರಾತ್​ಗೆ ಏನೆಲ್ಲ ಕೊಡುಗೆ ನೀಡಿದ್ದಾರೆ?


ಬಿಜೆಪಿಗೆ ಅರವಿಂದ ಕೇಜ್ರಿವಾಲ್ ತಿರುಗೇಟು


ಆಮ್ ಪಕ್ಷದ ವಿಸ್ತರಣೆಗೆ ಕಡಿವಾಣ ಹಾಕಲು ಬಿಜೆಪಿ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಅರವಿಂದ ಕೇಜ್ರಿವಾಲ್ ಅವರು ಗುಜರಾತಿನಲ್ಲಿ 'ಉಚಿತ ವಿದ್ಯುತ್ ಕೊಡುಗೆ'ಯ ಗೂಗ್ಲಿ ಎಸೆದಿದ್ದಾರೆ. ಜೊತೆಗೆ 'ಗುಜರಾತ್ ಜನರಿಗೆ ಉಚಿತವಾಗಿ ವಿದ್ಯುತ್ ನೀಡಲು ಭ್ರಷ್ಟಾಚಾರವನ್ನು ಕೊನೆಗೊಳಿಸಬೇಕು' ಎಂದು ಹೇಳುವ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬ ಆರೋಪ ಮಾಡಿದ್ದಾರೆ ಎನ್ನಲಾಗುತ್ತಿದೆ.


ಉಚಿತ ಯೋಜನೆಗಳಿಂದ ರಾಜ್ಯ ಹಾಳು: ಬಿಜೆಪಿ


ಇನ್ನೊಂದೆಡೆ ಅರವಿಂದ ಕೇಜ್ರಿವಾಲ್ ಅವರ 'ಉಚಿತ ವಿದ್ಯುತ್ ಕೊಡುಗೆ'ಯ ಗೂಗ್ಲಿ ಮತ್ತು 'ಭ್ರಷ್ಟಾಚಾರದ ಆರೋಪ'ದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗುಜರಾತಿನ ಬಿಜೆಪಿ ಮುಖ್ಯಸ್ಥ ಸಿ.ಆರ್. ಪಾಟೀಲ್ ಅವರು ಅರವಿಂದ ಕೇಜ್ರಿವಾಲ್ ಹೆಸರನ್ನು ಉಲ್ಲೇಖಿಸದೆ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಕೆಲವು ರಾಜಕೀಯ ನಾಯಕರು" ನೀಡುವ ಉಚಿತ ಕೊಡುಗೆಗಳಿಂದ ಪ್ರಭಾವಿತರಾಗಬಾರದು' ಎಂದು ಹೇಳಿದ್ದಾರೆ. ಉಚಿತ ಯೋಜನೆಗಳು ಆರ್ಥಿಕತೆಗೆ ಒಳ್ಳೆಯದಲ್ಲ. ಇವು ರಾಜ್ಯವನ್ನು ಹಾಳುಮಾಡಬಹುದು ಎಂದು ಹೇಳಿದ್ದಾರೆ.


ಇದನ್ನೂ ಓದಿ: Modi@8: ಪ್ರಧಾನಿ ಮೋದಿ ಮ್ಯಾಜಿಕ್ ಸಫಲ, ರಾಹುಲ್ ಗಾಂಧಿ ವಿಫಲ! ಏನು ಕಾರಣ?


ಮಂತ್ರಿಗಳಿಗೆ ಉಚಿತ ವಿದ್ಯುತ್, ಜನರಿಗೇಕಿಲ್ಲ? 


ಸೂರತ್‌ನಲ್ಲಿ ದಕ್ಷಿಣ ಗುಜರಾತ್ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯನ್ನು ಲೋಕಾರ್ಪಣೆಗೊಳಿಸಿದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅರವಿಂದ ಕೇಜ್ರಿವಾಲ್ ಅವರು, 'ಪಾಟೀಲ್ ಸಾಹಿಬ್, ನಿಮ್ಮ ಮಂತ್ರಿಗಳು ಉಚಿತ ವಿದ್ಯುತ್ ಪಡೆಯುತ್ತಾರೆ, ಅದು ಸರಿಯೇ? ನಾನು ಸಾರ್ವಜನಿಕರಿಗೆ ಉಚಿತ ವಿದ್ಯುತ್ ನೀಡಿದರೆ ನಿಮಗೆ ತುಂಬಾ ತೊಂದರೆ ಆಗುತ್ತದೆ ಏಕೆ?' ಎಂದು ಪ್ರಶ್ನಿಸಿದ್ದಾರೆ. ಜೊತೆಗೆ 'ಗುಜರಾತ್ ಸರ್ಕಾರದಲ್ಲಿ ದೊಡ್ಡ ಭ್ರಷ್ಟಾಚಾರವಿದೆ. ದೆಹಲಿ ಮತ್ತು ಪಂಜಾಬ್‌ನಂತಹ ಭ್ರಷ್ಟಾಚಾರವನ್ನು ಕೊನೆಗೊಳಿಸಿ, ಸಾರ್ವಜನಿಕರಿಗೆ ಉಚಿತ ವಿದ್ಯುತ್ ನೀಡಲು ಸಾಕಷ್ಟು ಹಣವನ್ನು ಉಳಿಸಲಾಗುತ್ತದೆ" ಎಂದು ಅವರು ಹೇಳಿದ್ದಾರೆ.

Published by:Pavana HS
First published: