• Home
  • »
  • News
  • »
  • national-international
  • »
  • Rajya Sabha Election: ರಾಜ್ಯಸಭಾ ಅಭ್ಯರ್ಥಿಗಳ ಆಸ್ತಿ ವಿವರ; ಯಾರ ಬಳಿ ಎಷ್ಟು ಕೋಟಿ ಆಸ್ತಿ ಇದೆ ಗೊತ್ತಾ?

Rajya Sabha Election: ರಾಜ್ಯಸಭಾ ಅಭ್ಯರ್ಥಿಗಳ ಆಸ್ತಿ ವಿವರ; ಯಾರ ಬಳಿ ಎಷ್ಟು ಕೋಟಿ ಆಸ್ತಿ ಇದೆ ಗೊತ್ತಾ?

ಸಂಸತ್

ಸಂಸತ್

ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೇ ದಿನವಾದ ಹಿನ್ನೆಲೆ ಎಲ್ಲ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ರು. ಜೊತೆಗೆ ಎಲ್ಲ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರವನ್ನು ಬಹಿರಂಗ ಪಡಿಸಿದ್ದಾರೆ.

  • Share this:

ಬೆಂಗಳೂರು, (ಮೇ. 31):  ರಾಜ್ಯಸಭಾ ಚುನಾವಣೆಗೆ ಕರ್ನಾಟಕದಿಂದ (Karnataka) ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ನಾಮಪತ್ರ ಸಲ್ಲಿಕೆ (Nomination File) ಮಾಡಿದರು. ಬಿಜೆಪಿ ಟಿಕೆಟ್ ಪಡೆದಿರುವ ನವರಸನಾಯಕ ಜಗ್ಗೇಶ್ (Jaggesh), ಮೂರನೇ ಅಭ್ಯರ್ಥಿಯಾಗಿರುವ ಲೆಹರ್ ಸಿಂಗ್ (Lehar Singh) ಸಹ ನಾಮಪತ್ರ ಸಲ್ಲಿಕೆ ಮಾಡಿದರು.  ಇತ್ತ ಜೆಡಿಎಸ್ ನಿಂದ ಕುಪ್ಪೇಂದ್ರ ರೆಡ್ಡಿ ಅವರು ಸಹ ನಾಮಪತ್ರ ಸಲ್ಲಿಕೆ ಮಾಡಿದರು. ಕಾಂಗ್ರೆಸ್ ಪಕ್ಷದ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಆಲಿಖಾನ್ ನಾಮಪತ್ರ ಸಲ್ಲಿಸಿದ್ದಾರೆ. ಎಲ್ಲ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರವನ್ನು ಬಹಿರಂಗ ಪಡಿಸಿದ್ದಾರೆ.


ನಿರ್ಮಲಾ ಸೀತಾರಾಮನ್ ಆಸ್ತಿ ವಿವರ


ಒಟ್ಟು ಆಸ್ತಿ -2,50,99,396 ರೂ.


ಸ್ಥಿರಾಸ್ತಿ : 1,87,60,200 ರೂ.


ಚರಾಸ್ತಿ - 63,39,196 ರೂ.


ಆಭರಣ- 315 ಗ್ರಾಂ, ಬಂಗಾರ, 2 ಕೆಜಿ ಬೆಳ್ಳಿ


ಕೈಯಲ್ಲಿರುವ ಹಣ-17,200 ರೂ.


ಬ್ಯಾಂಕ್ ಎಫ್‌ಡಿ- 45,04,479


ಸ್ಕೂಟರ್- ಬಜಾಜ್ ಚೇತಕ್,


ಕಾರು- ಇಲ್ಲ


ಸಾಲ : ಪಡೆದಿದ್ದು 30,44,838 ರೂ.


ಕುಟುಂಬಸ್ಥರಿಗೆ ನೀಡಿದ ಸಾಲ 3, 50,000


ಜಮೀನು: ಆಂಧ್ರಪ್ರದೇಶದ ರಂಗಾರೆಡ್ಡಿ ಜಿಲ್ಲೆೆಯ ಕುಂಟನೂರು ಗ್ರಾಮದಲ್ಲಿ 4806 ಚದರ ಅಡಿ ಜಾಗ


ಬೆಳ್ಳಿ-ಬಂಗಾರದ ಒಡೆಯ ಲೆಹರ್​


ಲೆಹರ್​ ಅವರ  ಸ್ಥಿರಾಸ್ತಿ : 29.40,00,000 ರೂ. ಇದೆ,  ಲೆಹರ್​ ಪತ್ನಿ ಹೆಸರಲ್ಲಿರೋ  ಸ್ಥಿರಾಸ್ತಿ : 88,00,000 ರೂ.  ಚರಾಸ್ತಿ: 16,15,21,092 ರೂ. ಪತ್ನಿ ಬಳಿ ಚರಾಸ್ತಿ : 6,94,15,023 ರೂ. ಹಾಗೂ ಮಕ್ಕಳ ಬಳಿ ಚರಾಸ್ತಿ: 1,21,02,185 ರೂ. ಇದೆ. ಲೆಹರ್​ ಬಳಿ ಇರೋ ಹಣ: 84,168 ರೂ. ಎಂದು ಪತ್ನಿ ಕೈಯಲ್ಲಿರುವ ಹಣ: 65417 ರೂ., ಆಭರಣ: 175 ಗ್ರಾಾಂ ಬಂಗಾರ, 5 ಕೆಜಿ ಬೆಳ್ಳಿ. ಪತ್ನಿ ಬಳಿ ಆಭರಣ: 1500 ಗ್ರಾಂ ಬಂಗಾರ, 20 ಕೆಜಿ. ಬಳ್ಳಿ ಹೊಂದಿದ್ದಾರೆ. ಮಕ್ಕಳ ಬಳಿ 1500 ಗ್ರಾಂ ಬಂಗಾರ ಇದೆ. ಮನೆಯಲ್ಲಿರೋ ಕಾರು- ಇನ್ನೊವಾ ಕ್ರಿಸ್ಟಾ, ಪತ್ನಿ ಕಾರು; ಸೆಲೆರಿಯೊ ಜೊತೆ 40,50,000 ರೂ. ಸಾಲ ಇದೆ.


ಇದನ್ನೂ ಓದಿ: ಕಾವೇರಿ ತಾಯಿಗೆ ಪೂಜೆ ಸಲ್ಲಿಸುವ ವೇಳೆ ಆಯತಪ್ಪಿದ DK Shivakumar


ಕೋಟಿ ಒಡೆಯ ಜಗ್ಗೇಶ್


ಜಗ್ಗೇಶ್​ ಅವರ ಬಳಿ ಒಟ್ಟು  -17,64,23,378 ರೂ. ಆಸ್ತಿ ಇದೆ.  ಸ್ಥಿರಾಸ್ತಿ : 13,25,00,000, ಚರಾಸ್ತಿ- 4,39,23,378 ರೂ., ಕೈಯಲ್ಲಿರುವ ಹಣ: 2,00,000 ರೂ., ಪತ್ನಿ ಕೈಯಲ್ಲಿರುವ ಹಣ: 1,60,000 ರೂ. ಎಂದು ದಾಖಲೆಯಲ್ಲಿದೆ. ಆಭರಣ-500 ಗ್ರಾಂ ಬಂಗಾರ, 1 ಕೆಜಿ ಬೆಳ್ಳಿ ಇದೆ. ಅವರ ಪತ್ನಿ ಬಳಿ ಇರೋ  ಆಭರಣ: 500 ಗ್ರಾಂ. ಬಂಗಾರ, 3 ಕೆಜಿ ಬೆಳ್ಳಿ, ಕೃಷಿ ಭೂಮಿ; 6,75,00,00, ಮನೆಯ ಮೌಲ್ಯ 6,50,00,000 ರೂ., ಪತ್ನಿ ಹೆಸರಲ್ಲಿ ಮನೆ: 4,50,00,00 ಹಣ ಇದೆ. ಕಾರು-2 ಬಿಎಂಡಬ್ಲು, 1 ಇನ್ನೋವಾ, ರಾಯಲ್ ಎನ್‌ಫೀಲ್‌ಡ್‌ ಬೈಕ್, ಎಕ್ಸೆೆಸ್ ಯು.ಝಡ್ ಸ್ಕೂಟಿ ಸಾಲ: 2,91,24,140 ರೂ. ಪತ್ನಿ ಹೆಸರಲ್ಲಿ : 4,00,000 ರೂ ಸಾಲ ಇದೆ ಎಂದು ಆಸ್ತಿ ವಿವರದಲ್ಲಿ ತಿಳಿಸಿದ್ದಾರೆ


ಮನ್ಸೂರ್ ಪತ್ನಿಯೂ ಸಮಪಾಲು ಆದಾಯ


2020-21 ನೇ ಸಾಲಿನಲ್ಲಿ 2 ಕೋಟಿ ರೂಪಾಯಿ ಅಧಿಕೃತ ಆದಾಯ ಘೋಷಣೆ ಮಾಡಿಕೊಂಡಿದ್ದಾರೆ. 2019-20 ರಲ್ಲಿ 1.99 ಕೋಟಿ ರೂ. ಆದಾಯ ತೋರಿಸಿಕೊಂಡಿದ್ದರು. ಇನ್ನು ಅವರ ಪತ್ನಿ 2020-21 ನೇ ಸಾಲಿನಲ್ಲಿ 1.62 ಕೋಟಿ ರೂ. ಆದಾಯ ಘೋಷಣೆ ಮಾಡಿಕೊಂಡು ಆದಾಯ ತೆರಿಗೆ ಪಾವತಿಸಿದ್ದಾರೆ. ಮನ್ಸೂರ್ ಆಲಿಖಾನ್ ವಿರುದ್ಧ ಯಾವುದೇ ಕ್ರಿಮಿನಲ್ ಹಿನ್ನೆಲೆಯ ಅಪರಾಧ ಪ್ರಕರಣಗಳು ದಾಖಲಾಗಿಲ್ಲ.


ಇದನ್ನೂ ಓದಿ: DK Shivakumar ED Case: ಡಿಕೆಶಿ ದೆಹಲಿ ಫ್ಲ್ಯಾಟ್​ನಲ್ಲಿ ಸಿಕ್ಕಿರುವ 8.5 ಕೋಟಿ ರೂ, ಇಂದು ವಿಚಾರಣೆ


ನೂರಾರು ಕೋಟಿ ಒಡೆಯ ಕುಪೇಂದ್ರ ರೆಡ್ಡಿ


ಕುಪೇಂದ್ರ ರೆಡ್ಡಿ ಒಟ್ಟು  -575,89,75,550 ರೂ. ಆಸ್ತಿ ಹೊಂದಿದ್ದಾರೆ. ಅದರಲ್ಲಿ ಸ್ಥಿರಾಸ್ತಿ: 222,47,60,624 ರೂ. ಚರಾಸ್ತಿ-353,42,14,926 ರೂ ಇದೆ. ಕೈಯಲ್ಲಿರುವ ಹಣ: 21,12,381 ರೂ, ಪತ್ನಿ ಕೈಯಲ್ಲಿರುವ ಹಣ: 43,41,108 ರೂ. 1,74,35,500 ರೂ.ಬೆಲೆಯ ಆಭರಣ ಹೊಂದಿದ್ದಾರೆ. ಪತ್ನಿ ಬಳಿ 3,51,77,870 ರೂ. ಆಭರಣ ಇದೆ. ಕೃಷಿ  ಭೂಮಿ; 20,91,54,125 ರೂ.ಮನೆ : 4,42,74,259 ರೂ., ವಾಣಿಜ್ಯ ಮಳಿಗೆಗಳು : 92,01,74,990 ರೂ. ಕಾರು-1 ಆಡಿ, 2 ಟೊಯೊಟಾ ಫಾರ್ಚ್ಯುನರ್​  ಸಾಲ: 67,29,87,928 ರೂ. ತೆರಿಗೆ ಬಾಕಿ : 3,40,501 ರೂ. ಉಳಿಸಿಕೊಂಡಿದ್ದಾರೆ.

Published by:Pavana HS
First published: