Processed Tapioca: ಕೇರಳದ ಮಸಾಲೆಯುಕ್ತ ಸಂಸ್ಕರಿಸಿದ ಮರಗೆಣಸುಗಳಿಗೆ ವಿದೇಶದಲ್ಲಿ ಫುಲ್ ಡಿಮ್ಯಾಂಡ್!

ಕೇರಳದ ಎರ್ನಾಕುಲಂ ಜಿಲ್ಲೆಯ ಕೋತಮಂಗಲಂ ಬಳಿಕ ವರಪೆಟ್ಟಿ ಸರ್ವಿಸ್ ಕೋ-ಅಪರೇಟಿವ್ ಬ್ಯಾಂಕ್‍ನಿಂದ ರಫ್ತು ಮಾಡಲಾಗುತ್ತಿರುವ ಮಸಾಲೆಯುಕ್ತ ಸಂಸ್ಕರಿಸಿದ ಮರಗೆಣಸಿಗೆ ಯುನೈಟೆಡ್ ಸ್ಟೇಟ್ಸ್ , ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‍ನಂತಹ ದೇಶಗಳಲ್ಲಿ ತುಂಬಾ ಬೇಡಿಕೆ ಇದೆ. ವಿದೇಶಿ ಗ್ರಾಹಕರಿಗೆ , ಮಸಾಲೆಯುಕ್ತ ಸಂಸ್ಕರಿಸಿದ ಮರಗೆಣಸಿನ ಉತ್ಪನ್ನದ ರುಚಿ ಎಷ್ಟರ ಮಟ್ಟಿಗೆ ಹಿಡಿಸಿದೆ ಎಂದರೆ, ಅವರಿಂದ ಅದಕ್ಕಾಗಿ ಬರುತ್ತಿರುವ ಬೇಡಿಕೆಗಳನ್ನು ಪೂರೈಸಲು ಕಷ್ಟವಾಗುತ್ತಿದೆಯಂತೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕೇರಳದ (Kerala) ಜನರಿಗೆ ಮರಗೆಣಸು ಮತ್ತು ಅದರಿಂದ ತಯಾರಿಸುವ ತರಾವರಿ ಖಾದ್ಯಗಳು ಅಚ್ಚುಮೆಚ್ಚು ಎನ್ನುವುದು ನಮಗೆಲ್ಲಾ ತಿಳಿದೇ ಇದೆ. ಆದರೆ, ಇದೀಗ ಕೇರಳದ ಮರಗೆಣಸು (tapioca) ಸಾಗರದಾಚೆಯ ದೇಶಗಳ ಜನರ ಮನಸ್ಸನ್ನು ಕೂಡ ಗೆದ್ದಿದೆಯಂತೆ. ಹೌದು, ಕೇರಳದ ಎರ್ನಾಕುಲಂ ಜಿಲ್ಲೆಯ ಕೋತಮಂಗಲಂ ಬಳಿಕ ವರಪೆಟ್ಟಿ ಸರ್ವಿಸ್ ಕೋಅಪರೇಟಿವ್ ಬ್ಯಾಂಕ್‍ನಿಂದ ರಫ್ತು ಮಾಡಲಾಗುತ್ತಿರುವ ಮಸಾಲೆಯುಕ್ತ ಸಂಸ್ಕರಿಸಿದ ಮರಗೆಣಸಿಗೆ ಯುನೈಟೆಡ್ ಸ್ಟೇಟ್ಸ್ , ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‍ನಂತಹ  (New Zealand) ದೇಶಗಳಲ್ಲಿ ತುಂಬಾ ಬೇಡಿಕೆ ಇದೆ. ವಿದೇಶಿ ಗ್ರಾಹಕರಿಗೆ , ಮಸಾಲೆಯುಕ್ತ ಸಂಸ್ಕರಿಸಿದ ಮರಗೆಣಸಿನ ಉತ್ಪನ್ನದ ರುಚಿ ಎಷ್ಟರ ಮಟ್ಟಿಗೆ ಹಿಡಿಸಿದೆ ಎಂದರೆ, ಅವರಿಂದ ಅದಕ್ಕಾಗಿ ಬರುತ್ತಿರುವ ಬೇಡಿಕೆಗಳನ್ನು ಪೂರೈಸಲು ಕಷ್ಟವಾಗುತ್ತಿದೆಯಂತೆ.

ಮಸಾಲೆಯುಕ್ತ ಸಂಸ್ಕರಿಸಿದ ಮರಗೆಣಸು ಉತ್ಪನ್ನ ಹೇಗಿರುತ್ತದೆ?
ಸರಳ ತಿನಿಸಿದು- ಮರಗೆಣಸನ್ನು ಅರೆ ಬೇಯಿಸಿ, ರೆಡಿಮೇಡ್ ಮಸಾಲದ ಜೊತೆ ಪ್ಯಾಕ್ ಮಾಡಲಾಗುತ್ತದೆ. “ ಸಂಸ್ಕರಿಸಿ ಮರಗೆಣಸನ್ನು ಮಸಾಲೆಯೊಂದಿಗೆ ಬೇಯಿಸಲು ಹೆಚ್ಚು ಸಮಯ ತಗಲುವುದಿಲ್ಲ, ಇದು ಈ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಮಲೆಯಾಳಿಗಳಿಗೆ ಇಷ್ಟದ ತಿನಿಸಾಗಿಬಿಟ್ಟಿದೆ” ಎನ್ನುತ್ತಾರೆ ವರಪೆಟ್ಟಿ ಸಹಕಾರಿ ಬ್ಯಾಂಕ್‍ನ ಎಂ. ಜಿ ರಾಧಾಕೃಷ್ಣನ್.

ಬೇಯಿಸಿದ ಮರಗೆಣಸಿನ ಜೊತೆಗೆ ಬಾಳೆ ಹಣ್ಣಿನ ಚಿಪ್ಸ್ ಗಳಿಗೆ ಡಿಮ್ಯಾಂಡ್
ಅವರು ಹೇಳುವ ಪ್ರಕಾರ, ಸಂಸ್ಕರಿಸಿದ ಮತ್ತು ಅರೆ ಬೇಯಿಸಿದ ಮರಗೆಣಸಿನ , ಜೊತೆ ಜೊತೆಗೆ ವ್ಯಾಕ್ಯೂಮ್ ಫ್ರೈ ಮಾಡಲಾದ ಬಾಳೆ ಹಣ್ಣಿನ ಚಿಪ್ಸ್ ಗಳಿಗೆ ಸಾಕಷ್ಟು ಆರ್ಡರ್‍ಗಳು ಬಂದಿದ್ದು, ಅವುಗಳನ್ನು ರಫ್ತು ಮಾಡಲಾಗುತ್ತಿದೆ. ಆದರೆ, ಆರ್ಡರ್‍ಗಳ ಸಂಖ್ಯೆ ಅಧಿಕವಿರುವುದರಿಂದ, ಅವುಗಳನ್ನು ಪೂರೈಸಲು ಸದ್ಯಕ್ಕೆ ಕಚ್ಚಾ ಸಾಮಾಗ್ರಿಗಳ ಕೊರತೆ ಕೂಡ ಇದೆ. ಸಹಕಾರಿ ಸಂಘದಲ್ಲಿರುವ 65 ಗುಂಪುಗಳ ರೈತರು ಮರಗೆಣಸು ಮತ್ತು ಬಾಳೆಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಆದರೂ ಕೂಡ ಅವುಗಳ ಪೂರೈಕೆ ಸಾಕಾಗುತ್ತಿಲ್ಲ ಎಂದು ವಿದೇಶಿ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಆಗುತ್ತಿರುವ ಸಮಸ್ಯೆಯ ಬಗ್ಗೆ ವಿವರಿಸುತ್ತಾರೆ ಎಂ ಜಿ ರಾಧಾಕೃಷ್ಣನ್.

ಇದನ್ನೂ ಓದಿ: International Yoga Day: ಹಾಸನದಲ್ಲಿ ಯೋಗ ದಿನಕ್ಕೆ ಸಿದ್ಧತೆ; ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಶೋಭಾ ಕರಂದ್ಲಾಜೆ

“ನಮ್ಮ ಕೃಪಿ ಪದ್ಧತಿಗಳನ್ನು ಬದಲಾಯಿಸುವ ಅಗತ್ಯವಿದೆ” ಎನ್ನುವ ಅವರು, ಕೃಷಿಯನ್ನು ವ್ಯಾಪಾರವನ್ನಾಗಿ ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಿಂದ ರೈತರಿಗೂ ಬೆಳೆಯಿಂದ ಲಾಭದಾಯಕ ದರ ಸಿಗುತ್ತದೆ ಮತ್ತು ಆಹಾರ ಸಂಸ್ಕರಣೆ ಮಾಡುವವರಿಗೆ ವರ್ಷವಿಡೀ ಕಚ್ಚಾ ವಸ್ತುಗಳ ಖಚಿತ ಪೂರೈಕೆಯೂ ಇರುತ್ತದೆ ಎಂಬುವುದು ಅವರ ಅನಿಸಿಕೆಯಾಗಿದೆ.

ಕೆಜಿಗೆ 15 ರೂಪಾಯಿಯಂತೆ ಮರಗೆಣಸು ಖರೀದಿ
ತಮ್ಮ ಗಮನಾರ್ಹ ಚಟುವಟಿಕೆಗಳ ಮೂಲಕ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮದಿಂದ ಗುರುತಿಸಲ್ಪಟ್ಟ ರಾಜ್ಯದ ಎರಡು ಸಹಕಾರಿ ಸಂಸ್ಥೆಗಳ ಪೈಕಿ, ಕದಿರೂರು ಸರ್ವಿಸ್ ಕೋ-ಆಪರೇಟಿವ್ ಬ್ಯಾಂಕ್‍ನ ಜೊತೆಗೆ ವರಪೆಟ್ಟಿ ಬ್ಯಾಂಕ್ ಕೂ ಸೇರಿದೆ. ಈ ಎರಡೂ ಬ್ಯಾಂಕ್‍ಗಳ ಚಟುವಟಿಕೆಗಳು, ಮುಖ್ಯವಾಗಿ ಕೋವಿಡ್ -19 ಸಾಂಕ್ರಾಮಿಕದ ಸಂದರ್ಭದಲ್ಲಿ ಎಲ್ಲರ ಗಮನ ಸೆಳೆಯುವಂತಿದ್ದವು.

ಇದನ್ನೂ ಓದಿ: Narendra Modi: ಮೈಸೂರಲ್ಲಿ ಮೋದಿ ಮೋಡಿ; ಪ್ರಧಾನಿಗಾಗಿ ಸ್ಪೆಷಲ್ ಮೆನು ರೆಡಿ, ಅರಮನೆ ನಗರ ಕೊಂಡಾಡಿದ ನಮೋ

ಕೋವಿಡ್ -19 ಸಾಂಕ್ರಾಮಿಕ ಸಂದರ್ಭದಲ್ಲಿ ಉತ್ಪನ್ನಗಳ ಬೆಲೆ ಗಮನಾರ್ಹವಾಗಿ ಕುಸಿದಾಗ, ವರಪೆಟ್ಟಿ ಸಹಕಾರಿ ಸಂಸ್ಥೆಯು ರೈತರಿಂದ ತಾಜಾ ಮರಗೆಣಸನ್ನು ಖರೀದಿಸಲು ತೊಡಗಿತು. ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಇದ್ದಾಗಲೂ ಕೂಡ, ಸರ್ವಿಸ್ ಕೋಆಪರೇಟಿವ್ ಬ್ಯಾಂಕ್, ಸಂಸ್ಕರಣೆ ಮತ್ತು ಮೌಲ್ಯವರ್ಧನೆಗಾಗಿ ಕೆಜಿಗೆ 15 ರೂಪಾಯಿಯಂತೆ ಮರಗೆಣಸನ್ನು ಖರೀದಿಸಲು ಆರಂಭಿಸಿತು ಎಂದು ರಾಮಕೃಷ್ಣನ್ ಹೇಳಿದ್ದಾರೆ.

ತೆಂಗಿನ ಎಣ್ಣೆ ಕೂಡ ವಿವಿಧ ದೇಶಗಳಿಗೆ ರಫ್ತು
ಆಹಾರ ಸಂಸ್ಕರಣೆಗೆ ಬೇಕಾಗುವ ಕಚ್ಚಾ ವಸ್ತುಗಳ ಪೂರೈಕೆ ಋತುಕಾಲಿಕವಾಗಿರುತ್ತದೆ, ಅದು ರೈತರು ಹಾಗೂ ಸಂಸ್ಕರಣೆದಾರರು ಪಡೆಯುವ ಲಾಭದ ಮೇಲೆ ಪರಿಣಾಮ ಬೀರುತ್ತದೆ. ಓಣಂ ಹಬ್ಬದ ಅವಧಿಯಲ್ಲಿ ತರಕಾರಿ ಮತ್ತು ಬಾಳೆ ಹಣ್ಣುಗಳ ಸರಬರಾಜಿನಲ್ಲಿ ಹೆಚ್ಚಳ ಕಂಡು ಬರುತ್ತದೆ ಮತ್ತು ಅದರಿಂದ ಮತ್ತೊಮ್ಮೆ ಬೆಲೆಗಳು ಕುಸಿಯುತ್ತವೆ ಎಂದು ಮಾಹಿತಿ ನೀಡುತ್ತಾರೆ ಅವರು. ಈ ಸಹಕಾರಿ ಸಂಘವು ಕೇವಲ ಸಂಸ್ಕರಿಸಿದ ಮರಗೆಣಸು ಮತ್ತು ಬಾಳೆ ಕಾಯಿ ಚಿಪ್ಸ್ ಮಾತ್ರವಲ್ಲದೇ ವಿವಿಧ ದೇಶಗಳಿಗೆ ತೆಂಗಿನ ಎಣ್ಣೆಯನ್ನು ಕೂಡ ರಫ್ತು ಮಾಡುತ್ತಿದೆ. ಇತ್ತೀಚೆಗೆ ಅದು ತೆಂಗಿನ ಎಣ್ಣೆಯ ಸಾಕಷ್ಟು ಆರ್ಡರ್‍ಗಳನ್ನು ಕೂಡ ಪಡೆದಿದೆ.
Published by:Ashwini Prabhu
First published: