ತನಿಖೆ ಆಮೆ ಗತಿಯಲ್ಲಿ ಸಾಗುತ್ತಿದೆ, ಭಾರತಕ್ಕೆ ಬರಲು ಸಾಧ್ಯವಿಲ್ಲ: ಮೇಹುಲ್​ ಚೋಕ್ಸಿ

ಜಾರಿ ನಿರ್ದೇಶನಾಲಯ ಅಕ್ಟೋಬರ್​ ತಿಂಗಳಲ್ಲಿ ಮೇಹುಲ್ ಚೋಕ್ಸಿ ಮತ್ತು ನೀರವ್​ ಮೋದಿಗೆ ಸೇರಿದ ಭಾರತ ಮತ್ತು ಹೊರದೇಶಗಳಿದ್ದ 218 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿತ್ತು

Sharath Sharma Kalagaru | news18
Updated:December 25, 2018, 1:11 PM IST
ತನಿಖೆ ಆಮೆ ಗತಿಯಲ್ಲಿ ಸಾಗುತ್ತಿದೆ, ಭಾರತಕ್ಕೆ ಬರಲು ಸಾಧ್ಯವಿಲ್ಲ: ಮೇಹುಲ್​ ಚೋಕ್ಸಿ
ಫೈಲ್​ ಫೋಟೊ
Sharath Sharma Kalagaru | news18
Updated: December 25, 2018, 1:11 PM IST
ನವದೆಹಲಿ: ಪಂಜಾಬ್​ ನ್ಯಾಷನಲ್​ ಬ್ಯಾಂಕ್​ (ಪಿಎನ್​ಬಿ) ಬಹುಕೋಟಿ ಲೇವಾದೇವಿ ಪ್ರಕರಣದ ಪ್ರಮುಖ ಆರೋಪಿ ಮೇಹುಲ್​ ಚೋಕ್ಸಿ ಹೊಸ ವರಸೆ ತೆಗೆದಿದ್ದಾರೆ. ಅಳಿಯ ನೀರವ್​ ಮೋದಿ ಜತೆ ಸೇರಿ ಮೇಹುಲ್​ ಚೋಕ್ಸಿ ಬ್ಯಾಂಕ್​ನಿಂದ 13,500 ಕೋಟಿ ರೂ ಬೃಹತ್​ ಮೊತ್ತವನ್ನು ಸಾಲ ಪಡೆದು ದೇಶ ತೊರೆದಿದ್ದರು. ಈಗ ಚೋಕ್ಸಿ ವಿಶೇಷ ಲೇವಾದೇವಿ ನ್ಯಾಯಾಲಯಕ್ಕೆ ಪತ್ರ ಬರೆದಿದ್ದು, ದೇಶಭ್ರಷ್ಟ ಎಂದು ಘೋಷಿಸದಂತೆ ಮನವಿ ಮಾಡಿದ್ದಾರೆ.

ಜಾರಿ ನಿರ್ದೇಶನಾಲಯ (ಇ.ಡಿ) ಮೇಹುಲ್​ ಚೋಕ್ಸಿಯನ್ನು ಆರ್ಥಿಕ ದೇಶಭ್ರಷ್ಟ ಎಂದು ಘೋಷಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚೋಕ್ಸಿ, ಭಾರತದಲ್ಲಿ ಪ್ರಕರಣದ ತನಿಖೆ ಆಮೆಗತಿಯಲ್ಲಿ ಸಾಗುತ್ತಿದೆ ಎಂದಿದ್ದಾರೆ. ಜತೆಗೆ ಪ್ರಕರಣದ ವಿಚಾರಣೆ ಆರಂಭವಾಗಲು ವರ್ಷಗಳೇ ಬೇಕಾಗಬಹುದು, ಹೀಗಿರುವಾಗ ಆಂಟಿಗುವಾದಿಂದ 41 ಗಂಟೆಗಳ ವಿಮಾನಯಾನ ಮಾಡಿ ಬರಲು ಸಾಧ್ಯವಿಲ್ಲ ಎಂದಿದ್ದಾರೆ.

2018ರ ಜನವರಿಯಲ್ಲಿ ಮೇಹುಲ್​ ಚೋಕ್ಸಿ ದೇಶ ತೊರೆದಿದ್ದರು. ಅದರ ಬೆನ್ನಲ್ಲೇ ಸಿಬಿಐ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ ಲೇವಾದೇವಿ ಪ್ರಕರಣ ಸಂಬಂಧ ಪ್ರಕರಣ ದಾಖಲಿಸಿತ್ತು. ದೇಶ ತೊರೆದ ಚೋಕ್ಸಿ ಆಂಟಿಗುವಾ ದೇಶದ ಸದಸ್ಯತ್ವ ಪಡೆದಿದ್ದರು. ಅನಾರೋಗ್ಯದ ಕಾರಣ ನೀಡಿ ಆಂಟಿಗುವಾ ದೇಶದ ಪೌರತ್ವವನ್ನು ಚೋಕ್ಸಿ ಪಡೆದಿದ್ದರು. ಆ ನಂತರ ಸಿಬಿಐ ಮನವಿ ಮೇರೆಗೆ ಇಂಟರ್​ಪೋಲ್​ ಚೋಕ್ಸಿ ವಿರುದ್ಧ ರೆಡ್​ ಕಾರ್ನರ್​ ನೊಟೀಸ್​ ಜಾರಿಗೊಳಿಸಿತ್ತು.

ಜಾರಿ ನಿರ್ದೇಶನಾಲಯ ಅಕ್ಟೋಬರ್​ ತಿಂಗಳಲ್ಲಿ ಮೇಹುಲ್ ಚೋಕ್ಸಿ ಮತ್ತು ನೀರವ್​ ಮೋದಿಗೆ ಸೇರಿದ ಭಾರತ ಮತ್ತು ಹೊರದೇಶಗಳಿದ್ದ 218 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿತ್ತು.

ರೆಡ್​ ಕಾರ್ನರ್​ ನೊಟೀಸ್ ಎಂದರೇನು?: 

ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಅಥವಾ ಆರೋಪಿಯಾಗಿ ದೇಶ ತೊರೆದಿದ್ದರೆ ಆ ವ್ಯಕ್ತಿ ಮಾಡಿದ ಕೃತ್ಯದ ತೀವ್ರತೆ ಆಧರಿಸಿ ನೊಟೀಸ್​ ಜಾರಿಗೊಳಿಸಲಾಗುತ್ತದೆ. ತನಿಖಾ ಸಂಸ್ಥೆ ಅಥವಾ ಪೊಲೀಸ್​ ಇಲಾಖೆ ವ್ಯಕ್ತಿಯ ಮೇಲಿರುವ ಆರೋಪಗಳನ್ನು ಪಟ್ಟಿ ಮಾಡಿ ಸಿಬಿಐಗೆ ಸಲ್ಲಿಸಬೇಕು. ನಂತರ ಸಿಬಿಐ ಇಂಟರ್​ಪೋಲ್​ಗೆ ಮನವಿ ಮಾಡುತ್ತದೆ. ಅದಾದ ನಂತರ ಇಂಟರ್​ಪೋಲ್​ ರೆಡ್​ ಕಾರ್ನರ್​ ನೊಟೀಸ್​ ಜಾರಿಗೊಳಿಸುತ್ತದೆ. ಪ್ರಕರಣದ ಗಂಭೀರತೆಗೆ ತಕ್ಕಂತೆ ಗ್ರೀನ್​ ಕಾರ್ನರ್​, ಬ್ಲೂ ಕಾರ್ನರ್​ ಮತ್ತು ಎಲ್ಲೋ ಕಾರ್ನರ್​​ ನೊಟೀಸ್​ ಜಾರಿಗೊಳಿಸಲಾಗುತ್ತದೆ.
Loading...

ಇದನ್ನೂ ಓದಿ: ವಿದೇಶಾಂಗ ಸಚಿವಾಲಯ ದೃಢೀಕರಿಸಿದ ನಂತರವೇ ಚೋಕ್ಸಿಗೆ ಪೌರತ್ವ ನೀಡಲಾಗಿದೆ: ಆಂಟಿಗುವಾ

ಒಂದು ಬಾರಿ ರೆಡ್​ ಕಾರ್ನರ್​ ನೊಟೀಸ್​ ಜಾರಿಯಾದರೆ ಆ ವ್ಯಕ್ತಿ ಪ್ರಪಂಚದ ಯಾವುದೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬಂದರು ಅಥವಾ ಅಂತಾರಾಷ್ಟ್ರೀಯ ಗಡಿ ದಾಟಲು ಸಾಧ್ಯವಾಗುವುದಿಲ್ಲ. ಎಲ್ಲಾ ದೇಶದ ಗಡಿಗಳಲ್ಲೂ ರೆಡ್​ ಕಾರ್ನರ್​ ನೊಟೀಸ್​ ಹೋಗಿರುತ್ತದೆ ಮತ್ತು ಪಾಸ್​ಪೋರ್ಟ್​ ಕೂಡ ರದ್ದು ಮಾಡಲಾಗುತ್ತದೆ.

ರೆಡ್​ ಕಾರ್ನರ್​ ನೊಟೀಸ್​ನಲ್ಲಿರುವ ವ್ಯಕ್ತಿ ಯಾವುದೇ ದೇಶದ ಅಂತಾರಾಷ್ಟ್ರೀಯ ಗಡಿ ದಾಟಲು ಮುಂದಾದರೆ ಅಲ್ಲಿ ಬಂಧಿಸಬಹುದು. ನಂತರ ವಿದೇಶಾಂಗ ಒಪ್ಪಂದದ ಮೂಲಕ ನಮ್ಮ ದೇಶಕ್ಕೆ ರವಾನಿಸಲಾಗುತ್ತದೆ.

First published:December 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626