HOME » NEWS » National-international » PROBE ANTI NATIONAL ACTS OF SHEHLA RASHID ASKS HER FATHER SNVS

ಮಗಳ ದೇಶದ್ರೋಹ ಚಟುವಟಿಕೆಯ ತನಿಖೆ ನಡೆಸಿ: ಶೆಹ್ಲಾ ರಷೀದ್ ತಂದೆ ಹೇಳಿಕೆ; ಆರೋಪ ತಳ್ಳಿಹಾಕಿದ ಶೆಹ್ಲಾ

Shehla Rashid Family Controversy - ದೇಶದ್ರೋಹ ಚಟುವಟಿಕೆಗಳಲ್ಲಿ ನಿರತವಾಗಿರುವ ಗುಂಪಿನೊಂದಿಗೆ ತಮ್ಮ ಮಗಳು ಶೆಹ್ಲಾ ರಷೀದ್ ಸೇರಿಕೊಂಡಿದ್ದಾಳೆ. ತನ್ನನ್ನು ಮನೆಯಿಂದಲೂ ಹೊರಹಾಕಿದ್ದಾಳೆ. ಆಕೆಯನ್ನು ತನಿಖೆ ಮಾಡಿಸಿ ಎಂದು ಕೋರಿ ಆಕೆಯ ತಂದೆ ಅಬ್ದುಲ್ ರಷೀದ್ ಶೋರಾ ಡಿಜಿಪಿಗೆ ಪತ್ರ ಬರೆದಿದ್ದಾರೆ.

news18
Updated:December 1, 2020, 12:57 PM IST
ಮಗಳ ದೇಶದ್ರೋಹ ಚಟುವಟಿಕೆಯ ತನಿಖೆ ನಡೆಸಿ: ಶೆಹ್ಲಾ ರಷೀದ್ ತಂದೆ ಹೇಳಿಕೆ; ಆರೋಪ ತಳ್ಳಿಹಾಕಿದ ಶೆಹ್ಲಾ
ಶೆಹ್ಲಾ ರಷೀದ್
  • News18
  • Last Updated: December 1, 2020, 12:57 PM IST
  • Share this:
ಶ್ರೀನಗರ(ಡಿ. 01): ಕೇಂದ್ರ ಸರ್ಕಾರದ ಕಟು ಟೀಕಾಕಾರರಾಗಿ ಗಮನ ಸೆಳೆದಿರುವ ಶೆಹಲಾ ರಷೀದ್ ವಿರುದ್ಧ ಸ್ವತಃ ಆಕೆಯ ತಂದೆಯೇ ಸಿಡಿದೆದಿದ್ದಾರೆ. ತಮ್ಮ ಮಗಳ ದೇಶದ್ರೋಹ ಚಟುವಟಿಕೆಗಳನ್ನ ತನಿಖೆಗೆ ಒಳಪಡಿಸಬೇಕೆಂದು ಕೋರಿ ಅಬ್ದುಲ್ ರಷೀದ್ ಶೋರಾ ಅವರು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ಬಗ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ಇದರೊಂದಿಗೆ ಖಾಸಗಿಯಾಗಿ ಸೀಮಿತವಾಗಿದ್ದ ಶೆಹಲಾ ರಷೀದ್ ಕುಟುಂಬದ ಕಗ್ಗಂಟು ಈಗ ಬೀದಿಗೆ ಬಂದಿದೆ. ಇದೇ ವೇಳೆ, ಜೆಎನ್​ಯು ವಿದ್ಯಾರ್ಥಿ ಒಕ್ಕೂಟದ ಮಾಜಿ ಅಧ್ಯಕ್ಷೆಯೂ ಆದ ಶೆಹಲಾ ರಷೀದ್ ತಮ್ಮ ತಂದೆಯ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದು, ತಂದೆಯ ದೌರ್ಜನ್ಯಗಳನ್ನ ಸಾಕ್ಷಿ ಸಮೇತ ತೋರಿಸಿ ಟ್ವೀಟ್ ಮಾಡಿದ್ದಾರೆ.

ತಂದೆ ಬರೆದ ಪತ್ರದಲ್ಲೇನಿದೆ?: ನನ್ನ ಮಗಳಾದ ಶೇಹಲಾ ರಷೀದ್ ಶೋರಾಳಿಂದ ನನಗೆ ಜೀವ ಬೆದರಿಕೆ ಇದೆ. ಇನ್ನೊಬ್ಬ ಮಗಳು ಅಸ್ಮಾ ರಷೀದ್ ಹಾಗೂ ನನ್ನ ಹೆಂಡತಿ ಜುಬೈದಾ ಶೋರಾ ಮತ್ತಾಕೆಯ ಬಾಡಿಗಾರ್ಡ್ ಸಕಿಬ್ ಅಹಮದ್ ಅವರು ಶೆಹಲಾಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಅಬ್ದುಲ್ ರಷೀದ್ ಶೋರಾ ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

“2017ರಲ್ಲಿ ಶೆಹಲಾ ರಷೀದ್ ದಿಢೀರನೇ ಕಾಶ್ಮೀರದ ರಾಜಕಾರಣಕ್ಕೆ ಧುಮುಕುವುದರೊಂದಿಗೆ ನನಗೆ ಜೀವ ಬೆದರಿಕೆ ಪ್ರಾರಂಭವಾಯಿತು. ಟೆರರ್ ಫಂಡಿಂಗ್ ಕೇಸ್​ನಲ್ಲಿ ಜಹೂರ್ ವತಲಿ ಅವರನ್ನು ಬಂಧಿಸುವ ಎರಡು ತಿಂಗಳು ಮೊದಲಷ್ಟೇ 2017, ಜೂನ್ ತಿಂಗಳಲ್ಲಿ ಅವರು ಹಾಗೂ ಮಾಜಿ ಶಾಸಕ ಎಂಜಿನಿಯರ್ ರಷೀದ್ ಇಬ್ಬರೂ ನನ್ನನ್ನು ಭೇಟಿಯಾಗಿದ್ದರು. ಅವರ ಗುಂಪಿಗೆ ಶೆಹ್ಲಾಳನ್ನು ಸೇರಿಸುವಂತೆ ಕೋರಿ 3 ಕೋಟಿ ರೂ ಆಮಿಷ ಒಡ್ಡಿದ್ದರು…. ಕಾನೂನು ಬಾಹಿರ ಕೃತ್ಯಗಳಿಗೆ ಬಳಸಿಕೊಳ್ಳುವ ಸಾಧ್ಯತೆ ಇದ್ದರಿಂದ ಈ ಅಕ್ರಮ ಮಾರ್ಗಗಳಿಂದ ಬಂದ ಹಣವನ್ನು ತೆಗೆದುಕೊಳ್ಳಬಾರದು ಎಂದು ನನ್ನ ಮಕ್ಕಳಿಗೆ ಹೇಳಿದೆ” ಎಂದು ಶೆಹ್ಲಾ ತಂದೆ ಮಾಹಿತಿ ನೀಡಿದ್ದಾರೆ.

ನನ್ನ ಮನೆಯಲ್ಲಿ ದೇಶದ್ರೋಹ ಚಟುವಟಕೆ ನಡೆಯುತ್ತಿತ್ತು. ನನ್ನನ್ನು ಮಗಳು ಹೊರಹಾಕಲು ಯತ್ನಿಸಿದಳು ಎಂದೂ ಅವರು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಕೃಷಿ ಕಾಯ್ದೆಯನ್ನು ರದ್ದುಗೊಳಿಸದಿದ್ದರೆ ಮೈತ್ರಿಯನ್ನು ತೊರೆಯುತ್ತೇವೆ; ಲೋಕತಾಂತ್ರಿಕ್ ಪಕ್ಷ

ಶೆಹ್ಲಾ ರಷೀದ್ ಪ್ರತ್ಯಾರೋಪ: 

ಈ ಬೆಳವಣಿಗೆ ಆದ ಬೆನ್ನಲ್ಲೇ ಶೆಹ್ಲಾ ರಷೀದ್ ಅವರು ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿ ತಮ್ಮ ತಂದೆಯ ಆರೋಪಗಳನ್ನ ಸಾರಸಗಟಾಗಿ ತಳ್ಳಿಹಾಕಿರುವುದಲ್ಲದೆ, ಪ್ರತ್ಯಾರೋಪವನ್ನೂ ಮಾಡಿದ್ದಾರೆ.“ನನ್ನ ತಾಯಿ, ಅಕ್ಕ ಮತ್ತು ನನ್ನ ವಿರುದ್ಧ ತಂದೆ ಮಾಡಿರುವ ಆರೋಪಗಳನ್ನ ನೀವು ನೋಡಿರುತ್ತೀರಿ. ಬಹಳ ಸಂಕ್ಷಿಪ್ತವಾಗಿ ಹೇಳಬೇಕೆಂದರೆ ನನ್ನ ತಂದೆ ತನ್ನ ಹೆಂಡತಿಯನ್ನು ನಿಂದಿಸಿ ಹಲ್ಲೆ ಮಾಡುತ್ತಿದ್ದ ಪೈಶಾಚಿಕ ಪ್ರವೃತ್ತಿಯ ವ್ಯಕ್ತಿ. ನಾವು ಎಲ್ಲರೂ ಸೇರಿ ಅವರ ವಿರುದ್ಧ ಸಿಡಿದೆದ್ದೆವು. ಇದಕ್ಕೆ ಪ್ರತಿಯಾಗಿ ಅವರು ಇಂಥ ಸ್ಟಂಟ್​ಗಳನ್ನ ಮಾಡುತ್ತಿದ್ದಾರೆ” ಎಂದು ಶೆಹ್ಲಾ ರಷೀದ್ ತಮ್ಮ ಸರಣಿ ಟ್ವೀಟ್​ಗಳಲ್ಲಿ ತಿಳಿಸಿದ್ದಾರೆ.

“ತನ್ನ ವಿಧೇಯ ಪತ್ನಿ ಹಾಗೂ ಸಂಕೋಚ ಪ್ರವೃತ್ತಿಯ ಹೆಣ್ಮಕ್ಕಳು ತಿರುಗಿ ನಿಲ್ಲುತ್ತಾರೆಂದು ಅವರು ಯಾವತ್ತೂ ಅಂದಾಜು ಮಾಡಿರಲಿಲ್ಲ. ಮನೆಯನ್ನು ಪ್ರವೇಶ ಮಾಡದಂತೆ ನ್ಯಾಯಾಲಯ ನಿರ್ಬಂಧ ಹೇರಿದಾಗಿನಿಂದ ಅವರು ತುಚ್ಛ ರೀತಿಯಲ್ಲಿ ನ್ಯಾಯಾಂಗ ಪ್ರಕ್ರಿಯೆಯ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ” ಎಂದು ಅವರು ತಂದೆಗೆ ತಿರುಗೇಟು ನೀಡಿದ್ಧಾರೆ.

ಇದನ್ನೂ ಓದಿ: Urmila Matondkar: ಕಾಂಗ್ರೆಸ್​ ತೊರೆದಿದ್ದ ನಟಿ ಊರ್ಮಿಳಾ ಮಾತೋಂಡ್ಕರ್ ಇಂದು ಶಿವಸೇನೆ ಸೇರಲು ಸಿದ್ಧತೆ

ಇದು ರಾಜಕೀಯ ವಿಚಾರವೇ ಅಲ್ಲ. ನನಗೆ ಅರಿವು ಬಂದಾಗಿನಿಂದಲೂ ಈ ಬೆಳವಣಿಗೆ ನಡೆಯುತ್ತಿದೆ ಎಂದಿರುವ ಅವರು, ಮನೆಯವರನ್ನು ನಿಂದಿಸದಂತೆ ತಮ್ಮ ತಂದೆಗೆ ಮೊಹಲ್ಲಾ ಕಮಿಟಿ ಬರೆದಿರುವ ಪತ್ರವನ್ನು ಶೆಹಲಾ ರಷೀದ್ ತಮ್ಮ ಟ್ವೀಟ್​ವೊಂದರಲ್ಲಿ ಲಗತ್ತಿಸಿದ್ದಾರೆ.

ನ್ಯಾಯದ ಬಗ್ಗೆ ನಾವು ಏನೇ ಮಾತಾಡಬಹುದು. ಆದರೆ, ಮನೆಯಿಂದಲೇ ಅದು ಪ್ರಾರಂಭವಾಗುತ್ತದೆ. ಮೌನವಾಗಿದ್ದಷ್ಟೂ ದೌರ್ಜನ್ಯಕಾರರಿಗೆ ಬಲ ಬರುತ್ತದೆ ಎಂಬುದನ್ನು ಅರಿತು ನಾವು ತಂದೆಯ ದೌರ್ಜನ್ಯವನ್ನು ಸಹಿಸಿಕೊಳ್ಳದಿರಲು ಅಂತಿಮವಾಗಿ ನಿರ್ಧರಿಸಿದೆವು. ಇದೇ ನವೆಂಬರ್ 11ರಂದು ಅವರು ಮನೆಯನ್ನು ಪ್ರವೇಶಿಸದಂತೆ ನ್ಯಾಯಾಲಯ ಆದೇಶ ನೀಡಿತು. ಅದಾದ ಬಳಿಕ ಅವರು ಏನೇ ಹೇಳಿದ್ದರೂ ಅದು ತಪ್ಪು ಮುಚ್ಚಿಕೊಳ್ಳುವ ಕೆಲಸ ಅಷ್ಟೇ ಎಂದು ಶೆಹ್ಲಾ ರಷೀದ್ ಹೇಳಿಕೆ ನೀಡಿದ್ದಾರೆ.
Published by: Vijayasarthy SN
First published: December 1, 2020, 12:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories