• Home
 • »
 • News
 • »
 • national-international
 • »
 • Pro Khalistan Slogans: ಪಂಜಾಬ್​ನ ಸ್ವರ್ಣ ಮಂದಿರದಲ್ಲಿ ಖಲಿಸ್ತಾನ ಪರ ಘೋಷಣೆ

Pro Khalistan Slogans: ಪಂಜಾಬ್​ನ ಸ್ವರ್ಣ ಮಂದಿರದಲ್ಲಿ ಖಲಿಸ್ತಾನ ಪರ ಘೋಷಣೆ

ಸ್ವರ್ಣ ಮಂದಿರ

ಸ್ವರ್ಣ ಮಂದಿರ

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆಯನ್ನು ಪ್ರಸ್ತಾಪಿಸಿ ಕೊಲೆಗೀಡಾದ ಗಾಯಕನ ಕುಟುಂಬಕ್ಕೆ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ ಎನ್ನಲಾಗಿದೆ.

 • Share this:

  ಆಪರೇಶನ್ ಬ್ಲೂಸ್ಟಾರ್ 83ನೇ ವಾರ್ಷಿಕೋತ್ಸವದಂದು (Operation Blue Star) ಪಂಜಾಬ್​ನ ಅಮೃತಸರದ ಗೋಲ್ಡನ್ ಟೆಂಪಲ್‌ನ (Golden Temple) ಪ್ರವೇಶದ್ವಾರದಲ್ಲಿ ಖಲಿಸ್ತಾನ್ ಪರ ಘೋಷಣೆಗಳನ್ನು (Pro Khalistan Slogans) ಕೂಗಲಾಗಿದೆ. ತೀವ್ರಗಾಮಿ ಸಿಖ್ ಸಂಘಟನೆಗಳು ಮತ್ತು ಶಿರೋಮಣಿ ಅಕಾಲಿದಳ (ಅಮೃತಸರ)ಬೆಂಬಲಿಗರು ಈ ಘೋಷಣೆಗಳನ್ನು ಕೂಗಿದ್ದಾರೆ ಎಂದು ಹೇಳಲಾಗಿದ್ದು ಖಲಿಸ್ತಾನ್ ಪ್ರತ್ಯೇಕತಾವಾದಿ ಜರ್ನೈಲ್ ಭಿಂದ್ರನ್‌ವಾಲೆ ಅವರ ಪರ ಘೋಷಣೆಗಳು ಮತ್ತು ಪೋಸ್ಟರ್‌ಗಳನ್ನು ಸಹ ಬಿತ್ತರಿಸಲಾಗಿದೆ ಎಂದು ವರದಿಯಾಗಿದೆ. ಅನೇಕ ಯುವಕರು 'ಖಲಿಸ್ತಾನ್ ಜಿಂದಾಬಾದ್' ಎಂದು ಬರೆದಿರುವ ಬ್ಯಾನರ್ ಮತ್ತು ಫಲಕಗಳನ್ನು ಹಿಡಿದಿದ್ದರು. ಹತ್ಯೆಯಾದ ಪ್ರತ್ಯೇಕತಾವಾದಿ ನಾಯಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಅವರ ಚಿತ್ರವಿರುವ ಟೀ ಶರ್ಟ್‌ಗಳನ್ನು ಅವರು ಧರಿಸಿದ್ದರು ಎಂದು ಎಎನ್​ಐ ವರದಿ ಮಾಡಿದೆ.   


  ಸ್ಥಳದಲ್ಲಿದ್ದ ಮಾಜಿ ಸಂಸದ ಸಿಮ್ರಂಜಿತ್ ಸಿಂಗ್ ಮಾನ್ ನೇತೃತ್ವದ ಶಿರೋಮಣಿ ಅಕಾಲಿದಳ (ಅಮೃತಸರ) ಸಂಘಟನೆಯ ಕಾರ್ಯಕರ್ತರು ಸಹ ಖಲಿಸ್ತಾನ್ ಪರ ಘೋಷಣೆಗಳನ್ನು ಕೂಗಿದ್ದಾರೆ. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆಯನ್ನು ಪ್ರಸ್ತಾಪಿಸಿ ಕೊಲೆಗೀಡಾದ ಗಾಯಕನ ಕುಟುಂಬಕ್ಕೆ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ ಎನ್ನಲಾಗಿದೆ.  ಏನಿದು ಆಪರೇಷನ್ ಬ್ಲೂ ಸ್ಟಾರ್?
  ಆಪರೇಷನ್ ಬ್ಲೂಸ್ಟಾರ್ 1984 ರಲ್ಲಿ ಗೋಲ್ಡನ್ ಟೆಂಪಲ್‌ನಿಂದ ಉಗ್ರರನ್ನು ಹೊರಹಾಕಲು ನಡೆಸಿದ ಮಿಲಿಟರಿ ಕಾರ್ಯಾಚರಣೆಯಾಗಿದೆ. ಆಪರೇಷನ್ ಬ್ಲೂಸ್ಟಾರ್​ನ 38ನೇ ವಾರ್ಷಿಕೋತ್ಸವ ಕಾರ್ಯಕ್ರಮವು ಸುಗಮವಾಗಿ ಸಾಗುವುದನ್ನು ಖಚಿತಪಡಿಸಿಕೊಳ್ಳಲು ಅಮೃತಸರದಲ್ಲಿ ವಿಸ್ತಾರವಾದ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು.


  ಕತ್ತಿಗಳನ್ನು ಹಿಡಿದಿದ್ದರು
  ಇಂದು ಅಕಾಲ್ ತಖ್ತ್ ಜಥೇದಾರ್ ಜೂನ್ 1984 ರಲ್ಲಿ ಜೀವ ಕಳೆದುಕೊಂಡವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಸಿಖ್ಖರ ಪವಿತ್ರ ಸ್ಥಳಕ್ಕೆ ಸೈನ್ಯವನ್ನು ಪ್ರವೇಶಿಸಲು ಆಗಿನ ಕಾಂಗ್ರೆಸ್ ಸರ್ಕಾರವನ್ನು ಖಂಡಿಸಿದರು. ಇದೇ ಸಂದರ್ಭದಲ್ಲಿ ದೇವಾಲಯದ ಹೊರಗೆ ಹಲವಾರು ಪುರುಷರು ಕತ್ತಿಗಳು ಮತ್ತು ಭಿಂದ್ರವಾಲೆ ಪೋಸ್ಟರ್‌ಗಳೊಂದಿಗೆ ಜಮಾಯಿಸಿದರು. ಪಂಜಾಬ್ ಪೋಲೀಸ್, ಅರೆಸೇನಾ ಪಡೆಗಳು ಮತ್ತು ಗುಪ್ತಚರ ಸಿಬ್ಬಂದಿಯ ಸಮ್ಮುಖದಲ್ಲಿ ಅವರು ಖಲಿಸ್ತಾನ್ ಮತ್ತು ಭಿಂದ್ರವಾಲೆಯ ಘೋಷಣೆಗಳ ನಡುವೆ ಕತ್ತಿಗಳನ್ನು ಬೀಸುತ್ತಿದ್ದರು ಎಂದು ಹೇಳಲಾಗಿದೆ. 


  ಇತಿಹಾಸದ ಬಗ್ಗೆ ಯುವಕರಿಗೆ ತಿಳಿಹೇಳಲು ಕರೆ
  ಈ ಸಂದರ್ಭದಲ್ಲಿ ಸಿಖ್ ಸಮುದಾಯಕ್ಕೆ ನೀಡಿದ ಸಂದೇಶದಲ್ಲಿ ಅಕಲ್ ತಖ್ತ್‌ನ ಜತೇದಾರ್ ಜ್ಞಾನಿ ಹರ್‌ಪ್ರೀತ್ ಸಿಂಗ್, ಸಿಖ್ ಧರ್ಮ ಪ್ರಚಾರಕ್ಕಾಗಿ ಸಿಖ್ ಬೋಧಕರು ಮತ್ತು ವಿದ್ವಾಂಸರು ಗಡಿ ಪ್ರದೇಶಗಳಿಗೆ ಭೇಟಿ ನೀಡಬೇಕು.  ಶ್ರೀಮಂತ ಸಿಖ್ ತತ್ವಗಳು ಮತ್ತು ಇತಿಹಾಸದ ಬಗ್ಗೆ ಯುವಕರಿಗೆ ತಿಳಿಸಬೇಕಾಗಿದೆ ಎಂದು ಹೇಳಿದ್ದಾಗಿ ವರದಿಯಾಗಿದೆ.


  ಇದನ್ನೂ ಓದಿ: Explained: ಅಪಾಯ ಮಟ್ಟ ಮೀರಿದ ಜಾಗತಿಕ ತಾಪಮಾನ; 2026ಕ್ಕೆ ಎದುರಾಗಲಿದೆಯೇ ಮಹಾ ಕಂಟಕ?


  ಮಾದಕ ದ್ರವ್ಯದ ವಿರುದ್ಧ ಹೋರಾಡಬೇಕಿದೆ
  ಅನೇಕ ಯುವಕರನ್ನು ಕಾಡುತ್ತಿರುವ ಮಾದಕ ದ್ರವ್ಯಗಳ ಹಾವಳಿಯ ವಿರುದ್ಧ ಹೋರಾಡುವ ಅಗತ್ಯತೆಯ ಬಗ್ಗೆಯೂ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಸಿಖ್ಖರ ಅತ್ಯುನ್ನತ ಧಾರ್ಮಿಕ ಸಂಸ್ಥೆಯಾದ ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿಯು (SGPC) ಗುರು ಗ್ರಂಥ ಸಾಹಿಬ್‌ನ ಬುಲೆಟ್-ರೈಡ್ ಪವಿತ್ರ 'ಸರೂಪ್' (ಸಂಪುಟ) ಅನ್ನು ಪ್ರದರ್ಶಿಸಿತು.


  ಇದನ್ನೂ ಓದಿ: Assam: ಊಟದ ಡಬ್ಬದಲ್ಲಿ ಶಾಲೆಗೆ ಗೋಮಾಂಸ ತಂದ ಹೆಡ್ ಮಾಸ್ಟರ್ ಅರೆಸ್ಟ್


  ಅಂದು ಗರ್ಭಗುಡಿಯಲ್ಲಿ ಸ್ಥಾಪಿಸಲಾಗಿದ್ದ ‘ಸರೂಪ್’ 1984ರಲ್ಲಿ ಸೇನಾ ಕಾರ್ಯಾಚರಣೆ ವೇಳೆ ಗುಂಡು ತಗುಲಿತ್ತು.

  Published by:guruganesh bhat
  First published: