• Home
  • »
  • News
  • »
  • national-international
  • »
  • Priyanka Gandhi: ಖರ್ಗೆ, ತರೂರ್ ಸ್ಪರ್ಧೆ ಬಗ್ಗೆ ಅಪಸ್ವರ; ಪ್ರಿಯಾಂಕಾ ಕೈ ಅಧ್ಯಕ್ಷೆ ಆಗಲಿ ಎಂದ ಸಂಸದ!

Priyanka Gandhi: ಖರ್ಗೆ, ತರೂರ್ ಸ್ಪರ್ಧೆ ಬಗ್ಗೆ ಅಪಸ್ವರ; ಪ್ರಿಯಾಂಕಾ ಕೈ ಅಧ್ಯಕ್ಷೆ ಆಗಲಿ ಎಂದ ಸಂಸದ!

ಪ್ರಿಯಾಂಕ ಗಾಂಧಿ ವಾದ್ರಾ

ಪ್ರಿಯಾಂಕ ಗಾಂಧಿ ವಾದ್ರಾ

ಅಸ್ಸಾಂನ ಬಾರ್ಪೇಟಾ ಸಂಸದ ಅಬ್ದುಲ್ ಖಲೀಕ್ ಟ್ವೀಟ್ ಮಾಡಿದ್ದು ‘ರಾಹುಲ್ ಗಾಂಧಿ ಅವರು ಮತ್ತೊಮ್ಮೆ ಕಾಂಗ್ರೆಸ್ ಅಧ್ಯಕ್ಷರಾಗಲು ನಿರಾಕರಿಸಿದ್ದಾರೆ. ಹಾಗಾಗಿ, ಆ ಸ್ಥಾನಕ್ಕೆ ಪ್ರಿಯಾಂಕಾ ಗಾಂಧಿ ಅವರು ಸೂಕ್ತ ಅಭ್ಯರ್ಥಿ ಎಂದು ನಾನು ಪರಿಗಣಿಸುತ್ತೇನೆ. ವಾದ್ರಾ ಕುಟುಂಬದ ಸೊಸೆಯಾಗಿರುವ ಅವರು ಭಾರತೀಯ ಸಂಪ್ರದಾಯದ ಪ್ರಕಾರ ಇನ್ನೂ ಗಾಂಧಿ ಕುಟುಂಬದ ಸದಸ್ಯರಾಗಿ ಉಳಿದಿಲ್ಲʼ ಎಂದು ಟ್ವೀಟ್‌ ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಂದೆ ಓದಿ ...
  • Share this:

ನವದೆಹಲಿ: ಕಾಂಗ್ರೆಸ್ (Congress) ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಪಕ್ಷದಲ್ಲಿ ಗೊಂದಲ ವಾತಾವರಣ ನಿರ್ಮಾಣವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಶಶಿ ತರೂರ್ ಮತ್ತು ಪವನ್ ಬನ್ಸಾಲ್ ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಕೂಡ ಇನ್ನೂ ರೇಸ್‌ನಲ್ಲಿಯೇ ಇದ್ದಾರೆ. ಈ ಎಲ್ಲಾ ಬೆಳವಣಿಗೆ ಮಧ್ಯೆ ಕಾಂಗ್ರೆಸ್ ಸಂಸದ ಅಬ್ದುಲ್ ಖಲೀಕ್ ಅವರು ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಪ್ರಿಯಾಂಕಾ ವಾದ್ರಾ ಸೂಕ್ತ ಎಂದು ಅವರ ಪರ ಬ್ಯಾಟ್‌ ಬೀಸಿದ್ದಾರೆ. ಕಾಂಗ್ರೆಸ್ನ ಅಧ್ಯಕ್ಷ ಸ್ಥಾನಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರೇ ಸೂಕ್ತ ಅಭ್ಯರ್ಥಿ ಎಂದು ಕಾಂಗ್ರೆಸ್ ಸಂಸದ ಅಬ್ದುಲ್ ಖಲೀಕ್ ಅವರು ಹೇಳಿದ್ದಾರೆ. ಭಾರತೀಯ ಸಂಪ್ರದಾಯದ ಪ್ರಕಾರ ಮದುವೆಯಾದ ಬಳಿಕ ಪ್ರಿಯಾಂಕಾ ಅವರು, ವಾದ್ರಾ ಕುಟುಂಬದ ಸೊಸೆಯಾಗಿದ್ದಾರೆ.


ಪ್ರಿಯಾಂಕಾ ವಾದ್ರಾಗೆ ಬೆಂಬಲ
ಅವರೀಗ ಗಾಂಧಿ ಕುಟುಂಬದ ಸದಸ್ಯರಲ್ಲ ಎಂದೂ ಪ್ರಿಯಾಂಕಾ ಪರ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿದ ಅಸ್ಸಾಂನ ಬಾರ್ಪೇಟಾ ಸಂಸದ ಅಬ್ದುಲ್ ಖಲೀಕ್ ‘ರಾಹುಲ್ ಗಾಂಧಿ ಅವರು ಮತ್ತೊಮ್ಮೆ ಕಾಂಗ್ರೆಸ್ ಅಧ್ಯಕ್ಷರಾಗಲು ನಿರಾಕರಿಸಿದ್ದಾರೆ. ಹಾಗಾಗಿ, ಆ ಸ್ಥಾನಕ್ಕೆ ಪ್ರಿಯಾಂಕಾ ಗಾಂಧಿ ಅವರು ಸೂಕ್ತ ಅಭ್ಯರ್ಥಿ ಎಂದು ನಾನು ಪರಿಗಣಿಸುತ್ತೇನೆ. ವಾದ್ರಾ ಕುಟುಂಬದ ಸೊಸೆಯಾಗಿರುವ ಅವರು ಭಾರತೀಯ ಸಂಪ್ರದಾಯದ ಪ್ರಕಾರ ಇನ್ನೂ ಗಾಂಧಿ ಕುಟುಂಬದ ಸದಸ್ಯರಾಗಿ ಉಳಿದಿಲ್ಲʼ ಎಂದು ಟ್ವೀಟ್‌ ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ʼಪಕ್ಷದ ಕಾರ್ಯಕರ್ತರ ಆಶಯವನ್ನು ನಾನು ಗೌರವಿಸುತ್ತೇನೆ, ಆದರೆ ಗಾಂಧಿ ಕುಟುಂಬದಿಂದ ಯಾರೂ ಮುಂದಿನ ಕಾಂಗ್ರೆಸ್ ಅಧ್ಯಕ್ಷರಾಗುವುದಿಲ್ಲʼ ಎಂದು ರಾಹುಲ್‌ ಗಾಂಧಿಯವರು ಅಶೋಕ್ ಗೆಹ್ಲೋಟ್ ಅವರಿಗೆ ಹೇಳಿದ ಕೆಲವು ದಿನಗಳ ನಂತರ ಸಂಸದ ಅಬ್ದುಲ್ ಖಲೀಕ್ ಪ್ರಿಯಾಂಕಾ ಹೆಸರನ್ನು ಸೂಚಿಸಿದ್ದಾರೆ.


ರಾಹುಲ್‌ ಗಾಂಧಿ ಅಶೋಕ್ ಗೆಹ್ಲೋಟ್ ಗೆ ಹೇಳಿದ್ದೇನು?
"ನಾನು ರಾಹುಲ್‌ ಗಾಂಧಿ ಅವರಿಗೆ ಹಲವಾರು ಬಾರಿ ವಿನಂತಿಸಿದ್ದೇನೆ. ಅವರು ಸ್ಪಷ್ಟವಾಗಿ ಹೇಳಿದ್ದಾರೆ. ನನಗೆ ಗೊತ್ತು, ಎಲ್ಲರೂ ನಾನು ಅಧ್ಯಕ್ಷರಾಗಲಿ ಎಂದು ಪಕ್ಷದಲ್ಲಿ ಬಯಸುತ್ತಾರೆ. ಪಿಸಿಸಿಗಳು ನಿರ್ಣಯಗಳನ್ನು ಅಂಗೀಕರಿಸಿದ್ದಾರೆ, ಕಾರ್ಯಕರ್ತರು ಕೂಡ ಇದನ್ನೇ ಆಶಿಸುತ್ತಿದ್ದಾರೆ. ನನಗೆ ಅವರ ಬಗ್ಗೆ ಸಾಕಷ್ಟು ಗೌರವವಿದೆ, ಆದರೆ ಕೆಲವು ಕಾರಣಗಳಿಂದಾಗಿ ನಾವು ಗಾಂಧಿ ಕುಟುಂಬದವರಲ್ಲದ ವ್ಯಕ್ತಿ ಅಧ್ಯಕ್ಷರಾಗಬೇಕು ಎಂದು ನಿರ್ಧರಿಸಿದ್ದೇವೆ' ಎಂದು ಗೆಹ್ಲೋಟ್ ಹೇಳಿದ್ದರು.


ಇದನ್ನೂ ಓದಿ:  Viral: ಬ್ಯಾಗಲ್ಲಿ ಬಾಂಬ್​ ಇದೆ ಅಂದುಕೊಂಡ ಪೊಲೀಸರಿಗೆ ಸಿಕ್ಕಿದ್ದು ಲೈಂಗಿಕ ಆಟಿಕೆ!


ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಉನ್ನತ ಹುದ್ದೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಾಗಿದ್ದಾರೆ, ಆದರೆ ರಾಜಸ್ಥಾನದಲ್ಲಿನ ಬೆಳವಣಿಗೆಗಳು ಅಶೋಕ್ ಗೆಹ್ಲೋಟ್ ಅವರ ಉಮೇದುವಾರಿಕೆಯ ಮೇಲೆ ಮೋಡ ಕವಿದಿರುವುದರಿಂದ ಅವರ ಚುನಾವಣಾ ಪ್ರತಿಸ್ಪರ್ಧಿ ಯಾರು ಎಂಬುದರ ಬಗ್ಗೆ ಸ್ಪಷ್ಟವಾಗಿಲ್ಲ.


ನಾಮಪತ್ರ ಸಲ್ಲಿಕೆಗೆ ನಾಳೇ ಲಾಸ್ಟ್‌ ಡೇಟ್
ಪಕ್ಷವು ಗುರುವಾರ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯು ಸೆಪ್ಟೆಂಬರ್ 24 ರಿಂದ 30 ರವರೆಗೆ ನಡೆಯಲಿದೆ. ಹೀಗಾಗಿ ನಾಳೇ ಒಂದೇ ದಿನ ಬಾಕಿ ಇದ್ದು ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಹಣಾಹಣಿ ಜೋರಾಗಲಿದೆ. ನಾಮಪತ್ರಗಳ ಪರಿಶೀಲನೆಗೆ ಅಕ್ಟೋಬರ್ 1, ನಾಮಪತ್ರ ಹಿಂಪಡೆಯಲು ಅಕ್ಟೋಬರ್ 8 ಕೊನೆಯ ದಿನವಾಗಿದೆ. ಅಕ್ಟೋಬರ್ 8 ರಂದು ಸಂಜೆ 5 ಗಂಟೆಗೆ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು.


ಇದನ್ನೂ ಓದಿ: Indian Army: ದತ್ತು ಸ್ವೀಕಾರಕ್ಕಾಗಿ ಕಾಯುತ್ತಿವೆ ಭಾರತೀಯ ಸೇನೆಯಿಂದ ನಿವೃತ್ತಗೊಂಡ ಶ್ವಾನಗಳು, ದತ್ತು ತೆಗೆದುಕೊಳ್ಳುವುದು ಹೇಗೆ ಗೊತ್ತೇ?


ಅಗತ್ಯ ಬಿದ್ದರೆ ಅಕ್ಟೋಬರ್ 17 ರಂದು ಮತದಾನ ನಡೆಯಲಿದೆ. ಅಕ್ಟೋಬರ್ 19 ರಂದು ಮತ ಎಣಿಕೆ ನಡೆಯಲಿದ್ದು, ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ. 9,000ಕ್ಕೂ ಹೆಚ್ಚು ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರತಿನಿಧಿಗಳು ಮತದಾನದಲ್ಲಿ ಮತ ಚಲಾಯಿಸಲಿದ್ದಾರೆ. ಈ ಹಿಂದೆ ಕಾಂಗ್ರೆಸ್‌ ಸ್ಥಾನಕ್ಕೆ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಮತ್ತು ಕಮಲ್‌ ನಾಥ್‌ ಹೆಸರೂ ಕೂಡ ಕೇಳಿ ಬಂದಿತ್ತು. ಆದರೆ ರಾಹುಲ್ ಗಾಂಧಿ ಅವರು ಕೆಸಿ ವೇಣುಗೋಪಾಲ್ ಅವರನ್ನು ಆಯ್ಕೆ ಮಾಡಿದ್ದಾರೆ. ‌

Published by:Ashwini Prabhu
First published: