ವೈದ್ಯೆ ಪ್ರಿಯಾಂಕಾ ರೆಡ್ಡಿ ಹತ್ಯೆಗೆ ಮುನ್ನ ಗ್ಯಾಂಗ್ ರೇಪ್: ಪೊಲೀಸರಿಂದ ನಾಲ್ವರ ಬಂಧನ

ಈಕೆಯನ್ನು ಆರೋಪಿಗಳು ಹೊಡೆದು ಸಾಯಿಸಿದರಾ ಅಥವಾ ಕತ್ತುಹಿಸುಕಿ ಕೊಂದರಾ ಎಂಬುದು ಪೊಲೀಸರಿಗೆ ಸ್ಪಷ್ಟವಾಗಿಲ್ಲ. ಈಗ ನಾಲ್ವರನ್ನು ಬಂಧಿಸಿರುವ ಪೊಲೀಸರು ಈ ಪ್ರಕರಣದಲ್ಲಿ ತನಿಖೆ ಚುರುಕುಗೊಳಿಸಿದ್ಧಾರೆ.

news18
Updated:November 29, 2019, 4:44 PM IST
ವೈದ್ಯೆ ಪ್ರಿಯಾಂಕಾ ರೆಡ್ಡಿ ಹತ್ಯೆಗೆ ಮುನ್ನ ಗ್ಯಾಂಗ್ ರೇಪ್: ಪೊಲೀಸರಿಂದ ನಾಲ್ವರ ಬಂಧನ
ಪ್ರಾತಿನಿಧಿಕ ಚಿತ್ರ
  • News18
  • Last Updated: November 29, 2019, 4:44 PM IST
  • Share this:
ಹೈದರಾಬಾದ್(ನ. 29): ವೆಟರಿನರಿ ವೈದ್ಯೆ ಪ್ರಿಯಾಂಕಾ ರೆಡ್ಡಿ ಹತ್ಯೆ ಪ್ರಕರಣವನ್ನು ಸೈಬಾರಾಬಾದ್ ಪೊಲೀಸರು ಭೇದಿಸಿದ್ಧಾರೆ. ಈಕೆಯನ್ನು ಹತ್ಯೆ ಮಾಡುವ ಮುನ್ನ ದುಷ್ಕರ್ಮಿಗಳು ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರವೆಸಗಿ ಕೊಲೆಗೈದಿರುವುದು ತಿಳಿದುಬಂದಿದೆ. ಈ ಪ್ರಕರಣ ಸಂಬಂಧ ಸೈಬಾರಾಬಾದ್ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಟ್ರಕ್ ಡ್ರೈವರ್​ಗಳಾದ ಮೊಹಮ್ಮದ್ ಪಾಶಾ, ನವೀನ್ ಹಾಗೂ ಕ್ಲೀನರ್​ಗಳಾದ ಕೇಶವುಲು ಮತ್ತು ಶಿವ ಎನ್ನಲಾಗಿದೆ.

ತೆಲಂಗಾಣದ ಶಾದ್​ನಗರದ ನಿವಾಸಿಯಾದ 26 ವರ್ಷದ ಪ್ರಿಯಾಂಕಾ ರೆಡ್ಡಿ ವೃತ್ತಿಯಲ್ಲಿ ಪಶು ವೈದ್ಯೆಯಾಗಿದ್ಧಾರೆ. ಬುಧವಾರಂದು ತಮ್ಮ ಮನೆಯಿಂದ ಆಸ್ಪತ್ರೆಗೆ ಹೋಗವ ಮಧ್ಯೆ ಶಂಸಾಬಾದ್​ನಲ್ಲಿ ಈಕೆಯ ದ್ವಿಚಕ್ರ ವಾಹನ ಪಂಕ್ಚರ್ ಆಗಿದೆ. ಅಂದು ರಾತ್ರಿ ನಾಪತ್ತೆಯಾದವರು ನಿನ್ನೆ ಗುರುವಾರ ಹೆಣವಾಗಿ ಪತ್ತೆಯಾಗಿದ್ದಾರೆ. ಈಕೆಯ ದೇಹವನ್ನು ದುಷ್ಕರ್ಮಿಗಳು ಸುಟ್ಟಿದ್ದರು.

ಬುಧವಾರ ರಾತ್ರಿ 9:15ರಲ್ಲಿ ಈಕೆ ತನ್ನ ಸಹೋದರಿಯೊಂದಿಗೆ ಮಾತನಾಡಿದ್ದೇ ಕೊನೆಯಾಗಿತ್ತು. ತನ್ನ ಪಂಕ್ಚರ್ ಆದ ಟಯರ್ ಅನ್ನು ರಿಪೇರಿ ಮಾಡುವುದಾಗಿ ಒಬ್ಬರು ಮುಂದೆ ಬಂದಿದ್ಧಾರೆ. ಆದರೆ, ತುಂಬಾ ಮಂದಿ ಅಪರಿಚಿತರು ಸ್ಥಳದಲ್ಲಿದ್ದಾರೆ. ಹಲವಾರು ಟ್ರಕ್​ಗಳು ಇಲ್ಲಿ ನಿಂತಿವೆ. ತನಗೆ ಭಯವಾಗುತ್ತಿದೆ ಎಂದು ಪ್ರಿಯಾಂಕಾ ರೆಡ್ಡಿ ಫೋನ್​ನಲ್ಲಿ ತನ್ನ ಸಹೋದರಿಗೆ ತಿಳಿಸಿದ್ದರು.

ಇದನ್ನೂ ಓದಿ: ಒಂದು ಲೀಟರ್ ಹಾಲಿಗೆ ಒಂದು ಬಕೆಟ್ ನೀರು; 81 ಮಕ್ಕಳಿಗೆ ನೀರ್​ಬೆರಕೆ ಹಾಲು; ಯೋಗಿ ಆಡಳಿತದಲ್ಲಿ ಮತ್ತೊಂದು ಬಿಸಿಯೂಟ ಕರ್ಮಕಾಂಡ ಬಯಲು

ಈ ವಿಚಾರವನ್ನು ನೆನಪಿಸಿಕೊಂಡ ಸಹೋದರಿ, ವಾಹನವನ್ನು ಅಲ್ಲೇ ಬಿಟ್ಟು ಸಮೀಪದಲ್ಲಿರುವ ಟೋಲ್ ಗೇಟ್​ಗೆ ಹೋಗಿ ಕಾದುಕುಳಿತುಕೋ ಎಂದು ನಾನು ಸಲಹೆ ನೀಡಿದ್ದೆ. ಆದರೆ, ಕೆಲ ಹೊತ್ತಿನ ನಂತರ ಮತ್ತೆ ಫೋನ್ ಮಾಡಿದಾಗ ಸ್ವಿಚ್ ಆಫ್ ಆಗಿತ್ತು ಎಂದು ಹೇಳಿದ್ದರು.

ಪೊಲೀಸರು ಸಿಸಿಟಿವಿ ಕ್ಯಾಮೆರಾಗಳ ದೃಶ್ಯವನ್ನು ಪರಿಶೀಲಿಸಿದಾಗ ಘಟನೆಯ ಸುಳಿವು ಸಿಕ್ಕಿದೆ. ಪೊಲೀಸರು ಹೇಳುವ ಪ್ರಕಾರ, ಪ್ರಿಯಾಂಕಾ ರೆಡ್ಡಿಯ ಸ್ಕೂಟರ್​ನ ಟಯರ್​ಗಳನ್ನು ಆರೋಪಿಗಳೇ ಪಂಕ್ಚರ್ ಮಾಡಿದ್ದಾರೆ. ಟಯರ್ ಪಂಕ್ಚರ್ ರಿಪೇರಿ ಮಾಡಲು ಸಹಾಯ ಮಾಡುವುದಾಗಿ ಹೇಳಿ ಆಕೆಯನ್ನು ಅಪಹರಿಸಿದ್ದಾರೆ. ನಂತರ ತೋಂಡುಪಳ್ಳಿ ಟೋಲ್ ಗೇಟ್ ಸಮೀಪದಲ್ಲಿರುವ ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕರೆದೊಯ್ದು ಟ್ರಕ್​ಗಳ ಮಧ್ಯೆ ಗ್ಯಾಂಗ್ ರೇಪ್ ಮಾಡಿ ಸಾಯಿಸಿದ್ದಾರೆ. ಬಳಿಕ, ಟ್ರಕ್​ನಲ್ಲಿ ಆಕೆಯ ದೇಹವನ್ನು ಸಾಗಿಸಿ ಚರಂಡಿಯೊಂದಕ್ಕೆ ಬಿಸಾಡಿ ಸುಟ್ಟುಹಾಕಿದ್ದಾರೆ. ಆ ನಂತರ ಒಬ್ಬ ಆರೋಪಿಯು ಈಕೆಯ ಸ್ಕೂಟರನ್ನು ತೆಗೆದುಕೊಂಡು ಹೊರವಲಯವೊಂದರ ರಸ್ತೆಬದಿಯಲ್ಲಿ ಬಿಟ್ಟು ಹೋಗಿದ್ದಾನೆನ್ನಲಾಗಿದೆ.

ಈಕೆಯನ್ನು ಆರೋಪಿಗಳು ಹೊಡೆದು ಸಾಯಿಸಿದರಾ ಅಥವಾ ಕತ್ತುಹಿಸುಕಿ ಕೊಂದರಾ ಎಂಬುದು ಪೊಲೀಸರಿಗೆ ಸ್ಪಷ್ಟವಾಗಿಲ್ಲ. ಈಗ ನಾಲ್ವರನ್ನು ಬಂಧಿಸಿರುವ ಪೊಲೀಸರು ಈ ಪ್ರಕರಣದಲ್ಲಿ ತನಿಖೆ ಚುರುಕುಗೊಳಿಸಿದ್ಧಾರೆ.(ವರದಿ: ಬಾಲಕೃಷ್ಣ ಎಂ.)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: November 29, 2019, 4:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading