• Home
 • »
 • News
 • »
 • national-international
 • »
 • ರಕ್ಷಾ ಬಂಧನದ ವಿಶೇಷ: ಭಾರತದ ರಾಜಕಾರಣದ ಪ್ರಮುಖ 5 ಅಣ್ಣ- ತಂಗಿಯರು ಇವರು...!

ರಕ್ಷಾ ಬಂಧನದ ವಿಶೇಷ: ಭಾರತದ ರಾಜಕಾರಣದ ಪ್ರಮುಖ 5 ಅಣ್ಣ- ತಂಗಿಯರು ಇವರು...!

ಪ್ರಿಯಾಂಕ- ರಾಹುಲ್​

ಪ್ರಿಯಾಂಕ- ರಾಹುಲ್​

ಭಾರತೀಯ ರಾಜಕಾರಣದಲ್ಲೂ ಇಂತಹ ಒಡಹುಟ್ಟಿದ ಸಂಬಂಧಗಳು ಸಾಕಷ್ಟಿವೆ, ಕೆಲವೊಮ್ಮೆ ಒಂದೇ ಪಕ್ಷಕ್ಕಾಗಿ ಕೆಲಸ ಮಾಡುವ ಬೆಚ್ಚಗಿನ ಸಂಬಂಧಗಳು ಭಾರತದ ವರ್ಣರಂಜಿತ ರಾಜಕಾರಣದಲ್ಲಿ ನಾವು ನೋಡಬಹುದು, ಕೆಲವೊಮ್ಮೆ ಈ ಸೋದರ- ಸೋದರಿ ಸಂಬಂಧಗಳು ವೈರತನಕ್ಕೂ ತಿರುಗಿದ ಉದಾಹರಣೆಗಳು ಸಹ ಇವೆ.

 • Share this:

  ಇಂದು ರಕ್ಷಾ ಬಂಧನ ಹಬ್ಬ, ಇಡೀ ದೇಶದಾದ್ಯಂತ ಆಚರಿಸಲ್ಪಡುವ ಈ ಹಬ್ಬಕ್ಕೆ ರಾಜಕೀಯ ನಾಯಕರು ಮತ್ತು ಹಲವಾರು ಜನರು ತಮ್ಮ ಒಡಹುಟ್ಟಿದವರಿಗೆ, ಅಕ್ಕ- ತಂಗಿಯಂದಿರಿಗೆ ಶುಭಕೋರಿದ್ದಾರೆ.


  ಈ ಹಬ್ಬವನ್ನು ಪುರಾತನ ಕಾಲದಿಂದ ಪ್ರತಿ ವರ್ಷ 'ಶ್ರಾವಣ ಮಾಸದ' ಪೂರ್ಣಿಮೆಯಂದು ಆಚರಿಸಲಾಗುತ್ತಿದೆ. ಈ ವರ್ಷ, ಆಗಸ್ಟ್ 22 ರ ಭಾನುವಾರದಂದು ರಕ್ಷಾ ಬಂಧನವನ್ನು ಆಚರಿಸಲಾಗುತ್ತಿದೆ. ಹಬ್ಬದ 'ಮುಹೂರ್ತ'ವು ಆಗಸ್ಟ್ 21 ರ ಸಂಜೆಯಿಂದ ಆರಂಭವಾಗಲಿದ್ದರೂ, 'ಉದಯ ತಿಥಿ' ಆಗಸ್ಟ್ 22 ರಂದು ಆಚರಿಸಲಾಗುತ್ತಿದೆ. ಆದ್ದರಿಂದ ಸಹೋದರಿಯರು ಈ ದಿನ ರಾಖಿ ಕಟ್ಟಿ ಸಂಭ್ರಮಿಸುತ್ತಾರೆ.


  ಭಾರತೀಯ ರಾಜಕಾರಣದಲ್ಲೂ ಇಂತಹ ಒಡಹುಟ್ಟಿದ ಸಂಬಂಧಗಳು ಸಾಕಷ್ಟಿವೆ, ಕೆಲವೊಮ್ಮೆ ಒಂದೇ ಪಕ್ಷಕ್ಕಾಗಿ ಕೆಲಸ ಮಾಡುವ ಬೆಚ್ಚಗಿನ ಸಂಬಂಧಗಳು ಭಾರತದ ವರ್ಣರಂಜಿತ ರಾಜಕಾರಣದಲ್ಲಿ ನಾವು ನೋಡಬಹುದು, ಕೆಲವೊಮ್ಮೆ ಈ ಸೋದರ- ಸೋದರಿ ಸಂಬಂಧಗಳು ವೈರತನಕ್ಕೂ ತಿರುಗಿದ ಉದಾಹರಣೆಗಳು ಸಹ ಇವೆ.


  ರಾಜಕೀಯದಲ್ಲಿ ಸಹೋದರ-ಸಹೋದರಿಯರ ಸಂಬಂಧದ ಒಂದಷ್ಟು ಕೆಲವು ಆಸಕ್ತಿದಾಯಕ ಕತೆಗಳು ಇಲ್ಲಿವೆ:


  ಪ್ರಿಯಾಂಕ ಗಾಂಧಿ ಮತ್ತು ರಾಹುಲ್ ಗಾಂಧಿ


  ರಾಜಕೀಯ ರ್ಯಾಲಿಗಳಿಂದ ಹಿಡಿದು ವಿವಿಧ ಹಬ್ಬದ ಸಂದರ್ಭಗಳಲ್ಲಿ, ಇಬ್ಬರು ಕಾಂಗ್ರೆಸ್ ನಾಯಕರು ಆಗಾಗ ವೇದಿಕೆ ಹಂಚಿಕೊಳ್ಳುವುದನ್ನು ಕಾಣಬಹುದು. ರಾಹುಲ್ ಗಾಂಧಿ ವಯನಾಡ್ ಸಂಸದರಾಗಿದ್ದು, ಪಕ್ಷವನ್ನು ಮುನ್ನಡೆಸುವಲ್ಲಿ ಸಕ್ರಿಯರಾಗಿದ್ದಾರೆ, ಉತ್ತರ ಪ್ರದೇಶದಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸುವ ಜವಾಬ್ದಾರಿಯನ್ನು ಪ್ರಿಯಾಂಕಾ ಗಾಂಧಿ ಹೊತ್ತಿದ್ದಾರೆ. ಒಡಹುಟ್ಟಿದವರು ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಯೊಬ್ಬರಿಗೂ ವಿವಿಧ ಸಂದರ್ಭಗಳಲ್ಲಿ ಶುಭ ಹಾರೈಸುತ್ತಾರೆ ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. "ನಾನು ನನ್ನ ಸಹೋದರನಿಂದ ಪ್ರೀತಿ, ಸತ್ಯ ಮತ್ತು ತಾಳ್ಮೆಯನ್ನು ಕಲಿತಿದ್ದೇನೆ ಮತ್ತು ಸಂತೋಷ ಮತ್ತು ದುಃಖವನ್ನು ಒಟ್ಟಿಗೆ ಹಂಚಿಕೊಂಡು ಬದುಕುತ್ತಿದ್ದೇವೆ. ಇಂತಹ ಸಹೋದರನನ್ನು ಪಡೆದಿದ್ದಕ್ಕೆ ನನಗೆ ಹೆಮ್ಮೆ ಇದೆ "ಎಂದು ಪ್ರಿಯಾಂಕಾ ಗಾಂಧಿ ಕಳೆದ ವರ್ಷ ಟ್ವೀಟ್ ನಲ್ಲಿ ಹೇಳಿದ್ದರು. ಒಂದೇ ಪಾರ್ಟಿಯಲ್ಲಿ ಕೆಲಸ ಮಾಡುವುದರ ಜೊತೆಗೆ, ಈ ಇಬ್ಬರು ಒಡಹುಟ್ಟಿದವರು ಆತ್ಮೀಯ ಸಂಬಂಧವನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ.


  ಕನಿಮೊಳಿ ಮತ್ತು ಕರುಣಾನಿಧಿ


  ಡಿಎಂಕೆ ನಾಯಕಿ ಕನಿಮೊಳಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ದಿವಂಗತ ಎಂ ಕರುಣಾನಿಧಿಯವರ ಮಕ್ಕಳು ಒಂದೇ ಪಕ್ಷಕ್ಕಾಗಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಈ ವರ್ಷ ವಿಧಾನಸಭಾ ಚುನಾವಣೆಗೆ ಮುನ್ನ, ಕರುಣಾನಿಧಿಯವರ ರಾಜಕೀಯ ಅಧಿಕಾರವನ್ನು ಸ್ಟಾಲಿನ್​  ಪಡೆದಿದ್ದಕ್ಕಾಗಿ ಪಕ್ಷದೊಳಗಿನ  ಒಡಹುಟ್ಟಿದವರ ನಡುವೆ ಪೈಪೋಟಿ ನಡೆಯುತ್ತಿದೆ ಎನ್ನುವ ಗಾಳಿಮಾತು ಹಬ್ಬಿತ್ತು, ಈ ಪೈಪೋಟಿಯನ್ನು ಕನಿಮೋಳಿ ತಳ್ಳಿಹಾಕಿದ್ದರು. ಅವರು ಸ್ಟಾಲಿನ್ ನನ್ನ ನಾಯಕ. ಪೈಪೋಟಿಯ ಪ್ರಶ್ನೆಯೇ ಇಲ್ಲ. ಚುನಾವಣಾ ಪ್ರಚಾರದ ನಂತರ ನಾನು ದೆಹಲಿಗೆ ಹೋಗುತ್ತೇನೆ ಎಂದು ಕನಿಮೋಳಿ ಹೇಳಿದ್ದರು. ಕಳೆದ ರಾಜ್ಯ ಚುನಾವಣೆಯ ಎರಡು ವರ್ಷಗಳ ನಂತರ 2018 ರಲ್ಲಿ ನಿಧನರಾದ ಕರುಣಾನಿಧಿಯ ನಂತರ ಸ್ಟಾಲಿನ್ ಪಕ್ಷದ ಅಧಿಕಾರ ವಹಿಸಿಕೊಂಡರು.


  ತೇಜಸ್ವಿ ಮತ್ತು ಮಿಸಾ ಭಾರ್ತಿ


  ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಮಗಳು ಮಿಸಾ ಭಾರ್ತಿ ಅವರು ಮೇವು ಹಗರಣ ಪ್ರಕರಣದಲ್ಲಿ ಜೈಲಿನಲ್ಲಿದ್ದ ತಂದೆ ಲಾಲು ಅವರ ಅನುಪಸ್ಥಿತಿಯಿಂದಲೂ ಸಕ್ರಿಯರಾಗಿದ್ದಾರೆ. ಹಿರಿಯ ಸಹೋದರಿ ಯುವ ಒಡಹುಟ್ಟಿದವರಿಗೆ ಮಾರ್ಗದರ್ಶಕರಾಗಿದ್ದಾರೆ ಮತ್ತು ರಾಜಕೀಯ ಮತ್ತು ಕುಟುಂಬ ವ್ಯವಹಾರಗಳಲ್ಲಿ ಮಿಸಾ ನಿರ್ಣಾಯಕ ಪಾತ್ರ ವಹಿಸುತ್ತಾರೆ ಎಂದು ವರದಿಗಳು ಹೇಳುತ್ತವೆ. ಆದಾಗ್ಯೂ, ಸಹೋದರ-ಸಹೋದರಿಯರ ಬಾಂಧವ್ಯವು ಸುಗಮವಾಗಿಲ್ಲ, ಏಕೆಂದರೆ ಪಕ್ಷದ ಉತ್ತರಾಧಿಕಾರಿಯಾಗಿ ತೇಜಸ್ವಿಯವರು ಅಧಿಕಾರವಹಿಸಿಕೊಂಡ ನಂತರ ಮಿಸಾ ಅಸಮಾಧಾನಗೊಂಡಿದ್ದರು.


  ಕಿರಿಯ ಮಗ ತೇಜಸ್ವಿಯ ಉತ್ತರಾಧಿಕಾರಿಯಾಗಿ ಅಧಿಕಾರ ತೆಗೆದುಕೊಂಡ ನಂತರ ಅವನ ಹಿರಿಯ ಸಹೋದರ ತೇಜ್ ಪ್ರತಾಪ್ ಮತ್ತು ಹಿರಿಯ ಸಹೋದರಿ ಮಿಸಾಳೊಂದಿಗೆ ಒಂದಷ್ಟು ಮುನಿಸು ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಮಿಸಾ ಭಾರತಿ ತನ್ನ ಹಾಗೂ ತನ್ನ ಪತಿಯ ರಾಜಕೀಯ ಮಹತ್ವಾಕಾಂಕ್ಷೆಗಾಗಿ ಪಕ್ಷದಲ್ಲಿ ಹೋರಾಡುತ್ತಿದ್ದಾರೆ. ಆದಾಗ್ಯೂ, ಭಿನ್ನಾಭಿಪ್ರಾಯವು ಸಾರ್ವಜನಿಕವಾಗಿ ಇದುವರೆಗೂ ಕಂಡು ಬಂದಿಲ್ಲ ಮತ್ತು ಇಬ್ಬರೂ ತಂದೆಯ ಮಾತಿಗೆ, ಪಕ್ಷಕ್ಕೆ ಬದ್ಧರಾಗಿರುತ್ತಾರೆ ಎಂಬುದು ಒಳಗಿನ ಮಾತು.


  ವಸುಂಧರಾ ರಾಜೆ ಮತ್ತು ಮಾಧವರಾವ್ ಸಿಂಡಿಯಾ


  ಸಿಂಧಿಯಾ ಒಡಹುಟ್ಟಿದವರಾದ ಮಾಧವರಾವ್, ಯಶೋಧರ ಮತ್ತು ವಸುಂಧ್ರಾ ರಾಜೆ ಗ್ವಾಲಿಯರ್‌ನ ಕೊನೆಯ ರಾಜ ವಂಶಸ್ಥರ ಮಕ್ಕಳಾಗಿ ಜನಿಸಿದರು. ಮಾಧವರಾವ್ ಸಿಂಧಿಯಾ ಕಾಂಗ್ರೆಸ್ ಸೇರಿದರೆ, ಸಹೋದರಿ ವಸುಂಧರಾ ರಾಜೇ ಬಿಜೆಪಿ ಸೇರಿ ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ದರು. ಮಾಧವರಾವ್ ಸಿಂಧಿಯಾ 2001 ರಲ್ಲಿ ನಿಧನರಾದ ನಂತರ ಅವರ ಪುತ್ರ ಜ್ಯೋತಿರಾದಿತ್ಯ ಸಿಂಧಿಯಾ ಅವರ ಉತ್ತರಾಧಿಕಾರಿಯಾದರು. ಈ ಹಿಂದೆ ಕಾಂಗ್ರೆಸ್ ಜೊತೆಗಿದ್ದ ಜ್ಯೋತಿರಾದಿತ್ಯ ಅವರು ಹಳೆಯ ಪಕ್ಷವನ್ನು ತೊರೆದು ಮಧ್ಯಪ್ರದೇಶದಲ್ಲಿ ಬಿಜೆಪಿ ಸೇರಿದರು. ವಸುಂಧರಾ ರಾಜೆ ತನ್ನ ಸೋದರಳಿಯನನ್ನು ತಮ್ಮ ಪಕ್ಷಕ್ಕೆ ಕರೆ ತರುವಲ್ಲಿ ಸಾಕಷ್ಟು ಕೆಲಸ ಮಾಡಿದ್ದರು ಎಂದು ಹೇಳಲಾಗಿತ್ತು ಮತ್ತು ಜ್ಯೋತಿರಾದಿತ್ಯ ವಿಜಯ ರಾಜೇ ಸಿಂಧಿಯಾ, ನಮ್ಮ ಪರಂಪರೆಯ ಉನ್ನತ ಆದರ್ಶಗಳನ್ನು ಅನುಸರಿಸಿದ್ದಾರೆ ಮತ್ತು ದೇಶದ ಹಿತದೃಷ್ಟಿಯಿಂದ ಪಕ್ಷ ಬದಲಾವಣೆಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದರು.


  ಸುಪ್ರಿಯ ಸುಲೆ ಮತ್ತು ಅಜಿತ್ ಪವಾರ್


  ಸುಪ್ರಿಯಾ ಸುಲೆ ಎನ್‌ಸಿಪಿ ಸುಪ್ರೀಂ ನಾಯಕ ಶರದ್ ಪವಾರ್ ಅವರ ಪುತ್ರಿಯಾಗಿದ್ದರೆ, ಅಜಿತ್ ಪವಾರ್ ಪವಾರ್ ಅವರ ಸೋದರಳಿಯ. ಅಜಿತ್ ಪವಾರ್ ಶರದ್ ಪವಾರ್ ಅವರ ಹಿರಿಯ ಸಹೋದರ ಅನಂತರಾವ್ ಪವಾರ್ ಅವರ ಮಗ. ಇಬ್ಬರು ಸೋದರ ಸಂಬಂಧಿಗಳು ಒಂದೇ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ- ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಈ ಜೋಡಿಗಳ ನಡುವಿನ ಸಂಬಂಧವು 2019 ರಲ್ಲಿ ಅಲ್ಪಾವಧಿಗೆ ಹದಗೆಟ್ಟಿತ್ತು.


  ಇದನ್ನೂ ಓದಿ: ಕರ್ನಾಟಕದ ಮುಸ್ಲಿಂ ಮಹಿಳೆಯರಿಗೆ 1 ಲಕ್ಷ ವೈದ್ಯಕೀಯ ನೆರವು: ಅರ್ಜಿ ಸಲ್ಲಿಸುವವರಿಗೆ ಇಲ್ಲಿದೆ ಮಾಹಿತಿ


  ಅಜಿತ್ ಪವಾರ್ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಬಿಜೆಪಿಯ ದೇವೇಂದ್ರ ಫಡ್ನವೀಸ್ ಜೊತೆ ಸೇರಿಕೊಂಡಿದ್ದರು. ಆದರೆ ಕೆಲವೇ ದಿನಗಳಲ್ಲಿ ಅಜಿತ್ ಎನ್‌ಸಿಪಿಗೆ ಮರಳಿದ ನಂತರ, ಸುಪ್ರಿಯಾ ಅವರು ದೊಡ್ಡ ಅಪ್ಪುಗೆಯೊಂದಿಗೆ ಸಹೋದರನನ್ನು ಸ್ವಾಗತಿಸಿದ್ದರು.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published: