ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮುಂದಿರುವ ಸವಾಲುಗಳು ಇವು..!
ದಲಿತರು-ಯಾದವರು ಒಂದಾಗಿರುವ ಪರಿಸ್ಥಿತಿಯಲ್ಲಿ ಮುಸ್ಲಿಂ ಮತ್ತು ಹಿಂದುಳಿದ ಮತಗಳು ಕೂಡ ಬಿಎಸ್ಪಿ-ಎಸ್ಪಿ ಮೈತ್ರಿ ಕೂಟಕ್ಕೆ ಹೋಗುವ ಸಂಭವವಿರುತ್ತದೆ. ಈ ಜಾತಿ ರಾಜಕಾರಣವನ್ನೂ ಮೀರಿ ಕಾಂಗ್ರೆಸ್ ಹುರಿಯಾಳುಗಳನ್ನು ಹುಡುಕುವುದು ಮತ್ತು ಗುರಿ ಮುಟ್ಟುವುದು ಪ್ರಿಯಾಂಕಾ ಗಾಂಧಿ ಅವರಿಗೆ ಸುಲಭವಲ್ಲ.
- ಧರಣೀಶ್ ಬೂಕನಕೆರೆ
ನವದೆಹಲಿ (ಫೆ.11) : ಪ್ರಿಯಾಂಕಾ ಗಾಂಧಿ ಅಧಿಕೃತವಾಗಿ ರಾಜಕೀಯಕ್ಕೆ ಬಂದ ಮೇಲೆ ಕಾಂಗ್ರೆಸ್ ಪಕ್ಷದ ಸ್ಫೂರ್ತಿ ಹೆಚ್ಚಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಳ್ಳೆಯ ಫರ್ಪಾರ್ಮೆನ್ಸ್ ಮಾಡಬಹುದೆಂಬ ನಿರೀಕ್ಷೆಯೂ ಕಂಡುಬರುತ್ತಿದೆ. ಆದರೆ ಪ್ರಿಯಾಂಕಾ ಗಾಂಧಿ ಅವರ ರಾಜಕೀಯದ ಹಾದಿ ಅಷ್ಟು ಸುಲಭವಾಗಿಲ್ಲ.
ಉತ್ತರ ಪ್ರದೇಶವೆಂಬ ಕಬ್ಬಿಣದ ಕಡಲೆ
'ಜಿಸ್ಕೊ ಉತ್ತರ ಪ್ರದೇಶ್, ಉಸ್ಕೊ ದಿಲ್ಲಿ' ಇದು ಇತ್ತೀಚೆಗೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ನೀಡಿದ ಹೇಳಿಕೆ. ಉತ್ತರ ಪ್ರದೇಶ ರಾಜಕೀಯವಾಗಿ ಎಷ್ಟು ಪ್ರಭಾವಿ ಎಂದು ತಿಳಿಯಲು ಈ ಒಂದು ಮಾತು ಸಾಕು. ಉತ್ತರ ಪ್ರದೇಶ ಇಷ್ಟು ಮಹತ್ವ ಮತ್ತು ನಿರ್ಣಾಯಕವಾಗಿರುವುದರಿಂದಲೇ ಎಲ್ಲಾ ರಾಜಕೀಯ ಪಕ್ಷಗಳೂ ಇಲ್ಲಿಗೆ ಹೆಚ್ಚಿನ ಗಮನ ನೀಡುವುದು. ಈ ರಾಜ್ಯದಲ್ಲಿ ಪಕ್ಷವನ್ನು ಗೆಲುವಿನ ದಡ ಸೇರಿಸುವುದು ಎಂಥವರಿಗೂ ಕಷ್ಟದ ಕೆಲಸವೇ. ಹಾಗಾಗಿ ಸಹಜವಾಗಿ ಪ್ರಿಯಾಂಕಾ ಗಾಂಧಿ ಅವರಿಗೂ ಕಷ್ಟವಾಗಲಿದೆ.ನೂರು ಸಮಸ್ಯೆ, ಮುಖ್ಯವಾಗಿ ಮೂರು
ಉತ್ತರ ಪ್ರದೇಶ, ಭಾರತದಲ್ಲಿ ಮಾತ್ರವಲ್ಲ, ಏಷ್ಯಾ ಖಂಡದಲ್ಲೇ ದೊಡ್ಡ ರಾಜ್ಯ. ಜನಸಂಖ್ಯೆಯೂ ಅಪಾರ. ಹಾಗೆ ಸಮಸ್ಯೆ ಕೂಡ. ಇಲ್ಲಿ ಜಾತಿ ರಾಜಕಾಣವೂ ಇದೆ. ಧರ್ಮಾಧಾರಿತ ರಾಜಕಾರಣವೂ ಇದೆ. ಪ್ರದೇಶವಾರು ರಾಜಕಾರಣವೂ ಇದೆ. ಕೃಷಿ ಸೇರಿದಂತೆ ಎಲ್ಲಾ ವಲಯದಲ್ಲೂ ಐಬುಗಳಿವೆ. ಈ ಪೈಕಿ ಯಾವುದನ್ನು ಪ್ರಸ್ತಾಪಿಸಬೇಕು, ಯಾವುದನ್ನು ಬಿಡಬೇಕು ಎಂಬುದು ಪ್ರಿಯಾಂಕಾ ಗಾಂಧಿ ಅವರಿಗೆ ಸಮಸ್ಯೆ ಆಗಬಹುದು. ಅದಕ್ಕಿಂತಲೂ ಮುಖ್ಯವಾದ ಮೂರು ಸಮಸ್ಯೆಗಳಿವೆ.
ಸಮಸ್ಯೆ 1- ಮೋದಿ-ಶಾ ಜೋಡಿಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳ ಪೈಕಿ ಕಳೆದ ಭಾರಿ 73 ಸ್ಥಾನ ಗೆದ್ದಿತ್ತು. ಅಷ್ಟರಮಟ್ಟಿಗಿತ್ತು ಬಿಜೆಪಿ ರಾಷ್ಟಾಧ್ಯಕ್ಷ ಅಮಿತ್ ಶಾ ತಂತ್ರಗಾರಿಕೆ. ಇದಕ್ಕೆ ಪೂರಕವಾಗಿತ್ತು ನರೇಂದ್ರ ಮೋದಿ ಪ್ರಚಾರ. ಆಗ ಅಮಿತ್ ಶಾ ಬಿಜೆಪಿ ಅಧ್ಯಕ್ಷ ಆಗಿರಲಿಲ್ಲ, ಮೋದಿ ಪ್ರಧಾನಿ ಆಗಿರಲಿಲ್ಲ. ಈಗ ಮೋದಿ-ಶಾ ಜೋಡಿ ಇನ್ನಷ್ಟು ಫಳಗಿದೆ. ಶಕ್ತಿ ಶಾಲಿಯಾಗಿದೆ. ಹೆಚ್ಚುವರಿಯಾಗಿ ಹಿಂದುತ್ಬದ ಮುಖವಾಡವೇ ಆಗಿರುವ ಯೋಗಿ ಆದಿತ್ಯನಾಥ ಎಂಬ ಇನ್ನೊಂದು ಅಸ್ತ್ರವೂ ಇದೆ. ಇಂಥ ಪರಿಸ್ಥಿತಿಯಲ್ಲಿ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶ ಗೆಲ್ಲುವುದು ಸುಲಭವಲ್ಲ.
ಸಮಸ್ಯೆ 2- ಮಾಯಾವತಿ-ಅಖಿಲೇಶ್ ಜೋಡಿ
ಬಿಜೆಪಿಯವರದು ಧರ್ಮಾಧಾರಿತ ರಾಜಕಾರಣವಾದರೆ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಮತ್ತು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಅವರದು ಜಾತಿಯಾಧಾರಿತ ರಾಜಕಾರಣ. ಯಾರು ಏನನ್ನೇ ಹೇಳಲಿ ಇವತ್ತು ಕೂಡ ಉತ್ತರ ಪ್ರದೇಶದ ದಲಿತರಿಗೆ ಮಯಾವತಿ ಮತ್ತು ಯಾದವರಿಗೆ ಅಖಿಲೇಶ್ ಯಾದವ್ ಅವರೆ ಪ್ರಶ್ನಾತೀತ ನಾಯಕರು. ಜೊತೆಗೆ ಈ ಎರಡೂ ಸಮುದಾಯಗಳೂ ಪ್ರಬಲವಾಗಿವೆ.
ಇದನ್ನೂ ಓದಿ : ಮೋದಿ ಪಾಕಿಸ್ತಾನದ ಪ್ರಧಾನಿಯಂತೆ ವರ್ತಿಸುತ್ತಿದ್ದಾರೆ; ಅರವಿಂದ್ ಕೇಜ್ರಿವಾಲ್
ಈ ಎರಡೂ ಸಮುದಾಯದ ಮತಗಳು ಕಳೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಚದುರಿಹೋಗಿದ್ದರಿಂದಲೇ ಬಿಜೆಪಿ ಗೆಲ್ಲಲು ಸಾಧ್ಯವಾಗಿದ್ದು. ಈಗ ಇಬ್ವರೂ ನಾಯಕರು ಒಂದಾಗಿದ್ದಾರೆ. ದಲಿತರು-ಯಾದವರು ಒಂದಾಗಿರುವ ಪರಿಸ್ಥಿತಿಯಲ್ಲಿ ಮುಸ್ಲಿಂ ಮತ್ತು ಹಿಂದುಳಿದ ಮತಗಳು ಕೂಡ ಬಿಎಸ್ಪಿ-ಎಸ್ಪಿ ಮೈತ್ರಿ ಕೂಟಕ್ಕೆ ಹೋಗುವ ಸಂಭವವಿರುತ್ತದೆ. ಈ ಜಾತಿ ರಾಜಕಾರಣವನ್ನೂ ಮೀರಿ ಕಾಂಗ್ರೆಸ್ ಹುರಿಯಾಳುಗಳನ್ನು ಹುಡುಕುವುದು ಮತ್ತು ಗುರಿ ಮುಟ್ಟುವುದು ಪ್ರಿಯಾಂಕಾ ಗಾಂಧಿ ಅವರಿಗೆ ಸುಲಭವಲ್ಲ.
ಸಮಸ್ಯೆ 3 - ಪಾತಾಳ ತಲುಪಿರುವ ಪಕ್ಷ ಸಂಘಟನೆ
ಎದುರಾಳಿ ಬಲ ಶಾಲಿಯಾದರೆ ಅದು ನಿಜವಾದ ಸಮಸ್ಯೆಯಾಗದು. ಸ್ವತಃ ದುರ್ಬಲ ರಾಗಬಾರದು. ಕಾಂಗ್ರೆಸ್ ಪಕ್ಷಕ್ಕೆ ಆಗಿರುವುದೇ ಅದು. ಎದುರಾಳಿ ಪಕ್ಷಗಳಾದ ಬಿಎಸ್ಪಿ, ಎಸ್ ಪಿ ಮತ್ತು ಬಿಜೆಪಿ ಪ್ರಬಲವಾಗಿವೇ ಎನ್ನುವುದಕ್ಕಿಂತ ಕಾಂಗ್ರೆಸ್ ಪಕ್ಷದ ಸಂಘಟನೆ ಸೊರಗಿ ಹೋಗಿದೆ. ಇದೇ ಕಾರಣಕ್ಕೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿನಿಧಿರುವ ರಾಯಬರೇಲಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿನಿಧಿಸುವ ಅಮೇಥಿಯಲ್ಲಿ ಮಾತ್ರ ಗೆದ್ದಿತ್ತು.
ಈ ಪರಿಸ್ಥಿತಿಯನ್ನು ಬದಲಿಸಿ ಕಾಂಗ್ರೆಸ್ ಪರವಾದ ವಾತಾವರಣ ರೂಪಿಸುವ ಕೆಲಸ ಕೂಡ ಪ್ರಿಯಾಂಕಾ ಗಾಂಧಿ ಅವರಿಗೆ ಸಲೀಸಲ್ಲ. ಒಟ್ಟಿನಲ್ಲಿ ಪ್ರಿಯಾಂಕಾ ಗಾಂಧಿ ಅವರಿಗೆ ಉತ್ತರ ಪ್ರದೇಶದಲ್ಲಿ ಪಕ್ಷಕ್ಕೆ ಗೆಲುವು ತಂದುಕೊಡುವುದು ಎಲ್ಲಾ ರೀತಿಯಿಂದಲೂ ಕಷ್ಟವೇ ಆಗಿದೆ.
ಇದನ್ನೂ ಓದಿ : ಪ್ರಿಯಾಂಕಾ ಎಂಟ್ರಿ ನಂತರ ಉ.ಪ್ರ.ದಲ್ಲಿ ಕಾಂಗ್ರೆಸ್ ಗುರಿ ಮಿಷನ್-30
ನವದೆಹಲಿ (ಫೆ.11) : ಪ್ರಿಯಾಂಕಾ ಗಾಂಧಿ ಅಧಿಕೃತವಾಗಿ ರಾಜಕೀಯಕ್ಕೆ ಬಂದ ಮೇಲೆ ಕಾಂಗ್ರೆಸ್ ಪಕ್ಷದ ಸ್ಫೂರ್ತಿ ಹೆಚ್ಚಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಳ್ಳೆಯ ಫರ್ಪಾರ್ಮೆನ್ಸ್ ಮಾಡಬಹುದೆಂಬ ನಿರೀಕ್ಷೆಯೂ ಕಂಡುಬರುತ್ತಿದೆ. ಆದರೆ ಪ್ರಿಯಾಂಕಾ ಗಾಂಧಿ ಅವರ ರಾಜಕೀಯದ ಹಾದಿ ಅಷ್ಟು ಸುಲಭವಾಗಿಲ್ಲ.
ಉತ್ತರ ಪ್ರದೇಶವೆಂಬ ಕಬ್ಬಿಣದ ಕಡಲೆ
'ಜಿಸ್ಕೊ ಉತ್ತರ ಪ್ರದೇಶ್, ಉಸ್ಕೊ ದಿಲ್ಲಿ' ಇದು ಇತ್ತೀಚೆಗೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ನೀಡಿದ ಹೇಳಿಕೆ. ಉತ್ತರ ಪ್ರದೇಶ ರಾಜಕೀಯವಾಗಿ ಎಷ್ಟು ಪ್ರಭಾವಿ ಎಂದು ತಿಳಿಯಲು ಈ ಒಂದು ಮಾತು ಸಾಕು. ಉತ್ತರ ಪ್ರದೇಶ ಇಷ್ಟು ಮಹತ್ವ ಮತ್ತು ನಿರ್ಣಾಯಕವಾಗಿರುವುದರಿಂದಲೇ ಎಲ್ಲಾ ರಾಜಕೀಯ ಪಕ್ಷಗಳೂ ಇಲ್ಲಿಗೆ ಹೆಚ್ಚಿನ ಗಮನ ನೀಡುವುದು. ಈ ರಾಜ್ಯದಲ್ಲಿ ಪಕ್ಷವನ್ನು ಗೆಲುವಿನ ದಡ ಸೇರಿಸುವುದು ಎಂಥವರಿಗೂ ಕಷ್ಟದ ಕೆಲಸವೇ. ಹಾಗಾಗಿ ಸಹಜವಾಗಿ ಪ್ರಿಯಾಂಕಾ ಗಾಂಧಿ ಅವರಿಗೂ ಕಷ್ಟವಾಗಲಿದೆ.ನೂರು ಸಮಸ್ಯೆ, ಮುಖ್ಯವಾಗಿ ಮೂರು
ಉತ್ತರ ಪ್ರದೇಶ, ಭಾರತದಲ್ಲಿ ಮಾತ್ರವಲ್ಲ, ಏಷ್ಯಾ ಖಂಡದಲ್ಲೇ ದೊಡ್ಡ ರಾಜ್ಯ. ಜನಸಂಖ್ಯೆಯೂ ಅಪಾರ. ಹಾಗೆ ಸಮಸ್ಯೆ ಕೂಡ. ಇಲ್ಲಿ ಜಾತಿ ರಾಜಕಾಣವೂ ಇದೆ. ಧರ್ಮಾಧಾರಿತ ರಾಜಕಾರಣವೂ ಇದೆ. ಪ್ರದೇಶವಾರು ರಾಜಕಾರಣವೂ ಇದೆ. ಕೃಷಿ ಸೇರಿದಂತೆ ಎಲ್ಲಾ ವಲಯದಲ್ಲೂ ಐಬುಗಳಿವೆ. ಈ ಪೈಕಿ ಯಾವುದನ್ನು ಪ್ರಸ್ತಾಪಿಸಬೇಕು, ಯಾವುದನ್ನು ಬಿಡಬೇಕು ಎಂಬುದು ಪ್ರಿಯಾಂಕಾ ಗಾಂಧಿ ಅವರಿಗೆ ಸಮಸ್ಯೆ ಆಗಬಹುದು. ಅದಕ್ಕಿಂತಲೂ ಮುಖ್ಯವಾದ ಮೂರು ಸಮಸ್ಯೆಗಳಿವೆ.
ಸಮಸ್ಯೆ 1- ಮೋದಿ-ಶಾ ಜೋಡಿ
Loading...