UP Elections: ರಂಗೇರಿದ ಚುನಾವಣಾ ರಣಕಣ, ಇಂದು‌ ಪ್ರಿಯಾಂಕಾ ಗಾಂಧಿ ಮನೆ ಮನೆಗೆ ತೆರಳಿ ಪ್ರಚಾರ

ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ಅವರು ಹೀಗೆ ಮನೆ ಮನೆಗೆ ಹೋಗಿ ಪ್ರಚಾರ ಮಾಡುತ್ತಿರುವುದು ಅಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಜೊತೆಗೆ ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎಂಬ ನಿರೀಕ್ಷೆಯನ್ನೂ ಹುಟ್ಟುಹಾಕಿದೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ

  • Share this:
ನವದೆಹಲಿ, ಫೆ. 4: ಉತ್ತರ ಪ್ರದೇಶದ ಮೊದಲ ಹಂತದ ಮತದಾನ ಹತ್ತಿರವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು‌ ಚುರುಕುಗೊಂಡಿವೆ. ಕೊರೋನಾ (Corona) ಮತ್ತು ಓಮೈಕ್ರಾನ್ (Omicron) ಹಿನ್ನೆಲೆಯಲ್ಲಿ ಫೆಬ್ರವರಿ 11ರವರೆಗೆ ಬಹಿರಂಗವಾಗಿ ಸಭೆ, ಸಮಾರಂಭ, ಬೈಕ್ ಶೋ ಹಾಗೂ ರ್‍ಯಾಲಿಗಳನ್ನು (Rally) ನಡೆಸುವಂತಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ (Central Election Commission) ನಿರ್ಬಂಧ ವಿಧಿಸಿರುವುದರಿಂದ ರಾಜಕೀಯ ಪಕ್ಷಗಳ ನಾಯಕರು (Political Party Leaders) ಈಗ ಮನೆ ಮನೆಗೆ ತೆರಳಿ ಮತದಾರರ (Voters) ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯೂ (Utter Pradesh Congress In Charge) ಆದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Priyanka Gandhi) ಅವರು ಇಂದು ಗಾಜಿಯಾಬಾದ್ ನಲ್ಲಿ ಮನೆ ಮನೆ ಪ್ರಚಾರ ಮಾಡಲಿದ್ದಾರೆ.

ಕಾಂಗ್ರೆಸ್‌ಗೆ ಗಾಜಿಯಾಬಾದ್ ಏಕೆ ಮುಖ್ಯ?

ಗಾಜಿಯಾಬಾದ್ ರಾಷ್ಟ್ರ ರಾಜಧಾನಿ ದೆಹಲಿಯ ಗಡಿ. ಇತ್ತೀಚೆಗೆ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯಿದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದ ದೆಹಲಿ ಗಡಿಗಳ ಪೈಕಿ‌ ಗಾಜಿಯಾಬಾದ್ ಕೂಡ‌ ಒಂದು. ಹಾಗಾಗಿ ಗಾಜಿಯಾಬಾದ್ ಸುತ್ತಾಮುತ್ತಾ ಬಿಜೆಪಿ ಬಗ್ಗೆ ಸಹಜವಾದ ಆಕ್ರೋಶ ಇದೆ. ಅಲ್ಲದೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ 530 ಕಿಲೋ‌ ಮೀಟರ್ ದೂರದಲ್ಲಿರುವ ಗಾಜಿಯಾಬಾದ್ ಅನ್ನು ಅಲ್ಲಿನ ಬಿಜೆಪಿ ಸರ್ಕಾರ ಸಂಪೂರ್ಣ ಕಡೆಗಣಿಸಿದೆ ಎಂಬ ಜನಾಭಿಪ್ರಾಯ ಕೂಡ‌ ಇದೆ.

ಜೊತೆಗೆ ಈಗ ಬಿಜೆಪಿಯನ್ನು ಉಗ್ರವಾಗಿ ಖಂಡಿಸುವ ಜಾಟ್ ಮತ್ತು ಮುಸ್ಲಿಮ್ ಸಮುದಾಯದ ಮತಗಳು ಗಾಜಿಯಾಬಾದ್ ಸುತ್ತಾ ಮುತ್ತಾ ಹೆಚ್ಚಾಗಿವೆ. ಈ ಎಲ್ಲಾ ಕಾರಣಕ್ಕಾಗಿ ಪ್ರಿಯಾಂಕಾ ಗಾಂಧಿ ಅವರು ಇಂದು ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಗಾಜಿಯಾಬಾದ್ ಸುತ್ತಾ ಮನೆ ಮನೆಗೆ ತೆರಳಿ ಪ್ರಚಾರ ನಡೆಸಲಿದ್ದಾರೆ.

ನಿನ್ನೆ 3 ಜಿಲ್ಲೆಗಳಲ್ಲಿ ಪ್ರಚಾರ ಮಾಡಿದ ಪ್ರಿಯಾಂಕಾ ಗಾಂಧಿ

ಜನವರಿ 31ರಂದು ದೆಹಲಿಯ ಗಡಿಯಲ್ಲಿರುವ ನೋಯ್ಡಾದಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವ ಕಾರ್ಯಕ್ರಮ ಆರಂಭಿಸಿದ ಪ್ರಿಯಾಂಕಾ ಗಾಂಧಿ ಅವರು ನಿನ್ನೆ (ಫೆಬ್ರವರಿ 3ರಂದು) ಉತ್ತರ ಪ್ರದೇಶದ ಸಿಕಂದರಾಬಾದ್‌, ಜಹಾಂಗೀರಾಬಾದ್ ಮತ್ತು ಸಿಯಾನಾ ಜಿಲ್ಲೆಗಳಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರ ನಡೆಸಿದರು. ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ಅವರು ಹೀಗೆ ಮನೆ ಮನೆಗೆ ಹೋಗಿ ಪ್ರಚಾರ ಮಾಡುತ್ತಿರುವುದು ಅಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಜೊತೆಗೆ ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎಂಬ ನಿರೀಕ್ಷೆಯನ್ನೂ ಹುಟ್ಟುಹಾಕಿದೆ.


ಇದನ್ನೂ ಓದಿ: Rahul Gandhi ಭಾಷಣಕ್ಕೆ ಸ್ವರ ಭಾಸ್ಕರ್ ಮೆಚ್ಚುಗೆ, Solid ಸ್ಪೀಚ್ ಎಂದ ನಟಿ

ಲೋನಿಯಲ್ಲಿ ಪ್ರಚಾರ ಮಾಡಿದ ಅಮಿತ್ ಶಾ

ಕೇಂದ್ರ ಸರ್ಕಾರ ತಂದಿದ್ದ ಮೂರು ರೈತ ವಿರೋಧಿ ಕೃಷಿ ಕಾನೂನುಗಳ ಕಾರಣಕ್ಕೆ ಬಿಜೆಪಿ ವಿರುದ್ಧ ಉತ್ತರ ಪ್ರದೇಶದಲ್ಲಿ ಜಾಟ್ ಸಮುದಾಯ ಸಿಡಿದೆದ್ದಿದೆ. ಹಾಗಾಗಿ ಜಾಟ್ ಸಮುದಾಯದ ಪ್ರಾಬಲ್ಯ ಇರುವ ಪಶ್ಚಿಮ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆ ಆಗಬಹುದು ಎಂದು ಹೇಳಲಾಗುತ್ತಿದೆ.

ಮತದಾನಕ್ಕೆ ಭರ್ಜರಿ ಸಿದ್ಧತೆ

ಫೆಬ್ರವರಿ 10 ಮತ್ತು 14ರಂದು ಪಶ್ಚಿಮ ಉತ್ತರ ಪ್ರದೇಶದಲ್ಲಿ ಮೊದಲ ಮತ್ತು ಎರಡನೇ ಹಂತದ ಮತದಾನ ನಡೆಯಲಿದ್ದು ಎರಡೂ ಹಂತದ ಮತದಾನದ ವೇಳೆ ಬಿಜೆಪಿಗೆ ಹೊಡೆತ ಬೀಳಲಿದೆ. ಮೊದಲೆರಡು ಹಂತಗಳಲ್ಲಿ ಹಿನ್ನಡೆಯಾದರೆ ಅದೇ ಸಾರ್ವಜನಿಕ ಅಭಿಪ್ರಾಯ ಮುಂದಿನ ಹಂತಗಳಿಗೂ ವಿಸ್ತರಿಸಬಹುದು ಅಥವಾ ಪ್ರತಿಕೂಲ ಪರಿಣಾಮ ಬೀರಬಹುದೆಂದು ಬಿಜೆಪಿ ಚಿಂತಾಕ್ರಾಂತವಾಗಿದೆ. ಅದೇ ಕಾರಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಉತ್ತರ ಪ್ರದೇಶದಲ್ಲಿ ನಿರಂತರವಾಗಿ ಮನೆ ಮನೆ ಪ್ರಚಾರ ಮಾಡುತ್ತಿದ್ದಾರೆ.


ಇದನ್ನೂ ಓದಿ: PM Berojgar Bhatta Yojana ಯೋಜನೆ ಅಡಿ ನಿರುದ್ಯೋಗಿಗಳಿಗೆ ಹಣ; ಏನಿದರ ಅಸಲಿಯತ್ತು?

“ಜಾಟ್‌ ಸಮುದಾಯದ ಮತ ಸೆಳೆಯುವ ತಂತ್ರ”

ನಿನ್ನೆ ಲೋನಿಯಲ್ಲಿ ಪ್ರಚಾರ ನಡೆಸಿದ್ದಾರಲ್ಲದೆ ಜಾಟ್ ಸಮುದಾಯದ ಪಕ್ಷ ಎಂದೇ ಹೇಳಲಾಗುವ ರಾಷ್ಟ್ರೀಯ ಲೋಕದಳದ ನಾಯಕ‌ ಜಯಂತ್ ಚೌಧರಿ ವಿರುದ್ಧ ಹರಿಹಾಯ್ದಿದ್ದಾರೆ. ಇನ್ನೊಂದೆಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಗಾಜಿಯಾಬಾದ್ ಬಳಿ‌ ಇರುವ ಕೌಶುಂಬಿ ಜಿಲ್ಲೆಯಲ್ಲಿ ವರ್ಚ್ಯುಯಲ್ ರ್‍ಯಾಲಿ ಮೂಲಕ ಪ್ರಚಾರ ನಡೆಸಿದ್ದಾರೆ.
Published by:Annappa Achari
First published: