ಚಂಡೀಗಢ(ನ.28): ಪಟಿಯಾಲ ಜೈಲಿನಲ್ಲಿರುವ (Patiala Jail) ಪಂಜಾಬ್ ಕಾಂಗ್ರೆಸ್ (Punjab Cogress) ನ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು (Navjot Singh Sidhu) ಅವರ ಮೇಲೆ ಕಾಂಗ್ರೆಸ್ ಹೈಕಮಾಂಡ್ (Congress High Command) ಇನ್ನೂ ನಿರೀಕ್ಷೆ ಹೊಂದಿದೆ. ಜೈಲಿನಲ್ಲಿರುವ ನವಜೋತ್ ಸಿಂಗ್ ಸಿಧು ಅವರಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Priyanka Gandhi) ಪತ್ರ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಪತ್ರದಲ್ಲಿ ಏನು ಬರೆಯಲಾಗಿದೆ ಎಂಬ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ. ಆದರೆ ಈ ಪತ್ರದ ಬಗ್ಗೆ ಪಂಜಾಬ್ ಕಾಂಗ್ರೆಸ್ ಪಾಳಯದಲ್ಲಿ ಚರ್ಚೆ ತೀವ್ರಗೊಂಡಿದ್ದು, ಸಿಧು ಜೈಲಿನಿಂದ ಹೊರಬಂದ ಕೂಡಲೇ ರಾಜ್ಯ ಕಾಂಗ್ರೆಸ್ ನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎನ್ನಲಾಗಿದೆ. ಜೈಲ್ ಸೂಪರಿಂಟೆಂಡೆಂಟ್ ಮನೋಜ್ ಸಿಂಗ್ ತಿವಾನಾ ಅವರೇ ಪ್ರಿಯಾಂಕಾ ಗಾಂಧಿ ಸಿಧುಗೆ ಬರೆದಿದ್ದಾರೆ ಎಂದು ತಿಳಿಸಿರುವುದಾಗಿ ವರದಿಯೊಂದು ಉಲ್ಲೇಖಿಸಿದೆ.
ಇದನ್ನೂ ಓದಿ: Bharat Jodo: ರಾಹುಲ್ ಯಾತ್ರೆ ಉಲ್ಲೇಖಿಸಿ ಕಾಂಗ್ರೆಸ್ಗೆ ಮರಳುವ ಸೂಚನೆ ನೀಡಿದ್ರಾ ಸಿಂಧಿಯಾ?
ರೋಡ್ ರೇಜ್ ಪ್ರಕರಣದಲ್ಲಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ನವಜೋತ್ ಸಿಧುಗೆ ಜೈಲಿನಿಂದ ಹೊರ ಬಂದ ಕೂಡಲೇ ದೊಡ್ಡ ಜವಾಬ್ದಾರಿ ಸಿಗಬಹುದು. ಜೈಲಿಗೆ ಹೋದ ಬೆನ್ನಲ್ಲೇ ತಾನು ಅವರ ಜೊತೆಗಿದೆ ಎಂದು ಕಾಂಗ್ರೆಸ್ ಹೇಳಿತ್ತು. ಸಿಧು ಕಳೆದ ಆರು ತಿಂಗಳಿನಿಂದ ಜೈಲಿನಲ್ಲಿದ್ದರು ಮತ್ತು ರಸ್ತೆ ಗಲಭೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅವರಿಗೆ ಒಂದು ವರ್ಷ ಶಿಕ್ಷೆ ವಿಧಿಸಿತ್ತು. ನವಜೋತ್ ಸಿಂಗ್ ಸಿಧು ಕೆಲವು ತಿಂಗಳ ನಂತರ ಜೈಲಿನಿಂದ ಬಿಡುಗಡೆಯಾಗುತ್ತಾರೆ ಎಂದು ಹೇಳಲಾಗಿದೆ. ಮುಂದಿನ ವರ್ಷ ನಡೆಯಲಿರುವ 9 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅವಕಾಶ ಅವರಿಗೆ ಸಿಗಬಹುದು.
ಚುನಾವಣೆಯಲ್ಲಿ ಸೋಲು
ನವಜೋತ್ ಸಿಂಗ್ ಸಿಧು ಅವರು ಚುನಾವಣೆಗೆ ಕೆಲವು ತಿಂಗಳು ಇರುವ ಸಂದರ್ಭದಲ್ಲಿ ಪಂಜಾಬ್ನಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ದೆಹಲಿಯಲ್ಲಿ ಕಾಂಗ್ರೆಸ್ ನಾಯಕರನ್ನು ಭೇಟಿಯಾದ ನಂತರ ಅವರು ರಾಜೀನಾಮೆಯನ್ನು ಹಿಂಪಡೆದರು. ಈ ವರ್ಷ ನಡೆದ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ನವಜೋತ್ ಸಿಂಗ್ ಸಿಧು ಅಮೃತಸರ ಪೂರ್ವ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ (ಎಎಪಿ) ಜೀವನ್ ಜ್ಯೋತ್ ಕೌರ್ ವಿರುದ್ಧ ಸೋತಿದ್ದರು. ಅವರು 32,929 ಮತಗಳನ್ನು ಪಡೆದರೆ, ಕೌರ್ 39,520 ಮತಗಳನ್ನು ಪಡೆದರು.
ಇದನ್ನೂ ಓದಿ: Savarkar: ಸಾವರ್ಕರ್ ಮೇಲೆ ಕಾಂಗ್ರೆಸ್ ಆರೋಪವೇನು? ಒಮ್ಮೆ ಹೊಗಳಿಕೆ, ಮತ್ತೊಮ್ಮೆ ತೆಗಳಿಕೆ ಏಕೆ?
ಸಿಧು ಕಾಂಗ್ರೆಸ್ನಲ್ಲಿ ಆಂತರಿಕ ಕಚ್ಚಾಟದ ಕೇಂದ್ರ ಬಿಂದುವಾಗಿದ್ದ ಕಾರಣ ಈ ಚುನಾವಣೆ ಮಹತ್ವದ್ದಾಗಿತ್ತು. ಈ ಕಾರಣದಿಂದಾಗಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಲಾಯಿತು. ವಿಧಾನಸಭಾ ಚುನಾವಣೆಗೆ ಕೆಲವು ತಿಂಗಳುಗಳ ಮೊದಲು ಚರಣ್ಜಿತ್ ಸಿಂಗ್ ಚನ್ನಿ ಅವರನ್ನು ಸಿಎಂ ಮಾಡಲಾಯಿತು. ಇದರಿಂದ ಸಿಧು ಕೋಪಗೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ